ಡಾಕಿಂಗ್ ತಂತ್ರಜ್ಞಾನದಲ್ಲಿ ಇಸ್ರೋ ಹೊಸ ಕಿಂಗ್‌: ಗಿರೀಶ್ ಲಿಂಗಣ್ಣ

ಇಸ್ರೋ ಹೊಸ ಮೈಲಿಗಲ್ಲು ಸಾಧಿಸಿದೆ. ಹಾದಿ ಸುಲಭವಾಗಿರಲ್ಲಿಲ್ಲ. ಇಸ್ರೋ ಬಹಳಷ್ಟು ಸವಾಲುಗಳನ್ನು ಎದುರಿಸಿಯೇ ಸಫಲವಾಗಿದೆ. ಸ್ಪೇಡೆಕ್ಸ್ ಡಾಕಿಂಗ್‌ನಲ್ಲಿ ಯಶಸ್ವಿಯಾಗುವ ಮೂಲಕ ಮತ್ತೊಂದು ಇತಿಹಾಸ ಬರೆದಿದೆ. ಅಂತರಿಕ್ಷದಲ್ಲಿ ಸಾಧನೆ ಮಾಡಿದ ನಾಲ್ಕನೇ ದೇಶ ಎನ್ನುವ ಹೆಗ್ಗಳಿಕೆ ನಮ್ಮದು.

ISRO is the new king in Docking Technology in Space Says Author Space and Defense Analyst Girish Linganna

ಗಿರೀಶ್ ಲಿಂಗಣ್ಣ 
ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಬೆಂಗಳೂರು(ಜ.17):  ಕಕ್ಷೆಯಲ್ಲಿರುವ ಉಪಗ್ರಹಗಳ ಡಾಕಿಂಗ್‌ ನಡೆಸುವ (ಒಂದಕ್ಕೊಂದು ಜೋಡಿಸುವ) ಸಾಮರ್ಥ್ಯ ಗಳಿಸಿರುವ ಜಗತ್ತಿನ ಕೆಲವೇ ಕೆಲವು ರಾಷ್ಟ್ರಗಳ ಸಾಲಿಗೆ ಇದೀಗ ಭಾರತವೂ ಸೇರ್ಪಡೆಯಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ 'ಸ್ಪೇಸ್ ಡಾಕಿಂಗ್ ಎಕ್ಸ್‌ ಪರಿಮೆಂಟ್' (ಸೇಡೆಕ್) ಯೋಜನೆಯ ಮೂಲಕ ಜನವರಿ 16ರಂದು ಈ ಸಾಧನೆ ಮಾಡಿದೆ. ಆದರೆ, ಬಾಹ್ಯಾಕಾಶ ಡಾಕಿಂಗ್ ಎಂದರೇನು? ಇದಕ್ಕೆ ಯಾಕೆ ಇಷ್ಟೊಂದು ಮಹತ್ವ ನೀಡಲಾಗಿದೆ ಎಂಬುದರ ಕುರಿತಾದ ಮಾಹಿತಿ ಇಲ್ಲಿದೆ. 

