Brain Drain : ಪ್ರತಿಭಾ ಪಲಾಯನದ ಬಗ್ಗೆ ಇನ್ಫೋಸಿಸ್ ನಾರಾಯಣಮೂರ್ತಿ ಹೇಳಿದ್ದೇನು?

*ವಿದೇಶದಲ್ಲಿ ಮಿಂಚುತ್ತಿರುವವರು ಭಾರತದ ರಾಯಭಾರಿಗಳು
*ವಿದೇಶಕ್ಕೆ ಹೋಗಿ ಸಾಧನೆ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ
*ನಮ್ಮ ಯುವಕರೇ ಅಸಾಧಾರಣವಾದ ಕೆಲಸಗಳನ್ನು ಮಾಡಿದ್ದಾರೆ!
*ಪ್ರತಿಭಾ ಪಲಾಯನ ಬಗ್ಗೆ ಎನ್‌ ಆರ್‌ ನಾರಾಯಣಮೂರ್ತಿ ಅಭಿಪ್ರಾಯ

There is nothing wrong with going abroad and doing well there said infosys N R Narayana Murthy mnj

ನವದೆಹಲಿ(ಡಿ. 03): ಇತ್ತೀಚೆಗೆ ಟ್ವೀಟರ್‌ ಸಿಇಒ (Twitter)ಆಗಿ ಭಾರತ ಮೂಲದ ಪರಾಗ್‌ ಅಗರವಾಲ್‌ (Parag Agrwal) ನೇಮಕವಾಗಿದ್ದಾರೆ. ಇದಾದ ಬಳಿಕ ಭಾರತೀಯರು ವಿದೇಶದ ಕಂಪನಿಗಳಲ್ಲಿ (MNC) ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುವುದರ ಬಗ್ಗೆ ಭಾರೀ ಚರ್ಚೆಗಳು ನಡೆದಿವೆ. ಇದು ಪ್ರತಿಭಾ ಪಲಾಯನದ ಬಗ್ಗೆ ಪರ ವಿರೋಧದ ಚರ್ಚೆಗೆ ಗ್ರಾಸವಾಗಿದೆ. ಅನೇಕ ಕಂಪನಿಗಳು ಸಂಸ್ಥಾಪಕರು (CEO) ಭಾರತವು ತನ್ನ ಅತ್ಯುತ್ತಮ ಪ್ರತಿಭೆಯನ್ನು (Indian Talent) ವಿದೇಶಕ್ಕೆ ರಫ್ತು ಆಗುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ ದೇಶದ ಅತ್ಯಂತ ಯಶಸ್ವಿ ಉದ್ಯಮಿಗಳಲ್ಲಿ ಒಬ್ಬರಾದ ಇನ್ಫೋಸಿಸ್ ಸಂಸ್ಥಾಪಕ ಎನ್‌ ಆರ್ ನಾರಾಯಣ ಮೂರ್ತಿ (Infosys Narayana Murthy) ಒಂದು ಸಣ್ಣ ಶೇಕಡಾವಾರು ಭಾರತೀಯರು ವಿದೇಶಕ್ಕೆ ಹೋಗಿ ಅಲ್ಲಿ ಉತ್ತಮ ಸಾಧನೆ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದ್ದಾರೆ.

