ಬುಧ, ಶನಿ, ಮಂಗಳ ಸೇರಿದಂತೆ 5 ಪ್ರಮುಖ ಗ್ರಹಗಳು ಆಗಸದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದೆ. ಫೆಬ್ರವರಿಯಲ್ಲೇ ಈ ಕೌತುಕ ಸಂಭವಿಸುತ್ತಿದೆ. ಹೀಗಾಗಿ ಆಗಸದ ಕೌತುಕ ಮಿಸ್ ಮಾಡಿಕೊಳ್ಳಬೇಡಿ. ಕಾರಣ ಮತ್ತೆ ನೋಡಲು 2028ರ ವರೆಗೆ ಕಾಯಬೇಕು.

ನವದೆಹಲಿ(ಫೆ.06) ಪ್ರತಿ ದಿನ ಆಗಸದಲ್ಲಿ ಹಲವು ಕೌತುಗಳು ಸಂಭವಿಸುತ್ತದೆ. ದಿಟ್ಟಿಸಿ ನೋಡಿದರೆ ಹಲವು ನಕ್ಷತ್ರಗಳ ಹೊಳಪು ಆಕರ್ಷಿಸುತ್ತದೆ. ಹೀಗಾಗಿಯೇ ಆಗಸದಲ್ಲಿನ ಕೌತುಕ ಅಧ್ಯಯನದ ವಿಷಯ. ಇದೀಗ ಮತ್ತೊಂದು ಕೌತುಕ ಆಗಸದಲ್ಲಿ ಘಟಿಸುತ್ತಿದೆ. ಇದು ಅಪರೂಪದ ಘಟನೆ. ಹೌದು, ಬುಧ, ಶನಿ, ಮಂಗಳ, ಶುಕ್ರ, ಗುರು ಒಟ್ಟು 5 ಗ್ರಹಗಳು ಆಗಸದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದೆ. ಇದೇ ಫೆಬ್ರವರಿಯಲ್ಲಿ ಈ ಕೌತುಕ ಘಟಿಸುತ್ತಿದೆ. ಅದ್ಭುತ ದೃಶ್ಯಕ್ಕಾಗಿ ಇದೀಗ ವಿಜ್ಞಾನಿಗಳು, ವಿದ್ಯಾರ್ಥಿಗಳು ಸೇರಿದಂತೆ ಹಲವರು ಕಾತರಿಂದ ಕಾಯುತ್ತಿದ್ದಾರೆ. ಮುಸ್ಸಂಜೆಯ ವೇಳೆ ಖಗೋಳದ ಅದ್ಬುತ ಕಣ್ತುಂಬಿಕೊಳ್ಳಲು ಮರೆಯಬೇಡಿ.

ಫೆಬ್ರವರಿಯ ಯಾವ ದಿನ ಗ್ರಹಗಳ ಗೋಚರಿಸುತ್ತದೆ?
ಶುಕ್ರ, ಗುರು, ಮಂಗಳ, ಬುಧ ಹಾಗೂ ಶನಿ ಗ್ರಹಗಳು ಒಟ್ಟಿಗೆ ಕಾಣಿಸಿಕೊಳ್ಳುವ ದಿನ ಫೆಬ್ರವರಿ 24. ತಿಂಗಳ ಕೊನೆಯ ಸೋಮವಾರ ಸಂಜೆ ಆಗಸದಲ್ಲಿ 5 ಗ್ರಹಗಳು ಜೊತೆಯಾಗಿ ಗೋಚರಿಸಲಿದೆ. ಬುಧ ಹಾಗೂ ಶನಿ ಒಟ್ಟಿಗೆ ಕಾಣಿಸಿಕೊಳ್ಳಲಿದೆ. ಇನ್ನು ಯುರೇನಸ್ ಹಾಗೂ ನೆಪ್ಚೂನ್ ಗ್ರಹ ಸ್ಪಷ್ಟವಾಗಿ ಕಾಣಿಸಲು ದುರ್ಬೀನು ಅಥವಾ ಖಗೋಳ ವೀಕ್ಷಣೆ ನೆರವು ಅಗತ್ಯವಿದೆ. 

