ಕೊನೆಗೂ ಏಲಿಯನ್ ಪ್ಲಾನೆಟ್ ಪತ್ತೆ ಹಚ್ಚಿದ ಭಾರತೀಯ ಸೈಂಟಿಸ್ಟ್, ಈ ಗ್ರಹ ಎಲ್ಲಿದೆ?

ಏಲಿಯನ್‌ಗಳು ಇವೆಯಾ? ಅವುಗಳು ಯಾವ ಗ್ರಹದಲ್ಲಿ ವಾಸಿಸುತ್ತದೆ? ಈ ಕುತೂಹಲಗಳಿಗೆ ಅಧ್ಯಯನ ನಡೆಯುತ್ತಿದೆ. ಇದರ ನಡುವೆ ಭಾರತೀಯ ವಿಜ್ಞಾನಿಗಳ ಅಧ್ಯಯನ ಹೊಸ ಅಚ್ಚರಿಗೆ ಕಾರಣವಾಗಿದೆ. ಭೂಮಿಗಿಂತ 78 ದೊಡ್ಡದಾದ ಅನ್ಯಗ್ರಹ ಜೀವಿಗಳ ಪ್ಲಾನೆಟ್ ಒಂದನ್ನು ಭಾರತೀಯ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.

Indian PRL scientist discovers Alien planet outside solar system bigger than earth

ನವದಹೆಲಿ(ಫೆ.14) ಅನ್ಯಗ್ರಹ ಜೀವಿಗಳ ಕುರಿತು ಕುತೂಹಲ ಯಾವತ್ತೂ ಇದ್ದೇ ಇದೆ. ಹಲವು ಬಾರಿ ಅನ್ಯಗ್ರಹ ಜೀವಿಗಳು ಕುರುಹುಗಳು, ಕೆಲ ದಾಖಲೆಗಳು ಅಚ್ಚರಿ ಸೃಷ್ಟಿಸಿದೆ. ಇದರ ನಡುವೆ ಭಾರತೀಯ ವಿಜ್ಞಾನಿಗಳ ಅಧ್ಯಯನ ಹೊಸ ಅನ್ವೇಷಣೆಗೆ ಮತ್ತಷ್ಟು ಪುಷ್ಠಿ ನೀಡಿದೆ. ಅಹಮ್ಮದಾಬಾದ್‌ನ ಫಿಸಿಕಲ್ ರಿಸರ್ಚ್ ಲ್ಯಾಬೋರೇಟರಿ(PRL) ವಿಜ್ಞಾನಿಗಳು ಇದೀಗ ಸೌರಮಂಡಲದ ಹೊರಭಾಗದಲ್ಲಿ ಅನ್ಯಗ್ರಹ  ಪತ್ತೆ ಹಚ್ಚಿದೆ. ಈ ಏಲಿಯನ್ ಪ್ಲಾನೆಟ್ ಭೂಮಿಗಿಂತ 78 ದೊಡ್ಡ ಗಾತ್ರದಲ್ಲಿದೆ ಎಂದು ವಿಜ್ಞಾನಿಗಳು ದಾಖಲಿಸಿದ್ದಾರೆ. ಈ ಕುರಿತು ಇಸ್ರೋದ ಅಸ್ಟ್ರಾನಾಮಿಕಲ್ ಜರ್ನಲ್‌ನಲ್ಲಿ ಉಲ್ಲೇಖಿಸಲಾಗಿದೆ. ಶನಿಗ್ರಹಕ್ಕಿಂತ ಕೊಂಚ ಸಣ್ಣ ಗಾತ್ರದಲ್ಲಿ ಈ ಏಲಿಯನ್ ಪ್ಲಾನೆಟ್ ಇದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಏಲಿಯನ್ ಗ್ರಹ ಹಲವು ವಿಶೇಷತೆಗಳನ್ನು ಹೊಂದಿದೆ. ಕಾರಣ ಈ ಗ್ರಹ ಸೂರ್ಯನಿಗಿಂತ ಬಿಸಿಯಾಗಿರುವ ಹಾಗೂ ಅತ್ಯಂತ ಪ್ರಕಾಶಮಾನವಾಗಿರುವ ಎಫ್ ಮಾದರಿಯ ನಕ್ಷತ್ರವನ್ನು ಸುತ್ತುತ್ತಿದೆ. ಈ ನಕ್ಷತ್ರದ ವಿಶೇಷತೆ ಎಂದರೆ ಈ ನಕ್ಷತ್ರ ಸೂರ್ಯನಿಗಿಂತ ಹೆಚ್ಚು ಪ್ರಕಾಶಮಾನವಾಗಿದೆ. ಸೂರ್ಯನಿಗಿಂತ ಸುರಮಾರು 1.5 ರಿಂದ 5 ಪಟ್ಟು ಹೆಚ್ಚು ಪ್ರಕಾಶಮಾನಾಗಿರುವ ಈ ನಕ್ಷತ್ರವನ್ನು ಏಲಿಯನ್ ಪ್ಲಾನೆಟ್ ಸುತ್ತುತ್ತಿದೆ. ಈ ಗ್ರಹ ತನ್ನ ಕಕ್ಷಯಲ್ಲಿ ವೃತ್ತಕಾರಾವಾಗಿ ನಕ್ಷತ್ರವನ್ನು ಸುತ್ತಲು 5.83 ದಿನಗಳನ್ನು ತೆಗೆದುಕೊಳ್ಳುತ್ತದೆ.  ಈ ರೀತಿ ಬೆಳವಣಿಗೆ ಸೌರಮಂಡಲ್ಲಿಲ್ಲ. ಇದೀಗ ಈ ಗ್ರಹದ ಕುರಿತು ಮತ್ತಷ್ಟು ಅಧ್ಯಯನಕ್ಕೆ PRL ವಿಜ್ಞಾನಿಗಳು ಮುಂದಾಗಿದ್ದಾರೆ.