ಡಾಕಿಂಗ್: ಬಾಹ್ಯಾಕಾಶದ ಸೂಕ್ಷ್ಮ ನೃತ್ಯ 

ವೇಗವಾಗಿ ಸಾಗುವ ಎರಡು ಕಾರುಗಳನ್ನು ಹೆದ್ದಾರಿಯಲ್ಲಿ ಒಂದಕ್ಕೊಂದು ಸಂಪರ್ಕಿಸುವುದನ್ನು ಊಹಿಸಿಕೊಳ್ಳಿ.ಬಾಹ್ಯಾಕಾಶದಲ್ಲಿ ಉಪಗ್ರಹಗಳನ್ನು ಜೋಡಿಸುವ ಡಾಕಿಂಗ್ ಪ್ರಕ್ರಿಯೆಯೂ ಇದೇ ರೀತಿಯದ್ದು. ಆದರೆ, ಬಾಹ್ಯಾಕಾಶ ಡಾಕಿಂಗ್‌ನಲ್ಲಿ ಅತ್ಯಂತ ಹೆಚ್ಚಿನ ನಿಖರತೆಯ ಅವಶ್ಯಕತೆ ಇರುತ್ತದೆ ಮತ್ತು ಇದು ಅತ್ಯಂತ ಮೌಲ್ಯಯುತ ಯೋಜನೆಯಾಗಿದೆ. ಈ ಯೋಜನೆಯಲ್ಲಿ, ಪ್ರತಿ ಗಂಟೆಗೆ ಸಾವಿರಾರು ಕಿಲೋಮೀಟರ್‌ ವೇಗದಲ್ಲಿ ಸಾಗುವ ಎರಡು ಬಾಹ್ಯಾಕಾಶ ನೌಕೆಗಳನ್ನು ಒಂದಕ್ಕೊಂದು ಸನಿಹಕ್ಕೆ ತಂದು, ಬಳಿಕ ಅವುಗಳನ್ನು ಸುರಕ್ಷಿತವಾಗಿ ಸಂಪರ್ಕಿಸುವ ಪ್ರಕ್ರಿಯೆ ನಡೆಸಲಾಗುತ್ತದೆ. ಇದನ್ನು ಯಶಸ್ವಿಯಾಗಿ ಕೈಗೊಳ್ಳಲು ಅಸಾಧಾರಣ ನಿಖರತೆ ಮತ್ತು ನಿಯಂತ್ರಣದ ಅವಶ್ಯಕತೆ ಇರುತ್ತದೆ.

ಹೆಚ್ಚಿದ ಭಾರತದ ಬಾಹ್ಯಾಕಾಶ ಸಾಮರ್ಥ್ಯ: ಉಪಗ್ರಹಗಳ ಡಾಕಿಂಗ್‌ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಇಸ್ರೋ ಸ್ಪೇಡೆಕ್ಸ್! 

