ಆಗಸದ ಕೌತುಕ ನೀವು ಗಮಿಸಿದ್ರಾ? ಅಪರೂಪದ ಬೆಳಕಿನ ಚಿತ್ತಾರದ ಐನ್‌ಸ್ಟೀನ್ ರಿಂಗ್ ಪತ್ತೆ

ಆಗಸ ವಿಸ್ಮಯಗಳ ಆಗರ. ಈ ಪೈಕಿ ಹಲವು ಕೌತುಕುಗಳನ್ನು ವಿಜ್ಞಾನಿಗಳು ಪತ್ತೆ ಹಚ್ಚುತ್ತಾರೆ. ಈ ಪೈಕಿ ಅಪರೂಪದಲ್ಲೇ ಅಪರೂವಾಗಿರುವ ಐನ್‌ಸ್ಟೀನ್ ರಿಂಗ್ ಬೆಳಕಿನ ಚಿತ್ತಾರವನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಏನಿದು ಐನ್‌ಸ್ಟೀನ್ ರಿಂಗ್?

Einstein ring light encircling centre of galaxy Very rare cosmic phenomenon capture

ಪ್ಯಾರಿಸ್(ಫೆ.11) ಆಗಸದಲ್ಲಿನ ಕೌತುಕ ಬಗೆದಷ್ಟು ವಿಸ್ತಾರಗೊಳ್ಳುತ್ತದೆ. ಗ್ರಹಗಳು, ನಕ್ಷತ್ರಗಳು, ಚಲನೆ, ಬೆಳಕು, ಸೂರ್ಯ, ಚಂದ್ರ ಹೀಗೆ ಆಗಸ ಪ್ರತಿಯೊಂದು ಅಧ್ಯಯನ ವಿಷಯವೇ. ಇದೀಗ ವಿಜ್ಞಾನಿಗಳು ಅಪರೂಪದ ಕೌತುಕವನ್ನು ಪತ್ತೆ ಹಚ್ಚಿದ್ದಾರೆ. ಹೌದು ಭೂಮಿಯಿಂದ ಹತ್ತಿರದಲ್ಲಿ ಘಟಿಸಿದ ಬೆಳಕಿನ ಚಿತ್ತಾರಗಳ ಐನ್‌ಸ್ಟೀನ್ ರಿಂಗ್ ಘಟನೆಯನ್ನು ಯುರೋಪಿಯನ್ ಸ್ಪೇಸ್ ಏಜೆನ್ಸಿಯ (ESA) ಪತ್ತೆ ಹಚ್ಚಿದೆ. ಯೂಕ್ಲಿಡ್ ಟೆಲಿಸ್ಕೋಪ್ ಈ ಐನ್‌ಸ್ಟೀನ್ ರಿಂಗ್ ಪತ್ತೆ ಹಚ್ಚಿದೆ. ಇದು ಅತ್ಯಂತ ಅಪರೂಪದ ಘಟನೆಯಾಗಿದೆ.

ಈ ಅದ್ಭುತ ದೃಶ್ಯ ನಕ್ಷತ್ರಗಳ ಬೆಳಕುಗಳ ವಿಶೇಷ ಸಂಯೋಜನೆ ಇದಾಗಿದೆ. ಪ್ರಮುಖವಾಗಿ ನಕ್ಷತ್ರಪುಂಜಗಳ ನಡುವಿನ ಜೋಡನೆ ಹಾಗೂ ಮಧ್ಯಭಾಗವನ್ನು ಸುತ್ತುವರೆದಿರುವ ಬೆಳಕಿನ ಉಂಗುರವನ್ನು ಪ್ರದರ್ಶಿಸುತ್ತದೆ. ಇದು ವೃತ್ತಾಕಾರದಲ್ಲಿ ಗೋಚರಿಸುತ್ತದೆ. ಇದು ಆಗಸದಲ್ಲಿ ಸಾವಿರಾರು ವರ್ಷಗಳಿಗೊಮ್ಮೆ ನಡೆಯುವ ವಿದ್ಯಮಾನವಾಗಿದೆ. ಈ ಘಟನೆಗೆ ಐನ್‌ಸ್ಟೀನ್ ರಿಂಗ್ ಎಂದು ಕೆರೆಯಲಾಗುತ್ತದೆ. 