ಆಗಸದ ಕೌತುಕ ನೀವು ಗಮಿಸಿದ್ರಾ? ಅಪರೂಪದ ಬೆಳಕಿನ ಚಿತ್ತಾರದ ಐನ್‌ಸ್ಟೀನ್ ರಿಂಗ್ ಪತ್ತೆ

ಇದುವರೆಗೂ ಪತ್ತೆಯಾಗದ ಅಥವಾ ಅಧ್ಯಯನಕ್ಕೆ ಒಳಪಡ ಗ್ರಹ ಇದಾಗಿದೆ. ಹೀಗಾಗಿ ಈ ಗ್ರಹವನ್ನು ಏಲಿಯನ್ ಪ್ಲಾನೆಟ್ ಎಂದು ಕರೆಯಲಾಗುತ್ತಿದೆ. ಈ ಗ್ರಹದಲ್ಲಿ ಅನ್ಯಗ್ರಹ ಜೀವಿಗಳು ವಾಸಿಸುತ್ತಿವೆಯಾ ಅನ್ನೋದಕ್ಕೆ ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ. ಇಷ್ಟೇ ಅಲ್ಲ ಸದ್ಯ ಭಾರತೀಯ ವಿಜ್ಞಾನಿಗಳು ಪ್ರಾಥಮಿಕ ಅಧ್ಯಯನದಲ್ಲಿದ್ದಾರೆ. ಹೀಗಾಗಿ ಸದ್ಯ ಏಲಿಯನ್ ಪ್ಲಾನೆಟ್ ಒಂದು ಪತ್ತೆಯಾಗಿದೆ. ಇನ್ನುಳಿದ ಅಧ್ಯಯನ ಮಂದುವರಿಯುತ್ತಿದೆ. ಸೌರಮಂಡಲದಲ್ಲಿರುವ ಯಾವುದೇ ಗ್ರಹಗಳ ರೀತಿಯ ಚಲನ ವಲನ, ಬೆಳಕಿನ ಮೂಲ ಈ ಏಲಿಯನ್ ಗ್ರಹದಲ್ಲಿ ಇಲ್ಲ. ಕಾರಣ ಭೂಮಿ ಸೇರಿದಂತೆ ಸೌರಮಂಡಲದೊಳಗಿರುವ ಇತರ ಎಲ್ಲಾ ಗ್ರಹಗಳು ಸೂರ್ಯನ ಬೆಳಕು ಪಡೆಯುತ್ತದೆ. ಆದರೆ ಏಲಿಯನ್ ಗ್ರಹ ಸೂರ್ಯನಿಗಿಂತ ಪ್ರಕಾಶಮಾನವಾದ ನಕ್ಷತ್ರದಿಂದ ಬೆಳಕು ಪಡೆಯುತ್ತಿದೆ. ಇದೇ ನಕ್ಷತ್ರವನ್ನು ಸುತ್ತುತ್ತಿದೆ. ಈ ಗ್ರಹದಲ್ಲಿ ಏನಿದೆ? ಭೂಮಿ ರೀತಿಯಲ್ಲೇ ಜಲಚರಗಳಿರುವ ಗ್ರಹವೇ ಅನ್ನೋ ಕುತೂಹಲ ಹೆಚ್ಚಾಗಿದೆ.