ಡಾಕಿಂಗ್ ಇತಿಹಾಸದತ್ತ ಒಂದು ನೋಟ 

* ಭಾರತ ಇತ್ತೀಚೆಗೆ ಡಾಕಿಂಗ್ ಪ್ರಕ್ರಿಯೆ ನಡೆಸುವ ಸಾಮರ್ಥ ಪಡೆದುಕೊಂಡಿದೆಯಾದರೂ, ಬಾಹ್ಯಾಕಾಶ ಡಾಕಿಂಗ್ ಪ್ರಕ್ರಿಯೆ ಹಲವಾರು ದಶಕಗಳ ಹಿಂದಿನಿಂದಲೇ ಆರಂಭಗೊಂಡಿದ್ದು, ದೀರ್ಘ ಇತಿಹಾಸವನ್ನು ಹೊಂದಿದೆ.
* 1966: ಜೆಮಿನಿ 8 (ಅಮೆರಿಕ): ಚಂದ್ರನ ಮೇಲೆ ಕಾಲಿಟ್ಟ ಮೊದಲ ಮಾನವ ಎಂಬ ಕೀರ್ತಿ ಸಂಪಾದಿಸಿರುವ ನೀಲ್ ಆರ್ಮ್‌ ಸ್ಟ್ರಾಂಗ್, ಅದಕ್ಕೂ ಮುನ್ನ ಜೆಮಿನಿ 8 ಬಾಹ್ಯಾಕಾಶ ನೌಕೆಯನ್ನು ಅಜಿನಾ ಎಂಬ ಬಾಹ್ಯಾಕಾಶ ನೌಕೆಗೆ ಜೋಡಿಸಿ, ಜಗತ್ತಿನ ಮೊತ್ತ ಮೊದಲ ಯಶಸ್ವಿ ಬಾಹ್ಯಾಕಾಶ ಡಾಕಿಂಗ್ ನಡೆಸಿದರು. 
* 1967: ಕಾಸ್ಮೊಸ್‌ 186/188 (): ಸೋವಿಯತ್ ಒಕ್ಕೂಟ ತನ್ನ ಕಾಸ್ಪೋಸ್ ಉಪಗ್ರಹಗಳ ಮೂಲಕ ಸ್ವಯಂಚಾಲಿತ ಡಾಕಿಂಗ್ ಸಾಮರ್ಥವನ್ನು ಪ್ರದರ್ಶಿಸಿತು.
* 1975: ಅಪೋಲೋ - ಸೊಯುಜ್ ಪರೀಕಾ ಯೋಜನೆ (ಅಮೆರಿಕ/ಯುಎಸ್ಎಸ್‌ಆರ್): ಈ ಐತಿಹಾಸಿಕ ಯೋಜನೆಯಲ್ಲಿ, ಅಮೆರಿಕದ ಅಪೊಲೊ ಬಾಹ್ಯಾಕಾಶ ನೌಕೆ ಮತ್ತು ಸೋವಿಯತ್ ಒಕ್ಕೂಟದ ಸೊಯುಜ್ ಬಾಹ್ಯಾಕಾಶ ನೌಕೆಗಳ ಡಾಕಿಂಗ್ ನಡೆಸಲಾಯಿತು. ಈ ಪ್ರಯೋಗ, ಶೀತಲ ಸಮರದ ನಡುವೆಯೂ ಅಮೆರಿಕಾ - ಸೋವಿಯತ್ ಒಕ್ಕೂಟಗಳ ಬಾಹ್ಯಾಕಾಶ ಸಹಕಾರಕ್ಕೆ ಸಾಕ್ಷಿಯಾಗಿತ್ತು. 
* 2012: ತಿಯಾಂಗಾಂಗ್-1 / ಶೆಂಜಾ-9 (ಚೀನಾ): ಚೀನಾ ತನ್ನ ಶೆಂಜೊ-9 ಬಾಹ್ಯಾಕಾಶ ನೌಕೆಯನ್ನು ತಿಯಾಂಗಾಂಗ್ -1 ಸ್ಪೇಸ್ ಲ್ಯಾಬ್ ಮಾಡ್ಯುಲ್ ಜೊತೆ ಸಂಪರ್ಕಿಸಿ, ತನ್ನ ಬಾಹ್ಯಾಕಾಶ ನಿಲ್ದಾಣ ನಿರ್ಮಾಣ ಯೋಜನೆಯಲ್ಲಿ ಪ್ರಮುಖ ಹೆಜ್ಜೆಯನ್ನು ಇಟ್ಟಿತು. 
* ಡಾಕಿಂಗ್ ಯಾಕೆ ಮಹತ್ವದ್ದಾಗಿದೆ? ಬಾಹ್ಯಾಕಾಶ ಡಾಕಿಂಗ್ ತಂತ್ರಜ್ಞಾನದಲ್ಲಿ ಪ್ರಾವೀಣ್ಯತೆ ಸಾಧಿಸುವು ದರಿಂದ, ಹೆಚ್ಚು ಸಂಕೀರ್ಣವಾದ ಮತ್ತು ಮಹತ್ವಾಕಾಂಕ್ಷಿ ಯೋಜನೆಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ. 
