'ಕೊರೋನಾಗೆ ಮುಂದುವರೆದ ದೇಶಗಳೇ ತತ್ತರ, ಭಾರತದಲ್ಲಿ ಮೋದಿಯಿಂದ ಕೋವಿಡ್‌ ನಿಯಂತ್ರಣ'

ನರೇಂದ್ರ ಮೋದಿ ಭಾರತ ದೇಶದ 130 ಕೋಟಿ ಜನರ ಸೇವಕ| ಮೋದಿ ಅವರ ಯೋಜನೆಗಳು, ದೇಶ ಅಭಿವೃದ್ಧಿ ವಿಚಾರದಲ್ಲಿ ಕೈಗೊಂಡ ಕ್ರಮಗಳು ಪ್ರತಿಯೊಬ್ಬರಿಗೂ ಪೂರಕ| 370ನೇ ವಿಧಿ ರದ್ದು ಮಾಡಿ, ಜಮ್ಮು ಕಾಶ್ಮೀರ ಮತ್ತೆ ನಮ್ಮ ಭಾರತ ಭೂಪಟದ ಮುಕುಟವಾಗಲು ಕಾರಣ|
 

Former MLA Nemiraj Talks Over PM Narendra Modi

ಹಗರಿಬೊಮ್ಮನಹಳ್ಳಿ(ಜೂ.01): ಪ್ರಪಂಚದಲ್ಲಿನ ಮುಂದುವರೆದ ದೇಶಗಳು ಕೊರೋನಾ ವೈರಸ್‌ಗೆ ಭಯಗೊಂಡಿರುವಾಗ ನಮ್ಮ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸರಿಯಾದ ಸಮಯಕ್ಕೆ ಉತ್ತಮ ನಿರ್ಧಾರ ತೆಗೆದುಕೊಳ್ಳುವ ಮೂಲಕ ಕೊರೋನಾ ವೈರಸ್‌ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ವಿಶ್ವವೇ ಮೆಚ್ಚಿಕೊಂಡಂತೆ ನಾಯಕರಾಗಿದ್ದಾರೆ ಎಂದು ಮಾಜಿ ಶಾಸಕ ನೇಮಿರಾಜ್‌ನಾಯ್ಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಡಳಿತದ ವರ್ಷದ ಸಾಧನೆಗಳ ಕುರಿತು ಅವರು ತಮ್ಮ ಜನಸಂಪರ್ಕ ಕಚೇರಿಯಲ್ಲಿ ಅನಿಸಿಕೆಗಳನ್ನು ಪತ್ರಕರ್ತರೊಂದಿಗೆ ಹಂಚಿಕೊಂಡರು. ನರೇಂದ್ರ ಮೋದಿಯವರು ಭಾರತ ದೇಶದ 130 ಕೋಟಿ ಜನರ ಸೇವಕರಾಗಿದ್ದಾರೆ. ಅವರ ಯೋಜನೆಗಳು, ದೇಶ ಅಭಿವೃದ್ಧಿ ವಿಚಾರದಲ್ಲಿ ಕೈಗೊಂಡ ಕ್ರಮಗಳು ಪ್ರತಿಯೊಬ್ಬರಿಗೂ ಪೂರಕವಾಗಿವೆ. ಅವರ ತ್ರಿವಳಿ ತಲಾಖ ಜಾರಿಯಿಂದ ಮುಸ್ಲಿಂ ಮಹಿಳೆಯರಿಗೆ ನ್ಯಾಯ ದೊರಕಿಸಿಕೊಟ್ಟವರಾಗಿದ್ದಾರೆ. 370ನೇ ವಿಧಿ ರದ್ದು ಮಾಡಿ, ಜಮ್ಮು ಕಾಶ್ಮೀರ ಮತ್ತೆ ನಮ್ಮ ಭಾರತ ಭೂಪಟದ ಮುಕುಟವಾಗಲು ಕಾರಣರಾದರು. ಆರ್ಥಿಕತೆ ಉತ್ತೇಜನಕ್ಕೆ ಹಲವು ಕ್ರಮಗಳನ್ನು ಕೈಗೊಂಡರು.

ಪೇದೆಗೆ ಅಂಟಿದ ಕೊರೋನಾ: ಕೊಟ್ಟೂರು ಪೊಲೀಸ್‌ ಠಾಣೆ ಸೀಲ್‌ಡೌನ್‌

ಮೇಕಿನ್‌ ಇಂಡಿಯಾ ಮೂಲಕ ಸ್ವದೇಶಿ ಸ್ವಾವಲಂಬಿಯ ಆತ್ಮ ನಿರ್ಭರತೆಯ ಭಾರತ ನಿರ್ಮಾಣಕ್ಕೆ ನಾಂದಿಹಾಡಿದ್ದಾರೆ. ಲಕ್ಷಾಂತರ ಭಾರತೀಯರನ್ನು ತವರಿಗೆ ಕರೆತರಲೆಂದೇ ವಂದೇ ಭಾರತ್‌ ಮಿಷನ್‌ ಮತ್ತು ಆಪರೇಷನ್‌ ಸಮುದ್ರ ಸೇತು ಎಂಬ ಜಗತ್ತಿನ ಅತಿ ದೊಡ್ಡ ತೆರವು ಕಾರ್ಯಾಚರಣೆ ಯೋಜನೆ ಜಾರಿಗೆ ಬಂದಿದೆ. ಒಂದೇ ದೇಶ ಒಂದೇ ಪಡಿತರ, ರೈತರಿಗೆ ಸಮ್ಮಾನ್‌ ಯೋಜನೆ, ರೈತರು ಮತ್ತು ಕಾರ್ಮಿಕರಿಗೆ ಪಿಂಚಣಿ, ಅಸಂಘಟಿತ ವಲಯದವರಿಗೂ ನಿವೃತ್ತಿ ನಂತರ ಜೀವನಕ್ಕೆ ಭದ್ರತೆ ಒದಗಿಸಿದ್ದಾರೆ. ಹೀಗೆ ಅವರು ದೇಶದ ಪ್ರಧಾನಮಂತ್ರಿಗಳಾಗಿ ಮಾಡಿದ ಸಾಧನೆಗಳು ನೂರಾರು, ಇನ್ನೂ ದೇಶದ ಅಭಿವೃದ್ಧಿಯಲ್ಲಿ ಅವರು ಕಂಡ ಕನಸು ಅತ್ಯದ್ಭುತ. ಅವುಗಳ ನೆರವೇರಿಸಲು ಇಂತಹ ಪ್ರಧಾನಮಂತ್ರಿಯವರ ಅವಶ್ಯಕತೆ ಇದೆ ಎಂದರು.

Latest Videos
Follow Us:
Download App:
  • android
  • ios