ರಾಯಚೂರು(ಜೂ.01): ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕೆಲಸವಿಲ್ಲದೇ ಆರ್ಥಿಕ ಸಂಕಷ್ಟ ಅನುಭವಿಸಿದ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದ ಗೋಲ್‌ಮಾರ್ಕೆಟ್‌ ಬಡಾವಣೆಯಲ್ಲಿ ನಡೆದಿದೆ. ಹುಸೇನ್‌(33) ಎಂಬುವನೇ ಆತ್ಮಹತ್ಯೆ ಯತ್ನಿಸಿದ ವ್ಯಕ್ತಿಯಾಗಿದ್ದಾನೆ. 

ಬಜ್ಜಿ-ಬೋಂಡಾ ವ್ಯಾಪಾರ ಮಾಡುತ್ತಿದ್ದ ಹುಸೇನ್‌ ಕಳೆದ ಮೂರು ತಿಂಗಳಿನಿಂದ ವ್ಯಾಪಾರ ಬಂದ್‌ ಆಗಿದ್ದರಿಂದ ತೀವ್ರ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದನು. 

ಕೊರೊನಾ ಟೆಸ್ಟ್ ವರದಿಗೂ ಮುನ್ನವೇ ಅಂತ್ಯಕ್ರಿಯೆ; ಗ್ರಾಮದಲ್ಲೀಗ ಆತಂಕದ ವಾತಾವರಣ

ಬಜ್ಜಿ-ಬೋಂಡಾ ವ್ಯಾಪಾರದಲ್ಲಿಯೇ ಅವರ ದೊಡ್ಡ ಕುಟುಂಬವನ್ನು ಪೋಷಿಸುತ್ತಿದ್ದ ಯುವಕನು, ಲಾಕ್‌ಡೌನ್‌ ಹಿನ್ನೆಲೆಯಲ್ಲಿ ವ್ಯಾಪಾರ ಬಂದಾಗಿದ್ದರಿಂದ ಸಂಸಾರವನ್ನು ಸಾಕಲಾಗದೇ ಮನನೊಂದು ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದನು. ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸ್ಥಳೀಯ ಪಶ್ಚಿಮ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.