* ಬಾಹ್ಯಾಕಾಶ ನಿಲ್ದಾಣಗಳ ನಿರ್ಮಾಣ: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್) ಕುರಿತು ಯೋಚಿಸಿ. ಅದರ ನಿರ್ಮಾಣಕ್ಕಾಗಿ ವಿವಿಧ ಭಾಗಗಳನ್ನು ಬಾಹ್ಯಾಕಾಶಕ್ಕೆ ಉಡಾವಣೆಗೊಳಿಸಿ, ಬಳಿಕ ಬಾಹ್ಯಾಕಾಶದಲ್ಲೇ ಅವುಗಳನ್ನು ಜೋಡಿಸಲಾಯಿತು. ಭಾರತವೂ 'ಭಾರತೀಯ ಅಂತರಿಕ ಸ್ಟೇಷನ್' ಎಂಬ ಸ್ವಂತ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದು, ಅದಕ್ಕಾಗಿ ಡಾಕಿಂಗ್ ತಂತ್ರಜ್ಞಾನ ಅತ್ಯಂತ ಅಗತ್ಯವಾಗಿದೆ. 
* ಚಂದ್ರ ಅನ್ವೇಷಣೆ ಮತ್ತು ಡೀಪ್ ಸ್ಪೇಸ್ ಯೋಜನೆಗಳು: ಚಂದ್ರನ ಮೇಲೆ ಸಾಗುವ ಯೋಜನೆಗಳಿಗೆ ಮತ್ತು ಚಂದ್ರನಾಚೆಗೆ ಪ್ರಯಾಣ ಬೆಳೆಸುವ ಯೋಜನೆಗಳಿಗೆ ಡಾಕಿಂಗ್ ವ್ಯವಸೆ ಮುಖ್ಯವಾಗಿದ್ದು, ಬಾಹ್ಯಾಕಾಶದಲ್ಲಿ ಬಾಹ್ಯಾಕಾಶ ನೌಕೆಗಳ ಜೋಡಣೆ, ಸಿಬ್ಬಂದಿ ಮತ್ತು ವಸ್ತುಗಳ ವರ್ಗಾವಣೆ ನಡೆಸಲು ಮತ್ತು ಇಂಧನ ಮರು ಪೂರಣ ಘಟಕಗಳ ನಿರ್ಮಾಣಕ್ಕೆ ಡಾಕಿಂಗ್ ತಂತ್ರಜ್ಞಾನ ಅನುವು ಮಾಡಿಕೊಡುತ್ತದೆ. ಭಾರತದ ಸ್ಪೇಡೆಕ್ಸ್‌ ಯೋಜನೆ: ಒಂದು ನೋಟ ಸ್ಪೀಡೆಕ್ಸ್‌ ಯೋಜನೆ ಎರಡು ಉಪಗ್ರಹಗಳನ್ನು ಒಳಗೊಂಡಿತ್ತು. 
* ಚೇಸರ್ (ಎಸ್‌ಡಿಎಕ್01): ಇದೊಂದು ಸಕ್ರಿಯ ಉಪಗ್ರಹವಾಗಿದ್ದು, ಅವಶ್ಯಕವಾದ ಚಲನೆ ನಡೆಸಿ, ಟಾರ್ಗೆಟ್ ಉಪಗ್ರಹದ ಜೊತೆ ಡಾಕಿಂಗ್ ನಡೆಸುವ ಜವಾಬ್ದಾರಿ ಹೊಂದಿತ್ತು. 
* ಟಾರ್ಗೆಟ್ (ಎಸ್‌ಡಿಎಕ್ಸ್ 02): ಇದೊಂದು ಸಕ್ರಿಯವಲ್ಲದ ಉಪಗ್ರಹವಾಗಿದ್ದು, ಚೇಸರ್‌ ಉಪಗ್ರಹ ತನ್ನನ್ನು ಸಂಪರ್ಕಿಸಲು ಬೇಕಾದ ಡಾಕಿಂಗ್ ಯಾಂತ್ರಿಕ ವ್ಯವಸ್ಥೆಯನ್ನು ಒಳಗೊಂಡಿತ್ತು. ಇವೆರಡು ಉಪಗ್ರಹಗಳನ್ನು ಡಿಸೆಂಬರ್ 30, 2024ರಂದು ಉಡಾವಣೆಗೊಳಿಸಲಾಯಿತು. ಬಳಿಕ ಹಲವು ಸರಣಿ ಚಲನೆಗಳನ್ನು ಪ್ರದರ್ಶಿಸಿದ ಜೇಸರ್ ಉಪಗ್ರಹ, ಟಾರ್ಗೆಟ್ ಉಪಗ್ರಹದೊಡನೆ ಜನವರಿ 16ರಂದು ಯಶಸ್ವಿಯಾಗಿ ಡಾಕಿಂಗ್ ನಡೆಸಿತು. 
