reproduction virgin birth ಅಮೆರಿಕದ ಷಿಕಾಗೋದಲ್ಲಿರುವ ಬ್ರೂಕ್‌ಫೀಲ್ಡ್‌ ಮೃಗಾಲಯದಲ್ಲಿ ಅಚ್ಚರಿಯ ವಿದ್ಯಮಾನ ಘಟಿಸಿದೆ. ಕಳೆದ ನಾಲ್ಕು ವರ್ಷಗಳಿಂದ ಯಾವುದೇ ಗಂಡು ಜಾತಿಯ ಸಂಪರ್ಕವಿಲ್ಲದೆ, ಗಂಡು ಜಾತಿಯ ವೀರ್ಯವಿಲ್ಲದೆ ಶಾರ್ಕ್‌ ಮರಿಗೆ ಜನ್ಮ ನೀಡಿದೆ.

ನ್ಯೂಯಾರ್ಕ್‌ (ನ.10): ಜೀವ ಜಗತ್ತಿನಲ್ಲಿ ಮನುಷ್ಯರು ನಿರೀಕ್ಷೆಯೇ ಮಾಡದ, ಮನುಷ್ಯನ ಅಚ್ಚರಿಗೂ ನಿಲುಕದ ಸಾಕಷ್ಟು ಘಟನೆಗಳು ನಡೆಯುತ್ತದೆ. ಅಂಥದ್ದೊಂದು ಘಟನೆ ಅಮೆರಿಕಾದ ಷಿಕಾಗೋದ ಬ್ರೂಕ್‌ಫೀಲ್ಡ್‌ ಮೃಗಾಲಯದಲ್ಲಿ ಘಟಿಸಿದೆ. ಈ ಮೃಗಾಲಯದಲ್ಲಿ"ಲಿವಿಂಗ್ ಕೋಸ್ಟ್ಸ್" ವಿಭಾಗದಲ್ಲಿ ಪ್ರದರ್ಶನಕ್ಕೆ ಇಡಲಾಗಿರುವ ಶಾರ್ಕ್‌ವೊಂದು ಕಳೆದ ಆಗಸ್ಟ್‌ನಲ್ಲಿ ಒಂದು ಮರಿಗೆ ಜನ್ಮ ನೀಡಿದೆ. ಇದರಲ್ಲೇನು ವಿಶೇಷ ಅಂತೀರಾ? ತಾಯಿ ಶಾರ್ಕ್‌ ಎಂದಿಗೂ ಗಂಡು ಜಾತಿಯ ಶಾರ್ಕ್‌ ಜೊತೆ ಸಂತಾನೋತ್ಪತ್ತಿಯ ಕ್ರಿಯೆಯಲ್ಲಿ ಭಾಗಿಯಾಗಿಯೇ ಇರಲಿಲ್ಲ. ಮೃಗಾಲಯದ ಅಧಿಕಾರಿಗಳು ಹೇಳುವ ಪ್ರಕಾರ ಫಲವತ್ತಾಗಿಸದ ಅಂಡಾಣು ಅಂದರೆ ಅನ್‌ಫರ್ಟಿಲೈಜ್ಡ್‌ ಎಗ್‌ನಿಂದ ಈ ಮರಿ ಜನಿಸಿದೆ ಎಂದಿದ್ದಾರೆ. ಇಂಥ "ವರ್ಜಿನ್‌ ಬರ್ತ್‌" ಅನ್ನು ಪಾರ್ಥೆನೋಜೆನೆಸಿಸ್ ಎಂದು ಕರೆಯಲ್ಪಡಲಾಗುತ್ತದೆ. ಸ್ತ್ರೀ ಅಲೈಂಗಿಕ ಸಂತಾನೋತ್ಪತ್ತಿ ಪ್ರಕ್ರಿಯೆ, ಸಸ್ಯಗಳು, ಕೀಟಗಳು, ಸರೀಸೃಪಗಳು ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಕೆಲವು ಜೀವಿಗಳಲ್ಲಿ ಸಾಮಾನ್ಯವಾಗಿದೆ, ಆದರೆ ಶಾರ್ಕ್ ಸೇರಿದಂತೆ ಸಂಕೀರ್ಣ ಕಶೇರುಕಗಳಲ್ಲಿ ಅಥವಾ ಸಸ್ತನಿಗಳಲ್ಲಿ ಇದರ ಪ್ರಮಾಣ ಬಹಳ ಕಡಿಮೆ. ಶೆಡ್ ಅಕ್ವೇರಿಯಂನಲ್ಲಿರುವ ಜೀಬ್ರಾ ಶಾರ್ಕ್ ಆಗಸ್ಟ್‌ 23ಕ್ಕೆ ಮರಿಗೆ ಜನ್ಮ ನೀಡಿದೆ.

