ಚಂದ್ರನ ಮೇಲಿನ ಕುಳಿಗಳ ಅಧ್ಯಯನ ಆರಂಭಿಸಿದ ರೋವರ್, ಇಸ್ರೋ ಸಾಧನೆಗೆ ಸಲಾಂ!
ಚಂದ್ರಯಾನ 3 ಯಶಸ್ವಿಯಾಗಿ ಲ್ಯಾಂಡಿಂಗ್ ಆದ ಬೆನ್ನಲ್ಲೇ ಅಧ್ಯಯನಗಳು ಆರಂಭಗೊಂಡಿದೆ. ನಿನ್ನೆ ಚಂದ್ರನ ಮೇಲಿನ ತಾಪಮಾನ ಬಹಿರಂಗಪಡಿಸಿದ ರೋವರ್ ಇದೀಗ ಚಂದ್ರನ ಮೇಲಿರುವ ಕುಳಿಗಳ ಅಧ್ಯಯನ ಆರಂಭಿಸಿದೆ. ಕುಳಿಗಳಲ್ಲಿ ರಂಧ್ರಕೊರೆದು ಸಂಶೋಧನೆ ಆರಂಭಿಸಿದ ರೋವರ್‌ಗೆ ಇದೀಗ ಜಗತ್ತೆ ಬೆರಗಾಗಿದೆ.
ಬೆಂಗಳೂರು(ಆ.28) ಚಂದ್ರಯಾನ 3 ಯಶಸ್ವಿಯಾಗಿ ಚಂದ್ರನ ಮೇಲೆ ಲ್ಯಾಂಡಿಂಗ್ ಆದ ಬಳಿಕ ಇಸ್ರೋ ವಿಜ್ಞಾನಿಗಳ ಸಂಶೋಧನೆ, ಅಧ್ಯಯನಕ್ಕೆ ವೇಗ ಸಿಕ್ಕಿದೆ. ಚಂದ್ರನ ಮೇಲಿನ ಹಲವು ವಿಡಿಯೋ, ಫೋಟೋಗಳನ್ನು ಹಂಚಿಕೊಂಡಿದ್ದ ರೋವರ್ ಇದೀಗ ಚಂದ್ರನ ಮೇಲಿನ ಕುಳಿಗಳ ಅಧ್ಯಯನ ಆರಂಭಿಸಿದೆ. ಉಲ್ಕಾಪಾತಗಳಿಂದ ಸಂಭವಿಸಿರುವ ಕುಳಿಗಳಲ್ಲಿ ರೋವರ್ ಅಧ್ಯಯನ ಆರಂಭಿಸಿದೆ. ಈ ಅಧ್ಯಯನದ ಮಾಹಿತಿಯನ್ನು ರೋವರ್ ಇಸ್ರೋ ಕೇಂದ್ರಕ್ಕೆ ರವಾನಿಸಿದೆ.
ಚಂದ್ರನ ಕುರಿತು ಲಭ್ಯವಿರುವ ಫೋಟೋಗಳಲ್ಲಿ ಹಲವು ಕುಳಿಗಳು ಕಾಣಸಿಗುತ್ತದೆ. ಈ ಕುಳಿಗಳು ಸಂಭವಿಸಿದ್ದು ಹೇಗೆ? ಉಲ್ಕಾ ಪಾತಗಳಿಂದ ಸಂಭವಿಸಿದೆಯೋ ಅಥವಾ ಇನ್ಯಾವುದೋ ಕಾರಣಕ್ಕೆ ಕುಳಿಗಳು ಸೃಷ್ಡಿಯಾಗಿದೆಯಾ? ಈ ಎಲ್ಲಾ ಕೂತೂಹಲಗಳಿಗೆ ರೋವರ್ ಸ್ಪಷ್ಟ ಉತ್ತರ ನೀಡಲಿದೆ. 100 ಮಿಲಿ ಮೀಟರ್ ಆಳವಾದ ಕುಳಿ ಮೇಲೆ ರೋವರ್ ಅಧ್ಯಯನ ಆರಂಭಿಸಿದೆ. ಕುಳಿತ ನಿರ್ದಿಷ್ಟ ಗಾತ್ರ, ಈ ಕುಳಿಗಳ ಮೇಲೆ ಯಾವುದಾದರು ಉಲ್ಕಾಪಾತದ ಖನಿಜಾಂಶ ಅಥವಾ ಇತರ ಅಂಶಗಳನ್ನು ರೋವರ್ ಪತ್ತೆ ಮಾಡುತ್ತಿದೆ.
ಚಂದ್ರನ ಹಿಂದೂ ರಾಷ್ಟ್ರ ಎಂದು ಘೋಷಿಸಿ, ಶಿವಶಕ್ತಿ ಪಾಯಿಂಟ್ ರಾಜಧಾನಿ ಮಾಡಿ, ಪ್ರಧಾನಿಗೆ ಮನವಿ!
