Asianet Suvarna News Asianet Suvarna News

Kadison–Singer Problem: 1959ರ ಗಣಿತ ಸಮಸ್ಯೆ ಪರಿಹರಿಸಿದ ಭಾರತೀಯ ಮೂಲದ ಅಮೆರಿಕನ್ ನಿಖಿಲ್ ಶ್ರೀವಾಸ್ತವ್!

*1959ರಿಂದಲೂ ಪರಿಹರಿಸಲು ಸಾಧ್ಯವಾಗಿಲ್ಲದ ಗಣಿತದ ಸಮಸ್ಯೆ
*ಅಮೆರಿಕನ್‌ ಗಣಿತಶಾಸ್ತ್ರಜ್ಞ ನಿಖಿಲ್‌ ಶ್ರೀವಾಸ್ತವ್ ಸೋಲುಷನ್‌
*ಗಣಿತಶಾಸ್ತ್ರ ಸೊಸೈಟಿ ನೀಡುವ ಫೋಯೆಸ್‌ ಪ್ರಶಸ್ತಿಗೆ ಭಾಜನ

Indian American Math Genius Nikhil Srivastava  Solves Famous 1959 Problem
Author
Bengaluru, First Published Dec 5, 2021, 10:57 AM IST
  • Facebook
  • Twitter
  • Whatsapp

ವಾಷಿಂಗ್ಟನ್‌(ಡಿ. 05): 1959ರಿಂದಲೂ ಪರಿಹರಿಸಸಲು ಸಾಧ್ಯವಾಗಿಲ್ಲದ ಗಣಿತದ ಸಮಸ್ಯೆಯನ್ನು (Math Problem) ಭಾರತೀಯ ಮೂಲದ ಅಮೆರಿಕನ್‌ ಗಣಿತಶಾಸ್ತ್ರಜ್ಞ ನಿಖಿಲ್ ಶ್ರೀವಾಸ್ತವ್ (Nikhil Srivastava) ಪರಿಹಾರ ಮಾಡಿದ್ದಾರೆ. ಇದಕ್ಕಾಗಿ ಅವರು ಅಮೆರಿಕದ ಗಣಿತಶಾಸ್ತ್ರ ಸೊಸೈಟಿ ನೀಡುವ ಫೋಯೆಸ್‌ ಪ್ರಶಸ್ತಿ (The Ciprian Foias Prize) ಪಡೆದುಕೊಂಡಿದ್ದಾರೆ. ಕ್ಯಾಲಿಫೋರ್ನಿಯಾದ ವಿಶ್ವವಿದ್ಯಾನಿಲಯದಲ್ಲಿ (University of California) ಭೋದಕರಾಗಿ ಸೇವೆ ಸಲ್ಲಿಸುತ್ತಿರುವ ನಿಖಿಲ್‌, ಈ ಸಮಸ್ಯೆ ಪರಿಹರಿಸಲು ಸಹಕರಿಸಿದ ಆ್ಯಡಂ ಮಾರ್ಕಸ್‌ (Adam Marcus) ಹಾಗೂ ಡೇನಿಯಲ್‌ ಸ್ಪೀಲ್‌ಮ್ಯಾನ್‌ (Daniel Spielman) ಅವರೊಂದಿಗೆ ಪ್ರಶಸ್ತಿಯನ್ನು ಹಂಚಿಕೊಳ್ಳಲಿದ್ದಾರೆ. 

'ಜನರ ಪರವಾಗಿ ಪ್ರಶಸ್ತಿ ಸ್ವೀಕರಿಸಲು ಬಯಸುತ್ತೇವೆ'

