Asianet Suvarna News Asianet Suvarna News

ಸ್ಪೇಸ್‌ಸೂಟ್‌ ಇಲ್ಲದೆ ಭೂಮಿಗೆ ವಾಪಾಗ್ತಾರಾ ಸುನೀತಾ ವಿಲಿಯಮ್ಸ್‌?

NASA flags spacesuit problem ನಾಸಾದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್‌ ಹಾಗೂ ಬಚ್‌ ವಿಲ್ಮೋರ್‌ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಲಾಕ್‌ ಆಗಿ ಹಲವು ದಿನಗಳಾಗಿವೆ. ಅವರು 2025ರಲ್ಲಿ ಭೂಮಿಗೆ ವಾಪಾಸಾಗಬಹುದು ಎನ್ನಲಾಗಿದೆ. ಈ ಮೊದಲು ಅವರು ಜೂನ್‌ 14ರ ಆಸುಪಾಸಿನಲ್ಲಿ ಭೂಮಿಗೆ ಮರಳಬೇಕಿತ್ತು.

Sunita Williams may forced to return Earth without spacesuit san
Author
First Published Aug 15, 2024, 7:36 PM IST | Last Updated Aug 15, 2024, 7:36 PM IST

ನವದೆಹಲಿ (ಆ.15): ಬಾಹ್ಯಾಕಾಶ ವಲಯದಲ್ಲಿ ವಿಶ್ವದ ಯಾವುದೇ ದೇಶಗಳು ಮಾಡದ ಸಾಧನೆ ಯಾರಾದರೂ ಮಾಡಿದ್ದರೆ, ಅದು ಅಮೆರಿಕದ ನಾಸಾ ಮಾತ್ರ. ಆದರೆ, ಇದೇ ನಾಸಾ ಈಗ ಅತ್ಯಂತ ಸಂಕೀರ್ಣ ಪರಿಸ್ಥಿತಿಯಲ್ಲಿದೆ. ತನ್ನ ಗಗನಯಾತ್ರಿಗಳಾದ ಭಾರತೀಯ ಮೂಲದ ಸುನೀತಾ ವಿಲಿಯಮ್ಸ್‌ ಹಾಗೂ ಬಚ್‌ ವಿಲ್ಮೋರ್‌ ಅವರನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಗೆ ಅತ್ಯಂತ ಸುರಕ್ಷಿತವಾಗಿ ಕರೆತರುವುದು ಹೇಗೆ ಎನ್ನುವ ಗೊಂದಲಕ್ಕೆ ಬಿದ್ದಿದೆ. ಬೋಯಿಂಗ್‌ನ ಸ್ಟಾರ್‌ಲೈನರ್‌ ಬಾಹ್ಯಾಕಾಶ ನೌಕೆಯಲ್ಲಿ ಐಎಸ್‌ಎಸ್‌ಗೆ ಇಬ್ಬರೂ ಗಗನಯಾತ್ರಿಗಳು ತೆರಳಿದ್ದರು. ಆದರೆ, ಸ್ಟಾರ್‌ಲೈನರ್‌ನಲ್ಲಿ ಎದುರಾಗಿರುವ ಸಮಸ್ಯೆಯ ಕಾರಣದಿಂದಾಗಿ ಇವರಿಬ್ಬರನ್ನು ಸ್ಟಾರ್‌ಲೈನರ್‌ ನೌಕೆಯಲ್ಲಿ ಕರೆತರಬೇಕೇ ಅಥವಾ ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್‌ ಬಾಹ್ಯಾಕಾಶ ನೌಕೆಯಲ್ಲಿ ಕರೆತರಬೇಕೇ ಎನ್ನುವ ಜಿಜ್ಞಾಸೆಯಲ್ಲಿದೆ. ಒಂದು ವಿಚಾರವಂತೂ ಸತ್ಯ, ಏನೇ ಮಾಡಿದರೂ ಸುನೀತಾ ವಿಲಿಯಮ್ಸ್‌ ಆಗಿ ಬಚ್‌ ವಿಲಿಯಮ್ಸ್‌ ಆಗಲಿ ಭೂಮಿಗೆ ಸುರಕ್ಷಿತವಾಗಿ ಮರಳುವ ನಿಟ್ಟಿನಲ್ಲಿ ನಾಸಾ ಈವರೆಗೂ ಎದುರಿಸದಷ್ಟು ದೊಡ್ಡ ಸವಾಲುಗಳು ಎದುರಿಸಲಿದೆ.

