ಏಳುವರ್ಷಗಳ ಕಾಲ ಶನಿಯ ಉಂಗುರ ಕಣ್ಮರೆ, ಸಾಡೇ ಸಾಥ್ ಇರೋರಿಗೆ ಶುಭವಾಗುತ್ತಾ?
Earth View of Saturns rings ನಭೋಮಂಡಲದಲ್ಲಿ ಭೂಮಿಗಿಂತ ಸುಂದರವಾಗಿ ಕಾಣುವ ಇನ್ನೊಂದು ಗ್ರಹವಿದ್ದರೆ, ಅದು ಶನಿಗ್ರಹ. ಅದಕ್ಕೆ ಕಾರಣ ಶನಿಗ್ರಹಕ್ಕೆ ಇರುವ ಸುಂದರ ಸಂಕಿರ್ಣ ಉಂಗುರಗಳು. ಆದರೆ, ಇವುಗಳು ಕ್ರಮೇಣವಾಗ ಮರೆಯಾಗುತ್ತಿವೆ. 2025 ರ ಹೊತ್ತಿಗೆ ಅವು ಭೂಮಿಯಿಂದ ಗೋಚರವಾಗೋದಿಲ್ಲ.
ಖಗೋಳಶಾಸ್ತ್ರಜ್ಞರು, ಖಗೋಳ ಫೋಟೋಗ್ರಫಿಯ ಉತ್ಸಾಹಿಗಳು ಹಾಗೂ ಬಾಹ್ಯಾಕಾಶದ ಉತ್ಸಾಹಿಗಳಿಗೆ ಬೇಸರದ ಸುದ್ದಿ ಇಲ್ಲೊಂದಿದೆ. ಶನಿಗ್ರಹ ಹಾಗೂ ಅದರ ಸಾಂಪ್ರದಾಯಿಕ ಉಂಗುರಗಳ ಬಗ್ಗೆ ಸದಾಕಾಲ ಅಚ್ಚರಿಯಲ್ಲಿಯೇ ಇರುವ ಇವರಿಗೆ 2025ರಿಂದ ಭೂಮಿಯಿಂದ ಶನಿಗ್ರಹದ ಉಂಗುರಗಳು ಕಾಣಿಸೋದಿಲ್ಲ. ಶನಿಗ್ರಹದ ಉಂಗುರಗಳ ವೈಭವವನ್ನು ಜಗತ್ತಿಗೆ ತಿಳಿಸುವ ಅವರ ಕ್ಯಾಮೆರಾಗಳು ಕಿರಿದಾಗುತ್ತಿದೆ.
2025ರ ವೇಳೆ ಭೂಮಿಯಿಂದ ಶನಿಗ್ರಹದ ಉಂಗುರಗಳು ಕಣ್ಮರೆಯಾಗುತ್ತದೆ. ಹಾಗಂತ ಈ ಉಂಗುರಗಳು ಇನ್ನೆಂದೂ ಕಾಣಿಸಿಕೊಳ್ಳುವುದಿಲ್ಲ ಎಂದರ್ಥವಲ್ಲ.
ಏಳು ವರ್ಷಗಳ ಕಾಲ ಶನಿಗ್ರಹದ ಉಂಗುರಗಳು ಭೂಮಿಯಿಂದ ಕಾಣಿಸೋದಿಲ್ಲ. 2032ರ ವೇಳೆಗೆ ಮತ್ತೆ ಇವುಗಳು ಗೋಚರವಾಗುತ್ತದೆ ಎಂದು ತಿಳಿಸಲಾಗಿದೆ.
Earth.com ಪ್ರಕಾರ, "ಶನಿಯು ಭೂಮಿಯೊಂದಿಗೆ ಸಮಾನವಾದ ಅಂಚನ್ನು ಹೊಂದಿರುತ್ತದೆ. ಇದರಿಂದಾಗಿ, ಅದರ ಅದ್ಭುತವಾದ ಉಂಗುರಗಳನ್ನು ವಾಸ್ತವಿಕವಾಗಿ ಅಗೋಚರವನ್ನಾಗಿ ಮಾಡುತ್ತದೆ. ಇದು ಸಾಕರ್ ಮೈದಾನದ ದೂರದ ತುದಿಯಲ್ಲಿ ಇರಿಸಿದಾಗ ಕಾಗದದ ಹಾಳೆಯನ್ನು ಗುರುತಿಸಲು ಮಾಡುವ ಪ್ರಯತ್ನದಂತೆಯೇ ಇರುತ್ತದೆ. ಅರ್ಥಾತ್ ಶನಿಯ ಉಂಗುರಗಳು ಇದ್ದರೂ, ಭೂಮಿಯಿಂದ ಅದನ್ನು ನೋಡಲು ಬಹುತೇಕವಾಗಿ ಸಾಧ್ಯವೇ ಆಗೋದಿಲ್ಲ ಎಂದು ವರದಿ ಮಾಡಿದೆ.
ಶನಿಗ್ರಹದ ಉಂಗುರುಗಳು ಅದ್ಭುತವಾಗಿ ಅಗಲವಾಗಿದೆ, ಅಂದಾಜಿನ ಪ್ರಕಾರ 30 ಅಡಿ ಎತ್ತರವನ್ನೂ ಹೊಂದಿದೆ. ಆದರೆ, ಪ್ರತಿ 15 ವರ್ಷಗಳಿಗೊಮ್ಮೆ, ಉಂಗುರಗಳು ಬಹುತೇಕ ಅಗೋಚರವಾಗುತ್ತವೆ, ಅವುಗಳು ಕಣ್ಮರೆಯಾದ ನೋಟವನ್ನು ಸೃಷ್ಟಿಸುತ್ತವೆ.