1959ರಲ್ಲಿ ರಿಚರ್ಡ್‌ ಕೆಡಿಸನ್‌ ಮತ್ತು ಇಸಾಡೋರ್‌ ಸಿಂಗರ್‌ ಅವರು ರಚಿಸಿದ್ದ ಆಪರೇಟೆಡ್‌ ಥಿಯರಿಯಲ್ಲಿ ಈ ಸಮಸ್ಯೆಯನ್ನು ಪ್ರಸ್ತಾಪಿಸಲಾಗಿತ್ತು. 2022ರ ಜನವರಿಯಲ್ಲಿ ನಡೆಯುವ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ವಿತರಣೆ ಮಾಡಲಾಗುತ್ತದೆ. ಮ್ಯಾಟ್ರಿಕ್ಸ್‌ಗಳ ( polynomial of matrices) ವಿವಿಧ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ವಿಧಾನಗಳನ್ನು ಪರಿಚಯಿಸಿ  ಅಭಿವೃದ್ಧಿಪಡಿಸಿದ್ದಾಕ್ಕಾಗಿ ಈ ಪ್ರಶಸ್ತಿ ನೀಡಲಾಗಿದೆ.  ಮೂವರು ಪ್ರಶಸ್ತಿ ಪುರಸ್ಕೃತರು ನೀಡಿದ  ಜಂಟಿ ಹೇಳಿಕೆಯಲ್ಲಿ, ಕ್ಯಾಡಿಸನ್-ಸಿಂಗರ್ ಸಮಸ್ಯೆಯ ಪರಿಹಾರಕ್ಕೆ ಕೊಡುಗೆ ನೀಡಿದ ಅನೇಕ ಜನರ ಪರವಾಗಿ ಪ್ರಶಸ್ತಿ ಸ್ವೀಕರಿಸಲು ಬಯಸುತ್ತಾರೆ ಎಂದು ಹೇಳಿದ್ದಾರೆ.

ಇನ್ನಷ್ಟು ಸಮಸ್ಯೆಗಳಿಗೆ  ಪರಿಹಾರ! 

"ಈ ಸಮಸ್ಯೆ ಬಗೆಹರಿಸಿದ್ದು ನಮ್ಮ ಅದ್ಭುತ ಕಥೆಯ ಅಂತಿಮ ಅಧ್ಯಾಯವಾಗಿದೆ, ಭವಿಷ್ಯದಲ್ಲಿ ಇನ್ನಷ್ಟು ಕಷ್ಟಕರ ಸಮಸ್ಯೆಗಳಿಗೆ ಇದೇ ರೀತಿಯ ಪರಿಹಾರಗಳನ್ನು ನೀಡಲಿದ್ದೇವೆ ಎಂದು ನಾವು ಭಾವಿಸುತ್ತೇವೆ" ಎಂದು ಅವರು ಹೇಳಿದ್ದಾರೆ. ಮುಂದಿನ ವರ್ಷ ಜನವರಿ 5 ರಂದು ಸಿಯಾಟಲ್‌ನಲ್ಲಿ ನಡೆಯುವ 2022 ರ ಜಂಟಿ ಗಣಿತ ಸಭೆಯಲ್ಲಿ ಪ್ರೊಫೆಸರ್ ನಿಖಿಲ್ ಶ್ರೀವಾಸ್ತವ ಮತ್ತು ಅವರ ಸಹೋದ್ಯೋಗಿಗಳಿಗೆ ಬಹುಮಾನವನ್ನು ನೀಡಲಾಗುವುದು, ಇದನ್ನು "ವಿಶ್ವದ ಅತಿದೊಡ್ಡ ಗಣಿತ ಕೂಟ" ಎಂದು ಕರೆಯಲಾಗುತ್ತದೆ. 

ISRO Gaganyaan Project : ಪ್ರಧಾನಿಗೆ, ಸಿಎಂ ಬೊಮ್ಮಾಯಿಗೆ ಕೆಪಿಸಿಸಿ ಅಧ್ಯಕ್ಷರ ಪತ್ರ

ಸಿಪ್ರಿಯನ್ ಫೊಯಾಸ್ ಪ್ರಶಸ್ತಿಯು ನಿಖಿಲ್ ಶ್ರೀವಾಸ್ತವ ಅವರು ಗೆದ್ದ ಮೂರನೇ ಪ್ರಮುಖ ಬಹುಮಾನವಾಗಿದೆ, ಅವರು ಈ ಹಿಂದೆ ಜಂಟಿಯಾಗಿ 2014 ರಲ್ಲಿ ಜಾರ್ಜ್ ಪಾಲಿಯಾ ಪ್ರಶಸ್ತಿಯನ್ನು ಗೆದ್ದಿದ್ದಾರೆ ಮತ್ತು 2021 ರಲ್ಲೂ ಕೂಡ ಬಹುಮಾನವನ್ನು ಗೆದ್ದಿದ್ದಾರೆ.

