ಇದೇ ಮೊದಲ ಬಾರಿಗೆ ಚಂದ್ರನ ಮೇಲಿನ ತಾಪಮಾನ ಬಹಿರಂಗ, ಪ್ರಗ್ಯಾನ್ ರೋವರ್ ಮಹತ್ವ ಮಾಹಿತಿ ರವಾನೆ!
ಇದೇ ಮೊದಲ ಬಾರಿಗೆ ಇಸ್ರೋ ವಿಜ್ಞಾನಿಗಳು ಚಂದ್ರನ ಮೇಲಿರುವ ತಾಪಮಾನದ ನಿಖರ ಮಾಹಿತಿಯನ್ನು ಜಗತ್ತಿಗೆ ನೀಡಿದೆ. ಭಾರತದ ಚಂದ್ರಯಾನ 3 ಮೂಲಕ ಕಳುಹಿಸಿರುವ ಪ್ರಗ್ಯಾನ್ ರೋವರ್ ಈಗಾಗಲೇ ಅಧ್ಯಯನ ಆರಂಭಿಸಿದ್ದು, ಹಲವು ಮಾಹಿತಿಗಳನ್ನು ಇಸ್ರೋಗೆ ರವಾನಿಸಿದೆ. ಇದೀಗ ಪ್ರಗ್ಯಾನ್ ರೋವರ್ ಚಂದ್ರನ ಮೇಲಿನ ತಾಪಮಾನ ಪರೀಕ್ಷಿಸಿದೆ.
ಬೆಂಗಳೂರು(ಆ.27) ಚಂದ್ರಯಾನ 3 ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದ ಬೆನ್ನಲ್ಲೇ ಕಾರ್ಯಾರಂಭಿಸಿದೆ. ಈಗಾಗಲೇ ಚಂದ್ರನ ಮೇಲೆ ಫೋಟೋಗಳನ್ನು, ವಿಡಿಯೋಗಳನ್ನು ಇಸ್ರೋಗೆ ರವಾನಿಸಿದೆ. ಇದರ ಜೊತೆಗೆ ಕೆಲ ಸೂಕ್ಷ್ಮತೆಗಳ ಮಾಹಿತಿಯನ್ನು ರವಾನಿಸಿದೆ. ಇದೀಗ ಇಸ್ರೋ ವಿಜ್ಞಾನಿಗಳ ಸಾಧನೆಗೆ ಮತ್ತೊಂದು ಗರಿ ಸೇರಿಕೊಂಡಿದೆ. ಇಡೀ ವಿಶ್ವಕ್ಕೆ ಚಂದ್ರನ ಮೇಲಿರುವ ತಾಪಮಾನದ ನಿಖರ ಮಾಹಿತಿಯನ್ನು ಇಸ್ರೋ ನೀಡಿದೆ. ಚಂದ್ರನ ಮೇಲೆ ಅಧ್ಯಯನ ನಡೆಸುತ್ತಿರುವ ಪ್ರಗ್ಯಾನ್ ರೋವರ್ ಇದೀಗ ತಾಪಮಾನ ಮಾಹಿತಿಯನ್ನು ಇಸ್ರೋಗೆ ಕಳುಹಿಸಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಚಂದ್ರನ ಮೇಲಿರುವ ತಾಪಮಾನದ ಮಾಹಿತಿ ಬಹಿರಂಗಗೊಂಡಿದೆ.
ಚಂದ್ರನ ಮೇಲಿರುವ ChaSTE ಪ್ಲೇಲೋಡ್ ವಿಕ್ರಮ್ ಲ್ಯಾಂಡರ್ ಸಹಾಯದಿಂದ ಇಸ್ರೋ ವಿಜ್ಞಾನಿಗಳು ಚಂದ್ರನ ಮೇಲಿನ ತಾಪಮಾನ ಎಷ್ಟಿದೆ? ಇದು ಯಾವ ರೀತಿ ಬದಲಾಗುತ್ತಿದೆ ಎಂಬುದರ ಮಾಹಿತಿಯನ್ನು ಬಹಿರಂಗಪಡಿಸಿದೆ. ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದ ನಾಲ್ಕೇ ದಿನಕ್ಕೆ ಇದೀಗ ಹಲವು ಮಾಹಿತಿಗಳು ಇಸ್ರೋ ವಿಜ್ಞಾನಿಗಳ ಕೈಸೇರಿದೆ.
ಚಂದ್ರಯಾನ ಯಶಸ್ಸಿಗೆ ಭಾರತ ಹೊಗಳಿ, ತಮ್ಮ ದೇಶವನ್ನೇ ಟೀಕಿಸಿದ ಪಾಕ್ ಮಾಧ್ಯಮ!
