Video: ಕಡುಕತ್ತಲ ದಾರಿಯಲ್ಲಿ ಚಂದ್ರನೂರಿಗೆ ಭಾರತದ ಯಾನ, ಟೆಲಿಸ್ಕೋಪ್‌ನಲ್ಲಿ ಸೆರೆಯಾಯ್ತು ಚಂದ್ರಯಾನ!

ಭೂಮಿಯ ಸುತ್ತ ತನ್ನ ಐದನೇ ಹಾಗೂ ಅಂತಿಮ ಕಕ್ಷೆಯನ್ನು ಏರಿರುವ ಚಂದ್ರಯಾನ-3 ನೌಕೆ, ಆಗಸ್ಟ್‌-1ರ ವೇಳೆಗೆ ಚಂದ್ರನ ಕಕ್ಷೆಯತ್ತ ಸಾಗಲಿದೆ. ಈ ನಡುವೆ ಪೋಲೆಂಡ್‌ನಲ್ಲಿರುವ ಟೆಲಿಸ್ಕೋಪ್‌, ಬಾಹ್ಯಾಕಾಶದ ಆಳದಲ್ಲಿ ಚಂದ್ರಯಾನ-3 ಸಾಗುತ್ತಿರುವ ವಿಡಿಯೋವನ್ನು ಸೆರೆ ಹಿಡಿದಿದೆ.

Panoptes 4 Polish telescope capture Chandrayaan 3 seen flying in space san

ಬೆಂಗಳೂರು (ಜು.25): ಇಡೀ ಭಾರತ ಭಾರೀ ನಿರೀಕ್ಷೆ ಇಟ್ಟಿರುವ ಚಂದ್ರಯಾನ-3ಯಲ್ಲಿ ಮಂಗಳವಾರ ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ.  ಭೂಮಿಯ ಪರಿಭ್ರಮಣೆ ಮಾಡುವ ಹಂತದಲ್ಲಿ ಐದನೇ ಕಕ್ಷೆಗೆ ಚಂದ್ರಯಾನ ನೌಕೆಯನ್ನು ಇಸ್ರೋ ಎತ್ತರಿಸಿದ್ದು, ಆಗಸ್ಟ್‌ 1ರ ವೇಳೆಗೆ ಚಂದ್ರಯಾನ ನೌಕೆ ತನ್ನ ಪಥವನ್ನು ಚಂದ್ರನತ್ತ ಬದಲಿಸಲಿದೆ. ಈ ನಡುವೆ ಪೋಲೆಂಡ್‌ನಲ್ಲಿರುವ ರೋಟುಜ್‌ (ಪನೋಪ್ಟ್ಸ್-4) ಟೆಲಿಸ್ಕೋಪ್‌ ಬಾಹ್ಯಾಕಾಶದ ಆಳದಲ್ಲಿ ಚಂದ್ರಯಾನ-3 ನೌಕೆ ಸಾಗುತ್ತಿರುವ ವೇಗವನ್ನು ಆಕರ್ಷಕವಾಗಿ ಸೆರೆ ಹಿಡಿದಿದೆ. ಇದನ್ನು ಟೆಲಿಸ್ಕೋಪ್‌ನ ನಿವರ್ಹಣೆ ಮಾಡುವ ಸೈಬಿಲ್ಲಾ ಟೆಕ್ನಾಲಜೀಸ್‌ ಕೂಡ ತನ್ನ ಟ್ವಿಟರ್‌ ಪುಟದಲ್ಲಿ ಹಂಚಿಕೊಂಡಿದೆ. ಡೀಪ್‌ ಸ್ಪೇಸ್‌ನಲ್ಲಿ ಚಿಕ್ಕ ಬಿಂದುವಿನಂತೆ ಕಾಣುವ ಚಂದ್ರಯಾನ-3 ನೌಕೆ ಅತ್ಯುತ್ತಮ ವೇಗದಲ್ಲಿ ಸಾಗುತ್ತಿದೆ ಎಂದು ಬರೆದುಕೊಂಡಿದೆ. 'ನಮ್ಮ ರೊಟುಜ್‌ ಟೆಲಿಸ್ಕೋಪ್‌ನ ಖಗೋಳಾಸಕ್ತರು ಬಾಹ್ಯಾಕಾಶದಲ್ಲಿ ಸಾಗುತ್ತಿರುವ ಇಸ್ರೋದ ಚಂದ್ರಯಾನ-3 ನೌಕೆಯನ್ನು ಸೆರೆಹಿಡಿದಿದ್ದು, ಇದರಿಂದ ಥ್ರಿಲ್‌ ಆಗಿದ್ದೇವೆ. ಜೆ. ಗಿಲ್ ಇನ್ಸ್ಟಿಟ್ಯೂಟ್ ಆಫ್ ಅಸ್ಟ್ರಾನಮಿ ಯೂನಿವರ್ಸಿಟಿ ಆಫ್ ಝಿಲೋನಾ ಗೋರಾದಲ್ಲಿ ಈ ಟೆಲಿಸ್ಕಫ್‌ ಇದ್ದು, ಇದನ್ನು ಸೈಬಿಲ್ಲಾ ಟೆಕ್ನಾಜೀಸ್‌ ನಿರ್ವಹಣೆ ಮಾಡುತ್ತಿದೆ. ಅತ್ಯುತ್ತಮ ವೇಗದಲ್ಲಿ ಇದು ಸಾಗುತ್ತಿದೆ' ಎಂದು ಬರೆದುಕೊಂಡಿದೆ.