ಈ ವಿದ್ಯಮಾನವನ್ನು ಶನಿಯ ವಿಷುವತ್ ಸಂಕ್ರಾಂತಿ (Saturnian equinox) ಎಂದು ಕರೆಯಲಾಗುತ್ತದೆ. ಕೊನೆಯ ಬಾರಿಗೆ ಈ ಖಗೋಳ ಘಟನೆಯು ಸೆಪ್ಟೆಂಬರ್ 2009 ರಲ್ಲಿ ಸಂಭವಿಸಿತ್ತು.
ಮುಂದಿನ ಶನಿಗ್ರಹದ ವಿಷುವತ್ ಸಂಕ್ರಾಂತಿಯು 2025ರ ಮೇ 6 ರಂದು ನಡೆಯಲಿದೆ ಎಂದು ಯುರೋಪಿಯನ್ ಬಾಹ್ಯಾಕಾಶ ಏಜೆನ್ಸಿ ಇತ್ತೀಚೆಗೆ ತಿಳಿಸಿದೆ.
ಶನಿಯ ಉಂಗುರಗಳು ಮತ್ತೆ ಕಾಣಿಸುತ್ತವೆಯೇ?: ಈ ಉಂಗುರಗಳು ಮತ್ತೆ ಗೋಚರಿಸುತ್ತವೆ, ಆದರೆ ಇದು ಸಾಧ್ಯವಾಗುವುದು 2032ರಲ್ಲಿ.
ಶನಿಯು ತನ್ನ 29.5 ವರ್ಷಗಳ ಕಕ್ಷೆಯನ್ನು ಮುಂದುವರೆಸಿದಾಗ ಕ್ರಮೇಣವಾಗಿ ಓರೆಯಾಗುತ್ತದೆ, ಮತ್ತೊಮ್ಮೆ ಎದುರು ಬದಿಯಲ್ಲಿ ತನ್ನ ಉಂಗುರಗಳನ್ನು ಬಹಿರಂಗಪಡಿಸುತ್ತದೆ. ಈ ಪ್ರದರ್ಶನವು 2032 ರಲ್ಲಿ ಉತ್ತುಂಗಕ್ಕೇರುತ್ತದೆ.
ನಾಸಾ ಪ್ರಕಾರ ಶನಿಯ ಉಂಗುರಗಳು ಅಗಾಧ ಮತ್ತು ಸಂಕೀರ್ಣ ರಚನೆಗಳನ್ನು ಹೊಂದಿವೆ. ಶನಿಯ ಉಂಗುರಗಳಲ್ಲಿನ ಬಹುಪಾಲು ಕಣಗಳು ನೀರಿನ ಮಂಜುಗಡ್ಡೆಯಿಂದ ಮಾಡಲ್ಪಟ್ಟಿದೆ
ಶನಿಗ್ರಹದ ಉಂಗುರಗಳಲ್ಲಿನ ವಸ್ತುಗಳು ಮೈಕ್ರಾನ್‌ಗಳಷ್ಟು ಸಣ್ಣದಾಗಿ ಹತ್ತಾರು ಮೀಟರ್‌ಗಳವರೆಗೆ ದೊಡ್ಡದಾದ ಬಂಡೆಗಳ ಗಾತ್ರವನ್ನು ಹೊಂದಿರುತ್ತವೆ.
ಉಂಗುರಗಳು ಎಲ್ಲಾ ಮಾಪಕಗಳಲ್ಲಿ ಗಮನಾರ್ಹ ಪ್ರಮಾಣದ ರಚನೆಯನ್ನು ಪ್ರದರ್ಶಿಸುತ್ತವೆ; ಈ ರಚನೆಯ ಹೆಚ್ಚಿನ ಭಾಗವು ಇನ್ನೂ ತಿಳಿದಿಲ್ಲ ಆದರೆ ಶನಿಯ ಹಲವಾರು ಉಪಗ್ರಹಗಳೊಂದಿಗೆ ಗುರುತ್ವಾಕರ್ಷಣೆಯ ಪರಸ್ಪರ ಕ್ರಿಯೆಗಳಿಗೆ ಸಂಪರ್ಕ ಹೊಂದಿದೆ ಎಂದು ಭಾವಿಸಲಾಗಿದೆ.
ಇದರ ಬೆನ್ನಲ್ಲಿಯೇ ಜ್ಯೋತಿಷಿಗಳು ಕೂಡ ಇದರಿಂದಾ ಆಗಬಹುದಾದ ಪರಿಣಾಮಗಳ ಬಗ್ಗೆ ಗಮನ ನೀಡಿದ್ದಾರೆ. ಶನಿಗ್ರಹದ ಉಂಗುರಗಳು ಕಣ್ಮರೆಯಾಗಲಿರುವ ಕಾರಣ ಸಾಡೇ ಸಾಥ್ ಇರೋರಿಗೆ ಇದರಿಂದ ಏನಾದರೂ ಶುಭವಾಗುತ್ತಾ ಎನ್ನುವ ಬಗ್ಗೆ ಯೋಚನೆ ಮಾಡುತ್ತಿದ್ದಾರೆ.