ಪ್ರಗ್ಯಾನ್ ರೋವರ್ ಚಂದ್ರನ ದಕ್ಷಿಣ ಧ್ರುವದಲ್ಲಿರುವ ಮಣ್ಣಿನ ಕುರಿತು ಅಧ್ಯಯನ ಆರಂಭಿಸಿದೆ. ಇತ್ತ ವಿಕ್ರಮ್ ಲ್ಯಾಂಡರ್‌ನಲ್ಲಿ ಅಳವಡಿಸಿರು ಸೆನ್ಸಾರ್‌ಗಳು ದಕ್ಷಿಣ ಧ್ರುವದಲ್ಲಿನ ತಾಪಮಾನದ ಮಾಹಿತಿಯನ್ನು ರವಾನಿಸಿದೆ. ಚಂದ್ರನ ಮೇಲಿನ ಉಷ್ಣತೆ ಪ್ರಮಾಣ ತಿಳಿಯುವ ಹಲವು ದೇಶಗಳ ವಿಜ್ಞಾನಿಗಳ ಕುತೂಹಲಕ್ಕೆ ಇಸ್ರೋ ಉತ್ತರ ನೀಡಿದೆ. ವಿಕ್ರಮ್ ಲ್ಯಾಂಡರ್ ಸಹಾಯದಿಂದ ಚಂದ್ರನ ಮೇಲ್ಮಣ್ಣಿನ ತಾಪಮಾನ ಅಳೆದು ಮಾಹಿತಿ ನೀಡಿದೆ. ಈ ಕುರಿತು ಇಸ್ರೋ ಗ್ರಾಫ್ ಬಿಡುಗಡೆ ಮಾಡಿದೆ.
ಇಸ್ರೋ ನೀಡಿರುವ ಗ್ರಾಫ್ ಚಂದ್ರನ ಮೇಲ್ಮೈ ತಾಪಮಾನ ವ್ಯತ್ಯಾಸಗಳನ್ನು ವಿವಿಧ ಸ್ತರಗಳಲ್ಲಿ ವಿವರಿದೆ. ಚಂದ್ರನ ದಕ್ಷಿಣ ಧ್ರುವಕ್ಕೆ ಇದು ಮೊದಲ ಪ್ರೊಫೈಲ್ ಆಗಿದೆ.
ಪ್ರತಿ ದಿನ ಇದೀಗ ಇಸ್ರೋ ಹಲವು ಮಾಹಿತಿಗಳನ್ನು ಕಲೆಹಾಕುತ್ತಿದೆ. ಈ ಪೈಕಿ ಹಲವರ ಕುತೂಹಲ ಹಾಗೂ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದೆ. ಈ ಐತಿಹಾಸಿಕ ಸಾಧನೆಯನ್ನು ನಿನ್ನೆ ಪ್ರಧಾನಿ ಮೋದಿ ವಿಜ್ಞಾನಿಗಳ ಭೇಟಿಯಾಗಿ ಕೊಂಡಾಡಿದ್ದರು. ಇದೇ ವೇಳೆ ಹಲವು ಘೋಷಣೆಗಳನ್ನು ಮಾಡಿದ್ದರು.
ಸೆ.2ರಂದು ಸೂರ‍್ಯಯಾನ ಸಾಕಾರ ಸಾಧ್ಯತೆ, ನೇಸರನ ಅಧ್ಯಯನಕ್ಕೆ ತೆರಳಲಿರುವ ಆದಿತ್ಯ ಎಲ್-1
ಆ.23 ರಾಷ್ಟ್ರೀಯ ಬಾಹ್ಯಾಕಾಶ ದಿನ: ಯುವ ಪೀಳಿಗೆಗೆ ನಿರಂತರ ಪ್ರೇರಣೆ ಸಿಗುವಂತೆ ಮತ್ತೊಂದು ನಿರ್ಧಾರ ಕೈಗೊಳ್ಳಲಾಗಿದೆ. ಆಗಸ್ಟ್ 23 ರಂದು ಭಾರತವು ಚಂದ್ರನ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿದೆ. ಭಾರತವು ಆ ದಿನವನ್ನು ‘ರಾಷ್ಟ್ರೀಯ ಬಾಹ್ಯಾಕಾಶ ದಿನ’ವನ್ನಾಗಿ ಆಚರಿಸುತ್ತದೆ. ಪ್ರತಿ ವರ್ಷವೂ ವಿಜ್ಞಾನ, ತಂತ್ರಜ್ಞಾನ ಹಾಗೂ ಆವಿಷ್ಕಾರದ ಉತ್ಸಾಹವನ್ನು ಆಚರಿಸಲಾಗುತ್ತದೆ. ತನ್ಮೂಲಕ ನಮಗೆ ನಾವು ಸದಾ ಸ್ಫೂರ್ತಿ ತುಂಬಿಕೊಳ್ಳುವ ಕೆಲಸ ಆಗಬೇಕು ಎಂದು ಪ್ರಧಾನಿ ಕರೆ ನೀಡಿದರು.
ಭಾರತದ ಯುವ ಪೀಳಿಗೆಯಲ್ಲಿ ವಿಜ್ಞಾನ, ಬಾಹ್ಯಾಕಾಶ ಮತ್ತು ನಾವೀನ್ಯತೆಗಳ ಬಗ್ಗೆ ತುಂಬಿರುವ ಶಕ್ತಿಗೆ ಹಿಂದಿನ ಯಶಸ್ಸುಗಳು ಕಾರಣ. ಮಂಗಳಯಾನ ಮತ್ತು ಚಂದ್ರಯಾನದ ಯಶಸ್ಸು ಮತ್ತು ಗಗನ್‌ಯಾನ್‌ನ ಸಿದ್ಧತೆಯು ದೇಶಕ್ಕೆ ಹೊಸ ದೃಷ್ಟಿಯನ್ನು ನೀಡಿದೆ ಎಂದರು.