Asianet Suvarna News Asianet Suvarna News

ಬಾಹ್ಯಾಕಾಶದಲ್ಲಿ ಸಿಲುಕಿದ ಸುನಿತಾ ವಿಲಿಯಮ್ಸ್ ಕರೆತರುವ ಪ್ರಯತ್ನ: ಜೀವಕ್ಕೆ ಅಪಾಯ ಸೇರಿ 3 ಎಚ್ಚರಿಕೆ!

ಗಗನಯಾತ್ರಿ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಬಾಹ್ಯಾಕಾಶದಲ್ಲಿ ಸಿಲುಕಿ ತಿಂಗಳು ಉರುಳಿದೆ. ನೌಕೆಯಲ್ಲಿ ಸಮಸ್ಯೆ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ಭೂಮಿಗೆ ಮರಳಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ಇದೀಗ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿರುವ ಸ್ಟಾರ್‌ಲೈನರ್ ನೌಕೆ ಮೂಲಕ ಗಗನಯಾತ್ರಿಗಳ ಕರೆತರುವ ಪ್ರಯತ್ನ ಮಾಡಿದರೆ 3 ಗಂಭೀರ ಅಪಾಯದ ಕುರಿತು ತಜ್ಞರು ಎಚ್ಚರಿಸಿದ್ದಾರೆ.

US Military ex commander warns 3 dangerous scenario Sunita Williams may face while returning ckm
Author
First Published Aug 23, 2024, 11:38 AM IST | Last Updated Aug 23, 2024, 11:38 AM IST

ವಾಶಿಂಗ್ಟನ್ ಡಿಸಿ(ಆ.23) ಭಾರತ ಮೂಲದ ಅಮೆರಿಕ ಗಗನಯಾತ್ರ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಬಾಹ್ಯಾಕಾಶದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆ ಬಲ ಮೀರಿ ಕೆಲ ಪ್ರಯೋಗ ಹಾಗೂ ಸಂಶೋಧನೆಗೆ ತೆರಳಿದ ಗಗನಯಾತ್ರಿಗಳು ತಾಂತ್ರಿಕ ಸಮಸ್ಯೆಯಿಂದ ಭೂಮಿಗೆ ಮರಳಲು ಸಾಧ್ಯವಾಗಿಲ್ಲ. ಗಗನಯಾತ್ರಿಗಳ ಹೊತ್ತೊಯ್ದ ಬೋಯಿಂಗ್ ಸ್ಟಾರ್‌ಲೈನರ್ ನೌಕೆಯನ್ನು ಸರಿಪಡಿಸುವ ಪ್ರಯತ್ನಕ್ಕೂ ಹಿನ್ನಡೆಯಾಗಿದೆ. ಇದೀಗ ತಾಂತ್ರಿಕ ಸಮಸ್ಯೆ ಇರುವ ನೌಕೆಯಲ್ಲಿ ಗಗನಯಾತ್ರಿಗಳ ಭೂಮಿಗೆ ಕರೆತರುವ ಪ್ರಯತ್ನ ಅಪಾಯಕ್ಕೆ ಅಹ್ವಾನ ನೀಡಿದಂತೆ ಎಂದು ತಜ್ಞರು ಎಚ್ಚರಿಸಿದ್ದಾರೆ. 3 ಅಪಾಯ ಬೆಂಕಿ ಹೊತ್ತಿಕೊಂಡು ಎಲ್ಲವೂ ಭಸ್ಮವಾಗುವ ಸಾಧ್ಯತೆಯನ್ನೂ ತಜ್ಞರು ನೀಡಿದ್ದಾರೆ. 