"ಒಂದು ಸಣ್ಣ ಶೇಕಡಾವಾರು ಭಾರತೀಯರು ವಿದೇಶಕ್ಕೆ ಹೋಗುವುದು, ಅಲ್ಲಿನ ವಾತಾವರಣದಲ್ಲಿ ಮಾದರಿ ನಾಗರಿಕರಾಗಿ (Model Citizens) ನಡೆದುಕೊಳ್ಳುವುದು ಮತ್ತು ಅವರು ಆಯ್ಕೆ ಮಾಡಿದ ಯಾವುದೇ ವೃತ್ತಿಯಲ್ಲಿ ಉತ್ತಮ ಸಾಧನೆ (Achievement) ಮಾಡುವುದು ಭಾರತದ ಬ್ರ್ಯಾಂಡ್ ಇಮೇಜ್ (Brand Image) ಅನ್ನುಹೆಚ್ಚಿಸುತ್ತದೆ. ಈ ಜನರು ನಮ್ಮ ರಾಯಭಾರಿಗಳು. ಹಾಗಾಗಿ  ಅವರು ಭಾರತದಲ್ಲಿ ಉಳಿಯಬೇಕು ಎಂದು ಹೇಳುವ ಬದಲು  ನಾನು ಅವರನ್ನು ಶ್ಲಾಘಿಸುತ್ತೇನೆ. ತಪ್ಪೇನೂ ಇಲ್ಲ" ಎಂದು ಮೂರ್ತಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ನಮ್ಮ ಯುವಕರೇ ಅಸಾಧಾರಣವಾದ ಕೆಲಸಗಳನ್ನು ಮಾಡಿದ್ದಾರೆ!

ಭಾರತದ ಪರಾಗ್ ಅಗರವಾಲ್ ಟ್ವಿಟರ್ ಸಿಇಒ ಆಗಿ ನೇಮಕಗೊಂಡ  ಬೆನ್ನಲ್ಲೇ ವಿದೇಶದಲ್ಲಿನ ಭಾರತೀಯರ ಕುರಿತು ಮೂರ್ತಿ ಕಾಮೆಂಟ್‌ ಮಾಡಿದ್ದಾರೆ. ಟ್ವೀಟರ್‌ ಸಿಇಓ ಆಗಿ ನೇಮಕಗೊಳ್ಳುವ ಮೂಲಕ ಮೈಕ್ರೋಸಾಫ್ಟ್ (Microsoft), ಗೂಗಲ್ (Google), ಐಬಿಎಂ (IBM), ಅಡೋಬ್ (Adobe) ಮತ್ತು ವಿಎಂವೇರ್‌ (VMWare) ನಂತಹ ಕಂಪನಿಗಳನ್ನು ಮುನ್ನಡೆಸುವ ಭಾರತದಲ್ಲಿ ಜನಿಸಿದ ಅತ್ಯುತ್ತಮ ನಾಯಕರ  ಪಟ್ಟಿಗೆ ಅಗರವಾಲ್ ಸೇರಿದ್ದಾರೆ. 

Meme on Parag Agrawal: ಪರಾಗ್ ಅಗರ್‌ವಾಲ್ ಮೀಮ್ ವೈರಲ್‌ : ಎಲೋನ್‌‌ ಮಸ್ಕ್ ಟ್ವೀಟ್ ಹಿಂದಿನ ಮರ್ಮವೇನು?

"ನಮ್ಮಲ್ಲಿ ಸಾಕಷ್ಟು ಭಾರತೀಯರಿದ್ದಾರೆ. ನಮ್ಮ ಯುವಕರೇ ಅಸಾಧಾರಣವಾದ ಕೆಲಸಗಳನ್ನು ಮಾಡಿದ್ದಾರೆ. ಇತ್ತೀಚೆಗೆ ಯಾವ ರೀತಿಯ ಸ್ಟಾರ್ಟಪ್‌ಗಳು  (Start Up) ಹೊರಬಂದಿವೆ ಎಂಬುದನ್ನು ನೋಡಿ. ಆದ್ದರಿಂದ ಕೆಲವು ಸಮರ್ಥ ಭಾರತೀಯರು ವಿದೇಶಕ್ಕೆ ಹೋಗಿ ಅಲ್ಲಿ ಯಶಸ್ವಿಯಾಗುವುದರ ಬಗ್ಗೆ ನಾನು ಹೆಚ್ಚು ಚಿಂತಿಸುವುದಿಲ್ಲ. ಅವರು ಕೂಡ ದೇಶಕ್ಕಾಗಿ ಬಹಳಷ್ಟು  ಕೊಡುಗೆ ನೀಡಿದ್ದಾರೆ. ಇದು ಭಾರತಕ್ಕೆ ಒಳ್ಳೆಯದು, ನಾನು ಅವರಿಗೆ ಶುಭ ಹಾರೈಸುತ್ತೇನೆ ಮತ್ತು ಅವರು ಇನ್ನೂ ಹೆಚ್ಚಿನದನ್ನು ಮಾಡಬೇಕೆಂದು ನಾನು ಬಯಸುತ್ತೇನೆ. ಅವರು ಭಾರತದ ರಾಯಭಾರಿಗಳು, "ಎಂದು ನಾರಾಯಣ ಮೂರ್ತಿ ಹೇಳಿದ್ದಾರೆ.