ಕೇವಲ 8 ಸೆಕೆಂಡ್‌ನ ವಿಡಿಯೋವನ್ನು ಜಿಫ್‌ ಮಾದರಿಯಲ್ಲಿ ಇದು ಪ್ರಕಟಮಾಡಿದ್ದು, ಇಡೀ ಬಾಹ್ಯಾಕಾಶ ನೌಕೆ ಚಿಕ್ಕ ಬಿಂದುವಿನಂತೆ ಕಂಡಿದೆ. ಇಡೀ ಬ್ಯಾಹಾಕಾಶದ ಬ್ಯಾಕ್‌ಡ್ರಾಪ್‌ ಕೂಡ ವಿಡಿಯೋದಲ್ಲಿ ಕಾಣಬಹುದಾಗಿದ್ದು, ಬ್ಯಾಹಾಕಾಶ ಯಾನದಲ್ಲಿ ಭಾರತದ ಪ್ರಗತಿಯನ್ನು ಇದು ತೋರಿಸಿದೆ. ಚಂದ್ರಯಾನ-3 ತನ್ನ ಪ್ರಯಾಣವನ್ನು ಮುಂದುವರಿಸುತ್ತಿದ್ದರೆ,  ರೋಟುಜ್‌ ದೂರದರ್ಶಕದಂತಹ ಭೂ-ಆಧಾರಿತ ಟೆಲಿಸ್ಕೋಪ್‌ಗಳು ಈ ಪ್ರಯಾಣಗಳನ್ನು ದಾಖಲಿಸುವಲ್ಲಿ ಬಹಳ ನಿರ್ಣಾಯಕವಾಗಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಚಂದ್ರಯಾನ-3 ನೌಕೆಯನ್ನು ಭೂಮಿಯ ಐದನೇ ಕಕ್ಷೆಗೆ ಎತ್ತರಿಸುವ ಕಾರ್ಯವನ್ನು ಮಂಗಳವಾರ ಯಶಸ್ವಿಯಾಗಿ ಮಾಡಲಾಗಿದೆ ಎಂದು ತಿಳಿಸಿದೆ. ಅದರೊಂದಿಗೆ ಚಂದ್ರನ ಪಥದತ್ತ ನೌಕೆಯನ್ನು ದೂಡುವ ಪ್ರಕ್ರಿಯೆ ಆಗಸ್ಟ್‌ 1 ರಂದು ನಡೆಯಲಿದೆ ಎಂದು ಮಾಹಿತಿ ನೀಡಿದೆ. 2023ರ ಜುಲೈ 14 ರಂದು ಶ್ರೀಹರಿಕೋಟಾದ ಸತೀಶ್‌ ಧವನ್‌ ಸ್ಪೇಸ್‌ ಸೆಂಟರ್‌ನಿಂದ ಚಂದ್ರಯಾನ-3 ನೌಕೆಯನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಲಾಗಿತ್ತು. ಪ್ರಸ್ತುತ ಈ ನೌಕೆ 1,27,609 km x 236 km ಭೂಕಕ್ಷೆಯಲ್ಲಿ ಪರಿಭ್ರಮಣೆ ಮಾಡುತ್ತಿದೆ. ಇಲ್ಲಿಯವವರೆಗೆ ಐದೂ ಕಕ್ಷೆ ಎತ್ತರಿಸುವ ಕಾರ್ಯವನ್ನು ಯಶಸ್ವಿಯಾಗಿ ಮಾಡಲಾಗಿದ್ದು, ನಿರಂತರವಾಗಿ ನೌಕೆಯ ವೇಗವನ್ನು ವರ್ಧನೆ ಮಾಡಲಾಗುತ್ತಿದೆ.

ನಾಲ್ಕೇ ದಿನದಲ್ಲಿ ಚಂದ್ರನತ್ತ ಹೋಗುತ್ತೆ ಅಮೆರಿಕಾ, ಭಾರತಕ್ಕೆ ಏಕೆ 42 ದಿನ?

ತಾಂತ್ರಿಕವಾಗಿ ಅತ್ಯಂತ ಸವಾಲಿನ ಕೆಲಸವಾಗಿರುವ ಚಂದ್ರನ ಅಂಗಳದ ಮೇಲಿನ ಸಾಫ್ಟ್‌ ಲ್ಯಾಂಡಿಂಗ್‌ಅನ್ನು ಚಂದ್ರಯಾನ-3 ನೌಕೆ 2023ರ ಆಗಸ್ಟ್‌ 23 ರಂದು ಮಾಡಲಿದೆ ಎಂದು ಇಸ್ರೋ ಚೇರ್ಮನ್‌ ಎಸ್‌.ಸೋಮನಾಥ್‌ ಈಗಾಗಲೇ ತಿಳಿಸಿದ್ದಾರೆ. ಚಂದ್ರಯಾನ-3 ನೌಕೆಯ ಲ್ಯಾಂಡರ್‌ ಚಂದ್ರನ ದಕ್ಷಿಣ ವಲಯದಲ್ಲಿ ಲ್ಯಾಂಡ್‌ ಆಗಲಿದೆ. ಇದನ್ನು ಈವರೆಗೂ ಯಾವ ದೇಶಗಳು ಕೂಡ ಅನ್ವೇಷಣೆ ಮಾಡಿಲ್ಲ. ದೊಡ್ಡ ಮಟ್ಟದ ವೈಜ್ಞಾನಿಕ ಡೇಟಾ ಈ ಭಾಗದಲ್ಲಿದೆ ಎಂದು ಅಂದಾಜಿಸಲಾಗಿದೆ.

ಚಂದ್ರಯಾನ-3 ಆಯ್ತು.. ಚಂದ್ರಯಾನ-4ಗೆ ರೆಡಿಯಾದ ಇಸ್ರೋ!

 

Latest Videos
Follow Us:
Download App:
  • android
  • ios