ಭೂಮಿ ಹೇಗೆ ತಿರುಗುತ್ತೆ? ಭಾರತದ ಖಗೋಳಶಾಸ್ತ್ರಜ್ಞ ಲಡಾಖ್‌ನಲ್ಲಿ ಸೆರೆ ಹಿಡಿದ ಅದ್ಭುತ ವಿಡಿಯೋ

ಆಗಸದಲ್ಲಿ ನಡೆದ ಈ ವಿದ್ಯಾಮಾನ ಭೂಮಿಯಿಂದ  4.42 ಶಕಕೋಟಿ ಬೆಳಕಿನ ವರ್ಷಗಳ ದೂರದಲ್ಲಿ ನಡೆದಿದೆ. 4.42 ಶತಕೋಟಿ ಬೆಳಕಿನ ವರ್ಷಗಳ ದೂರದಲ್ಲಿರುವ ಬೇರೆ ನಕ್ಷತ್ರಪುಂಜದಿಂದ ಬಂದ ಬೆಳಕಿನಿಂದ ಈ ವೃತ್ತಾಕಾರದ ಚಿತ್ತಾರ ಮಾಡಲ್ಪಟ್ಟಿದೆ. ಈ ಅಫರೂಪದ ವಿದ್ಯಾಮಾನ ಘಟಿಸಿದ ನಕ್ಷತ್ರಪುಂಜಗಳಿಗೆ ಇನ್ನೂ ಹೆಸರಿಟ್ಟಿಲ್ಲ.   

ಏನಿದು ಐನ್‌ಸ್ಟೀನ್ ರಿಂಗ್
ಸಾಪೇಕ್ಷತಾ ಸಿದ್ದಾಂತ ಜಗತ್ತಿಗೆ ನೀಡಿದ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್ ತಮ್ಮ ಸಿದ್ದಾಂತದಲ್ಲಿ ಬಾಹ್ಯಾಕಾಶದಲ್ಲಿನ ವಸ್ತುಗಳ ಸುತ್ತಲಿನ ಬೆಳಕು ಬಾಗುತ್ತದೆ ಎಂದಿದ್ದಾರೆ. ಇದಕ್ಕಾಗಿ ಮಸೂರದ ಬೆಳಕನ್ನು ಕೇಂದ್ರೀಕರಿಸಿ ಪ್ರಾಯೋಗಿಕವಾಗಿ ತಮ್ಮ ಸಿದ್ಧಾಂತಕ್ಕೆ ಉದಾಹರಣೆ ನೀಡಿದ್ದರು. ಐನ್‌ಸ್ಟೀನ್ ಹೇಳಿದ ಸಿದ್ದಾಂತವೇ ಆಗಸದಲ್ಲಿ ಘಟಿಸಿದೆ.  ಹೀಗಾಗಿ ಐನ್‌ಸ್ಟೀನ್ ರಿಂಗ್ ಎಂದು ಇದನ್ನು ಕರೆಯುತ್ತಾರೆ.  

