ಬಾಹ್ಯಾಕಾಶದಲ್ಲಿಯೇ ಕ್ರಿಸ್‌ಮಸ್ ಸಂಭ್ರಮ ಆಚರಿಸಿದ ಸುನೀತಾ ವಿಲಿಯಮ್ಸ್!
ನಾವು ಕ್ರಿಸ್‌ಮಸ್ ಆಚರಣೆಗೆ ಸಿದ್ದರಾಗಿದ್ದೇವೆ, ಎಲ್ಲರನ್ನೂ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಸ್ವಾಗತಿಸುತ್ತೇವೆ ಎಂದು ಸುನೀತಾ ವಿಲಿಯಮ್ಸ್ ಹೇಳಿದ್ದಾರೆ.
ನ್ಯೂಯಾರ್ಕ್ (ಡಿ.25): ಭಾರತೀಯ ಮೂಲದ ಅಮೆರಿಕನ್ ಗಗನಯಾತ್ರಿ ಸುನೀತಾ ವಿಲಿಯಮ್ಸ್, ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದಲೇ ಕ್ರಿಸ್‌ಮಸ್ ಹಬ್ಬದ ಶುಭಾಶಯಗಳನ್ನು ತಿಳಿಸಿದೆ. ಅವರೊಂದಿಗೆ ಗಗನಯಾತ್ರಿಗಳ ತಂಡ ಕೂಡ ಭಾಗಿಯಾಗಿತ್ತು ಶುಭಾಶಯಗಳನ್ನು ಹಂಚಿಕೊಂಡ ಸುನಿತಾ ಮತ್ತು ತಂಡವು ಬಾಹ್ಯಾಕಾಶ ನಿಲ್ದಾಣದಲ್ಲಿನ ಕ್ರಿಸ್‌ಮಸ್ ಯೋಜನೆಗಳ ಬಗ್ಗೆಯೂ ವಿವರಿಸಿದರು. ಈ ವೀಡಿಯೊವನ್ನು ನಾಸಾ ಹಂಚಿಕೊಂಡಿದೆ. ಬಾಹ್ಯಾಕಾಶದಲ್ಲಿನ ಕ್ರಿಸ್‌ಮಸ್ ಆಚರಣೆಯ ವೀಡಿಯೊವನ್ನು ಈಗಾಗಲೇ 2.5 ಮಿಲಿಯನ್‌ಗಿಂತಲೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ನಾವು ಕ್ರಿಸ್‌ಮಸ್ ಆಚರಣೆಗೆ ಸಿದ್ದರಾಗಿದ್ದೇವೆ, ಎಲ್ಲರನ್ನೂ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಸ್ವಾಗತಿಸುತ್ತೇವೆ ಎಂದು ಸುನೀತಾ ವಿಲಿಯಮ್ಸ್ ಹೇಳಿದ್ದಾರೆ.
ಕ್ರಿಸ್‌ಮಸ್ ಆಚರಣೆ ನಾನು ಇಷ್ಟಪಡುವ ಅತ್ಯುತ್ತಮ ವಿಷಯಗಳಲ್ಲಿ ಒಂದು. ಕ್ರಿಸ್‌ಮಸ್ ಆಚರಣೆಗಾಗಿ ತಯಾರಿ, ಸಿದ್ಧತೆ, ಕಾಯುವಿಕೆ ಎಲ್ಲವೂ ತುಂಬಾ ಇಷ್ಟ. ಎಲ್ಲರೂ ಒಟ್ಟಿಗೆ ಸೇರುವುದು, ತಿಂಡಿ-ತಿನಿಸುಗಳನ್ನು ತಯಾರಿಸುವುದು, ರಜಾದಿನಗಳಿಗಾಗಿ ಸಿದ್ಧತೆ ನಡೆಸುವುದು ಎಲ್ಲವೂ ಅದ್ಭುತ ಎಂದು ಅವರು ಹೇಳಿದರು. ಕ್ರಿಸ್‌ಮಸ್ ಸಮಯವನ್ನು ಆನಂದಿಸಲು ಬಾಹ್ಯಾಕಾಶ ನಿಲ್ದಾಣಕ್ಕೆ ಸಾಕಷ್ಟು ಆಹಾರವನ್ನು ತಂದಿದ್ದೇವೆ ಎಂದು ಮತ್ತೊಬ್ಬ ಬಾಹ್ಯಾಕಾಶ ಯಾತ್ರಿಕರು ತಿಳಿಸಿದ್ದಾರೆ.
