ಸಮುದ್ರದಾಳದಲ್ಲಿ 74 ದಿನ ಕಳೆದು ದಾಖಲೆ ಮುರಿದ ಪ್ರೊಫೆಸರ್
ಅಮೆರಿಕಾದ ಪ್ರೊಫೆಸರ್ ಒಬ್ಬರು ವಿಶೇಷವಾದ ದಾಖಲೆ ಮಾಡಿದ್ದಾರೆ. ಬರೋಬ್ಬರಿ 74 ದಿನಗಳ ಕಾಲ ನೀರೊಳಗೆ ವಾಸ ಮಾಡುವ ಮೂಲಕ ಅವರು ಈ ಸಾಧನೆ ಮಾಡಿದ್ದು ವಿಶ್ವ ದಾಖಲೆ ಪುಟ ಸೇರಿದ್ದಾರೆ.
ಫ್ಲೋರಿಡಾ: ಅಮೆರಿಕಾದ ಪ್ರೊಫೆಸರ್ ಒಬ್ಬರು ವಿಶೇಷವಾದ ದಾಖಲೆ ಮಾಡಿದ್ದಾರೆ. ಬರೋಬ್ಬರಿ 74 ದಿನಗಳ ಕಾಲ ನೀರೊಳಗೆ ವಾಸ ಮಾಡುವ ಮೂಲಕ ಅವರು ಈ ಸಾಧನೆ ಮಾಡಿದ್ದು ವಿಶ್ವ ದಾಖಲೆ ಪುಟ ಸೇರಿದ್ದಾರೆ. ಫ್ಲೋರಿಡಾ ವಿಶ್ವವಿದ್ಯಾನಿಲಯದ ಜೋಸೆಫ್ ಡಿಟುರಿ ಎಂಬುವವರೇ ಹೀಗೆ ಸಾಧನೆ ಮಾಡಿದವರು. ಜೂಲ್ಸ್‌ನ ಅಂಡರ್‌ಸೀ ಲಾಡ್ಜ್‌ನಲ್ಲಿ ಅವರು 74 ದಿನಗಳ ಕಾಲ ಕಳೆದಿದ್ದು, ಅಗಾಧವಾದ ಜೀವಶಾಸ್ತ್ರದ ಅಧ್ಯಯನದ ಭಾಗವಾಗಿ ಅವರು ನೀರಿನಾಳದಲ್ಲಿ ವಾಸ ಮಾಡಲು ಆರಂಭಿಸಿದ್ದು ಅದನ್ನು 100 ದಿನಗಳ ಕಾಲ ಮುಂದುವರಿಸಲು ನಿರ್ಧರಿಸಿದ್ದಾರೆ.
ಸಿಬಿಎಸ್ ನ್ಯೂಸ್ ಪ್ರಕಾರ, ಜೋಸೆಫ್ ಡಿಟುರಿ, ಜೂಲ್ಸ್‌ನ ಅಂಡರ್‌ಸೀ ಲಾಡ್ಜ್‌ನಲ್ಲಿ 74 ದಿನಗಳ ಕಾಲ ವಾಸಿಸುವ ಮೂಲಕ ವಿಶ್ವ ದಾಖಲೆಯೊಂದನ್ನು ಮುರಿದಿದ್ದಾರೆ. ಗಮನಾರ್ಹವಾಗಿ, ಡಾ ಡಿಟುರಿ ಮಾರ್ಚ್ 1 ರಂದು ಸಮುದ್ರದಾಳವನ್ನು ಪ್ರವೇಶಿಸಿದರು. ಮತ್ತು ಜೂನ್ 9 ರವರೆಗೆ 'ಪ್ರಾಜೆಕ್ಟ್ ನೆಪ್ಚೂನ್ 100' ರ ಭಾಗವಾಗಿ ಮತ್ತೆ ಯಾನ ನಡೆಸಲು ಯೋಜಿಸಿದ್ದಾರೆ. ಈ ಹಿಂದೆ 2014 ರಲ್ಲಿ ಇತರ ಇಬ್ಬರು ಪ್ರಾಧ್ಯಾಪಕರು ಇದೇ ರೀತಿಯ ದಾಖಲೆ ನಿರ್ಮಿಸಿದ್ದರು. ಆ ಸಂದರ್ಭದಲ್ಲಿ ಅವರು ಸಮುದ್ರದಾಳದಲ್ಲಿ ಕಳೆದಿದ್ದು ಬರೋಬ್ಬರಿ 73 ದಿನಗಳು.
