ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಇಳಿದ ಶಿವಶಕ್ತಿ ಪಾಯಿಂಟ್ ಚಂದ್ರನ ರಾಜಧಾನಿ, ಇನ್ನು ಚಂದ್ರನನ್ನು ಹಿಂದೂ ರಾಷ್ಟ್ರ ಎಂದು ಸಂಸತ್ತಿನಲ್ಲಿ ಘೋಷಿಸಲು ಸ್ವಾಮೀಜಿ ಆಗ್ರಹಿಸಿದ್ದಾರೆ. ಇದೀಗ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.

ನವದೆಹಲಿ(ಆ.28) ಚಂದ್ರಯಾನ 3 ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದು ಮೈಲಿಗಲ್ಲು ನಿರ್ಮಿಸಿದರೂ ವಿವಾದಕ್ಕೇನು ಕಡಿಮೆ ಇಲ್ಲ. ವಿಕ್ರಮ್ ಲ್ಯಾಂಡರ್ ಇಳಿದ ಜಾಗಕ್ಕೆ ಪ್ರಧಾನಿ ಮೋದಿ ಶಿವಶಕ್ತಿ ಪಾಯಿಂಟ್ ಎಂದು ನಾಮಕರಣ ಮಾಡಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ.ಈ ಹೆಸರು ಯಾಕೆ ಅನ್ನೋ ಟೀಕೆಗಳು ಕೇಳಿಬರುತ್ತಿದೆ. ಹೊಸ ಹೆಸರನ್ನು ಇಸ್ರೋ ಸ್ವಾಗತಿಸಿದೆ. ಆದರೆ ಕಾಂಗ್ರೆಸ್ ಸೇರಿದಂತೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ವಿವಾದಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಇದೀಗ ಚಂದ್ರನನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಲು ಸ್ವಾಮೀಜಿ ಚಕ್ರಪಾಣಿ ಮಹಾರಾಜ್ ಆಗ್ರಹಿಸಿದ್ದಾರೆ. ಇಷ್ಟೇ ಅಲ್ಲ ಶಿವಶಕ್ತಿ ಪಾಯಿಂಟ್ ಚಂದ್ರನ ರಾಜಧಾನಿ ಮಾಡಿ ಎಂದು ಒತ್ತಾಯಿಸಿದ್ದಾರೆ.

ಚಂದ್ರಯಾನ 3 ಯಶಸ್ವಿಯಾಗಿ ಚಂದ್ರನ ಮೇಲೆ ಲ್ಯಾಂಡ್ ಆಗಿ ಈಗಾಗಲೇ ಕಾರ್ಯಾರಂಭಿಸಿದೆ. ಹಲವು ಚಿತ್ರಗಳು, ವಿಡಿಯೋಗಳನ್ನು ಇಸ್ರೋ ಕೇಂದ್ರಕ್ಕೆ ರವಾನಿಸಿದೆ. ಇನ್ನು ಚಂದ್ರನ ಮೇಲಿನ ತಾಪಮಾನವನ್ನು ಜಗತ್ತಿಗೆ ಬಹಿರಂಗಪಡಿಸಿದೆ. ಈ ಬೆಳವಣಿಗೆ ನಡುವೆ ಶಿವಶಕ್ತಿ ಪಾಯಿಂಟ್ ಹೆಸರು ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ. ಈ ಬೆಳವಣಿಗೆ ನಡುವೆ ಇದೀಗ ಸ್ವಾಮಿ ಚಕ್ರಪಾಣಿ ಮಹಾರಾಜ್ ನೀಡಿದ ಸ್ಪೋಟಕ ಹೇಳಿಕೆಯನ್ನು ಹಲವು ಹಿಂದೂ ಸಂಘಟನೆಗಳು ಸ್ವಾಗತಿಸಿದರೆ, ಮತ್ತೆ ಕೆಲವರು ವಿರೋಧಿಸಿದ್ದಾರೆ.

ಇದೇ ಮೊದಲ ಬಾರಿಗೆ ಚಂದ್ರನ ಮೇಲಿನ ತಾಪಮಾನ ಬಹಿರಂಗ, ಪ್ರಗ್ಯಾನ್ ರೋವರ್ ಮಹತ್ವ ಮಾಹಿತಿ ರವಾನೆ!