ಇದಕ್ಕೂ ಮುನ್ನ ಐದು ತಿಂಗಳ ಕಾಲ ಇದು ಗರ್ಭಾವಸ್ಥೆಯನ್ನು ಹೊಂದಿತ್ತು. ಮೂಲಗಳ ಪ್ರಕಾರ ಸೆರೆಯಲ್ಲಿರುವ ಅಂದರೆ ಮಗಾಲಯಗಳಲ್ಲಿರುವ ಎಪೌಲೆಟ್ ಶಾರ್ಕ್ (ಹೆಮಿಸ್ಕಿಲಿಯಮ್ ಒಸೆಲ್ಲಾಟಮ್) ಗೆ ಫಲೀಕರಣವಿಲ್ಲದೆ ನಡೆದಿರುವ 2ನೇ ಸಂತಾನೋತ್ಪತ್ತಿ ಇದಾಗಿದೆ. ಮೃಗಾಲಯದ ಅನಿಮಲ್‌ ಕೇರ್‌ನ ಸಿಬ್ಬಂದಿ ಎರಡು ತಿಂಗಳ ಕಾಲ ಈ ಶಾರ್ಕ್ಅನ್ನು ಸಾರ್ವಜನಿಕರಿಂದ ದೂರವಿಟ್ಟು ಮರಿಯನ್ನು ಮೇಲ್ವಿಚಾರಣೆ ಮಾಡಿದ್ದರು. ಆದರೆ ಈಗ 5 ರಿಂದ 6-ಇಂಚಿನ (13 ರಿಂದ 15 ಸೆಂಟಿಮೀಟರ್) ಹೆಣ್ಣು ಶಾರ್ಕ್ ಅನ್ನು ಮೃಗಾಲಯದ "ಲಿವಿಂಗ್ ಕೋಸ್ಟ್ಸ್" ವಿಭಾಗದಲ್ಲಿ ಪ್ರದರ್ಶಿಸಲಾಗುವುದು ಎಂದು ಹೇಳಿದ್ದಾರೆ.

ಬ್ರೂಕ್‌ಫೀಲ್ಡ್ ಮೃಗಾಲಯದ ಸಿಬ್ಬಂದಿ ಬುಧವಾರ (ನ. 9) ಫೇಸ್‌ಬುಕ್ ಪೋಸ್ಟ್‌ನಲ್ಲಿ ಈ ಬಗ್ಗೆ ಬರೆದುಕೊಂಡಿದೆ. ಈ ಎಪೌಲೆಟ್ ಶಾರ್ಕ್ ಅತ್ಯಾಕರ್ಷಕ ಕಥೆಯನ್ನು ಹೊಂದಿದೆ ಎಂದು ಬರೆದುಕೊಂಡಿದೆ. "ಅತ್ಯಂತ ಆಸಕ್ತಿದಾಯಕ ಸಂಗತಿಯೆಂದರೆ ಈ ಭ್ರೂಣವು ಪುರುಷ ಫಲೀಕರಣದ ಅಗತ್ಯವಿಲ್ಲದೇ ಅಭಿವೃದ್ಧಿಗೊಂಡಿದೆ. ಪಾರ್ಥೆನೋಜೆನೆಸಿಸ್ ಎಂದು ಕರೆಯಲ್ಪಡುವ ಈ ಪ್ರಕ್ರಿಯೆಯು ಶಾರ್ಕ್‌ಗಳಂತಹ ಸಂಕೀರ್ಣ ಕಶೇರುಕಗಳಿಗೆ ಬಹಳ ಅಪರೂಪವಾಗಿದೆ' ಎಂದು ತಿಳಿಸಿದೆ. 