2023ರಲ್ಲಿ ಪ್ರಶ್ನಾರ್ಥಕ ಚಿಹ್ನೆ ಆಕಾರದ ನಕ್ಷತ್ರ ಪುಂಜಗಳು ಪತ್ತೆ
ನಾಸಾದ ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕ (JWST) ಬಾಹ್ಯಾಕಾಶದಲ್ಲಿ ಒಂದು ದೈತ್ಯ 'ಪ್ರಶ್ನಾರ್ಥಕ ಚಿಹ್ನೆ'ಯನ್ನು ಹೋಲುವ ಒಂದು ಗೊಂದಲದ ಕಾಸ್ಮಿಕ್ ವಿದ್ಯಮಾನವನ್ನು ಬಹಿರಂಗಪಡಿಸಿದೆ, ಇದು ವಿಜ್ಞಾನಿಗಳನ್ನು ಬೆರಗುಗೊಳಿಸಿದೆ. ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯಿಂದ ನಿರ್ವಹಿಸಲ್ಪಡುವ ಈ ದೂರದರ್ಶಕವು ಜೂನ್‌ನಲ್ಲಿ ಹೆಚ್ಚು ವಿವರವಾದ ಚಿತ್ರವನ್ನು ಸೆರೆಹಿಡಿದಿದೆ, ಇದು ವೇಲಾ ನಕ್ಷತ್ರಪುಂಜದಲ್ಲಿ ಸುಮಾರು 1470 ಬೆಳಕಿನ ವರ್ಷಗಳ ದೂರದಲ್ಲಿರುವ ಹರ್ಬಿಗ್-ಹಾರೊ 46/47 ಎಂದು ಕರೆಯಲ್ಪಡುವ ಎರಡು ಸಕ್ರಿಯವಾಗಿ ರೂಪುಗೊಳ್ಳುತ್ತಿರುವ ಯುವ ನಕ್ಷತ್ರಗಳನ್ನು ಬಹಿರಂಗಪಡಿಸಿದೆ. ಈ ನಕ್ಷತ್ರಗಳು ಒಂದು ಆಹಾರ ಡಿಸ್ಕ್‌ನಿಂದ ಆವೃತವಾಗಿವೆ, ಇದು ಲಕ್ಷಾಂತರ ವರ್ಷಗಳಿಂದ ಅವುಗಳ ಬೆಳವಣಿಗೆಯನ್ನು ಪೋಷಿಸುತ್ತದೆ.

ಕುತೂಹಲಕಾರಿಯಾಗಿ, ನಕ್ಷತ್ರಗಳ ಕೆಳಗೆ, ಆಕರ್ಷಕವಾದ ಆಳವಾದ ಬಾಹ್ಯಾಕಾಶದ ಸ್ನ್ಯಾಪ್‌ಶಾಟ್‌ನಲ್ಲಿ, ರಾತ್ರಿಯ ಆಕಾಶದ ವಿರುದ್ಧ ತೂಗುಹಾಕಲಾದ ದೈತ್ಯ 'ಪ್ರಶ್ನಾರ್ಥಕ ಚಿಹ್ನೆ'ಯನ್ನು ಹೋಲುವ ಒಂದು ನಿಗೂಢ ವಸ್ತುವಿದೆ. ಈ ವಿಚಿತ್ರತೆಯ ನಿಜವಾದ ಸ್ವರೂಪವು ಅನಿಶ್ಚಿತವಾಗಿಯೇ ಉಳಿದಿದೆ, ಆದರೆ JWST ಯ ಕಾರ್ಯಾಚರಣೆಗಳನ್ನು ನಿರ್ವಹಿಸುವ ಬಾಲ್ಟಿಮೋರ್‌ನಲ್ಲಿರುವ ಬಾಹ್ಯಾಕಾಶ ದೂರದರ್ಶಕ ವಿಜ್ಞಾನ ಸಂಸ್ಥೆ (STScI) ಯ ತಜ್ಞರು 'ಪ್ರಶ್ನಾರ್ಥಕ ಚಿಹ್ನೆ' ದೂರದ ಗೆಲಾಕ್ಸಿ ಅಥವಾ ಪರಸ್ಪರ ಗುರುತ್ವಾಕರ್ಷಣೆಯ ಅಪ್ಪುಗೆಯಲ್ಲಿ ಸಿಕ್ಕಿಬಿದ್ದ ಗೆಲಾಕ್ಸಿಗಳ ಜೋಡಿಯಾಗಿರಬಹುದು ಎಂದು ಸೂಚಿಸುತ್ತಾರೆ.

ಚಂದ್ರನಲ್ಲಿಂದ ನೋಡಿದರೆ ಭೂಮಿ ಹೇಗೆ ಕಾಣುತ್ತೆ? ಬ್ಲೂ ಘೋಸ್ಟ್ ಸೆರೆ ಹಿಡಿದ ವಿಡಿಯೋ
 

Latest Videos
Follow Us:
Download App:
  • android
  • ios