ಚಂದ್ರಯಾನ 3 ಯಶಸ್ವಿಯಾಗಿದೆ. ಈ ಐತಿಹಾಸಿಕ ಮೈಲಿಗಲ್ಲಿಗೆ ಪ್ರಧಾನಿ ನರೇಂದ್ರ ಮೋದಿಗೆ ಅಭಿನಂದನೆಗಳು ಹಾಗೂ ಧನ್ಯವಾದ. ವಿಕ್ರಮ್ ಲ್ಯಾಂಡರ್ ಇಳಿದ ಜಾಗಕ್ಕೆ ಶಿವಶಕ್ತಿ ಪಾಯಿಂಟ್ ಎಂದು ಮೋದಿ ನಾಮಕರಣ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಆಗ್ರಹವನ್ನು ಮಾಡುತ್ತಿದ್ದೇನೆ. ಇನ್ಯಾವುದೇ ದೇಶ ಚಂದ್ರನ ಮೇಲೆ ಕಾಲಿಟ್ಟು ಘಜ್ವಾ ಇ ಹಿಂದ್ ಅಥವಾ ಇನ್ಯಾವುದೇ ವಿಚಾರ ಧಾರೆಗಳನ್ನು ಚಂದ್ರನ ಮೇಲೆ ಬೇರೂರುವಂತೆ ಮಾಡುವ ಮೊದಲೇ ನಾವು ಎಚ್ಚೆತ್ತುಕೊಳ್ಳಬೇಕು ಎಂದು ಚಕ್ರಪಾಣಿ ಮಹಾರಾಜ್ ಪ್ರಧಾನಿ ಮೋದಿಗೆ ಮನವಿ ಮಾಡಿದ್ದಾರೆ.

ಚಂದ್ರನನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಿ. ಶಿವಶಕ್ತಿ ಪಾಯಿಂಟ್‌ನ್ನು ಚಂದ್ರನ ರಾಜಧಾನಿಯನ್ನಾಗಿ ಮಾಡಿ. ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಎರಡು ಘೋಷಣೆ ಮಾಡಬೇಕು ಎಂದು ಸ್ವಾಮೀಜಿ ಆಗ್ರಹಿಸಿದ್ದಾರೆ. 

Scroll to load tweet…

ಚಂದ್ರಯಾನ-3 ಯೋಜನೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಗ್ರೀಸ್‌ ದೇಶದಿಂದ ನೇರವಾಗಿ ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಿ ಮೋದಿ ಇಸ್ರೋಗೆ ಬೇಟಿ ನೀಡಿದ್ದರು. ಈ ವೇಳೆ ಮಹತ್ವದ ಮೂರು ಘೋಷಣೆ ಮಾಡಿದ್ದರು. ಇದರಲ್ಲಿ ಭಾರತದ ದಕ್ಷಿಣ ಭಾಗದಿಂದ ಪ್ರಯಾಣ ಬೆಳೆಸಿದ ಚಂದ್ರಯಾನ-3 ನೌಕೆಯ ವಿಕ್ರಮ್‌ ಲ್ಯಾಂಡರ್‌ ಆಗಸ್ಟ್ 23ರ ಸಂಜೆ ಚಂದ್ರನ ದಕ್ಷಿಣ ಧ್ರುವವನ್ನು ಮುಟ್ಟಿದೆ. ಚಂದ್ರನ ದಕ್ಷಿಣ ಭಾಗದಲ್ಲಿ ಇಳಿದ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆಯನ್ನು ಭಾರತ ಗಳಿಸಿದೆ. ಈ ವಿಕ್ರಮ… ಲ್ಯಾಂಡರ್‌ ಇಳಿದ ಚಂದ್ರನ ಸ್ಥಳವನ್ನು ‘ಶಿವ ಶಕ್ತಿ’ ಎಂದು ಘೋಷಿಸಿದ್ದರು. 

ಚಂದ್ರಯಾನ ಯಶಸ್ಸಿಗೆ ಭಾರತ ಹೊಗಳಿ, ತಮ್ಮ ದೇಶವನ್ನೇ ಟೀಕಿಸಿದ ಪಾಕ್ ಮಾಧ್ಯಮ!

ಶಿವನಲ್ಲಿ ಮಾನವೀಯತೆ ಕಲ್ಯಾಣದ ಸಂಕಲ್ಪ ಬೆರೆತುಕೊಂಡಿದೆ. ‘ಶಿವಶಕಿ’್ತಯಲ್ಲಿ ಆ ಸಂಕಲ್ಪವನ್ನು ಪೂರ್ಣಗೊಳಿಸುವ ಸಾಮರ್ಥ್ಯ ಸಿಗಲಿದೆ. ವಿಜ್ಞಾನದ ಉಪಯೋಗವನ್ನು ಮಾನವತೆಯ ಕಲ್ಯಾಣಕ್ಕಾಗಿಯೇ ಮಾಡಬೇಕಿದೆ. ಮಾನವತೆಯ ಕಲ್ಯಾಣ ನಮ್ಮ ಸರ್ವೋಚ್ಚ ಬದ್ಧತೆ ಎಂದು ನರೇಂದ್ರ ಮೋದಿ ಹೇಳಿದರು.