*  ಡಾಕಿಂಗ್ ಪ್ರಕ್ರಿಯೆ: ಹಂತ ಹಂತಗಳ ಯೋಜನೆ ಸನಿಹಕ್ಕೆ ಸಾಗುವಿಕೆ: ಚೇಸರ್‌ ಉಪಗ್ರಹ ಹಂತ ಹಂತವಾಗಿ ಟಾರ್ಗೆಟ್ ಉಪಗ್ರಹದ ಬಳಿ ಸಾಗಿತು. ಅವೆರಡರ ನಡುವಿನ ಅಂತರವನ್ನು ವಿವಿಧ ಹಂತಗಳಲ್ಲಿ ಕಡಿಮೆಗೊಳಿಸಿತು.
* ಸರಿಹೊಂದಿಸುವಿಕೆ: ಅತ್ಯಾಧುನಿಕ ಸೆನ್ಸರ್‌ಗಳನ್ನು ಬಳಸಿಕೊಂಡು, ಚೇಸರ್‌ ಉಪಗ್ರಹ ತನ್ನನ್ನು ತಾನು ಟಾರ್ಗೆಟ್ ಉಪಗ್ರಹದ ಡಾಕಿಂಗ್ ಪೋರ್ಟ್‌ಗೆ ಸೂಕ್ತವಾಗಿ ಹೊಂದಿಸಿಕೊಂಡಿತು. 
* ಸೆರೆಹಿಡಿಯುವಿಕೆ: ಉಭಯ ಉಪಗ್ರಹಗಳಲ್ಲಿರುವ ಡಾಕಿಂಗ್ ಯಾಂತ್ರಿಕ ವ್ಯವಸ್ಥೆಗಳು ಒಂದಕ್ಕೊಂದು ಹೊಂದಿಕೊಳ್ಳುವಂತೆ ವಿನ್ಯಾಸಗೊಂಡಿದ್ದು, ಅವುಗಳು ಒಂದನ್ನೊಂದು ಸಂಪರ್ಕಿಸಿ, ಜೋಡಣಾ ಪ್ರಕ್ರಿಯೆಯನ್ನು ಆರಂಭಿಸಿದವು. 
*  ಬಲಪಡಿಸುವಿಕೆ: ಒಂದು ಬಾರಿ ಉಪಗ್ರಹಗಳು ಸಂಪರ್ಕಿತವಾದ ಬಳಿಕ, ಡಾಕಿಂಗ್ ಯಾಂತ್ರಿಕ ವ್ಯವಸ್ಥೆಗಳು ಹಿಂದೆ ಸರಿದು, ಉಪಗ್ರಹಗಳನ್ನು ಇನ್ನಷ್ಟು ಸನಿಹಕ್ಕೆ ಸೆಳೆದು, ಅವೆರಡರ ನಡುವೆ ಸ್ಥಿರ, ಸುರಕ್ಷಿತವಾದ ಸಂಪರ್ಕವನ್ನು ಕಲಿಸಿದವು. 
*  ಸೇಡೆಕ್ ಯೋಜನೆಯ ಕಣ್ಣುಗಳು ಮತ್ತು ಕಿವಿಗಳು: ಆಧುನಿಕ ಸೆನ್ಸರ್‌ಗಳು ಡಾಕಿಂಗ್ ಪ್ರಕ್ರಿಯೆ ಯಶಸ್ವಿಯಾಗಿ ನೆರವೇರಲು ಹಲವು ಸೆನರ್‌ಗಳು ಪ್ರಮುಖ ಪಾತ್ರ ನಿರ್ವಹಿಸಿದವು. 
* ಲೇಸರ್‌ರೇಂಜ್ ಫ್ರೆಂಡರ್: ಈ ಸೆನ್ಸರ್ ಎರಡು ಉಪಗ್ರಹಗಳ ನಡುವಿನ ನಿಖರವಾದ ಅಂತರವನ್ನು ಲೆಕ್ಕಾಚಾರ ಮಾಡುತ್ತಿತ್ತು. 
*  ರಾಂಡೇವೂ ಸೆನ್ಸರ್: ಇದು ಟಾರ್ಗೆಟ್ ಉಪಗ್ರಹದ ಸ್ಥಾನ ಮತ್ತು ವೇಗವನ್ನು ಹಿಂಬಾಲಿಸಲು ನೆರವಾಗಿತ್ತು. 
* ಪ್ರಾಕ್ಸಿಮಿಟಿ ಮತ್ತು ಡಾಕಿಂಗ್ ಸೆನ್ಸರ್: ಈ ಸೆನ್ಸರ್‌ಅಂತಿಮ ಹಂತದ ಬಳಿ ಸಾಗುವಿಕೆ ಮತ್ತು ಡಾಕಿಂಗ್ ಪ್ರಕ್ರಿಯೆಯ ಸಂದರ್ಭದಲ್ಲಿ ಮಹತ್ವದ ಮಾಹಿತಿಗಳನ್ನು ಒದಗಿಸಿತ್ತು.