ಹಾಗೇನಾದರೂ ಸುನೀತಾ ವಿಲಿಯಮ್ಸ್‌ ಹಾಗೂ ಬಚ್‌ ವಿಲ್ಮೋರ್‌ ಅವರ ಬಾಹ್ಯಾಕಾಶ ನೌಕೆಯನ್ನು ಬದಲಾಯಿಸಿದರೆ, ಈಗಿರುವ ಸಮಸ್ಯೆಗಳೊಂದಿಗೆ ಮತ್ತಷ್ಟು ಸಮಸ್ಯೆಗಳು ಉದ್ಭವವಾಗುತ್ತದೆ ಎಂದು ನಾಸಾ ಅಂದಾಜಿಸಿದೆ. ಅದರಲ್ಲಿ ಪ್ರಮುಖವಾಗಿ ಎದುರಾಗುವ ಸಮಸ್ಯೆ ಏನೆಂದರೆ, ಸ್ಪೇಸ್‌ಸೂಟ್‌ನದ್ದು.

ಸ್ಪೇಸ್‌ಸೂಟ್ ಹೊಂದಾಣಿಕೆ: ಅತ್ಯಂತ ದೊಡ್ಡ ಸಮಸ್ಯೆ ಎದುರಾಗಿವುದೇನೆಂದರೆ, ಗಗನಯಾತ್ರಿಗಳ ಸ್ಪೇಸ್‌ಸೂಟ್‌ನದ್ದು. ಸುನೀತಾ ಹಾಗೂ ಬಚ್‌ ವಿಲ್ಮೋರ್‌ ಧರಿಸಿರುವ ಸ್ಪೇಸ್‌ಸೂಟ್‌ಗಳು ಸ್ಟಾರ್‌ಲೈನರ್‌ ನೌಕೆಗೆ ಹೊಂದಾಣಿಕೆ ಆಗುವಂಥವು. ಇವುಗಳು ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್‌ ಸ್ಪೇಸ್‌ಕ್ರಾಫ್ಟ್‌ಗೆ ಹೊಂದಿಕೆ ಆಗೋದಿಲ್ಲ ಎನ್ನುವುದೇ ಮೊದಲ ಸಮಸ್ಯೆ. ಇವರು ಧರಿಸುವ ಸೂಟ್‌ಗಳು ಸ್ಟಾರ್‌ಲೈನರ್‌ ನೌಕೆಗಾಗಿ ವಿನ್ಯಾಸ ಮಾಡಿದಂತವು. ಇವುಗಳನ್ನು ಇಂಟರ್‌ಚೇಂಜ್‌ ಮಾಡಲು ಸಾಧ್ಯವಿಲ್ಲ. ಅಂದರೆ, ಡ್ರ್ಯಾಗನ್‌ ನೌಕೆಯಲ್ಲಿ ಕುಳಿತುಕೊಳ್ಳಲು ಸಾಧ್ಯವಾಗುವಂತೆ ಇದರ ವಿನ್ಯಾಸವಿಲ್ಲ. ಹಾಗೇನಾದರೂ ಸುನೀತಾ ವಿಲಿಯಮ್ಸ್‌ ಆಗಲಿ ಬಚ್‌ ವಿಲ್ಮೋರ್‌ ಆಗಲಿ ಡ್ರ್ಯಾಗನ್‌ ನೌಕೆ ಏರಿ ಭೂಮಿಗೆ ಮರಳಬೇಕೆಂದರೆ, ಅವರು ಸ್ಪೇಸ್‌ಸೂಟ್‌ಗಳನ್ನೇ ಧರಿಸಬಾರದು. ಹಾಗೇನಾದರೂ ಮಾಡಿದಲ್ಲಿ ಮತ್ತಷ್ಟು ಅಪಾಯಗಳು ಎದುರಾಗುತ್ತವೆ.