ಕೋವಿಡ್‌ ಬಿಕ್ಕಟ್ಟು ನಿರ್ಬಹಣೆಯಲ್ಲಿ ಸರ್ಕಾರಗಳ ಉತ್ತಮ ಕೆಲಸ!

ಸಂಶೋಧನೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಅಗತ್ಯತೆಯ ಕುರಿತು ಮಾತನಾಡಿದ ಅವರು, "ಉತ್ತಮ ಸಂಶೋಧನೆ, ಆವಿಷ್ಕಾರ ಮತ್ತು ಮೂಲಸೌಕರ್ಯಗಳಿಲ್ಲದೆ ತನ್ನ ಜನರ ಏಳಿಗೆ ಮತ್ತು ಯೋಗಕ್ಷೇಮವನ್ನು ಸುಧಾರಿಸಿದ ಯಾವುದೇ ರಾಷ್ಟ್ರದ ಬಗ್ಗೆ ನನಗೆ ತಿಳಿದಿಲ್ಲ. ಪ್ರತಿ ದೇಶಗಳು ತಮ್ಮ ಬುದ್ಧಿಜೀವಿಗಳನ್ನು ಗೌರವಿಸಿವೆ. ‌ಅವರ ಏಳಿಗೆಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಿ, ಅವರ ಜೀವನವನ್ನು ದೈಹಿಕವಾಗಿ ಆರಾಮದಾಯಕವಾಗಿಸಿದೆ. ಇನ್ಫೋಸಿಸ್ ಅವಾರ್ಡ್ (Infosys Award) ನಮ್ಮ ದೇಶದ ಈ ಮಹತ್ವದ ಕಾರ್ಯದಲ್ಲಿ ಒಂದು ಸಣ್ಣ ಪ್ರಯತ್ನವಾಗಿದೆ" ಎಂದು ಅವರು ಹೇಳಿದ್ದಾರೆ.

Twitterನಲ್ಲಿ ಕ್ಷಣಾರ್ಧದಲ್ಲಿ ಮಾಯವಾದ್ರು ಲಕ್ಷಾಂತರ ಫಾಲೋವರ್ಸ್‌, CEO ಪರಾಗ್ ಮೇಲೆ ಬಳಕೆದಾರ ಗರಂ!