ಇದಕ್ಕೂ ಮೊದಲು ಬಾಹ್ಯಾಕಾಶದಲ್ಲಿ ಸಾಂಟಾಕ್ಲಾಸ್‌ಗಳಾಗಿ ಬಾಹ್ಯಾಕಾಶ ಯಾತ್ರಿಕರಾದ ಸುನಿತಾ ವಿಲಿಯಮ್ಸ್ ಮತ್ತು ಡಾನ್ ಪೆಟಿಟ್ ವೀಡಿಯೊ ಪೋಸ್ಟ್ ಮಾಡಿದ್ದರು. ಮತ್ತೊಂದು ದಿನ ಎಂಬ ಶೀರ್ಷಿಕೆಯೊಂದಿಗೆ ಇಬ್ಬರೂ ಸಾಂಟಾ ಟೋಪಿ ಧರಿಸಿ ನಗುತ್ತಿರುವ ಚಿತ್ರವನ್ನು ನಾಸಾ ಎಕ್ಸ್‌ನಲ್ಲಿ ಹಂಚಿಕೊಂಡಿತ್ತು. ಇದರ ಜೊತೆಗೆ ಕೊಲಂಬಸ್ ಲ್ಯಾಬೋರೇಟರಿ ಮಾಡ್ಯೂಲ್‌ನಲ್ಲಿ ಹ್ಯಾಮ್ ರೇಡಿಯೊದಲ್ಲಿ ಮಾತನಾಡುತ್ತಿರುವ ಚಿತ್ರವೂ ಇತ್ತು.
ಇದಕ್ಕೂ ಮೊದಲು ಥ್ಯಾಂಕ್ಸ್‌ಗಿವಿಂಗ್ ಆಚರಿಸಿದ ಸುನಿತಾ ಅವರ ವೀಡಿಯೊ ಗಮನ ಸೆಳೆದಿತ್ತು. ಆರು ತಿಂಗಳಿಗಿಂತ ಹೆಚ್ಚು ಸಮಯದಿಂದ ಮೈಕ್ರೋಗ್ರಾವಿಟಿಯಲ್ಲಿ ವಾಸಿಸುತ್ತಿರುವ ಮತ್ತು ಕೆಲಸ ಮಾಡುತ್ತಿರುವವರು ಸುನಿತಾ ಮತ್ತು ಅವರ ತಂಡ. ಸ್ಪೇಸ್‌ಎಕ್ಸ್ ಡ್ರ್ಯಾಗನ್‌ನಲ್ಲಿ ಭೂಮಿಗೆ ಮರಳಲು ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಕ್ಷಣಗಣನೆ ಆರಂಭಿಸಿದ್ದಾರೆ. 2025 ರ ಆರಂಭದಲ್ಲಿ ಐಎಸ್‌ಎಸ್‌ನಲ್ಲಿ ಡಾಕ್ ಮಾಡಲು ಕ್ರೂ ಡ್ರ್ಯಾಗನ್ ನಿಗದಿಪಡಿಸಲಾಗಿದೆ.
ವರ್ಷದ ಕೊನೆಯ ವೀಕೆಂಡ್‌ಗೆ ಟ್ರಿಪ್‌ಗೆ ಹೋಗ್ತಿಲ್ವಾ? 500 ರೂಪಾಯಿಗೆ ಬೆಂಗ್ಳೂರಲ್ಲೇ ಈ ಇವೆಂಟ್ಸ್‌ನ ಎಂಜಾಯ್ ಮಾಡಿ!
2024 ರ ಜೂನ್‌ನಲ್ಲಿ ಬೋಯಿಂಗ್‌ನ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಇಬ್ಬರೂ ಒಂದು ವಾರದ ಭೇಟಿಗಾಗಿ ಬಾಹ್ಯಾಕಾಶ ನಿಲ್ದಾಣಕ್ಕೆ ಬಂದಿದ್ದರು. ಆದರೆ, ತಾಂತ್ರಿಕ ದೋಷದಿಂದಾಗಿ ಅವರು ಭೂಮಿಗೆ ಮರಳುವುದು ವಿಳಂಬವಾಗಿದೆ. ಬೋಯಿಂಗ್ ಸ್ಟಾರ್‌ಲೈನರ್ ನೌಕೆಯ ಪರೀಕ್ಷೆಗಾಗಿ ನಿಲ್ದಾಣಕ್ಕೆ ಬಂದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರಿಗೆ ನೌಕೆಯಲ್ಲಿನ ತಾಂತ್ರಿಕ ದೋಷದಿಂದಾಗಿ ಅದರಲ್ಲಿ ಹಿಂತಿರುಗಲು ಸಾಧ್ಯವಾಗಲಿಲ್ಲ. ಮಾರ್ಚ್ ತಿಂಗಳಲ್ಲಿ ಹಿಂತಿರುಗುವ ಕ್ರೂ 9 ನೌಕೆಯಲ್ಲಿ ಇಬ್ಬರೂ ವಾಪಾಸ್ ಬರಲಿದ್ದಾರೆ.
ನೆಲಮಂಗಲ ಜನರಿಗೆ ಮತ್ತೆ ಕಾಡಿದ 'ನಂಬರ್ 6', ಹೆದ್ದಾರಿ ಅಪಘಾತಕ್ಕೂ ನಂಬರ್ ಪ್ಲೇಟ್‌ಗೂ ಏನಿದೆ ಲಿಂಕ್?