ಚಂದ್ರನ ಮೇಲೆ ಏಲಿಯನ್‌ಗಳ ನೌಕೆ ಕಂಡ ನಾಸಾದ ಎಲ್‌ಆರ್‌ಓ ನೌಕೆ?

ಚಂದ್ರನ ಸುತ್ತ ಸುತ್ತುತ್ತಿರುವ ನಾಸಾದ ಬಾಹ್ಯಾಕಾಶ ನೌಕೆ ಅಲ್ಲಿ ಒಂದು ನಿಗೂಢ ಹಾರುವ ವಸ್ತುವನ್ನು ಗುರುತಿಸಿದೆ. ಅದರ ಚಿತ್ರವನ್ನೂ ತೆಗೆದಿದ್ದು, ಸರ್ಫಿಂಗ್‌ ಬೋರ್ಡ್‌ನಂತೆ ಕಾಣುವ ವಾಹನ ಇದಾಗಿದೆ. ಹೆಚ್ಚಿನ ತನಿಖೆಯ ಬಳಿಕ ನಾಸಾದ ವಿಜ್ಞಾನಿಗಳು ಇದೇನು ಅನ್ನೋದರ ಉತ್ತರವನ್ನೂ ಕಂಡುಕೊಂಡಿದ್ದಾರೆ.
 

NASA saw a mysterious vehicle on the moon it was circling at high speed shocking revelation san

ನವದೆಹಲಿ (ಏ. 11): ನಾಸಾದ ಲೂನಾರ್ ರೆಕಾನೈಸೆನ್ಸ್ ಆರ್ಬಿಟರ್ (ಎಲ್‌ಆರ್‌ಒ) ಚಂದ್ರನ ಚಿತ್ರಗಳನ್ನು ಈಗಲೂ ತೆಗೆಯುತ್ತಿದೆ.  ನಿರಂತರವಾಗಿ ಚಂದ್ರನ ಸುತ್ತ ಸುತ್ತಿತ್ತಿರುವ ಈ ನೌಕೆ ಈಗಾಗಲೇ ಸಾಕಷ್ಟು ಚಿತ್ರಗಳನ್ನು ಭೂಮಿಗೆ ಕಳುಹಿಸಿಕೊಟ್ಟಿದೆ. ಆದರೆ, ಇತ್ತೀಚೆಗೆ ಎಲ್‌ಆರ್‌ಓ ಕಳಿಸಿದ ಒಂದು ಚಿತ್ರದಲ್ಲಿ ಚಂದ್ರನ ಮೇಲೆ ಸರ್ಫ್‌ಬೋರ್ಡ್‌ನಂಥ ನೌಕೆ ಪ್ರಯಾಣ ಮಾಡುತ್ತಿತ್ತು. ಸರ್ಫ್‌ ಬೋರ್ಡ್‌ ಎಂದರೆ, ಜನರು ಸಮುದ್ರದ ಅಲೆಗಳ ಮೇಲೆ ನಿಂತು ಸವಾರಿ ಮಾಡುವ ಬೋರ್ಡ್. ಮೊದಲಿಗೆ ಇದು ಹಾರುವ ತಟ್ಟೆ ಅಥವಾ ಅನ್ಯಲೋಕದ ನೌಕೆ ಎಂದು ಸ್ವತಃ ನಾಸಾ ಕೂಡ ಭಾವಿಸಿತ್ತು. ಇದರ ಚಿತ್ರ ನೋಡಿ ನಾಸಾ ವಿಜ್ಞಾನಿಗಳು ಕೂಡ ಅಚ್ಚರಿ ಪಟ್ಟಿದ್ದರು. ಏಕೆಂದರೆ ನಾಸಾ ವಿಜ್ಞಾನಿಗಳು ಚಂದ್ರನ ಸುತ್ತ ಇಷ್ಟು ಉದ್ದ ಗಾತ್ರದ ವಸ್ತು ಸುತ್ತುವುದನ್ನು ಎಂದೂ ನೋಡಿರಲಲ್ಲ. ಆ ಬಳಿಕ ಎಲ್‌ಆರ್‌ಓ ಕಳಿಸಿದ ಚಿತ್ರವನ್ನು ಕೂಲಂಕಷವಾಗಿ ಪರಿಶೀಲಿಸಿದ ಬಳಿಕ ಇದು ಏನು ಅನ್ನುವ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಆ ಬಳಿಕ ಇದರ ಇನ್ನಷ್ಟು ಫೋಟೋಗಳನ್ನು ಮಾರ್ಚ್‌ 5 ಮತ್ತು 6 ರಂದು ತೆಗೆದುಕೊಳ್ಳಲಾಗಿದೆ.

ಆ ನಿಗೂಢ ವಸ್ತು ಇರುವ ಸ್ಥಳವನ್ನು ಕೂಲಂಕುಷವಾಗಿ ಅಧ್ಯಯನ ಮಾಡಿ ತನಿಖೆ ನಡೆಸಿದಾಗ ಅದು ದಕ್ಷಿಣ ಕೊರಿಯಾದ ಲೂನಾರ್ ಆರ್ಬಿಟರ್ ದನುರಿ ಎಂಬುದು ಪತ್ತೆಯಾಗಿದೆ ಎಂದು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ. ಬಾಹ್ಯಾಕಾಶ ನೌಕೆಗಳು ಅಂದರೆ ನಾಸಾದ ಎಲ್‌ಆರ್‌ಓ ಮತ್ತು ಕೊರಿಯಾದ ದನುರಿ ಎರಡೂ ವಿಭಿನ್ನ ಕಕ್ಷೆಗಳಲ್ಲಿ ಒಟ್ಟಿಗೆ ತಿರುಗುತ್ತಿರುವ ಕಾರಣ ಇದು ಈ ರೀತಿ ಕಾಣುತ್ತದೆ.

