Asianet Suvarna News Asianet Suvarna News

ಇಸ್ರೋದಿಂದ ಒನ್‌ವೆಬ್‌ ಮಿಶನ್‌ನ 36 ಉಪಗ್ರಹಗಳ ಯಶಸ್ವಿ ಉಡಾವಣೆ, ವರ್ಷಾಂತ್ಯಕ್ಕೆ ಸೇವೆ ಆರಂಭ ಸಾಧ್ಯತೆ

 ಇಸ್ರೋ  ಭಾನುವಾರ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 36 ಉಪಗ್ರಹಗಳೊಂದಿಗೆ ಭಾರತದ ಅತಿದೊಡ್ಡ ಲಾಂಚ್ ವೆಹಿಕಲ್ ಮಾರ್ಕ್-III (LVM3) ರಾಕೆಟ್/OneWeb India-2 ಮಿಷನ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. 

ISRO launches India's largest LVM3 rocket with 36 satellites gow
Author
First Published Mar 26, 2023, 10:36 AM IST

ಆಂಧ್ರಪ್ರದೇಶ (ಮಾ.26): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಭಾನುವಾರ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 36 ಉಪಗ್ರಹಗಳೊಂದಿಗೆ ಭಾರತದ ಅತಿದೊಡ್ಡ ಲಾಂಚ್ ವೆಹಿಕಲ್ ಮಾರ್ಕ್-III (LVM3) ರಾಕೆಟ್/OneWeb India-2 ಮಿಷನ್ ಅನ್ನು ಭಾನುವಾರ ಬೆಳಿಗ್ಗೆ 9 ಗಂಟೆಗೆ ಯಶಸ್ವಿಯಾಗಿ ಉಡಾವಣೆ ಮಾಡಿದೆ. 

ಇದು ಇಸ್ರೋದ ವಾಣಿಜ್ಯ ವಿಭಾಗ ‘ನ್ಯೂ ಸ್ಪೇಸ್‌ ಇಂಡಿಯಾ ಲಿ.’ ನೆಟ್ವರ್ಕ್ ಆಕ್ಸೆಸ್‌ ಅಸೋಸಿಯೇಟ್ಸ್‌ ಲಿ. ಮತ್ತು ಬ್ರಿಟನ್‌ನ ಒನ್‌ವೆಬ್‌ ಗ್ರೂಪ್‌ ಕಂಪನಿಗಳ ಜೊತೆ 72 ಉಪಗ್ರಹಗಳ ಉಡಾವಣೆಗೆ ಮಾಡಿಕೊಂಡಿರುವ ಒಪ್ಪಂದದ 2ನೇ ಭಾಗವಾಗಿದೆ. ಇದಕ್ಕೂ ಮೊದಲು 2022ರ ಅ.23ರಂದು ಒನ್‌ವೆಬ್‌ನ 36 ಉಪಗ್ರಹಗಳನ್ನು ಯಶಸ್ವಿಯಾಗಿ ಕೆಳಕಕ್ಷೆಗೆ ಇಸ್ರೋ ತಲುಪಿಸಿತ್ತು. OneWeb ಎಂಬುದು ಬಾಹ್ಯಾಕಾಶದಿಂದ ಚಾಲಿತವಾಗಿರುವ ಜಾಗತಿಕ ಸಂವಹನ ಜಾಲವಾಗಿದ್ದು, ಸರ್ಕಾರಗಳು ಮತ್ತು ವ್ಯವಹಾರಗಳಿಗೆ ಸಂಪರ್ಕವನ್ನು ಸಕ್ರಿಯಗೊಳಿಸುತ್ತದೆ.

ಒನ್‌ವೆಬ್‌ ಬಾಹ್ಯಾಕಾಶ ಚಾಲಿತ ಜಾಗತಿಕ ಸಂವಹನ ನೆಟ್ವರ್ಕ್ ಆಗಿದ್ದು, ಸರ್ಕಾರ ಮತ್ತು ವ್ಯವಹಾರಗಳಿಗೆ ಸಂಪರ್ಕವನ್ನು ಸಕ್ರಿಯಗೊಳಿಸುತ್ತದೆ. ಈವರೆಗೆ ಒಟ್ಟು 17 ಉಡಾವಣೆಗಳಾಗಿದ್ದು, ಭಾನುವಾರ ನಡೆಯುತ್ತಿರುವುದು 18ನೇ ಉಡಾವಣೆಯಾಗಿದೆ. ಇದರ ಮೂಲಕ ಮತ್ತೆ 36 ಉಪಗ್ರಹಗಳನ್ನು ಕಕ್ಷೆಗೆ ತಲುಪಿಸಲಾಗುತ್ತದೆ. ಇದರಿಂದಾಗಿ ಒಟ್ಟು 616 ಉಪಗ್ರಹಗಳನ್ನು ಕಕ್ಷೆಗೆ ತಲುಪಿಸಿದಂತಾಗಿ, ವರ್ಷದ ಕೊನೆಯಲ್ಲಿ ಜಾಗತಿಕ ಸೇವೆಯನ್ನು ಆರಂಭಿಸಬಹುದಾಗಿದೆ ಎಂದು ಒನ್‌ವೆಬ್‌ ಕಂಪನಿ ಹೇಳಿದೆ.

2023ರಲ್ಲಿ ಇದು ಇಸ್ರೋ ಕೈಗೊಂಡಿರುವ 2ನೇ ಉಡಾವಣೆ ಮಿಶನ್‌ ಆಗಿದ್ದು, ಫೆಬ್ರವರಿಯಲ್ಲಿ ಇಒಎಸ್‌ಒ-7 ಯೋಜನೆಯ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿತ್ತು.