ಪಾರ್ಥೆನೋಜೆನೆಸಿಸ್, ಗ್ರೀಕ್‌ನಲ್ಲಿ "ಕನ್ಯೆಯ ಸೃಷ್ಟಿ" ಎನ್ನುವ ಅರ್ಥ ನೀಡುತ್ತದೆ. ಇದು ಸಾಮಾನ್ಯವಾಗಿ ಲೈಂಗಿಕವಾಗಿ ಸಂತಾನೋತ್ಪತ್ತಿ ಮಾಡುವ ಜಾತಿಗಳಲ್ಲಿ ಒಂದು ರೀತಿಯ ಅಲೈಂಗಿಕ ಸಂತಾನೋತ್ಪತ್ತಿಯಾಗಿದೆ. ಮೃಗಾಲಯದಂಥ ಸೆರೆಯಲ್ಲಿರುವ ಪಕ್ಷಿಗಳು, ಹಲ್ಲಿಗಳು ಮತ್ತು ಹಾವುಗಳಲ್ಲಿ ಇದನ್ನು ಗಮನಿಸಬಹುದು. ಮತ್ತು ಜೂನ್‌ನಲ್ಲಿ ವಿಜ್ಞಾನಿಗಳು ಮೊಸಳೆಯಲ್ಲಿ ಮೊದಲ ವರ್ಜಿನ್‌ ಬರ್ತ್‌ಅನ್ನು ದಾಖಲಿಸಿದ್ದಾರೆ. ಪಾರ್ಥೆನೋಜೆನೆಸಿಸ್ ಸಾಮರ್ಥ್ಯವಿರುವ ಜಾತಿಗಳ ಹೆಣ್ಣುಗಳು ಸಂತಾನೋತ್ಪತ್ತಿಗೆ ಅಗತ್ಯವಿರುವ ಎಲ್ಲಾ ಆನುವಂಶಿಕ ಮಾಹಿತಿಯನ್ನು ಒಳಗೊಂಡಿರುವ ಮೊಟ್ಟೆಗಳನ್ನು ಉತ್ಪಾದಿಸಬಹುದು. ಸಸ್ತನಿಗಳು ಅಲೈಂಗಿಕವಾಗಿ ಸಂತಾನೋತ್ಪತ್ತಿ ಮಾಡಲು ಸಾಧ್ಯವಿಲ್ಲ, ಏಕೆಂದರೆ ಮನುಷ್ಯರನ್ನು ಒಳಗೊಂಡಂತೆ ಸಸ್ತನಿಗಳಿಗೆ ವೀರ್ಯದಿಂದ ಕೆಲವು ಜೀನ್‌ಗಳು ಬರುತ್ತವೆ.

ಬಿಲಿಯನೇರ್‌ ಉದ್ಯಮಿಯನ್ನು ವರಿಸಿದ ಮುನಿರತ್ನ ಕುರುಕ್ಷೇತ್ರ ಚಿತ್ರದ ಹಾಟ್‌ ನಟಿ!

2019ರಲ್ಲಿ ತಾಯಿ ಶಾರ್ಕ್‌ ಬ್ರೂಕ್‌ಫೀಲ್ಡ್‌ ಮೃಗಾಲಯಕ್ಕೆ ನ್ಯೂ ಇಂಗ್ಲೆಂಡ್‌ ಅಕ್ವೇರಿಯಂನಿಂದ ಬಂದಿತ್ತು. ಇದೇ ಸ್ಥಳದಲ್ಲಿ ಎಪೌಲೆಟ್ ಶಾರ್ಕ್‌ನ ಮೊದಲ ವರ್ಜಿನ್‌ ಬರ್ತ್‌ ಗುರುತಿಸಲಾಗಿದೆ. ಈ ಶಾರ್ಕ್‌ಅನ್ನು ಗಂಡು ಜಾತಿಯ ಸಂಪರ್ಕಕ್ಕೆ ಬಿಟ್ಟಿರಲಿಲ್ಲ. ಕಳೆದ ವರ್ಷ ತನ್ನ 7ನೇ ವಯಸ್ಸಿಗೆ ಇದು ಲೈಂಗಿಕ ಪ್ರಬುದ್ಧತೆ ಪಡೆದುಕೊಂಡಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಂದಿನಿಂದ ಪ್ರತಿ ತಿಂಗಳು ಇದು 2 ರಿಂದ 4 ಮೊಟ್ಟೆಗಳನ್ನು ಇಡುತ್ತಿತ್ತು ಎಂದಿದ್ದಾರೆ.

ಏಳುವರ್ಷಗಳ ಕಾಲ ಶನಿಯ ಉಂಗುರ ಕಣ್ಮರೆ, ಸಾಡೇ ಸಾಥ್ ಇರೋರಿಗೆ ಶುಭವಾಗುತ್ತಾ?