Asianet Suvarna News Asianet Suvarna News

ಚಂದ್ರಯಾನ-3 ಆಯ್ತು.. ಚಂದ್ರಯಾನ-4ಗೆ ರೆಡಿಯಾದ ಇಸ್ರೋ!

ಶ್ರೀಹರಿಕೋಟಾದ ಸತೀಶ್‌ ಧವನ್‌ ಉಡಾವಣಾ ಕೇಂದ್ರದಿಂದ ರೋವರ್‌, ಲ್ಯಾಂಡರ್‌ಗಳನ್ನು ಹೊತ್ತ ಚಂದ್ರಯಾನ-3 ನೌಕೆ ಚಂದ್ರನೂರಿಗೆ ಪ್ರಯಾಣ ಬೆಳೆಸಿದೆ. ಇದರ ಬೆನ್ನಲ್ಲಿಯೇ ಮಾತನಾಡಿರುವ ಇಸ್ರೋ ಅಧ್ಯಕ್ಷ, ಚಂದ್ರಯಾನ-4ರ ಕಾರ್ಯ ಈಗಾಗಲೇ ಆರಂಭವಾಗಿದೆ ಎಂದು ತಿಳಿಸಿದ್ದಾರೆ.

Isro Chandrayaan programme now Ready for Chandrayaan4 With  Japan Aerospace Exploration Agency san
Author
First Published Jul 15, 2023, 5:26 PM IST

ಬೆಂಗಳೂರು (ಜು.15): ಚಂದ್ರಯಾನ-3ಯ ಆಗುಹೋಗುಗಳು ಇನ್ನು ಭೂಸಂಪರ್ಕದ ಇಸ್ರೋ ಕೈಯಲ್ಲಿ ಇಲ್ಲ. ಸತೀಶ್‌ ಧವನ್‌ ಉಡಾವಣಾ ಕೇಂದ್ರದಿಂದ ಶುಕ್ರವಾರ ಚಂದ್ರಯಾನ-3 ನೌಕೆಯನ್ನು ಉಡಾವಣೆ ಮಾಡಿದ ಬೆನ್ನಲ್ಲಿಯೇ ಇಡೀ ಪ್ರಕ್ರಿಯೆ ಇನ್ನು ತಾಂತ್ರಿಕವಾಗಿ ಆಗುತ್ತದೆ. ಇನ್ನು 40 ದಿನಗಳ ಬಳಿಕ ಅಂದರೆ, ಆಗಸ್ಟ್‌ 23ರ ವೇಳೆ ರೋವರ್‌ಅನ್ನು ಹೊತ್ತ ಲ್ಯಾಂಡರ್‌ ಚಂದ್ರನ ಮೇಲೆ ಇಳಿಯಬೇಕು. ಅಲ್ಲಿಗೆ ಇಡೀ ಚಂದ್ರಯಾನ-3 ಯಶಸ್ವಿ ಆದಂತೆ. ಆ ಬಳಿಕ ರೋವರ್‌ ಒಂದು ಚಂದ್ರನ ದಿನ ಅಂದರೆ, ಭೂಮಿಯ 14 ದಿನಗಳ ಕಾಲ ಅಲ್ಲಿ ಇರಲಿದ್ದು ಕೆಲ ಪರೀಕ್ಷೆಗಳನ್ನು ನಡೆಸಲಿದೆ. ಎಲ್ಲಾ ಅಂದುಕೊಂಡಂತೆ ಆದರೆ, ಸೆಪ್ಟೆಂಬರ್‌ ಮೊದಲ ವಾರದ ವೇಳೆಗೆ ಚಂದ್ರಯಾನ-3 ಕಾರ್ಯಗಳು ಸಂಪನ್ನವಾಗುತ್ತದೆ. ನಂತರ ಮುಂದೇನು ಎನ್ನುವ ಕುತೂಹಲವಿರಬಹುದು. ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌ ಶುಕ್ರವಾರ ಸುದ್ದಿಗೋಷ್ಠಿಯಲ್ಲ ಮಾತನಾಡುತ್ತಾ, 'ಎಲ್ಲರೂ ಚಂದ್ರಯಾನ-3 ಯಶಸ್ಸಿಗೆ ಪ್ರಾರ್ಥನೆ ಮಾಡಬೇಕು. ಇದು ಉತ್ತಮವಾಗಿ ಆದಲ್ಲಿ ಚಂದ್ರಯಾನ-4  ಘೋಷಣೆಯಾಗಲಿದೆ' ಎಂದು ಹೇಳಿದರು.