"ಸೂಟ್‌ಗಳ ದೃಷ್ಟಿಕೋನದಿಂದ ನೋಡುವುದಾದರೆ,  ಅವು ಪರಸ್ಪರ ಬದಲಾಯಿಸಲು ಸಾಧ್ಯವಿಲ್ಲ. ನೀವು ಸ್ಪೇಸ್‌ಎಕ್ಸ್ ನೌಕೆಯಲ್ಲಿ ಬೋಯಿಂಗ್ ಸೂಟ್ ಅಥವಾ ಬೋಯಿಂಗ್ ನೌಕೆಯಲ್ಲಿ ಸ್ಪೇಸ್‌ಎಕ್ಸ್ ಸೂಟ್ ಅನ್ನು ಬಳಸಲು ಸಾಧ್ಯವಿಲ್ಲ. ಇದು ನಮ್ಮ ಯೋಜನೆ ಕೂಡ ಅಲ್ಲ. ಸ್ಟಾರ್‌ಲೈನರ್ ಅನ್‌ಡಾಕ್ ಮಾಡಿದರೆ ಮತ್ತು ಡ್ರ್ಯಾಗನ್ ಮಾತ್ರ ಲಭ್ಯವಿದ್ದು, ಅವರು ಡ್ರ್ಯಾಗನ್‌ನಲ್ಲಿ ಸ್ಪೇಸ್‌ಸೂಟ್‌ ಧರಿಸದೇ ಹಿಂತಿರುಗಬೇಕಾಗಬಹುದು..' ಎಂದು ನಾಸಾ ಹೇಳಿದೆ.

ಇವರನ್ನು ಭೂಮಿಗೆ ಮರಳಿ ಕರೆತರುವ ನಿಟ್ಟಿನಲ್ಲಿ ನಾಸಾ ವಿವಿಧ ಆಯ್ಕೆಗಳಲ್ಲಿ ಇರುವ ಅಪಾಯಗಳು ಹಾಗೂ ಅದರ ಮಟ್ಟ, ಲಾಜಿಸ್ಟಿಕ್‌ ಸವಾಲುಗಳ ಬಗ್ಗೆ ಪರೀಕ್ಷೆ ಮಾಡುವ ತಯಾರಿಯಲ್ಲಿದ್ದಾರೆ. ಸ್ಟಾರ್‌ಲೈನರ್‌ನಲ್ಲಿ ವಾಪಾಸಾದರೆ, ಸ್ಪೇಸ್‌ಸೂಟ್‌ನ ಸಮಸ್ಯೆ ಬಗೆಹರಿಸಯತ್ತದೆ. ಆದರೆ, ಸ್ಟಾರ್‌ಲೈನರ್‌ ಯಾವಾಗ ಭೂಮಿಗೆ ಮರಳು ಸಾಧ್ಯವಾಗಲಿದೆ, ನೌಕೆಯ ಸನ್ನದ್ದತೆ ಹೇಗಿದೆ ಎನ್ನುವುದ ಬಗ್ಗೆ ಈಗಾಗಲೇ ಪ್ರಶ್ನೆಗಳು ಎದ್ದಿವೆ.

ಮಂಗಳ ಗ್ರಹದ ಬೃಹತ್‌ ಕಲ್ಲುಗಳ ಕೆಳಗೆ ಇದೆ ಸರೋವರ, ನಾಸಾದ ಹೊಸ ಶೋಧನೆ!

ನಾಸಾದ ಬಾಹ್ಯಾಕಾಶ ಕಾರ್ಯಾಚರಣೆಗಳ ಸಹಾಯಕ ನಿರ್ವಾಹಕರಾದ ಕೆನ್ ಬೋವರ್ಸಾಕ್ಸ್ ಅವರು ನಾಸಾದ ಎಚ್ಚರಿಕೆಯ ವಿಧಾನದ ಬಗ್ಗೆ ತಿಳಿಸಿದ್ದಾರೆ, "ನಾವು ಆಗಸ್ಟ್ ಕೊನೆಯ ವಾರದ ವೇಳೆಗೆ ನಿರ್ಧಾರವನ್ನು ತೆಗೆದುಕೊಳ್ಳಬೇಕಾದ ಹಂತವನ್ನು ಸಮೀಪಿಸಲಿದ್ದೇವೆ' ಎಂದು ತಿಳಿಸಿದ್ದಾರೆ.

8 ದಿನಕ್ಕಾಗಿ ಬಾಹ್ಯಾಕಾಶಕ್ಕೆ ಹೋಗಿದ್ದ ಸುನೀತಾ ವಿಲಿಯಮ್ಸ್‌ ಇನ್ನು ಬರೋದು 2025ರ ಫೆಬ್ರವರಿಯಲ್ಲಿ!

Latest Videos
Follow Us:
Download App:
  • android
  • ios