drdeepsea ಎಂಬ ಇನ್ಸ್ಟಾಗ್ರಾಮ್ ಖಾತೆ ಹೊಂದಿರುವ ಡಿಟುರಿ ಅವರು ಈ ಬಗ್ಗೆ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದು, ಇಂದು ನೀರಿನಾಳದಲ್ಲಿ ದಾಖಲೆ ಮುರಿಯುವ 73ನೇ ದಿನವನ್ನು ಕಳೆಯುತ್ತಿದ್ದು, ಅನ್ವೇಷಣೆಗಾಗಿ ನನ್ನ ಕುತೂಹಲ ನನ್ನನ್ನು ಇಲ್ಲಿಗೆ ಕರೆದೊಯ್ದಿರುವುದಕ್ಕೆ ವಿನಮ್ರನಾಗಿದ್ದೇನೆ. ಮುಂಬರುವ ಪೀಳಿಗೆಗೆ ಮಾತ್ರವಲ್ಲ ಸಮುದ್ರದೊಳಗಿನ ಜೀವನವನ್ನು ಅಧ್ಯಯನ ಮಾಡುವ ಪ್ರಪಂಚದಾದ್ಯಂತದ ವಿಜ್ಞಾನಿಗಳಿಗೂ ಸ್ಪೂರ್ತಿ ನೀಡುವುದು ಒಂದನೇ ದಿನದಿಂದಲೂ ನನ್ನ ಗುರಿಯಾಗಿತ್ತು.
ಅಬ್ಬಬ್ಬಾ..203 ಯುನಿಟ್ ರಕ್ತದಾನ ಮಾಡಿ ಗಿನ್ನೆಸ್ ದಾಖಲೆಗೆ ಸೇರಿದ 80 ವರ್ಷದ ಅಜ್ಜಿ!
ತೀವ್ರವಾದ ಪರಿಸರದಲ್ಲಿ ಮಾನವ ದೇಹವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅಧ್ಯಯನ ಮಾಡುವ ಜೊತೆ ವಿಶ್ವ ದಾಖಲೆಯನ್ನು ಮುರಿಯುವುದು ಒಂದು ರೋಮಾಂಚಕಾರಿ ಮೈಲಿಗಲ್ಲು, ನನ್ನ ಮಿಷನ್ ಇಲ್ಲಿಗೆ ಕೊನೆಗೊಳ್ಳುವುದಿಲ್ಲ. ಸಂಶೋಧನೆ ನಡೆಸಲು, ಎಲ್ಲಾ ವಯಸ್ಸಿನ ಕಲಿಯುವವರೊಂದಿಗೆ ತೊಡಗಿಸಿಕೊಳ್ಳಲು ಮತ್ತು ನನ್ನ ಅನ್ವೇಷಣೆಯ ಪ್ರಯಾಣವನ್ನು ಮುಂದುವರಿಸಲು ನಾನು ಇನ್ನೂ 23 ದಿನಗಳು ಸಮುದ್ರದೊಳಗೆ ಇರುವೆ ಎಂದು ಅವರು ಬರೆದುಕೊಂಡಿದ್ದಾರೆ.
74 ನೇ ದಿನದಂದು, ಅವರು ಮೈಕ್ರೋವೇವ್ (microwave) ಬಳಸಿ ತಯಾರಿಸಿದ ಮೊಟ್ಟೆಗಳು ಮತ್ತು ಸಾಲ್ಮನ್‌ಗಳ (salmon) ಪ್ರೋಟೀನ್‌ನ ಭೋಜನವನ್ನು ಸೇವಿಸಿದರು. ವ್ಯಾಯಾಮ ಮಾಡಿದರು ಮತ್ತು ಒಂದು ಗಂಟೆಯಷ್ಟು ನಿದ್ದೆ ಮಾಡಿದರು ಎಂದು ಸಿಬಿಎಸ್ ನ್ಯೂಸ್ ವರದಿ ಮಾಡಿದೆ. ತೀವ್ರ ಒತ್ತಡದಲ್ಲಿ ಮುಳುಗಿರುವ ದೀರ್ಘಾವಧಿಯ ಪರಿಣಾಮಗಳನ್ನು ಮಾನವ ದೇಹವು ಹೇಗೆ ನಿಭಾಯಿಸುತ್ತದೆ ಎಂಬುದನ್ನು ಡಿಟುರಿ ಅಧ್ಯಯನ ಮಾಡುತ್ತಿದ್ದಾರೆ.