ಭಾರತದ ಆವಿಷ್ಕಾರ: ಸರಳ ಡಾಕಿಂಗ್ ವ್ಯವಸ್ಥೆ 

ಇತರ ಬಾಹ್ಯಾಕಾಶ ಸಂಸ್ಥೆಗಳು ಹಲವಾರು ಮೋಟರ್‌ಗಳನ್ನು ಒಳಗೊಂಡಸಂಕೀರ್ಣವಾದಡಾಕಿಂಗ್ ಪ್ರಕ್ರಿಯೆಯನ್ನು ಬಳಸುತ್ತವೆ. ಆದರೆ, ಇಸ್ರೋ ಒಂದು ಸರಳವಾದ ವಿಧಾನವನ್ನು ಅನುಸರಿಸಿತ್ತು. ಇಸ್ರೋದ ಆಂಡೋಜಿನಸ್ (ಉಭಯಲಿಂಗಿ) ಡಾಕಿಂಗ್ ವ್ಯವಸೆ ನಿರ್ದೇಶನ ಮತ್ತು ಸರಿಹೊಂದಿಸುವಿಕೆಗೆ ಕೇವಲ ಎರಡು ಮೋಟರ್ ಗಳನ್ನು ಮಾತ್ರವೇ ಬಳಸುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಇಂಟರ್‌ನ್ಯಾ ಷನಲ್ ಡಾಕಿಂಗ್ ಸಿಸ್ಟಮ್ ಸ್ಟಾಂಡರ್ಡ್ (ಐಡಿಎಸ್‌ಎಸ್) 24 ಮೋಟರ್‌ಗಳನ್ನು ಬಳಸುತ್ತದೆ. ಇಂತಹ ನವೀನ ವಿನ್ಯಾಸ ಅತ್ಯಂತ ಸಂಕೀರ್ಣವಾದ ಬಾಹ್ಯಾಕಾಶ ಯೋಜನೆಗಳಿಗೆ ಸರಳವಾದ, ಕಡಿಮೆ ವೆಚ್ಚದಾಯಕವಾದ, ಆದರೆ ಅಷ್ಟೇ ಪರಿಣಾಮಕಾರಿಯಾದ ವ್ಯವಸ್ಥೆಗಳನ್ನು ನಿರ್ಮಿಸುವ ಭಾರತದ ಸಾಮರ್ಥವನ್ನು ಪ್ರದರ್ಶಿಸಿದೆ. 

ಯಶಸ್ಸಿನ ಮಾರ್ಗ ಎಂದಿಗೂ ಸುಗಮವಲ್ಲ 

ಯಶಸ್ವಿ ಡಾಕಿಂಗ್ ನಡೆಸುವ ಇಸ್ರೋದ ಪ್ರಯಾಣ ಬಹಳಷ್ಟು ಸವಾಲುಗಳನ್ನು ಎದುರಿಸಿಯೇ ಸಫಲವಾಗಿದೆ. ಇಸ್ರೋ ಮೂಲತಃ ಜನವರಿ 7ರಂದು ಡಾಕಿಂಗ್ ನಡೆಸುವ ಉದ್ದೇಶ ಹೊಂದಿತ್ತು. ಆದರೆ ಅದನ್ನು ಜನವರಿ 9ಕ್ಕೆ ಮುಂದೂಡಲಾಯಿತು. ಎರಡು ಬಾರಿಯೂ ತಾಂತ್ರಿಕ ಸಮಸ್ಯೆಗಳು ಯೋಜನೆಯನ್ನು ವಿಳಂಬಗೊಳಿಸಿದವು. ಈ ವಿಳಂಬಗಳು ಇಂತಹ ಯೋಜನೆಗಳ ಸಂಕೀರ್ಣತೆಗೆ ಬೆಳಕು ಚೆಲ್ಲಿದ್ದು, ಇದಕ್ಕಾಗಿ ಎಷ್ಟು ನಿಖರವಾಗಿ ಯೋಜಿಸಬೇಕಾಗುತ್ತದೆ ಎನ್ನುವುದನ್ನುಸೂಚಿಸಿತು. 

Spadex docking postphoned : ಜನವರಿ 9ಕ್ಕೆ ಮುಂದೂಡಲ್ಪಟ್ಟ ಬಾಹ್ಯಾಕಾಶ ಡಾಕಿಂಗ್ ಮೈಲಿಗಲ್ಲು - ಹೊಸ ಬೆಳವಣಿಗೆಗಳು