ಈ ಗ್ರಹದ ಕುರಿತು ಅಧ್ಯಯನ ಮುಂದುವರಿದಿದೆ. ಹೊಸದಾಗಿ ಪತ್ತೆಯಾಗಿರುವ ಗ್ರಹ ಸದ್ಯ ಏಲಿಯನ್ ಪ್ಲಾನೆಟ್ ಎಂದು ಹೆಸರಿಲಾಗಿದೆ. ಈ ಗ್ರಹದಲ್ಲಿ ಏಲಿಯನ್ಸ್ ವಾಸಿಸುತ್ತಿದೆಯಾ ಅನ್ನೋದರ ಕುರಿತು ಅಧ್ಯಯನ ನಡೆಯುತ್ತಿದೆ. 

ಏಲಿಯನ್ ನಿಜವೇ?
ಏಲಿಯನ್ ಇರುವಿಕೆ ಕುರಿತು ಇತ್ತೀಚೆಗೆ ಹಲವು ಬೆಳವಣಿಗೆ ನಡೆದಿದೆ. ಏಲಿಯನ್ ಮೃತದೇಹ ಪತ್ತೆ ಅನ್ನೋ ಸುದ್ದಿಯಿಂದ ಹಿಡಿದು, ಏಲಿಯನ್ ವಿಡಿಯೋ ಸೇರಿದಂತೆ ಹಲವು ಕುತೂಹಲಗಳ ಮಾಹಿತಿಗಳು ಹರಿದಾಡಿದೆ. ಆದರೆ ಯಾವದೂ ಅಧಿಕೃತವಾಗಿಲ್ಲ. ಇದರ ನಡುವೆ ಹಲವರು ಭವಿಷ್ಯ ನುಡಿದ್ದಾರೆ.

2025ರ ಬಗ್ಗೆ ಬಾಬಾ ವೇಂಗಾ ನುಡಿದಿರುವ ಭವಿಷ್ಯದಲ್ಲೂ ಏಲಿಯನ್ಸ್ ಕುರಿತು ಸೂಚಿಸಿದ್ದರು. ಈ ವರ್ ಅಂದರೆ 202ರಲ್ಲಿ ಏಲಿಯನ್ಸ್‌ಗಳು ಮನುಷ್ಯರ ಜೊತೆ ಸಂಪರ್ಕಕ್ಕೆ ಬರಲಿದ್ದಾರೆ ಎಂದಿದ್ದಾರೆ. ಇಡೀ ಖಂಡದಲ್ಲಿ ವಿನಾಶ ಸೃಷ್ಟಿಸಿ ಅನೇಕ ಜನರ ಪ್ರಾಣ ತೆಗೆಯುತ್ತಾರೆ ಅಂತಾನೂ ಭವಿಷ್ಯ ನುಡಿದಿದ್ದಾರೆ. ಬಾಬಾ ವೇಂಗಾ ಈ ಭವಿಷ್ಯ ಜನರಲ್ಲಿ ಭಯ ಹುಟ್ಟಿಸಿದೆ.

ಈ ದಿನ ಆಗಸದಲ್ಲಿ ಬುಧ, ಶನಿ ಸೇರಿ 5 ಗ್ರಹಗಳ ಸಮಾಗಮ, ಕಣ್ತುಂಬಿಕೊಳ್ಳಿ ಆಗಸದ ಕೌತುಕ
 

Latest Videos
Follow Us:
Download App:
  • android
  • ios