ಭೂಮಿ ಹೇಗೆ ತಿರುಗುತ್ತೆ? ಭಾರತದ ಖಗೋಳಶಾಸ್ತ್ರಜ್ಞ ಲಡಾಖ್‌ನಲ್ಲಿ ಸೆರೆ ಹಿಡಿದ ಅದ್ಭುತ ವಿಡಿಯೋ

ಪಶ್ಚಿಮ ಆಗಸದ ಕಡೆ ದಿಟ್ಟಿಸಿದರೆ ಈ ಖಗೋಳದ ಕೌತುಕ ಗೋಚರಿಸಲಿದೆ. ಹೀಗಾಗಿ ಫೆಬ್ರವರಿ 24ರಂದು ಪ್ರಶಾಂತ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ. ಬಳಿಕ ಪಶ್ಚಿಮ ಆಗಸದ ಕಡೆ ಕಣ್ಣುಹಾಯಿಸಿಕೊಳ್ಳಿ. ಮತ್ತೊಂದು ಪ್ರಮುಖ ವಿಚಾರ ಎಂದರೆ, ಈ ಅದ್ಭುತ ಮಿಸ್ ಮಾಡಿಕೊಂಡರೆ ಮತ್ತೆ 2028ರ ವರೆಗೆ ಕಾಯಬೇಕು. 2028ರ ಅಕ್ಟೋಬರ್ ತಿಂಗಳಲ್ಲಿ ಇದೇ ಕೌತುಕ ಮತ್ತೆ ಘಟಿಸಲಿದೆ.

ಭೂಮಿಗೆ ಎದುರಾಗುತ್ತಾ ಕ್ಷುದ್ರಗ್ರಹ ಅಪಾಯ?
ಭೂಮಿಗೆ ಅಪಾಯವನ್ನುಂಟುಮಾಡುವ ಸಾಧ್ಯತೆಯಿರುವ 2024 YR4 ಕ್ಷುದ್ರಗ್ರಹವನ್ನು ಈಗ ವಿಶ್ವಸಂಸ್ಥೆಯೂ ಮೇಲ್ವಿಚಾರಣೆ ಮಾಡುತ್ತಿದೆ. 2032 ರಲ್ಲಿ ಭೂಮಿಗೆ ಡಿಕ್ಕಿ ಹೊಡೆಯುವ ಸಾಧ್ಯತೆಯಿರುವ ಈ ಬಾಹ್ಯಾಕಾಶ ವಸ್ತುವನ್ನು ಮೇಲ್ವಿಚಾರಣೆ ಮಾಡಲು ವಿಶ್ವಸಂಸ್ಥೆಯ ಪ್ಲಾನೆಟರಿ ಡಿಫೆನ್ಸ್ ಆರ್ಗನೈಸೇಷನ್ ನಿರ್ಧರಿಸಿದೆ ಎಂದು ವರದಿಯಾಗಿದೆ. NASA ಸೇರಿದಂತೆ ಹಲವು ಬಾಹ್ಯಾಕಾಶ ಸಂಸ್ಥೆಗಳು ಈ ಕ್ಷುದ್ರಗ್ರಹವನ್ನು ಮೇಲ್ವಿಚಾರಣೆ ಮಾಡುತ್ತಿವೆ.