ಇಸ್ರೋ ಮುಂದಿನ ಹಾದಿ 

ಸ್ಪೇಡೆಕ್ಸ್ ಯೋಜನೆ ಕೇವಲ ಡಾಕಿಂಗ್ ಪ್ರಕ್ರಿಯೆಗೆ ಮಾತ್ರವೇ ಸೀಮಿತವಲ್ಲ. ಇಸ್ರೋ ಇದರಲ್ಲಿ ಇನ್ನಷ್ಟು ವಿವಿಧ ಪ್ರಯೋಗಗಳನ್ನು ನಡೆಸಲು ಉದ್ದೇಶಿಸಿದೆ. ಅವೆಂದರೆ: 
* ವಿದ್ಯುತ್‌ ಶಕ್ತಿ ಹಂಚಿಕೆ: ಡಾಕಿಂಗ್ ನಡೆಸಿರುವ ಎರಡು ಉಪಗ್ರಹಗಳ ನಡುವೆ ವಿದ್ಯುತ್ ಶಕ್ತಿ ಹಂಚಿಕೆ ನಡೆಸುವ ಸಾಮರ್ಥ, ಪ್ರದರ್ಶನ. 
* ನಿಯಂತ್ರಿತ ಪ್ರತ್ಯೇಕಿಸುವಿಕೆ: ಡಾಕಿಂಗ್ ನಡೆಸಿರುವ ಎರಡು ಉಪಗ್ರಹಗಳನ್ನು ಸುರಕ್ಷಿತವಾಗಿ ಪ್ರತ್ಯೇಕಿಸುವುದು (ಆನ್ ಡಾಕಿಂಗ್). 
ಈ ಪ್ರಯೋಗಗಳು ಭವಿಷ್ಯದ ಯೋಜನೆಗಳಾದ ಭಾರತದ ಬಾಹ್ಯಾಕಾಶ ನಿಲ್ದಾಣ ನಿರ್ಮಾಣ ಮತ್ತು ಚಂದ್ರ ಅನ್ವೇಷಣಾ 'ಯೋಜನೆಗಳಿಗೆ ಮೌಲ್ಯ ಯುತಮಾಹಿತಿಗಳುಮತ್ತು ಅನುಭವಗಳನ್ನು ಒದಗಿಸಲಿವೆ. 

ಭಾರತಕ್ಕೆ ಹೆಮ್ಮೆಯ ಕ್ಷಣ 

ಇಸ್ರೋ ಯಶಸ್ವಿಯಾಗಿ ಬಾಹ್ಯಾಕಾಶ ಡಾಕಿಂಗ್ ನಡೆಸಿರುವುದು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಹೆಚ್ಚುತ್ತಿರುವ ಭಾರತದ ಸಾಮರ್ಥಕ್ಕೆ ಸಾಕ್ಷಿಯಾಗಿದೆ. ಇದು ಭಾರತದ ಪಾಲಿಗೆ ರಾಷ್ಟ್ರೀಯತಮ್ಮೆಯಾಗು ಬ್ರಹ್ಮಾಂಡದ ಅನ್ವೇಷಣೆಯಲ್ಲಿ ಭಾರತದ ಮುಂದುವರಿದ ಪ್ರಯತ್ನಗಳಿಗೆ ಭವಿಷ್ಯದ ತಲೆಮಾರುಗಳು ಕೊಡುಗೆ ನೀಡುವಂತೆ ಈ ಯಶಸ್ಸು ಪ್ರೇರಣೆ ನೀಡಲಿದೆ.
ಇಸ್ರೋ ಹೊಸ ಮೈಲಿಗಲ್ಲು ಸಾಧಿಸಿದೆ. ಹಾದಿ ಸುಲಭವಾಗಿರಲ್ಲಿಲ್ಲ. ಇಸ್ರೋ ಬಹಳಷ್ಟು ಸವಾಲುಗಳನ್ನು ಎದುರಿಸಿಯೇ ಸಫಲವಾಗಿದೆ. ಸ್ಪೇಡೆಕ್ಸ್ ಡಾಕಿಂಗ್‌ನಲ್ಲಿ ಯಶಸ್ವಿಯಾಗುವ ಮೂಲಕ ಮತ್ತೊಂದು ಇತಿಹಾಸ ಬರೆದಿದೆ. ಅಂತರಿಕ್ಷದಲ್ಲಿ ಸಾಧನೆ ಮಾಡಿದ ನಾಲ್ಕನೇ ದೇಶ ಎನ್ನುವ ಹೆಗ್ಗಳಿಕೆ ನಮ್ಮದು.

Latest Videos
Follow Us:
Download App:
  • android
  • ios