Asianet Suvarna News Asianet Suvarna News

11 ತಿಂಗಳು ದಾಖಲೆ ಅವಧಿ ಬಾಹ್ಯಾಕಾಶದಲ್ಲಿದ್ದ ನಾಸಾದ ಮಹಿಳಾ ಯಾತ್ರಿ ಭೂಮಿಗೆ!

11 ತಿಂಗಳು ದಾಖಲೆ ಅವಧಿ ಬಾಹ್ಯಾಕಾಶದಲ್ಲಿದ್ದ ನಾಸಾದ ಮಹಿಳಾ ಯಾತ್ರಿ ಭೂಮಿಗೆ| ಬಾಹ್ಯಾಕಾಶದಲ್ಲಿ ಮಹಿಳಾ ಗಗನಯಾತ್ರಿಯೊಬ್ಬರು ಅತೀ ದೀರ್ಘಕಾಲೀನ ಯಾತ್ರೆ ಕೈಗೊಂಡ ಕೀರ್ತಿ ಕೋಚ್‌ ಅವರ ಪಾಲು

NASA astronaut Christina Koch returns safely to Earth after 11 month journey
Author
Bangalore, First Published Feb 7, 2020, 12:02 PM IST

ಆಲ್ಮಟಿ[ಫೆ.07]: ಕಳೆದ 11 ತಿಂಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ವಾಸವಿದ್ದ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಗಗನಯಾತ್ರಿ ಕ್ರಿಸ್ಟಿನಾ ಕೋಚ್‌ ಗುರುವಾರ ಸುರಕ್ಷಿತವಾಗಿ ಭೂಮಿಗೆ ಮರಳಿದರು. ಈ ಮೂಲಕ ಬಾಹ್ಯಾಕಾಶದಲ್ಲಿ ಮಹಿಳಾ ಗಗನಯಾತ್ರಿಯೊಬ್ಬರು ಅತೀ ದೀರ್ಘಕಾಲೀನ ಯಾತ್ರೆ ಕೈಗೊಂಡ ಕೀರ್ತಿ ಕೋಚ್‌ ಅವರ ಪಾಲಾಗಿದೆ.

2016-17ರಲ್ಲಿ ನಾಸಾದ ಹಿರಿಯ ಗಗನಯಾತ್ರಿ ಪೆಗ್ಗಿ ವಿಟ್ಸನ್‌ 289 ದಿನಗಳ ಕಾಲ ಬಾಹ್ಯಾಕಾಶದಲ್ಲಿ ವಾಸವಿದ್ದಿದ್ದು ಇದುವರೆಗಿನ ದಾಖಲೆಯಾಗಿತ್ತು. ಯುರೋಪ್‌ನ ಬಾಹ್ಯಾಕಾಶವಾಗಿರುವ ಲೂಕಾ ಪರ್ಮಿಟನೊ ಹಾಗೂ ರಷ್ಯಾದ ಅಲೆಕ್ಸಾಂಡರ್‌ ಸ್ಕೊ$್ವಟ್ರ್ಸೊವ್‌ ಬಾಹ್ಯಾಕಾಶ ಸಂಸ್ಥೆಗಳೊಂದಿಗೆ ಬಾಹ್ಯಾಕಾಶದಲ್ಲಿ 328 ದಿನಗಳ ಕಾಲ ಕಾಲ ಕಳೆದಿರುವ ಕೋಚ್‌ ಅವರು ಗುರುವಾರ ಬೆಳಗ್ಗೆ 9.12 ನಿಮಿಷಕ್ಕೆ ಭೂಮಿ ಮೇಲೆ ಕಾಲಿಟ್ಟರು.

ಸೂರ್ಯಾಸ್ತದ ನೆರಳಲ್ಲಿ ಮಿಲ್ಕಿ ವೇ : ಗ್ರ್ಯಾಂಡ್ ಕ್ಯಾನ್ಯನ್ ಮಡಿಲಲ್ಲಿ ಮಲಗಿದ ಕ್ಷಿರಪಥ!

ಕಳೆದ ವರ್ಷದ ಮಾಚ್‌ರ್‍ 14ರಂದು ಕೋಚ್‌ ಅವರು ಬಾಹ್ಯಾಕಾಶ ಯಾತ್ರೆಗೆ ತೆರಳಿದ್ದರು.

Follow Us:
Download App:
  • android
  • ios