Asianet Suvarna News Asianet Suvarna News

Moon Mystery House:ಚಂದ್ರನಲ್ಲಿ ವಿಚಿತ್ರ ಮಿಸ್ಟರಿ ಹೌಸ್ ಪತ್ತೆ, ವಿಜ್ಞಾನಿಗಳಿಗೆ ಅಚ್ಚರಿ ತಂದ ಫೋಟೋ!

  • ಚಂದ್ರನಲ್ಲಿ ಕ್ಯೂಬ್ ಆಕೃತಿಯ ವಿಚಿತ್ರ ಮಿಸ್ಟರಿ ಹೌಸ್ ಪತ್ತೆ
  • ಚೀನಾದ ಯೂಟು 2 ಮೂನ್ ರೋವರ್ ಸೆರೆ ಹಿಡಿದ ಚಿತ್ರ
  • ಇದು ಯಾವುದರ ಕುರುಹು, ಮಿಸ್ಟರಿ ಹೌಸ್‌ನತ್ತ ಸಾಗುತ್ತಿದೆ ರೌವರ್
China Yutu 2 lunar rover spotted cube shaped Mystery House on surface of Moon ckm
Author
Bengaluru, First Published Dec 6, 2021, 6:02 PM IST

ಬೀಜಿಂಗ್(ಡಿ.06):  ಚಂದ್ರ ಗ್ರಹದ ಅಧ್ಯಯನ ಸಾವಿರಾರು ವರ್ಷಗಳಿಂದ ನಡೆಯುತ್ತಲೇ ಇದೆ. ಆದರೆ ಪ್ರತಿ ದಿನ ಕೌತುಕ ಮತ್ತಷ್ಟು ಹೆಚ್ಚಾಗುತ್ತಿದೆ. ಮಾನವ ಚಂದ್ರನ(Moon) ಮೇಲ್ಮೈಗೆ ಕಾಲಿಟ್ಟರೂ ಎಲ್ಲಾ ಕುತೂಹಲಕ್ಕೆ ಉತ್ತರ ಸಿಕ್ಕಿಲ್ಲ. ವಿಜ್ಞಾನಿಗಳು(scientist) ಅಧ್ಯಯನ ನಡೆಸಿದಷ್ಟೂ ಹೊಸ ಹೊಸ ವಿಚಾರ ಬೆಳಕಿಗೆ ಬರುತ್ತಿದೆ. ಇದೀಗ ಚಂದ್ರನ ಮೇಲ್ಮೈನಲ್ಲಿ ಮಿಸ್ಟರಿ ಹೌಸ್(mystery house) ಪತ್ತೆಯಾಗಿದೆ. ಇದು ವಿಜ್ಞಾನಿಗಳನ್ನೇ ಚಕಿತಗೊಳಿಸಿದೆ. ಈ ಫೋಟೋ ನೋಡಿ ಜಗತ್ತೇ ಬೆರಾಗಾಗಿದೆ.

ಚಂದ್ರನ ಮೇಲ್ಮೈಗೆ ಚೀನಾ ಕಳುಹಿಸಿರುವ ಯೂಟು 2 ಬಾಹ್ಯಾಕಾಶ ನೌಕೆ(China Yutu-2 moon rover) ಈ ಫೋಟೋವನ್ನು ಸೆರೆ ಹಿಡಿದಿದೆ. ಚೀನಾದ  ಯೂಟು 2 ರೋವರ್ ಈಗಾಗಲೇ ಹಲವು ಫೋಟೋಗಳನ್ನು ರವಾನಿಸಿದೆ. ರೋವರ್ ಮೂಲಕ ಹಲವು ಮಾಹತ್ವದ ಮಾಹಿತಿಗಳನ್ನು ವಿಜ್ಞಾನಿಗಳು ಕಲೆಹಾಕಿದ್ದಾರೆ. ಹೀಗೆ  ಯೂಟು 2 ಕಳುಹಿಸಿರುವ ಫೋಟೋಗಳಲ್ಲಿ ವಿಚಿತ್ರ ಆಕೃತಿಯ( cube-shaped object) ಮಿಸ್ಟರ್ ಹೌಸ್ ಫೋಟೋ ವೈರಲ್ ಆಗಿದೆ. ಚಂದ್ರನ(Lunar) ಮೇಲ್ಮೈನಲ್ಲಿ ಕಾಣುವ ಈ ವಿಚಿತ್ರ ಆಕೃತಿಯ ವಸ್ತ ಏನು ಅನ್ನೋ ಕುತೂಹಲ ಇದೀಗ ಮನೆ ಮಾಡಿದೆ.

Solar Eclipse: ಈ ವರ್ಷದ ಕೊನೇ ಸೂರ್ಯಗ್ರಹಣದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಷಯಗಳಿವು

ಚೀನಾದ ಬಾಹ್ಯಾಕಾಶ ಸಂಸ್ಥೆ ಈ ಫೋಟೋವನ್ನು ಬಿಡುಗಡೆ ಮಾಡಿದೆ. ಫೋಟೋ ಬಿಡುಗಡೆಯಾದ ಬೆನ್ನಲ್ಲೇ ಹಲವು ದೇಶಗಳ ಬಾಹ್ಯಾಕಾಶ ಸಂಸ್ಥೆಗಳು ಅಚ್ಚರಿ ವ್ಯಕ್ತಪಡಿಸಿದೆ. ಈ ಕುರಿತು ಮತ್ತಷ್ಟು ಮಾಹಿತಿಗಳನ್ನು ಕಲೆ ಹಾಕುವಂತೆ ಸೂಚಿಸಿದ್ದಾರೆ. ಈ ಕುರಿತು ಸ್ಪೇಸ್ ಡಾಟ್ ಕಾಮ್ ಪತ್ರಕರ್ತ ಆ್ಯಂಡ್ರೋ ಜೋನ್ಸ್ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. 