ಚಂದ್ರಯಾನ-4 ಕೆಲಸ ಈಗಾಗಲೇ ಆರಂಭ: ಚಂದ್ರಯಾನ-4ನ ಕೆಲಸಗಳು ಈಗಾಗಲೇ ಆರಂಭವಾಗಿದೆ. ಇದನ್ನು ಲುಪೆಕ್ಸ್‌ ಎಂದು ಕರೆಯಲಾಗಿದೆ. ಅದರರ್ಥ ಲೂನಾರ್‌ ಪೋಲಾರ್‌ ಎಕ್ಸ್‌ಪ್ಲೋರೇಷನ್‌ ಮಿಷನ್‌ (ಚಂದ್ರನ ಧ್ರುವ ಪರಿಶೋಧನೆ ಮಿಷನ್).ಇದು ರೋಬೋಟಿಕ್‌ ಯೋಜನೆಯಾಗಿದ್ದು ಭಾರತದೊಂದಿಗೆ ಜಪಾನ್‌ ಕೂಡ ಈ ಯೋಜನೆಗೆ ಹೆಗಲು ಕೊಡಲಿದೆ. ಜಪಾನ್‌ನ ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಶನ್ ಏಜೆನ್ಸಿ ಅಥವಾ ಜಾಕ್ಸಾ ಜೊತೆ ಈಗಾಗಲೇ ಒಪ್ಪಂದವಾಗಿದ್ದು, ಚಂದ್ರಯಾನ-4ಗೆ ಬೇಕಾಗುವ ರೋವರ್‌ಗಳನ್ನು ನೀಡಲಿದೆ. ಚಂದ್ರನ ದಕ್ಷಿಣ ಧ್ರುವದ ಪರಿಶೋಧನೆಯೇ ಇದರ ಮುಖ್ಯ ಉದ್ದೇಶ. 2026ರ ವೇಳೆಗೆ ಈ ನೌಕೆ ಉಡಾವಣೆ ಮಾಡುವ ಯೋಜನೆ ರೂಪಿಸಲಾಗಿದೆ. ಇಷ್ಟು ಮಾತ್ರವಲ್ಲದೆ ತನ್ನ ಅಭಿವೃದ್ಧಿ ಹಂತದಲ್ಲಿರುವ ಎಚ್‌3 ಲಾಂಚ್‌ ವೆಹಿಕಲ್‌ ಅನ್ನು ಜಾಕ್ಸಾ ನೀಡಲಿದೆ. ಭಾರತ ತನ್ನ ಲ್ಯಾಂಡರ್‌ಅನ್ನು ಈ ಯೋಜನೆಗೆ ನೀಡಲಿದೆ.  ಇಸ್ರೋ ನೀಡಿರುವ ಮಾಹಿತಿಯ ಪ್ರಕಾರ ಈ ಯೋಜನೆಯು ಇನ್ನೂ ಪರಿಕಲ್ಪನೆಯ ಹಂತದಲ್ಲಿದೆ.

ಲಾಂಚ್‌ ವೆಹಿಕಲ್‌ ಒಟ್ಟಾರೆ 6 ಸಾವಿರ ಕೆಜಿ ಭಾರ ಇರಲಿದ್ದು, ಇದರೊಳಗಿನ ಪೇಲೋಡ್‌ 350 ಕೆಜಿ ಇರಲಿದೆ. ಲ್ಯಾಂಡರ್‌ ಹಾಗೂ ರೋವರ್‌ಗಳು ಪೇಲೋಡ್‌ನಲ್ಲಿ ಇರಲಿದೆ. ಜಪಾನ್‌ನ ತನೆಗಾಶಿಮಾ ಬಾಹ್ಯಾಕಾಶ ಕೇಂದ್ರದ ಉಡಾವಣಾ ಕೇಂದ್ರದಿಂದ ಈ ನೌಕೆ ಉಡಾವಣೆ ಆಗಲಿದೆ.

