ಮಕ್ಕಳಿಲ್ಲದ ಸುನೀತಾ ವಿಲಿಯಮ್ಸ್‌ ಅಹಮ್ಮದಾಬಾದ್‌ನಿಂದ ಮಗು ದತ್ತು ಪಡೆಯಲು ನಿರ್ಧರಿಸಿದ್ದರು. ಆದರೆ ಸುನೀತಾ ವಿಲಿಯಮ್ಸ್‌ಗೆ ಬಾಹ್ಯಾಕಾಶವೇ ಮಗುವಾಗಿತ್ತು. ಸುನೀತಾ ವಿಲಿಯಮ್ಸ್‌ಗೆ ಬಾಹ್ಯಾಕಾಶವೇ ಎಲ್ಲವೂ ಆಗಿತ್ತು. 

ಬಾಹ್ಯಾಕಾಶವೇ ಸುನಿತಾಳ ಸಂತೋಷದ ಸ್ಥಳ- ಹೀಗೆಂದು ಹೇಳಿದ್ದು ಸುನಿತಾ ಪತಿ ಮೈಕೆಲ್‌ ವಿಲಿಯಮ್ಸ್. 2004ರಲ್ಲಿ ದಿ ವಾಲ್‌ ಸ್ಟೀಟ್‌ ಜರ್ನಲ್‌ಗೆ ಸಂದರ್ಶನ ನೀಡಿದ್ದ ಮೈಕೆಲ್‌, ತಮಗೆ ಮಕ್ಕಳಿಲ್ಲದ ಕೊರಗಿರಲಿಲ್ಲ. ಬಾಹ್ಯಾಕಾಶವೇ ಆಕೆಗೆ ಮಗುವಂತಿತ್ತು. ಸಂಶೋಧನೆ ಆಕೆಯ ಪ್ರೀತಿಯ ಕೆಲಸ ಎಂದು ಪತ್ನಿಯ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದರು ಮೈಕೆಲ್.‌ 

ಮಕ್ಕಳಿಲ್ಲದ ಕಾರಣಕ್ಕೆ ಅಹಮದಾಬಾದ್‌ನಿಂದ ಪುಟ್ಟ ಹುಡುಗಿಯನ್ನು ದತ್ತು ತೆಗೆದುಕೊಳ್ಳುವ ಬಯಕೆ ವ್ಯಕ್ತಪಡಿಸಿದ್ದರು ಸುನಿತಾ. ಆದರೆ ಅವರ ಆಸೆ ಈಡೇರಲಿಲ್ಲ. ಮಗುವಿನ ಆಸೆಬಿಟ್ಟ ದಂಪತಿ, ಪ್ರಾಣಿಗಳನ್ನು ಸಾಕುತ್ತಾ, ಸರಳವಾಗಿ ಬದುಕು ತೊಡಗಿದ್ದರು. ಮೈಕೆಲ್‌ ವಿಲಿಯಮ್ಸ್‌, ಫೆಡರಲ್‌ ಮಾರ್ಷಲ್‌, ಹೆಲಿಕಾಪ್ಟರ್‌ ಪೈಲಟ್‌ ಆಗಿದ್ದರು. 

ಮೆರಿಲ್ಯಾಂಡ್‌ ಅನ್ನಾಪೊಲಿಸ್‌ನಲ್ಲಿರುವ ನೇವಲ್‌ ಅಕಾಡೆಮಿಯಲ್ಲಿ ಸುನಿತಾ ಮತ್ತು ವಿಲಿಯಮ್ಸ್‌ ಭೇಟಿಯಾದರು. ಸ್ನೇಹ ಪ್ರೀತಿಗೆ ತಿರುಗಿತು. 1987ರಲ್ಲಿ ಮದುವೆಯಾದರು. ಸುನಿತಾ- ಮೈಕೆಲ್‌ರದ್ದು ಅನ್ಯೋನ್ಯ ದಾಂಪತ್ಯ. ಮದುವೆ ನಂತರ ಮೈಕೆಲ್‌ ಸಹ ಹಿಂದೂ ಧರ್ಮದ ಅನುಯಾಯಿಯಾದರು. ಹಿಂದೂ ಧರ್ಮದ ಬಗೆಗಿನ ಸುನಿತಾರ ಸೆಳೆತ, ಮೈಕೆಲ್‌ರನ್ನು ಅಚ್ಚರಿಗೊಳಿಸಿದಂತೆ.

ವಿಧಾನಸೌಧ ಪುಸ್ತಕ ಮೇಳದಲ್ಲಿ ತಮಿಳಿಗರಿಗೆ ಸ್ಪೂರ್ತಿಯಾದ ಕನ್ನಡ ಕವಿಗಳ ಕೃತಿಗಳು; ತಮಿಳಿಗೆ ಭಾಷಾಂತರಿಸಿ ಮಾರಾಟ!