ದನುರಿ ದಕ್ಷಿಣ ಕೊರಿಯಾದ ಮೊದಲ ಮೂನ್‌ ಆರ್ಬಿಟರ್‌: ಮೇರಿಲ್ಯಾಂಡ್‌ನ ನಾಸಾದ ಗೊಡ್ಡಾರ್ಡ್ ಬಾಹ್ಯಾಕಾಶ ವಿಮಾನ ಕೇಂದ್ರದ ವಿಜ್ಞಾನಿಗಳು ಎಲ್‌ಆರ್‌ಒ ಕ್ಯಾಮೆರಾದ ಎಕ್ಸ್‌ಪೋಸರ್ ಸಮಯ ತುಂಬಾ ಕಡಿಮೆ ಎಂದು ಹೇಳಿದ್ದಾರೆ. ಇದು ಕೇವಲ 0.338 ಮಿಲಿಸೆಕೆಂಡುಗಳಿವೆ. ಆದ್ದರಿಂದಲೇ ಚಿತ್ರ ತೆಗೆಯಲು ತೊಂದರೆಯಾಗುತ್ತಿತ್ತು. ಆದರೆ ಅವರು ದನುರಿಯ ಅನೇಕ ಛಾಯಾಚಿತ್ರಗಳನ್ನು ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಋಏ. ಇದು ದಕ್ಷಿಣ ಕೊರಿಯಾದ ಮೊದಲ ಬಾಹ್ಯಾಕಾಶ ನೌಕೆಯಾಗಿದ್ದು, ಡಿಸೆಂಬರ್ 2022 ರಲ್ಲಿ ಚಂದ್ರನ ಕಕ್ಷೆಯನ್ನು ತಲುಪಿತು.

ಎರಡರ ವೇಗದಲ್ಲಿನ ವ್ಯತ್ಯಾಸವು ಗೊಂದಲಕ್ಕೆ ಕಾರಣ: ಎಲ್‌ಆರ್‌ಓ ಮತ್ತು ದನುರಿ ನಡುವೆ ವೇಗದ ವ್ಯತ್ಯಾಸವಿದೆ. ಇವೆರಡರ ವೇಗದಲ್ಲಿ ಸುಮಾರು 11,500 ಕಿಮೀ/ಗಂಟೆಯಷ್ಟು ವ್ಯತ್ಯಾಸವಿದೆ. ಆದ್ದರಿಂದ ಎಲ್‌ಆರ್‌ಓ ಫೋಟೋ ತೆಗೆದಾಗ, ಸಣ್ಣ ದನುರಿ ಬಾಹ್ಯಾಕಾಶ ನೌಕೆಯು ದೈತ್ಯ ಅನ್ಯಲೋಕದ ನೌಕೆಯಂತೆ ಕಾಣಲಾರಂಭಿಸಿತು. ಅದು ತನ್ನ ನಿಜವಾದ ಗಾತ್ರಕ್ಕಿಂತ 10 ಪಟ್ಟು ದೊಡ್ಡದಾಗಿ ಕಾಣುತ್ತಿತ್ತು. ಹೆಚ್ಚಿನ ವೇಗದಿಂದಾಗಿ ಅದು ಸರ್ಫ್‌ಬೋರ್ಡ್‌ನಂತೆ ಕಾಣಲಾರಂಭಿಸಿತು ಎನ್ನಲಾಗಿದೆ.

ಚಂದ್ರಯಾನ 3 ಲ್ಯಾಂಡಿಂಗ್‌ ಸೈಟ್‌ಗೆ Statio Shiva Shakti ಹೆಸರು ಅಧಿಕೃತಗೊಳಿಸಿದ ಖಗೋಳ ಒಕ್ಕೂಟ !

ಅಮೆರಿಕದ ತಜ್ಞರು ಏನು ಹೇಳುತ್ತಾರೆ: ದನುರಿ ಬಾಹ್ಯಾಕಾಶ ನೌಕೆಯು ಸರ್ಫ್‌ಬೋರ್ಡ್‌ನಂತಿಲ್ಲ. ಅವು ಪೆಟ್ಟಿಗೆಗಳಂತೆ ಇದೆ.  ಎರಡೂ ಬದಿಗಳಲ್ಲಿ ಸೌರ ಫಲಕಗಳನ್ನು ಅಳವಡಿಸಲಾಗಿದೆ. ವಾಷಿಂಗ್ಟನ್ ವಿಶ್ವವಿದ್ಯಾನಿಲಯದ ಗ್ರಹ ವಿಜ್ಞಾನದ ಸಹ ಪ್ರಾಧ್ಯಾಪಕ ಪಾಲ್ ಬೈರ್ನ್, ದನುರಿ ಸಾಮಾನ್ಯ ಕಕ್ಷೆಯಂತಿದೆ ಎಂದು ಹೇಳಿದರು. ಆದರೆ ಅದರ ಅತಿ ವೇಗದ ಕಾರಣದಿಂದ ಸರ್ಫ್‌ಬೋರ್ಡ್‌ನಂತೆ ಎಲ್‌ಆರ್‌ಒ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮಂಗಳ ಗ್ರಹದ ಮೇಲೆ ಲ್ಯಾಂಡರ್‌, ಪುಟ್ಟ ಹೆಲಿಕಾಪ್ಟರ್‌ ಕಳಿಸಲು ಸಿದ್ಧತೆ ಆರಂಭಿಸಿದ ಇಸ್ರೋ!

NASA saw a mysterious vehicle on the moon it was circling at high speed shocking revelation san

Latest Videos
Follow Us:
Download App:
  • android
  • ios