Asianet Suvarna News Asianet Suvarna News

ಬಿಹಾರದಲ್ಲಿ ಮೇಲ್ವರ್ಗದ ಬಡವರಿಗೆ ನ್ಯಾಯಾಂಗ ಇಲಾಖೆ, ಕಾಲೇಜಲ್ಲಿ ಶೇ.10ರಷ್ಟು ಮೀಸಲಾತಿ

ದೇಶದಲ್ಲೇ ಮೊದಲ ಬಾರಿಗೆ ಜಾತಿ ಸಮೀಕ್ಷೆ ವರದಿ ಬಿಡುಗಡೆ ಮಾಡಿದ ಬಿಹಾರದ ಜೆಡಿಯು ಸರ್ಕಾರ, ರಾಜ್ಯ ಇದೀಗ ನ್ಯಾಯಂಗ ಇಲಾಖೆ ಮತ್ತು ಕಾನೂನು ಕಾಲೇಜಲ್ಲಿ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಶೇ.10ರಷ್ಟು ಮೀಸಲಾತಿ ನೀಡಲು ನಿರ್ಧರಿಸಿದೆ. 

10 persent reservation in judicial department college for upper caste poor in Bihar A surprising decision after release of caste census report akb
Author
First Published Oct 4, 2023, 7:28 AM IST

ಪಟನಾ: ದೇಶದಲ್ಲೇ ಮೊದಲ ಬಾರಿಗೆ ಜಾತಿ ಸಮೀಕ್ಷೆ ವರದಿ ಬಿಡುಗಡೆ ಮಾಡಿದ ಬಿಹಾರದ ಜೆಡಿಯು ಸರ್ಕಾರ, ರಾಜ್ಯ ಇದೀಗ ನ್ಯಾಯಂಗ ಇಲಾಖೆ ಮತ್ತು ಕಾನೂನು ಕಾಲೇಜಲ್ಲಿ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಶೇ.10ರಷ್ಟು ಮೀಸಲಾತಿ ನೀಡಲು ನಿರ್ಧರಿಸಿದೆ. ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಜಾತಿ ಗಣತಿ ವರದಿ ಬಳಿಕ ಒಬಿಸಿ ಸೇರಿದಂತೆ ಹಿಂದುಳಿದ ವರ್ಗದವರ ಮೀಸಲನ್ನು ಹೆಚ್ಚಿಸಬಹುದು, ಇದು ಮೇಲ್ವರ್ಗದ ಅಸಮಾಧಾನಕ್ಕೆ ಕಾರಣವಾಗಬಹುದು ಎಂಬ ವಿಶ್ಲೇಷಣೆ ಕೇಳಿಬಂದಿದ್ದವು. ಜೊತೆಗೆ ಪ್ರಧಾನಿ ಮೋದಿ ಕೂಡಾ ಬಿಹಾರ ಗಣತಿ ವರದಿ ಬಿಡುಗಡೆ ಬೆನ್ನಲ್ಲೇ, ಹಿಂದೂಗಳನ್ನು ಒಡೆಯಲು ವಿಪಕ್ಷಗಳು ಸಂಚು ರೂಪಿಸಿವೆ ಎಂದು ಕಿಡಿಕಾರಿದ್ಧರು. ಅದರ ಬೆನ್ನಲ್ಲೇ ನಿತೀಶ್‌ ಸರ್ಕಾರ ಈ ಅಚ್ಚರಿಯ ನಿರ್ಧಾರ ಪ್ರಕಟಿಸಿದೆ.

ಬಿಹಾರ ಜಾತಿ ಗಣತಿ ಪ್ರಶ್ನಿಸಿದ್ದ ಅರ್ಜಿ ಅ.6ಕ್ಕೆ ವಿಚಾರಣೆ: ಸುಪ್ರೀಂ

ನವದೆಹಲಿ: ಬಿಹಾರದಲ್ಲಿ ಜಾತಿಗಣತಿ ಅನುಮತಿ ನೀಡಿ ಬಿಹಾರ ಹೈಕೋರ್ಟ್‌ ನೀಡಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ಅ.6ರಂದು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ನಿರ್ಧರಿಸಿದೆ. ಜಾತಿ ಗಣತಿ ನಡೆಸಲು ಕೇಂದ್ರ ಸರ್ಕಾರಕ್ಕೆ ಮಾತ್ರ ಹಕ್ಕಿದೆ. ಹೀಗಾಗಿ ಬಿಹಾರ ಸರ್ಕಾರದ ಜನಗಣತಿ ನಿರ್ಧಾರಕ್ಕೆ ತಡೆ ನೀಡಬೇಕೆಂದು ಕೋರಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ಆದರೆ ದಮನಿತ ವರ್ಗದ ಅಭ್ಯದಯದ ಉದ್ದೇಶ ಹೊಂದಿದೆ ಎಂಬ ಕಾರಣ ನೀಡಿ ಕಳೆದ ಆ.1ರಂದು ಬಿಹಾರ ಹೈಕೋರ್ಟ್‌ ಗಣತಿ ಮುಂದುವರೆಸಲು ಅನುಮತಿ ನೀಡಿತ್ತು. ಅದರ ಬೆನ್ನಲ್ಲೇ ತ್ವರಿತವಾಗಿ ಗಣತಿ ಪೂರ್ಣಗೊಳಿಸಿದ್ದ ಬಿಹಾರ ಸರ್ಕಾರ ಅ.2ರಂದು ಜಾತಿ ಗಣತಿ ವರದಿ ಬಿಡುಗಡೆ ಮಾಡಿತ್ತು.