2017ರಿಂದಲೂ ಇಸ್ರೋ ಹಾಗೂ ಜಾಕ್ಸಾ ನಡುವೆ ಈ ಕುರಿತಾಗಿ ಒಪ್ಪಂದವಾಗಿದ್ದು, ಚಂದ್ರನಲ್ಲಿ ನೀರಿನ ಅಂಶವನ್ನು ಹುಡುಕುವ ಪ್ರಯತ್ನವಾಗಿ ಈ ಯೋಜನೆ ಇರಲಿದೆ ಎನ್ನಲಾಗಿದೆ. ಚಂದ್ರಯಾನ 4 ಅನ್ನು 2025ಕ್ಕೂ ಮುಂಚಿತವಾಗಿ ಉಡಾವಣೆ ಮಾಡುವ ಯಾವುದೇ ಯೋಜನೆಯಿಲ್ಲ ಎಂದು ತಿಳಿಸಲಾಗಿದೆ.

ಚಂದ್ರನ ಮೇಲೆ ಲ್ಯಾಂಡ್‌ ಆಗಲು ಇನ್ನೂ 40 ದಿನ ಬೇಕು: ಆ.23ಕ್ಕೆ ಸಂಕೀರ್ಣ ಸವಾಲ್‌

2019ರ ಲ್ಯಾಡಿಂಗ್‌ ಪ್ರಯತ್ನದಲ್ಲಿ ಭಾರತದ ಲ್ಯಾಂಡರ್‌ ಚಂದ್ರನ ನೆಲದ ಮೇಲೆ ಕ್ರ್ಯಾಶ್‌ ಆಗಿತ್ತು. ಈ ಬಾರಿ ಭಾರತ ಚಂದ್ರಯಾನ-3 ಜೊತೆ ಮತ್ತೊಮ್ಮೆ ಪ್ರಯತ್ನ ಮಾಡಲಿದೆ. ಲ್ಯಾಂಡರ್‌ನ ಯಶಸ್ಸು ಮುಂದಿನ ಲುಪೆಕ್ಸ್‌ ಅಥವಾ ಚಂದ್ರಯಾನ-4ಗೆ ಬಹುದೊಡ್ಡ ಲಾಭವಾಗಲಿದೆ. ಈ ನಡುವೆ 2019ರ ಸೆಪ್ಟೆಂಬರ್‌ 24 ರಂದು ಜಾಕ್ಸಾ ಹಾಗೂ ನಾಸಾ ಜಂಟಿ ಹೇಳಿಕೆ ನೀಡಿದ್ದವು. ಈ ವೇಳೆ ಚಂದ್ರಯಾನ-4 ಯೋಜನೆಗೆ ನಾಸಾ ಭಾಗಿಯಾಗುವ ಬಗ್ಗೆ ಮಾತುಕತೆ ನಡೆಸಲಾಗಿತ್ತು.

News Hour: ಚಂದ್ರನೂರಿಗೆ ಭಾರತದ ತೇರು, ಇನ್ನೇನಿದ್ದರು ಗಮನ ಆಗಸ್ಟ್‌ 23!

ಜಾಕ್ಸಾ ತನ್ನ ದೇಶೀಯ ಸಿಸ್ಟಮ್ ರಿಕ್ವೈರ್ಮೆಂಟ್ ರಿವ್ಯೂ (SRR) ಅನ್ನು 2021 ರ ಆರಂಭದಲ್ಲಿ ಪೂರ್ಣಗೊಳಿಸಿತು. ಏಪ್ರಿಲ್ 2023 ರಲ್ಲಿ, ಲುಪೆಕ್ಸ್‌ ವರ್ಕಿಂಗ್ ಗ್ರೂಪ್ 1 ಲ್ಯಾಂಡಿಂಗ್ ಸೈಟ್ ವಿಶ್ಲೇಷಣೆಯ ಮಾಹಿತಿಯನ್ನು ಹಂಚಿಕೊಳ್ಳಲು ಭಾರತಕ್ಕೆ ಆಗಮಿಸಿತು, ಲ್ಯಾಂಡರ್ ಮತ್ತು ಚಂದ್ರನ ಮೇಲೆ ರೋವರ್ ಸ್ಥಾನವನ್ನು ಅಂದಾಜು ಮಾಡುವ ವಿಧಾನಗಳು, ಕಮಾಂಡ್ ಮತ್ತು ಟೆಲಿಮೆಟ್ರಿಗಾಗಿ ನೆಲದ ಆಂಟೆನಾಗಳ ಮಾಹಿತಿಯನ್ನು ಈ ವೇಳೆ ಚರ್ಚಿಸಲಾಗಿತ್ತು.

Follow Us:
Download App:
  • android
  • ios