ಬೋಯಿಂಗ್ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಹೀಲಿಯಂ ಸೋರಿಕೆಯಾಗುತ್ತಿದೆ. ಈ ತಾಂತ್ರಿಕ ಸಮಸ್ಯೆಯಿಂದ ಗಗನಯಾತ್ರಿಗಳು ಸುರಕ್ಷಿತವಾಗಿ ಭೂಮಿಗೆ ಮರಳು ಸಾಧ್ಯವಾಗುತ್ತಿಲ್ಲ. ನಾಸಾ ವಿಜ್ಞಾನಿಗಳು ಸತತ ಪ್ರಯತ್ನ ನಡೆಸುತ್ತಿದ್ದಾರೆ. ಗಗನಯಾತ್ರಿಗಳನ್ನು ಸುರಕ್ಷಿತವಾಗಿ ಕರೆತರಲು ನಾಸಾ ಹಲವು ಮಾರ್ಗಗಳನ್ನು ಶೋಧಿಸುತ್ತಿದ್ದಾರೆ. ಈ ವೇಳೆ ಸ್ಪೇಸ್ ಎಕ್ಸ್ ರಕ್ಷಾಣಾ ಮಿಶನ್ ನೆರವು ಪಡೆಯುವ ಕುರಿತು ಚಿಂತನೆ ನಡೆಯುತ್ತಿದೆ. ಈ ಪೈಕಿ ತಾಂತ್ರಕಿ ಸಮಸ್ಯೆ ಕಾಣಿಸಿಕೊಂಡಿರುವ ಸ್ಟಾರ್‌ಲೈನರ್ ನೌಕೆಯಲ್ಲಿನ ದೋಷ ಸರಿಪಡಿಸಿ ಕರೆತರುವ ಪ್ರಯತ್ನ ನಡೆಸಲಾಗುತ್ತಿದೆ. ಆದರೆ ಈ ಪ್ರಯತ್ನ 3 ಅತ್ಯಂತ ಗಂಭೀರ ಅಪಾಯ ತಂದೊಡ್ಡಲಿದೆ ಎಂದು ಅಮೆರಿಕ ಮಿಲಿಟರಿ ಬಾಹ್ಯಾಕಾದ ಮಾಜಿ ರಮಾಂಡರ್ ರೂಡಿ ರಿಡಾಲ್ಫಿ ಎಚ್ಚರಿಸಿದ್ದಾರೆ.

ಬಾಹ್ಯಾಕಾಶದಲ್ಲಿ ಸುನೀತಾ ವಿಲಿಯಮ್ಸ್‌ ಬಳಿ ಇರೋದು ಕೇವಲ 96 ಗಂಟೆಗಳ ಆಮ್ಲಜನಕ ಮಾತ್ರ!

ಮೊದಲ ಅಪಾಯ, ಸ್ಟಾರ್‌ಲೈನರ್ ನೌಕೆಯಲ್ಲಿ ಕೇವಲ 96 ಗಂಟೆಗಳ ಆಮ್ಲಜನಕ ಮಾತ್ರ ಬಾಕಿ ಉಳಿದಿದೆ. ಹೀಗಾಗಿ ಅತ್ಯಲ್ಪ ಅವಧಿಯಲ್ಲಿ ತಾಂತ್ರಿಕ ಸಮಸ್ಯೆ ನಿವಾಸಿ ಭೂಮಿಗೆ ಕರೆತರುವುದು ಅತ್ಯಂತ ಸವಾಲು. ಆಮ್ಲಜನ ಕೊರತೆಯಿಂದ ಗಗನಯಾತ್ರಿಗಳ ಅಪಾಯ ಹೆಚ್ಚು ಎಂದು ರೂಡಿ ರಿಡಾಲ್ಫಿ ಹೇಳಿದ್ದಾರೆ. 

ಎರಡನೇ ಅಪಾಯ, ತಾಂತ್ರಿಕ ಸಮಸ್ಯೆಯಿಂದ ಸ್ಟಾರ್‌ಲೈನರ್ ನೌಕೆ ಬಾಹ್ಯಾಕಾಶದಿಂದ ಭೂಮಿಗೆ ಮರಳಲು ವಿಫಲವಾಗು ಸಾಧ್ಯತೆ ಇದೆ. ಭೂಮಿ ಪ್ರವೇಶಕ್ಕೆ ಈ ನೌಕೆಗೆ ಸಾಧ್ಯವಾಗದೆ ಮತ್ತಷ್ಟು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದ ಎಂದಿದ್ದಾರೆ.

ಮೂರನೇ ಅಪಾಯ, ಬಾಹ್ಯಾಕಾಶದಿಂದ ಭೂಮಿಗೆ ಮರಳುವ ಪ್ರಯತ್ನದಲ್ಲಿ ಅತೀ ವೇಗವಾಗಿ ನೌಕೆ ಭೂಮಿಯತ್ತ ಧಾವಿಸಲಿದೆ. ಈ ವೇಳೆ ತಾಂತ್ರಿಕ ಸಮಸ್ಯೆಗಳ ಕಾರಣ ಬೆಂಕಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ರಿಡಾಲ್ಫಿ ಎಚ್ಚರಿಸಿದ್ದಾರೆ.

ಸ್ಪೇಸ್‌ಸೂಟ್‌ ಇಲ್ಲದೆ ಭೂಮಿಗೆ ವಾಪಾಗ್ತಾರಾ ಸುನೀತಾ ವಿಲಿಯಮ್ಸ್‌?
 

Latest Videos
Follow Us:
Download App:
  • android
  • ios