ಕೋವಿಡ್ 19 (Covid 19) ನಮ್ಮ ವಿಜ್ಞಾನಿಗಳು, ಎಂಜಿನಿಯರ್‌ಗಳು ಮತ್ತು ಉದ್ಯಮಿಗಳಿಗೆ ತಮ್ಮ ಸಂಶೋಧನಾ ಯಶಸ್ಸಿನ ಸಾಮರ್ಥ್ಯವನ್ನು ಪ್ರದರ್ಶಿಸಲು ಅವಕಾಶವನ್ನು ಸೃಷ್ಟಿಸಿದೆ. ಕೇಂದ್ರ ಹಾಗೂ ರಾಜ್ಯ  ಸರ್ಕಾರಗಳು ಸಹ ಈ ಸಂದರ್ಭಲ್ಲಿ ಉತ್ತಮ ಕಾರ್ಯ ಮಾಡಿವೆ ಮತ್ತು 1 ಬಿಲಿಯನ್‌ಗೂ ಅಧಿಕ ಕೊರೋನಾ ಲಸಿಕೆ (Corona Vaccine) ನೀಡಿವೆ. ಇದು ಯಾವುದೇ ಮಾನದಂಡಗಳಿಂದಲೂ ಶ್ಲಾಘನೀಯ ಸಾಧನೆಯಾಗಿದೆ. ಪ್ರಜಾಪ್ರಭುತ್ವ ಮತ್ತು ಪಾರದರ್ಶಕ ಜಗತ್ತಿನಲ್ಲಿ ಬೇರೆ ಯಾವುದೇ ದೇಶವು ಇದನ್ನು ಸಾಧಿಸಿಲ್ಲ. ಸಾಂಕ್ರಾಮಿಕ ರೋಗದಿಂದ ಉಂಟಾದ ಹಿನ್ನಡೆಯಿಂದ ವ್ಯವಹಾರಗಳು ಕೂಡ ಶೀಘ್ರವಾಗಿ ಚೇತರಿಸಿಕೊಂಡಿವೆ"  ಎಂದು ಅವರು ಹೇಳಿದ್ದಾರೆ.

"ಕೋಟಿಗೂ ಹೆಚ್ಚು ಜನರಿಗೆ ಮಾಸ್ಕ್, ಲಸಿಕೆಗಳು ಮತ್ತು ಸೋಂಕುನಿವಾರಕಗಳನ್ನು ಉತ್ಪಾದಿಸುವುದು ಕ್ಷುಲ್ಲಕ ಕೆಲಸವಲ್ಲ. ಈ ತುರ್ತು ಪರಿಸ್ಥಿತಿಯಲ್ಲಿ ದೇಶವು ಆಹಾರ ದಾಸ್ತಾನುಗಳನ್ನು ಚೆನ್ನಾಗಿ ನಿರ್ವಹಿಸಿದೆ. 50-60  ರ ದಶಕದಗಳಂತೆ ಈ ಸಂದರ್ಭದಲ್ಲಿ ನಾವು ಯಾವುದೇ ಅಭಿವೃದ್ಧಿ ಹೊಂದಿದ ರಾಷ್ಟ್ರದ ಸಹಾಯವನ್ನು  ಬಯಸಲಿಲ್ಲ. ಈ ಬಿಕ್ಕಟ್ಟನ್ನು ನಿವಾರಿಸಲು ನಾವು ಆಸ್ಪತ್ರೆಯ ಹಾಸಿಗೆಗಳು, ಐಸಿಯು ವಾರ್ಡ್‌ಗಳು, 2 ಆಮ್ಲಜನಕ ಕೇಂದ್ರೀಕರಣಗಳನ್ನು ತ್ವರಿತವಾಗಿ ಸಜ್ಜುಗೊಳಿಸಿದ್ದೇವೆ.  ನಮ್ಮ ಜನರು ತಮ್ಮ ಸಾಮರ್ಥ್ಯ ಮತ್ತು ಬದ್ಧತೆಯನ್ನು ಪ್ರದರ್ಶಿಸಲು ಈ ಬಿಕ್ಕಟ್ಟು ಇದಕ್ಕೆ ಅವಕಾಶವನ್ನು ನೀಡಿದೆ.  ಎಂದು ನಾರಾಯಣ ಮೂರ್ತಿ ತಿಳಿಸಿದ್ದಾರೆ.

ಭಾರತಕ್ಕೆ ಇನ್ನೂ ಅನೇಕ ಸಮಸ್ಯೆಗಳು ಕಾಡುತ್ತಿವೆ!