ಸೂಪರ್‌ ಮಾರ್ಕೆಟ್‌ನಲ್ಲಿ ಫ್ರಿಡ್ಜ್‌ ಮುಟ್ಟಿದ ಪುಟಾಣಿ ಕರೆಂಟ್ ಶಾಕ್‌ಗೆ ಬಲಿ: ಆಘಾತಕಾರಿ ವೀಡಿಯೋ ವೈರಲ್

ಉ.ಪ್ರ. ಮಹಾರಾಷ್ಟ್ರದಲ್ಲೂ ಜಾತಿ ಗಣತಿಗೆ ಒತ್ತಾಯ

ಲಖನೌ/ ಥಾಣೆ: ಬಿಹಾರದಲ್ಲಿ ಜಾತಿ ಗಣತಿ ಫಲಿತಾಂಶ ಪ್ರಕಟವಾಗುತ್ತಿದ್ದಂತೆ, ಅದೇ ರೀತಿ ನಮ್ಮ ರಾಜ್ಯದಲ್ಲೂ ಜಾತಿ ಗಣತಿ ನಡೆಸಬೇಕು ಎಂದು ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶದ ವಿಪಕ್ಷಗಳು ಆಡಳಿತಾರೂಢ ಸರ್ಕಾರಗಳನ್ನು ಒತ್ತಾಯಿಸಿವೆ. ಈ ಬೆಳವಣಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ರಾಜ್ಯಗಳಿಗೆ ವಿಸ್ತರಣೆಯಾಗುವ ಸಾಧ್ಯತೆಯೂ ಇದೆ.

ಈ ಕುರಿತು ಪ್ರತಿಕ್ರಿಯಿಸಿರುವ ಬಿಎಸ್ಪಿ ನಾಯಕ ಮಾಯಾವತಿ, ‘ಬಿಹಾರದ ಜಾತಿ ಗಣತಿ, ಇತರೆ ಹಿಂದುಳಿದ ವರ್ಗಗಳಿಗೆ ಸರಿಯಾದ ನ್ಯಾಯ ಒದಗಿಸುವಲ್ಲಿ ಸಹಕಾರಿಯಾಗುತ್ತದೆ. ಅದನ್ನು ದೇಶದೆಲ್ಲೆಡೆ ನಡೆಸಬೇಕು. ಉತ್ತರ ಪ್ರದೇಶ ಸರ್ಕಾರ ಕೂಡಾ ಆದಷ್ಟು ಶೀಘ್ರವೇ ರಾಜ್ಯದಲ್ಲಿ ಜಾತಿ ಗಣತಿ ನಡೆಸಲು ಮುಂದಾಗಬೇಕು ಎಂದು ಆಗ್ರಹಿಸಿದರು. ಮತ್ತೊಂದೆಡೆ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌, ಕಾಂಗ್ರೆಸ್‌ ನಾಯಕರು ಮತ್ತು ಬಿಜೆಪಿಯ ಮಿತ್ರಪಕ್ಷ ಅಪ್ನಾದಳ (ಸೋನೇಲಾಲ್‌) ಬಣ ಕೂಡಾ ಉತ್ತರಪ್ರದೇಶದ ಮತ್ತು ದೇಶವ್ಯಾಪಿ ಜಾತಿ ಗಣತಿಗೆ ಆಗ್ರಹಿಸಿವೆ.

'ಸನಾತನ ಅನ್ನೋದೇ ಏಕೈಕ ಧರ್ಮ, ಉಳಿದವೆಲ್ಲ..' ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಮಾತು

ಇತ್ತ ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಶಾಸಕ ಜಿತೇಂದ್ರ ಅವ್ಹಾಡ್‌ ಮಾತನಾಡಿ,‘ಈ ಹಿಂದೆ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರೇ ಜಾತಿ ಗಣತಿಗೆ ಆಗ್ರಹಿಸಿದ್ದರು. ಈಗ ಅದನ್ನು ನಡೆಸಲು ಸರಿಯಾದ ಸಮಯ. ರಾಜಕೀಯ ಬಿಟ್ಟು ಜಾತಿ ಗಣತಿ ನಡೆಸಬೇಕು’ ಎಂದು ಆಗ್ರಹಿಸಿದರು

Follow Us:
Download App:
  • android
  • ios