ಸಣ್ಣ ರಾಜಕಾರಣಿಯಂತೆ ಮೋದಿ ವರ್ತನೆ: ಖರ್ಗೆ ಆಕ್ರೋಶ
ಮೋದಿ ಸಣ್ಣ ರಾಜಕಾರಣಿಯಂತೆ ವರ್ತಿಸುತ್ತಿದ್ದಾರೆ. ಅವರು ಈ ದೇಶದ ಇತಿಹಾಸ, ರಾಷ್ಟ್ರದ ಒಗ್ಗಟ್ಟಿನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕಿದೆ. ಒಂದು ವೇಳೆ ಮೋದಿಗೆ ಕಾಂಗ್ರೆಸ್ ಏನೂ ಅಲ್ಲವಾಗಿದ್ದರೆ , ಯಾಕೆ ಬಹಳ ಹಳೆಯ ಪಕ್ಷದ ಬಗ್ಗೆ ಇಷ್ಟೊಂದು ಯೋಚಿಸುತ್ತಿದ್ದಾರೆ’ ಎಂದು ಪ್ರಶ್ನಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ತಿರುವನಂತಪುರಂ(ಏ.25): ಲೋಕಸಭಾ ಚುನಾವಣೆ ಮೊದಲ ಹಂತದ ಮತದಾನ ಮುಗಿದಿದೆ. ಮೊದಲ ಹಂತದ ವೋಟಿಂಗ್ ನಲ್ಲಿ ಅದೃಶ್ಯ ಮತದಾರರಿಂದ ಮೋದಿಗೆ ಭಯ ಶುರುವಾಗಿದೆ. ಈ ಕಾರಣಕ್ಕಾಗಿಯೇ ಕಾಂಗ್ರೆಸ್ ವಿರುದ್ಧ ಟೀಕೆ ಮಾಡುತ್ತಿದ್ದಾರೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ ಖರ್ಗೆ,‘ಮೋದಿ ಸಣ್ಣ ರಾಜಕಾರಣಿಯಂತೆ ವರ್ತಿಸುತ್ತಿದ್ದಾರೆ. ಅವರು ಈ ದೇಶದ ಇತಿಹಾಸ, ರಾಷ್ಟ್ರದ ಒಗ್ಗಟ್ಟಿನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕಿದೆ. ಒಂದು ವೇಳೆ ಮೋದಿಗೆ ಕಾಂಗ್ರೆಸ್ ಏನೂ ಅಲ್ಲವಾಗಿದ್ದರೆ , ಯಾಕೆ ಬಹಳ ಹಳೆಯ ಪಕ್ಷದ ಬಗ್ಗೆ ಇಷ್ಟೊಂದು ಯೋಚಿಸುತ್ತಿದ್ದಾರೆ’ ಎಂದು ಪ್ರಶ್ನಿಸಿದರು.
ಜಾತಿ, ಆರ್ಥಿಕ ಗಣತಿ ತಡೆಯಲು ಯಾವ ಶಕ್ತಿಗಳಿಗೂ ಸಾಧ್ಯವಿಲ್ಲ: ರಾಹುಲ್ ಗಾಂಧಿ
ಕಳೆದ 3 ದಿನದಿಂದ ಮೋದಿ ಅವರು ಕಾಂಗ್ರೆಸ್ ಪಕ್ಷವು ದಲಿತರ ಮೀಸಲು ಕಿತ್ತು ಮುಸ್ಲಿಮರಿಗೆ ಕೊಡಲಿದೆ ಹಾಗೂ ದೇಶದ ಜನರ ಆಸ್ತಿಯನ್ನು ಮುಸ್ಲಿಮರಿಗೆ ಹಂಚಲಿದೆ ಎಂದು ವಾಗ್ದಾಳಿ ನಡೆಸುತ್ತಿದ್ದಾರೆ.