ಮೊದಲ ಬಾರಿ ಚಂದ್ರನ ಮೇಲೆ ಇಳಿಯಲಿದೆ ಖಾಸಗಿ ಲ್ಯಾಂಡರ್!
ಜಗತ್ತಿನಲ್ಲೇ ಮೊಟ್ಟಮೊದಲ ಬಾರಿಗೆ ಖಾಸಗಿ ಕಂಪನಿಯೊಂದರ ಲ್ಯಾಂಡರ್, ಚಂದ್ರನ ಮೇಲೆ ಲ್ಯಾಂಡ್ ಆಗುವ ನಿರೀಕ್ಷೆಯಿದೆ. ಈ ಯೋಜನೆಯನ್ನು ನಾಸಾ ಕೈಗೊಂಡಿದ್ದು, ಸೋಮವಾರ ಕೆನವೆರಲ್ ಲ್ಯಾಂಡರ್ ಹೊತ್ತ ರಾಕೆಟ್ ಉಡಾವಣೆಗೊಂಡಿದೆ.
ಕೇಪ್ ಕೆನವೆರಲ್: ಜಗತ್ತಿನಲ್ಲೇ ಮೊಟ್ಟಮೊದಲ ಬಾರಿಗೆ ಖಾಸಗಿ ಕಂಪನಿಯೊಂದರ ಲ್ಯಾಂಡರ್, ಚಂದ್ರನ ಮೇಲೆ ಲ್ಯಾಂಡ್ ಆಗುವ ನಿರೀಕ್ಷೆಯಿದೆ. ಈ ಯೋಜನೆಯನ್ನು ನಾಸಾ ಕೈಗೊಂಡಿದ್ದು, ಸೋಮವಾರ ಕೆನವೆರಲ್ ಲ್ಯಾಂಡರ್ ಹೊತ್ತ ರಾಕೆಟ್ ಉಡಾವಣೆಗೊಂಡಿದೆ. ಈವರೆಗೆ ಸರ್ಕಾರಿ ಸಂಸ್ಥೆಗಳು ಮಾತ್ರ ಚಂದ್ರನ ಮೇಲೆ ತಮ್ಮ ಲ್ಯಾಂಡರ್‌ಗಳನ್ನು ಇಳಿಸಿದ್ದವು.
ಆದರೆ ನಾಸಾ, ಈ ಯೋಜನೆಯನ್ನು ಖಾಸಗಿಯವರಿಗೂ ವಿಸ್ತರಿಸಿದೆ. ಈ ಲ್ಯಾಂಡರನ್ನು ಪಿಟ್ಸ್‌ಬರ್ಗ್ ಮೂಲದ ಆಕ್ಟೋಬೋಟಿಕ್ ಸಂಸ್ಥೆ ತಯಾರಿಸಿದ್ದು, ಇದು ಫೆ.23ರಂದು ಚಂದ್ರನ ನೆಲದ ಮೇಲಿಳಿವ ನಿರೀಕ್ಷೆಯಿದೆ. ಆದರೆ, ಉಡಾವಣೆ ಬಳಿಕಎಂಜಿನ್ ಸಮಸ್ಯೆ ಕಾಣಿಸಿಕೊಂಡಿದ್ದು, ವಿಜ್ಞಾನಿಗಳು ಪರಿಶೀಲನೆ ನಡೆಸುತ್ತಿದ್ದಾರೆ. 1972ರಲ್ಲಿ ಕೊನೆಯ ಬಾರಿ ನಾಸಾ ಚಂದ್ರಯಾನ ಕೈಗೊಂಡಿತ್ತು. ಇದಾದ 50 ವರ್ಷ ಬಳಿಕ ಮತ್ತೆ ಇಂಥ ಯತ್ನ ನಡೆದಿದೆ.
ಆದಿತ್ಯ ಎಲ್1 ಸೌರ ವೀಕ್ಷಣಾಲಯದ ಕುರಿತ 10 ಪ್ರಶ್ನೆಗೆ ಇಲ್ಲಿದೆ ಉತ್ತರ..!
ಯೋಜನೆಗೆ ಭಾರತದ ವಿಜ್ಞಾನಿಯ ಸಾಥ್
ಅಮೆರಿಕದ ಈ ಚಂದ್ರಯಾನ ಯೋಜನೆಗೆ ಭಾರತದ ನಂಟಿದೆ. ಲ್ಯಾಂಡರ್ ತಯಾರಿಸಿರುವ ಆಸ್ಫೋಬೋಟಿಕ್ ಸಂಸ್ಥೆಯ ನಿರ್ದೇಶಕ ಶರದ್ ಭಾಸ್ಕರನ್ ಅವರು ಭಾರತ ಮೂಲದವರಾಗಿದ್ದಾರೆ. ಈ ಯೋಜನೆಗಾಗಿ ಇವರು 7 ವರ್ಷಗಳ ಕಾಲ ಯೋಜನಾ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದು, ಯೋಜನೆ ಯಶಸ್ವಿಯಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸರಿಯಾದ ಸ್ಥಳದಲ್ಲಿ ಆದಿತ್ಯ ನಿಂತಿದ್ದಾನೆ, ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಹರ್ಷ!