ಯೂನಿವರ್ಸಿಟಿ ಆಫ್ ಸೌತ್ ಫ್ಲೋರಿಡಾ ಪತ್ರಿಕಾ ಪ್ರಕಟಣೆಯ ಪ್ರಕಾರ, ಕಳೆದ 74 ದಿನಗಳಿಂದ, ಅವರು ಕೀ ಲಾರ್ಗೋದಲ್ಲಿನ ಜೂಲ್ಸ್ ಅಂಡರ್‌ಸೀ ಲಾಡ್ಜ್‌ನಲ್ಲಿ ಮೇಲ್ಮೈಯಿಂದ 30 ಅಡಿ ಕೆಳಗೆ 100 ಚದರ ಅಡಿ ಆವಾಸ ಸ್ಥಾನದಲ್ಲಿ ವಾಸಿಸುತ್ತಿದ್ದಾರೆ. ಮಾರ್ಚ್ 1 ರಂದು, ತಮ್ಮ ಪ್ರಯಾಣ ಪ್ರಾರಂಭಿಸಿದ ಡಿಟುರಿ ತಮ್ಮ ಯೋಜನೆಯನ್ನು Instagram ವೀಡಿಯೊದಲ್ಲಿ ಹಂಚಿಕೊಂಡಿದ್ದಾರೆ.
24 ಗಂಟೆಯಲ್ಲಿ 81 ಆನ್‌ಲೈನ್ ಕೋರ್ಸ್: ಹೊಸ ದಾಖಲೆ ಬರೆದ 'ಮಲ್ಲು ಕುಟ್ಟಿ'
ನೀರೊಳಗೆ ಇರುವ ವೇಳೆ ವೈದ್ಯರು ಡಿಟುರಿ ಅವರನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಾರೆ. ಆಗಾಗ್ಗೆ ಮೂತ್ರ ಮತ್ತು ರಕ್ತದ ಮಾದರಿಗಳನ್ನು (urine and blood samples) ವಿಶ್ಲೇಷಣೆಗಾಗಿ ಮೇಲ್ಮೈಗೆ ಡಿಟುರಿ ಕಳುಹಿಸುತ್ತಾರೆ. ಜೊತೆಗೆ ಒಬ್ಬ ಮನಶ್ಶಾಸ್ತ್ರಜ್ಞ (psychologist) ಮತ್ತು ಮನೋವೈದ್ಯರು ಬಾಹ್ಯಾಕಾಶ ಪ್ರಯಾಣದಂತೆಯೇ ವಿಸ್ತೃತ ಅವಧಿಯವರೆಗೆ ಪ್ರತ್ಯೇಕವಾದ, ಸೀಮಿತ ಪರಿಸರದಲ್ಲಿ ಇರುವ ಮನುಷ್ಯನ ಮಾನಸಿಕ ಪರಿಣಾಮಗಳನ್ನು ಅಧ್ಯಯನ ಮಾಡಿ ದಾಖಲೀಕರಿಸಿಕೊಳ್ಳುತ್ತಿದ್ದಾರೆ.
ಮಾನವ ಎಂದಿಗೂ ನೀರಿನ ಅಳದಲ್ಲಿ ಧೀರ್ಘಕಾಲ ವಾಸ ಮಾಡಲು ಸಾಧ್ಯವಿಲ್ಲ., ಆದ್ದರಿಂದ ನಾನು ನಿಕಟವಾಗಿ ಈ ಬಗ್ಗೆ ಮೇಲ್ವಿಚಾರಣೆ ಮಾಡುತ್ತೇನೆ ಎಂದು ಡಿಟುರಿ ಹೇಳಿದ್ದಾರೆ. ಈ ಪ್ರಯಾಣದಲ್ಲಿ ನನ್ನ ದೇಹದ ಮೇಲೆ ಬೀರುವ ಎಲ್ಲಾ ಪರಿಣಾಮಗಳನ್ನು ಈ ಅಧ್ಯಯನವು ಪರಿಶೀಲಿಸುತ್ತದೆ, ಆದರೆ ಹೆಚ್ಚಿದ ಒತ್ತಡದಿಂದಾಗಿ ನನ್ನ ಆರೋಗ್ಯದಲ್ಲಿ ಸುಧಾರಣೆಗಳು ಕಂಡುಬರುತ್ತವೆ ಎಂಬುದು ಮಾತ್ರ ನನ್ನ ಊಹೆಯಾಗಿತ್ತು ಎಂದು ಅವರು ಹೇಳಿಕೊಂಡಿದ್ದಾರೆ.