2006ರಲ್ಲಿ ಸುನೀತಾ ಅವರು ISSಗೆ ಹೋದಾಗ ಭಗವದ್ಗೀತೆಯ ಪ್ರತಿಯನ್ನು ಕೊಂಡೊಯ್ದು, ತಮ್ಮ ಹಿಂದೂ ಧರ್ಮ ಪ್ರೇಮವನ್ನು ಜಗತ್ತಿಗೆ ಸಾರಿದ್ದರು. ಬಳಿಕ 2012ರಲ್ಲಿ ಮತ್ತೊಮ್ಮೆ ಬಾಹ್ಯಾಕಾಶಕ್ಕೆ ಹೋದಾಗ ಶಿವನ ಚಿಹ್ನೆಗಳನ್ನು ತೆಗೆದುಕೊಂಡು ಹೋಗಿದ್ದರು. ಇದು ಮೈಕೆಲ್ ಮೇಲೆ ಪ್ರಭಾವ ಬೀರಿತಂತೆ. ಅಂದಿನಿಂದ ಮೈಕೆಲ್‌ ಸಹ ಪತ್ನಿ ಸುನಿತಾ ಹಾದಿಯಲ್ಲೇ ಹಿಂದೂ ಧರ್ಮ ಪಾಲಿಸುತ್ತಿದ್ದಾರೆ.
ಮಕ್ಕಳಿಲ್ಲ ಎಂಬ ಕೊರಗು ಬಿಟ್ಟು, ಕಾಯಕದಲ್ಲೇ ಸಂತೋಷಪಟ್ಟ ಸುನಿತಾ ಪಾಲಿಗೆ ಬಾಹ್ಯಾಕಾಶವೇ ಮನೆಯಾಗಿ, ಖಗೋಳ ವಿಸ್ಮಯಗಳೇ ಮಗುವಿನಂತಾಗಿದ್ದರಲ್ಲಿ ಆಶ್ವರ್ಯವಿಲ್ಲ.ಬಾಹ್ಯಾಕಾಶ ಕ್ಷೇತ್ರದಲ್ಲಿ ಸುನಿತಾ ವಿಲಿಯಮ್ಸ್‌ ಸಾಧನೆ ನೋಡಿದವರಿಗೆ ಇದರ ಅರಿವಾದೀತು. ಬಾಹ್ಯಾಕಾಶವನ್ನೇ ಮನೆಯನ್ನಾಗಿಸಿಕೊಂಡಿದ್ದ ಸುನಿತಾ, ಸ್ಪೇಸ್‌ ಸ್ಟೇಷನ್‌ನಲ್ಲಿ ಅತಿಹೆಚ್ಚು ದಿನಗಳನ್ನು ಕಳೆದ ಹೆಗ್ಗಳಿಕೆ ಹೊಂದಿದ್ದಾರೆ.

2006-2007ರಲ್ಲಿ ಅಂತಾರಾಷ್ಟೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 195 ದಿನವಿದ್ದರು. ಹಲವಾರು ದಿನಗಳು ಒಂದು ನಿರ್ದಿಷ್ಟ ಸ್ಪೇಸ್ ಕ್ರಾಫ್ಟ್ ಅನ್ನು ಮಹಿಳೆಯೊಬ್ಬರೇ ಏಕಾಂಗಿಯಾಗಿ ಮುನ್ನಡೆಸಿದ್ದ ಹೆಗ್ಗಳಿಕೆ ಸುನಿತಾರದ್ದು. 2012ರಲ್ಲಿ ಮತ್ತೊಮ್ಮೆ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿದ್ದ ಸುನೀತಾ, 127 ದಿನಗಳ ಇದ್ದರು.

ಬಾಹ್ಯಾಕಾಶದಲ್ಲಿ 7 ಸ್ಪೇಸ್ ವಾಕ್ ಗಳನ್ನು ಮಾಡಿದ ದಾಖಲೆ ಸುನಿತಾ ಹೆಸರಿನಲ್ಲೇ ಇದೆ. 
ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್ಎಸ್) ಹಲವಾರು ಪ್ರಯೋಗ ಮಾಡಿರುವ ಸುನಿತಾಗೆ ಸ್ಪೇಸ್‌ ಸ್ಟೇಷನ್‌ನ ಇಂಚಿಂಚೂ ಗೊತ್ತು. ಆಕೆಯ ಛಾತಿ, ಬಾಹ್ಯಾಕಾಶ ಕ್ಷೇತ್ರದಲ್ಲಿ ನಡೆಸಿದ ಹೊಸ ಪ್ರಯೋಗಗಳು, ನಾಸಾ ಹಿರಿಮೆಗೆ ಗರಿ ಮೂಡಿಸಿವೆ. ಯಾವುದೇ ಪ್ರಯೋಗಕ್ಕೂ ಸೈ ಎನ್ನುವ ಸುನಿತಾ, ಯಾವುದೇ ಕ್ಷಣದಲ್ಲಾದರೂ, ಬಾಹ್ಯಾಕಾಶಕ್ಕೆ ಹಾರಲು ಸಜ್ಜಾಗೇ ಇರುವ ಗಟ್ಟಿಗಿತ್ತಿ. ಎಷ್ಟೇ ಆಗಲಿ, ಬಾಹ್ಯಾಕಾಶವೆಂಬುದು ಆಕೆಗೆ ಮಗುವೇ ಅಲ್ಲವಾ? ಮುಂಜಾನೆ ಆಕೆಗೆ ಭುವಿಗಿಳಿದಾಗಲೂ, ಮಗುವನ್ನು ಬಿಟ್ಟು ಬಂದಂಥ ಮಗುವಿನ ನಗುವೇ ಕಾಣುತ್ತಿತ್ತು..

ತಂಗಾಳಿ ತಡ್ಕೊಂಡು, ಬೆಳದಿಂಗಳಲ್ ಮಲಕೊಂಡು, ಹಾಡು ಕೇಳಿಯೇ ಸುಖದಿಂದ ನರಳುವಂತೆ ಮಾಡಿದ ನಾದಬ್ರಹ್ಮ