Asianet Suvarna News Asianet Suvarna News

3 ತಿಂಗಳು ಮನೆಯಲ್ಲೇ ಇದ್ದ ಮಹಿಳೆಗೆ ಕೊರೋನಾ ಪಾಸಿಟಿವ್..!

ಲಾಕ್‌ಡೌನ್ ಬಳಿಕ ಹೊರಗಡೆ ಎಲ್ಲಿಯೂ ಆನೇಕಲ್ ಮಹಿಳೆ ಓಡಾಡಿರಲಿಲ್ಲ. ಹೀಗಿದ್ದು ಕೊರೋನಾ ಸೋಂಕು ತಗುಲಿದ್ದು ಹೇಗೆ ಎನ್ನುವುದೇ ಯಕ್ಷಪ್ರಶ್ನೆಯಾಗಿ ಉಳಿದಿದೆ. ಇದೀಗ ಆನೇಕಲ್‌ನ ಜನ ಕೊರೋನಾ ಆತಂಕಕ್ಕೆ ತುತ್ತಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

ಬೆಂಗಳೂರು(ಜೂ.01): ಡೆಡ್ಲಿ ವೈರಸ್ ಕೊರೋನಾ ಯಾರಿಗೆ? ಯಾವಾಗ? ಹೇಗೆ ಬರುತ್ತೇ ಅನ್ನೋದೇ ದೊಡ್ಡ ಸವಾಲಾಗಿ ಹೋಗಿದೆ. 3 ತಿಂಗಳಿನಿಂದ ಮನೆಯಲ್ಲೇ ಇದ್ದಂತಹ ಮಹಿಳೆಗೆ ಇದೀಗ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿದೆ.

ಆನೇಕಲ್‌ನ ಮಹಿಳೆಯೊಬ್ಬರಿಗೆ ಕೊರೋನಾ ಸೋಂಕಿಗೆ ತುತ್ತಾಗಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ. ಆನೇಕಲ್‌ನ ಬಾಬಯ್ಯನಗುಡಿ ರಸ್ತೆಯಲ್ಲಿದ್ದ ಮಹಿಳೆಗೆ ಕೊರೋನಾ ಸೋಂಕು ದೃಢಪಟ್ಟಿದೆ. ಭಾನುವಾರ ಇದ್ದಕ್ಕಿದ್ದಂತೆ ಮಹಿಳೆಗೆ ವಾಂತಿ-ಭೇದಿ ಕಾಣಿಸಿಕೊಂಡಿತ್ತು. ಹೆಬ್ಬಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಿದಾಗ ಸೋಂಕು ತಗುಲಿರುವ ವಿಚಾರ ಬೆಳಕಿಗೆ ಬಂದಿದೆ.

ಕರುನಾಡಿನ ಸಾಧನೆಗೆ ಪ್ರಧಾನಿ ಮೋದಿ ಶಹಬ್ಬಾಶ್

ಲಾಕ್‌ಡೌನ್ ಬಳಿಕ ಹೊರಗಡೆ ಎಲ್ಲಿಯೂ ಈ ಮಹಿಳೆ ಓಡಾಡಿರಲಿಲ್ಲ. ಹೀಗಿದ್ದು ಕೊರೋನಾ ಸೋಂಕು ತಗುಲಿದ್ದು ಹೇಗೆ ಎನ್ನುವುದೇ ಯಕ್ಷಪ್ರಶ್ನೆಯಾಗಿ ಉಳಿದಿದೆ. ಇದೀಗ ಆನೇಕಲ್‌ನ ಜನ ಕೊರೋನಾ ಆತಂಕಕ್ಕೆ ತುತ್ತಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

Video Top Stories