ವಿದೇಶಕ್ಕೆ ಹೋಗಿ ಸಾಧನೆ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ!

ಇತ್ತೀಚೆಗೆ ಟ್ವೀಟರ್‌ ಸಿಇಒ (Twitter)ಆಗಿ ಭಾರತ ಮೂಲದ ಪರಾಗ್‌ ಅಗರವಾಲ್‌ (Parag Agrwal) ನೇಮಕವಾಗಿದ್ದಾರೆ. ಇದಾದ ಬಳಿಕ ಭಾರತೀಯರು ವಿದೇಶದ ಕಂಪನಿಗಳಲ್ಲಿ (MNC) ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುವುದರ ಬಗ್ಗೆ ಭಾರೀ ಚರ್ಚೆಗಳು ನಡೆದಿವೆ. ಇದು ಪ್ರತಿಭಾ ಪಲಾಯನದ ಬಗ್ಗೆ ಪರ ವಿರೋಧದ ಚರ್ಚೆಗೆ ಗ್ರಾಸವಾಗಿದೆ. ಅನೇಕ ಕಂಪನಿಗಳು ಸಂಸ್ಥಾಪಕರು (CEO) ಭಾರತವು ತನ್ನ ಅತ್ಯುತ್ತಮ ಪ್ರತಿಭೆಯನ್ನು (Indian Talent) ವಿದೇಶಕ್ಕೆ ರಫ್ತು ಆಗುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ ದೇಶದ ಅತ್ಯಂತ ಯಶಸ್ವಿ ಉದ್ಯಮಿಗಳಲ್ಲಿ ಒಬ್ಬರಾದ ಇನ್ಫೋಸಿಸ್ ಸಂಸ್ಥಾಪಕ ಎನ್‌ ಆರ್ ನಾರಾಯಣ ಮೂರ್ತಿ (Infosys Narayana Murthy) ಒಂದು ಸಣ್ಣ ಶೇಕಡಾವಾರು ಭಾರತೀಯರು ವಿದೇಶಕ್ಕೆ ಹೋಗಿ ಅಲ್ಲಿ ಉತ್ತಮ ಸಾಧನೆ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದ್ದಾರೆ.

"ಒಂದು ಸಣ್ಣ ಶೇಕಡಾವಾರು ಭಾರತೀಯರು ವಿದೇಶಕ್ಕೆ ಹೋಗುವುದು, ಅಲ್ಲಿನ ವಾತಾವರಣದಲ್ಲಿ ಮಾದರಿ ನಾಗರಿಕರಾಗಿ (Model Citizens) ನಡೆದುಕೊಳ್ಳುವುದು ಮತ್ತು ಅವರು ಆಯ್ಕೆ ಮಾಡಿದ ಯಾವುದೇ ವೃತ್ತಿಯಲ್ಲಿ ಉತ್ತಮ ಸಾಧನೆ (Achievement) ಮಾಡುವುದು ಭಾರತದ ಬ್ರ್ಯಾಂಡ್ ಇಮೇಜ್ (Brand Image) ಅನ್ನುಹೆಚ್ಚಿಸುತ್ತದೆ. ಈ ಜನರು ನಮ್ಮ ರಾಯಭಾರಿಗಳು. ಹಾಗಾಗಿ  ಅವರು ಭಾರತದಲ್ಲಿ ಉಳಿಯಬೇಕು ಎಂದು ಹೇಳುವ ಬದಲು  ನಾನು ಅವರನ್ನು ಶ್ಲಾಘಿಸುತ್ತೇನೆ. ತಪ್ಪೇನೂ ಇಲ್ಲ" ಎಂದು ಮೂರ್ತಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

Follow Us:
Download App:
  • android
  • ios