ದಕ್ಷಿಣ ಧ್ರುವದಲ್ಲಿ ರೋವರ್ ಇಳಿಸಿ ಅಧ್ಯಯನ ಆರಂಭಿಸಿರುವ ಇಸ್ರೋ ಈಗಾಗಲೇ ಹಲವು ಮಹತ್ವದ ಮಾಹಿತಿಗಳನ್ನು ಕಲೆಹಾಕಿದೆ. ನಿನ್ನೆ ರೋವರ್ ಚಂದ್ರನ ಮೇಲಿರುವ ತಾಪಮಾನ ಮಾಹಿತಿನ್ನು ಇಸ್ರೋಗೆ ನೀಡಿತ್ತು. ಇದೇ ಮೊದಲ ಬಾರಿಗೆ ಜಗತ್ತಿಗೆ ಚಂದ್ರನ ಮೇಲಿರುವ ತಾಪಮಾನದ ನಿಖರ ಮಾಹಿತಿಯನ್ನು ಭಾರತ ನೀಡಿದೆ.
ಚಂದ್ರನ ಮಣ್ಣಿನ ಮೇಲೆ, ಮಣ್ಣಿನಿಂದ ಕೊಂಚ ಕೆಳಗೆ, ಮತ್ತೂ ಕೊಂಚ ಕೆಳಗೆ ಹೀಗೆ 10 ಸೆಂ.ಮೀ. ಆಳದವರೆಗಿನ ಉಷ್ಣತೆಯನ್ನು ಅಳೆದು ಅದರ ಮಾಹಿತಿಯನ್ನು ಇಸ್ರೋಗೆ ಕಳುಹಿಸಿವೆ. ಅದರ ಪ್ರಕಾರ ಚಂದ್ರನ ದಕ್ಷಿಣ ಧ್ರುವದಲ್ಲಿ ಮಣ್ಣಿನ ಆಳಕ್ಕೆ ಹೋದಷ್ಟೂಉಷ್ಣತೆ ಕಡಿಮೆಯಾಗುತ್ತಾ ಹೋಗುತ್ತದೆ. ಮಣ್ಣಿನ ಮೇಲ್ಮೈಗೂ, ಕೆಳಭಾಗಕ್ಕೂ ಉಷ್ಣತೆಯಲ್ಲಿ ಅಗಾಧ ವ್ಯತ್ಯಾಸವಿರುವುದು ಗೋಚರಿಸಿದೆ.ವಿಕ್ರಂ ಲ್ಯಾಂಡರ್‌ನಲ್ಲಿದ್ದ ‘ಚಾಸ್ಟ್’ ಉಪಕರಣವು ಚಂದ್ರನ ದಕ್ಷಿಣ ಧ್ರುವದ ಮಣ್ಣಿನ ಮೇಲೆ 70 ಡಿಗ್ರಿ ಸೆಲ್ಸಿಯಸ್ ಉಷ್ಣತೆಯಿದ್ದು, ಮಣ್ಣಿನ ಕೆಳಗೆ 10 ಸೆಂ.ಮೀ. ಆಳದಲ್ಲಿ -10 ಡಿಗ್ರಿ ಸೆ. ಉಷ್ಣತೆಯಿದೆ ಎಂಬ ಸಂದೇಶವನ್ನು ಕಳುಹಿಸಿದೆ.
ಇದೇ ಮೊದಲ ಬಾರಿಗೆ ಚಂದ್ರನ ಮೇಲಿನ ತಾಪಮಾನ ಬಹಿರಂಗ, ಪ್ರಗ್ಯಾನ್ ರೋವರ್ ಮಹತ್ವ ಮಾಹಿತಿ ರವಾನೆ!
ಆಗಸ್ಟ್ 23 ರಂದು ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಇಳಿದ ಬಳಿಕ ಚಂದ್ರನ ಮೇಲಿನ ಹಲವು ಫೋಟೋಗಳನ್ನು ರೋವರ್ ಕಳುಹಿಸಿದೆ. ಇನ್ನು ವಿಕ್ರಮ್ ಲ್ಯಾಂಡರ್‌ನಿಂದ ಪ್ರಗ್ಯಾನ್ ರೋವರ್ ಕೆಳಕ್ಕಿಳಿಯುತ್ತಿರುವ ವಿಡಿಯೋವನ್ನು ಇಸ್ರೋ ಹಂಚಿಕೊಂಡಿತ್ತು. ರೋವರ್‌ನ ಸೌರಫಲಕ ಬಿಡಿಸಿಕೊಳ್ಳುವ ವಿಡಿಯೋ ಮತ್ತು ರಾರಯಂಪ್‌ನಿಂದ ನಿಧಾನವಾಗಿ ಜಾರಿ ಚಂದಿರನ ಅಂಗಳಕ್ಕೆ ಮೊದಲ ಬಾರಿ ಇಳಿಯುವ ‘ಐತಿಹಾಸಿಕ ಹೆಜ್ಜೆ’ಯ ವಿಡಿಯೋಗಳು ಬಿಡುಗಡೆಯಾಗಿವೆ. ರೋವರ್‌ನ ಚಕ್ರದ ಪಟ್ಟಿಗಳಲ್ಲಿ ಭಾರತದ ಹಾಗೂ ಇಸ್ರೋ ಲಾಂಛನಗಳ ಉಬ್ಬು ಚಿತ್ರಗಳಿದ್ದು, ಇವು ಚಂದಿರನ ಮೇಲ್ಮೈಯಲ್ಲಿ ಶಾಶ್ವತವಾಗಿ ಮೂಡಿವೆ ಎಂಬುದು ಗಮನಾರ್ಹ.