2024 YR4 ಕ್ಷುದ್ರಗ್ರಹವು 2032 ರ ಡಿಸೆಂಬರ್ 22 ರಂದು ಭೂಮಿಗೆ ಡಿಕ್ಕಿ ಹೊಡೆಯುವ ಸಾಧ್ಯತೆ ಶೇ.1.3 ರಷ್ಟಿದೆ ಎಂದು ಸಂಶೋಧಕರು ಅಂದಾಜಿಸಿದ್ದಾರೆ. ಈ ಕ್ಷುದ್ರಗ್ರಹವು ಭೂಮಿಗೆ ಯಾವುದೇ ಹಾನಿಯಾಗದಂತೆ ಹಾದುಹೋಗುವ ಸಾಧ್ಯತೆ ಶೇ.99 ರಷ್ಟಿದೆ ಎಂದು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಅಂದಾಜಿಸಿದೆ. ಈ ಕ್ಷುದ್ರಗ್ರಹದ ಬಗ್ಗೆ ತನಗೆ ಯಾವುದೇ ಆತಂಕ ಅಥವಾ ನಿದ್ರಾಹೀನತೆ ಇಲ್ಲ ಎಂದು ರಾಯಲ್ ಆಸ್ಟ್ರೋನಾಮಿಕಲ್ ಸೊಸೈಟಿಯ ಡಾ. ರಾಬರ್ಟ್ ಮಾಸ್ಸಿ ಹೇಳಿದ್ದಾರೆ. ಲೆಕ್ಕಾಚಾರಗಳು ಹೆಚ್ಚು ಸ್ಪಷ್ಟವಾದಾಗ ಇಂತಹ ಆತಂಕಗಳು ದೂರವಾಗುವುದು ಸಾಮಾನ್ಯ. ಇಂತಹ ಬಾಹ್ಯಾಕಾಶ ವಸ್ತುಗಳನ್ನು ಮೇಲ್ವಿಚಾರಣೆ ಮಾಡಲು ಖಗೋಳಶಾಸ್ತ್ರಜ್ಞರಿಗೆ ಹೆಚ್ಚಿನ ತಂತ್ರಜ್ಞಾನವನ್ನು ಒದಗಿಸಬೇಕಾಗಿದೆ ಎಂದು ರಾಬರ್ಟ್ ಮಾಸ್ಸಿ ಹೇಳಿದ್ದಾರೆ. ಆದರೆ, 2024 YR4 ಕ್ಷುದ್ರಗ್ರಹದ ಅಪಾಯದ ಸಾಧ್ಯತೆಯನ್ನು ಹೆಚ್ಚಿನ ಖಗೋಳಶಾಸ್ತ್ರಜ್ಞರು ಸಂಪೂರ್ಣವಾಗಿ ತಳ್ಳಿಹಾಕಿಲ್ಲ.

ಚಂದ್ರನಲ್ಲಿಂದ ನೋಡಿದರೆ ಭೂಮಿ ಹೇಗೆ ಕಾಣುತ್ತೆ? ಬ್ಲೂ ಘೋಸ್ಟ್ ಸೆರೆ ಹಿಡಿದ ವಿಡಿಯೋ

ಚಿಲಿಯಲ್ಲಿರುವ ದೂರದರ್ಶಕದಲ್ಲಿ 2024 ರ ಡಿಸೆಂಬರ್‌ನಲ್ಲಿ YR4 ಕ್ಷುದ್ರಗ್ರಹವನ್ನು ಕಂಡುಹಿಡಿಯಲಾಯಿತು. 2024 YR4 ರ ವ್ಯಾಸವು 40 ರಿಂದ 90 ಮೀಟರ್‌ಗಳ ನಡುವೆ ಇದೆ ಎಂದು ಅಂದಾಜಿಸಲಾಗಿದೆ. ಟೊರಿನೊ ಇಂಪ್ಯಾಕ್ಟ್ ಹ್ಯಾಝಾರ್ಡ್ ಸ್ಕೇಲ್ ಪ್ರಕಾರ, YR4 ಕ್ಷುದ್ರಗ್ರಹಕ್ಕೆ 10 ರಲ್ಲಿ 3 ರೇಟಿಂಗ್ ನೀಡಲಾಗಿದೆ. 2032 ರ ಡಿಸೆಂಬರ್ 22 ರಂದು ಭೂಮಿಗೆ ಅಪಾಯಕಾರಿಯಾದ 1,06,200 ಕಿ.ಮೀ. ದೂರಕ್ಕೆ ಈ ಕ್ಷುದ್ರಗ್ರಹವು ಬರಲಿದೆ ಎಂದು ಅಂದಾಜಿಸಲಾಗಿದೆ. ವಿಶ್ವಸಂಸ್ಥೆಯ ಜೊತೆಗೆ, NASAದ ನಿಯರ್ ಅರ್ಥ್ ಆಬ್ಜೆಕ್ಟ್ ಸ್ಟಡೀಸ್ ಸೆಂಟರ್ ಮತ್ತು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯೂ 2024 YR4 ಕ್ಷುದ್ರಗ್ರಹವನ್ನು ಮೇಲ್ವಿಚಾರಣೆ ಮಾಡುತ್ತಿವೆ.