ಒನ್ ವೆಬ್ ಸಂಸ್ಥೆಯ 36 ಉಪಗ್ರಹಗಳನ್ನು ಉಡಾವಣೆಗೊಳಿಸಲಿರುವ ಇಸ್ರೋ: ವಿಶೇಷತೆ ಹೀಗಿದೆ..

'ಲಡಾಕ್‌ ನಿಂದ ಕನ್ಯಾಕುಮಾರಿ ಮತ್ತು ಗುಜರಾತ್‌ ನಿಂದ ಅರುಣಾಚಲ ಪ್ರದೇಶದವರೆಗೆ, ಒನ್‌ ವೆಬ್ ಉದ್ಯಮಗಳಿಗೆ ಮಾತ್ರವಲ್ಲದೆ ದೇಶಾದ್ಯಂತ ತಲುಪಲು ಕಷ್ಟಕರವಾದ ಪ್ರದೇಶಗಳು ಸೇರಿದಂತೆ ಪಟ್ಟಣಗಳು, ಗ್ರಾಮಗಳು, ಪುರಸಭೆಗಳು ಮತ್ತು ಶಾಲೆಗಳಿಗೆ ಸುರಕ್ಷಿತ ಪರಿಹಾರಗಳನ್ನು ತರುತ್ತದೆ' ಎಂದು ಅಧಿಕೃತ ಹೇಳಿಕೆ ಬಿಡುಗಡೆ ಮಾಡಲಾಗಿದೆ.

 ಈ ಯೋಜನೆ  ಮಹತ್ವ ಮತ್ತು ಯಾಕೆ?
ಒನ್ ವೆಬ್ ಎನ್ನುವುದು ಒಂದು ಸಂಸ್ಥೆಯಾಗಿದ್ದು, ಇದು ಲೋ ಅರ್ತ್ ಆರ್ಬಿಟ್ (ಎಲ್ಇಓ) ಉಪಗ್ರಹಗಳ ಮೂಲಕ ಉಪಗ್ರಹ ಸಂವಹನ ವ್ಯವಸ್ಥೆಯನ್ನು ಒದಗಿಸುತ್ತದೆ. ಈ ಸಂಸ್ಥೆಯು ತನ್ನ 36 ಉಪಗ್ರಹಗಳ ಉಡಾವಣೆಯನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮಾಡಿದೆ. ಈ ಉಡಾವಣೆಯು ಒನ್ ವೆಬ್ ಸಂಸ್ಥೆಯ 18ನೇ ಉಡಾವಣೆಯಾಗಿದ್ದು, 2023 ರಲ್ಲಿ ಮೂರನೇ ಉಡಾವಣೆಯಾಗಲಿದೆ. ಈ ಉಡಾವಣೆಯ ಮೂಲಕ ಒನ್ ವೆಬ್‌ನ ಮೊದಲ ತಲೆಮಾರಿನ ಎಲ್ಇಓ ಪುಂಜ ಪೂರ್ಣಗೊಳ್ಳಲಿದ್ದು, ಇದರ ಪರಿಣಾಮವಾಗಿ 2023 ರಲ್ಲಿ ಜಾಗತಿಕ ಜಾಗತಿಕ ವ್ಯಾಪ್ತಿ ಆರಂಭಿಸಲು ಸಂಸ್ಥೆಗೆ ಸಾಧ್ಯವಾಗುತ್ತದೆ.

ಇಸ್ರೋ ಮತ್ತೊಂದು ಸಾಧನೆ: ನಿರುಪಯುಕ್ತ ಉಪಗ್ರಹವನ್ನು ಯಶಸ್ವಿಯಾಗಿ ಇಳಿಸಿದ ಬಾಹ್ಯಾಕಾಶ ಸಂಸ್ಥೆ

ಇದು ಮೊದಲ ಜಾಗತಿಕ ಲೋ ಅರ್ತ್ ಆರ್ಬಿಟ್ ಉಪಗ್ರಹ ಪುಂಜವನ್ನು ಪೂರ್ಣಗೊಳಿಸುವ ಕಾರಣದಿಂದ, ಈ ಉಡಾವಣೆ ಅತ್ಯಂತ ಮಹತ್ವ ಪಡೆದಿದೆ. ಈ ಕಾರ್ಯಾಚರಣೆ ಪೂರ್ಣಗೊಳಿಸುವ ಮೂಲಕ ಒನ್ ವೆಬ್ ಜಾಗತಿಕ ವ್ಯಾಪ್ತಿ ಹೊಂದಲು ಸಾಧ್ಯವಾಗುತ್ತದೆ. ಹಂಚಿಕೆದಾರರ ಜೊತೆ ಸಹಯೋಗ ಹೊಂದುವ ಮೂಲಕ ಒನ್ ವೆಬ್ ಸಂಸ್ಥೆ ಅತ್ಯಂತ ವೇಗವಾದ ಮತ್ತು ನಂಬಿಕಾರ್ಹವಾದ ಇಂಟರ್ನೆಟ್ ಸೌಲಭ್ಯವನ್ನು ಒದಗಿಸಲು ಉದ್ದೇಶಿಸಿದೆ. ಇದು ಸಾರ್ವಜನಿಕರಿಗೆ, ಉದ್ಯಮಗಳಿಗೆ ಹಾಗೂ ಸರ್ಕಾರಗಳಿಗೆ ಜಾಗತಿಕವಾಗಿ ಉತ್ತಮ ಅಂತರ್ಜಾಲ ಸೌಲಭ್ಯ ಒದಗಿಸಲಿದೆ.

 

Follow Us:
Download App:
  • android
  • ios