 

ಯೂಟು 2 ನೌಕೆ ಕಳುಹಿಸಿದ ಚಿತ್ರಗಳಲ್ಲಿ ಈ ಚಿತ್ರ ಎಲ್ಲರ ಕುತೂಹಲ ಹೆಚ್ಚಿಸಿದೆ. ಕ್ಯೂಬಿಕ್ ಆಕೃತಿ ವಸ್ತುವೊಂದು ಈ ಪೋಟೋದಲ್ಲಿ ಕಾಣುತ್ತಿದೆ. ಯುಟು 2 ನೌಕೆಯಿಂದ ಉತ್ತರಕ್ಕೆ 80 ಮೀಟರ್ ದೂರದಲ್ಲಿ ಈ ಮಿಸ್ಟರಿ ಹೌಸ್ ರೀತಿಯ ವಸ್ತು ಪತ್ತೆಯಾಗಿದೆ. ಇದೀಗ ಯುಟು 2 ರೋವರ್ ಈ ಮಿಸ್ಟರಿ ಹೌಸ್ ಕಡೆಗೆ ಪ್ರಯಾಣ ಹೊರಟಿದೆ. ಇನ್ನು ಎರಡು ಮೂರು ದಿನಗಳಲ್ಲಿ ಈ ಕುರಿತು ಹೆಚ್ಚಿನ ವಿವರ ಲಭ್ಯವಾಗಲಿದೆ ಎಂದು ಟ್ವೀಟ್‌ನಲ್ಲಿ ಆ್ಯಂಡ್ರೋ ಜೋನ್ಸ್ ಹೇಳಿದ್ದಾರೆ.

Video : ಅತೀವ ಮಳೆಗೆ ಕಾರಣವಾಯ್ತಾ 580 ವರ್ಷಗಳ ನಂತರ ಸಂಭವಿಸಲಿರೋ ಚಂದ್ರಗ್ರಹಣ?

ಈ ವಿಚಿತ್ರ ಆಕೃತಿಯ ವಸ್ತು ಏನು ಅನ್ನೋದರ ಕುರಿತು ಅಧ್ಯಯನ ಅಗತ್ಯ. ಇದು ಏಲಿಯನ್ಸ್ ಅಲ್ಲ. ಆದರೆ 8 ವರ್ಷಗಳ ಹಿಂದೆ ಚಂದ್ರನತ್ತ ಕಳುಹಿಸಿದ ಚೀನಾದ ಚಾಂಗ್ ಇ ಮಿಶನ್ ನೌಕೆ ಚಂದ್ರನ ಮೇಲ್ಮೈನಲ್ಲಿ ಕಲ್ಲು ಬಂಡೆಗಳ ಫೋಟೋ ಕಳುಹಿಸಿತ್ತು. ಇದೀಗ ಯುಟು 2 ರೋವರ್ ದೂರದಿಂದ ಇದೇ ಕಲ್ಲು ಬಂಡೆಗಳ ಫೋಟೋ ಕಳುಹಿಸಿದೆಯಾ ಅನ್ನೋದು ಅಧ್ಯಯನದಿಂದ ಬಯಲಾಗಲಿದೆ ಎಂದು ಆ್ಯಂಡ್ರೋ ಜೋನ್ಸ್ ಹೇಳಿದ್ದಾರೆ.

 

ಇದೀಗ ಚೀನಾ ವಿಜ್ಞಾನಿಗಳು ಯುಟು 2 ಬಾಹ್ಯಾಕಾಶ ನೌಕೆಯನ್ನು ಈ ಮಿಸ್ಟರ್ ಹೌಸ್ ಕಡೆ ತಿರುಗಿಸಿದ್ದಾರೆ.  ರೋವರ್ 80 ಮೀಟರ್ ದೂರದಲ್ಲಿರುವ ಈ ಮಿಸ್ಟರಿ ಹೌಸ್‌ನತ್ತ ತೆರಳಲು ಕನಿಷ್ಠ 3 ದಿನ ಬೇಕು. ಆದರೆ ಸಾಗುವ ದಾರಿಯಲ್ಲಿ ಇದರ ಕುರುಹುಗಳು ಪತ್ತೆಯಾಗುವ ಸಾಧ್ಯತೆ ಇದೆ. ಹೀಗಾಗಿ ಶೀಘ್ರದಲ್ಲೇ ಈ ಮಿಸ್ಟರಿ ಹೌಸ್ ಮಾಹಿತಿ ಹೊರಬೀಳಲಿದೆ ಎಂದು ಚೀನಾ ವಿಜ್ಞಾನಿಗಳು ಹೇಳಿದ್ದಾರೆ.

ಚೀನಾ ಬಾಹ್ಯಕಾಶ ಸಂಸ್ಥೆ(China space agency) ಮಿಸ್ಟರಿ ಹೌಸ್ ಬಹಿರಂಗ ಪಡಿಸುತ್ತಿದ್ದಂತೆ ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಹಲವರು ಇದು ಏಲಿಯನ್ಸ್ ಕುರುಹು ಎಂದಿದ್ದಾರೆ. ಮತ್ತೆ ಕೆಲವರು ವಿಶಾಲವಾಗಿರುವ ಚಂದ್ರನ ಮೇಲೈನಲ್ಲಿ ಕಲ್ಲುಗಳು ಇವೆ. ದಿಬ್ಬಗಳು ಇವೆ. ಇದು ಕಲ್ಲು ಅಥವಾ ಬಂಡೆ ಫೋಟೋ ಆಗಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios