ಕ್ಯಾಲಿಪೋರ್ನಿಯಾ(ಜೂ. 12)  ಉತ್ತರ ಕ್ಯಾಲಿಫೋರ್ನಿಯಾದ ಎನ್‌ಸಿ ಕಾಲೇಜ್  ಪ್ರೊಫೆಸರ್ ಮಂಡ್ಯ ಮೂಲದ ಶಿವರಾಂ ಕೀಲಾರ ವೀರಪ್ಪ ಐಎಎಫ್‌ಪಿ ಕೊಡಮಾಡುವ ಯಂಗ್ ಇನ್ವೆಸ್ಟಿಗೇಟರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರಶಸ್ತಿಯನ್ನು ಫ್ರಾನ್ಸ್ ಮೂಲದ ಕಂಪನಿ ಪ್ರಾಯೋಜಕತ್ವ ಮಾಡುತ್ತಿದ್ದು ಮೊತ್ತ 11,200 ನ ಡಾಲರ್.  ಪ್ರತಿಷ್ಠಿತ ಪ್ರಶಸ್ತಿ ನನಗೆ ಸಿಕ್ಕಿರುವುದು ಸಂತಸ ತಂದಿದೆ. ಆಹಾರ ಭದ್ರತೆ ಮತ್ತು ಮೈಕ್ರೋಬ್ಯಾಕ್ಟೀರಿಯಾ ವಿರುದ್ಧದ ಹೋರಾಟದಲ್ಲಿ ನನ್ನ ಪರಿಶ್ರಮ  ಗುರುತಿಸಲಾಗಿದೆ ಎಂದು  ಮಂಡ್ಯ ಮೂಲದ ಶಿವರಾಂ ಹೇಳಿದ್ದಾರೆ.

ಜಾವೇದ್ ಅಕ್ತರ್‌ಗೆ ಅಂತಾರಾಷ್ಟ್ರೀಯ ಪ್ರಶಸ್ತಿ

ಈ ಪ್ರಶಸ್ತಿ ನನಗೆ ಎಲ್ಲ ರೀತಿಯಿಂದ ಸಹಕಾರ ನೀಡಲಿದೆ. ಸೆನಗಲ್ ಮತ್ತು ಭಾರತದೊಂದಿಗಿನ ಸಹಕಾರದಲ್ಲಿ ಹೊಸ ಅಂಕಿ ಅಂಶ ಕಲೆಹಾಕಲು ಸಾಧ್ಯವಾಗುತ್ತದೆ. ಅಂತಾರಾಷ್ಟ್ರೀಯ ಸಂವಾದಗಳಲ್ಲಿ ಭಾಗವಹಿಸಿ ಜ್ಞಾನ ಹೆಚ್ಚು ಮಾಡಿಕೊಳ್ಳಬಹುದು ಎಂದು ಸಂಶೋಧಕ ಹೇಳುತ್ತಾರೆ.

ಯುಎಸ್ ಕೃಷಿ ವಿಭಾಗದಲ್ಲಿಯೂ ವಿಜ್ಞಾನಿಯಾಗಿ ಗುರುತಿಸಿಕೊಂಡರು ಶಿವರಾಂ. ಆಹಾರಜನ್ಯ ರೋಗಗಳ ಸಂಶೋಧನೆಗೋಸ್ಕರ 2016ರಲ್ಲಿ ಸಿವಿಎಂ ಸೇರಿದರು.