ಭಾರತವು ವಿಜ್ಞಾನ ಮತ್ತು ಎಂಜಿನಿಯರಿಂಗ್‌ನಲ್ಲಿ ಪ್ರಗತಿ ಸಾಧಿಸಿದ್ದರೂ ಸಹ, ದೇಶವು ಕಲುಷಿತ ನದಿಗಳು, ಕುಡಿಯುವ ನೀರಿನ ಕೊರತೆ, ಕಡಿಮೆ ಗುಣಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ತಪ್ಪಿಸಬಹುದಾದ ಹಸಿವು, ಕಡಿಮೆ ಗುಣಮಟ್ಟದ ಸಾರ್ವಜನಿಕ ಆರೋಗ್ಯ ಮುಂತಾದ ದೊಡ್ಡ ಸವಾಲುಗಳನ್ನು ಹೊಂದಿದೆ ಎಂದು ಮೂರ್ತಿ ಹೇಳಿದ್ದಾರೆ.

ಇನ್ಫಿ ಸಂಸ್ಥಾಪಕ ಮೂರ್ತಿ, ಸುಧಾಮೂರ್ತಿ ಜೀವನ ಚರಿತ್ರೆ ಶೀಘ್ರ ತೆರೆಗೆ

"ಈ ಸಮಸ್ಯೆಗಳನ್ನು ಪರಿಹರಿಸುವ ಜವಾಬ್ದಾರಿ ನಮ್ಮ ಮುಂದಿನ ಪೀಳಿಗೆಯನ್ನು ಹೊರತುಪಡಿಸಿ ಬೇರೆ ಯಾರದ್ದೂ ಅಲ್ಲ. ಪ್ರಪಂಚವು ಕ್ಷಿಪ್ರಗತಿಯಲ್ಲಿ ಮುನ್ನಡೆಯುತ್ತಿದೆ. ಅದಕ್ಕಾಗಿಯೇ ಶಿಕ್ಷಣ ಮತ್ತು ಕಲಿಕೆಯು ನಮ್ಮ ಯಶಸ್ಸಿಗೆ ಬಹಳ ನಿರ್ಣಾಯಕವಾಗಲಿದೆ. ಈ ಸನ್ನಿವೇಶದಲ್ಲಿ ಕುತೂಹಲ, ಪ್ರಶ್ನಾರ್ಥಕತೆ, ವಿಮರ್ಶಾತ್ಮಕ, ವಿಶ್ಲೇಷಣಾತ್ಮಕ ಮತ್ತು ಸ್ವತಂತ್ರ ಚಿಂತನೆ, ನಿರಂತರ ಕಲಿಕೆ ಮತ್ತು ಪೂರ್ವಭಾವಿ ಸಮಸ್ಯೆ-ಪರಿಹರಿಸುವಂತಹ ಮನಸ್ಥಿತಿಯ ಅಗತ್ಯವಿರುತ್ತದೆ.  

"ಅಂತಹ ಮನಸ್ಥಿತಿ ಭಾರತೀಯರ ಉತ್ಸಾಹ ಮತ್ತು ಏಕತೆಯ ವಾತಾವರಣದಲ್ಲಿ ಮಾತ್ರ ಬೆಳೆಯುತ್ತದೆ. ಯಾವುದೇ ರಾಷ್ಟ್ರಗಳು ಜನರ ಸಾಮಾನ್ಯ ಸಮಸ್ಯೆಗಳನ್ನು ಪರಿಹರಿಸುವ  ಮೊದಲು ನಮ್ಮ ಯುವಕರು ದೊಡ್ಡ ಸವಾಲುಗಳನ್ನು ಪರಿಹರಿಸಬೇಕೆಂದು ನಾನು ಬಯಸುತ್ತೇನೆ. ಅಭಿವೃದ್ಧಿ ಹೊಂದಿದ ದೇಶಗಳ ವಿದ್ಯಾರ್ಥಿಗಳು  ಅಧ್ಯಯನಕ್ಕೆ  ಭಾರತಕ್ಕೆ  ಬರುವಂತಹ ವಾತಾವರಣ ನಿರ್ಮಾಣವಾಗಬೇಕು ಎಂದು ನಾನು ಬಯಸುತ್ತೇನೆ" ಎಂದು  ನಾರಾಯಣಮೂರ್ತಿ ಹೇಳಿದ್ದಾರೆ.

Latest Videos
Follow Us:
Download App:
  • android
  • ios