24 ಗಂಟೆಯಲ್ಲಿ 81 ಆನ್‌ಲೈನ್ ಕೋರ್ಸ್: ಹೊಸ ದಾಖಲೆ ಬರೆದ 'ಮಲ್ಲು ಕುಟ್ಟಿ'
ಸಾಕ್ಷರತೆಯಲ್ಲಿ ದೇಶದಲ್ಲಿಯೇ ನಂಬರ್ ವನ್ ಆಗಿರುವ ದೇವರನಾಡು ಕೇರಳದ ಮಹಿಳೆಯೊಬ್ಬರು ಶಿಕ್ಷಣದಲ್ಲಿ ಹೊಸ ದಾಖಲೆ ಮಾಡುವ ಮೂಲಕ ಗಿನ್ನೆಸ್ ದಾಖಲೆ ಪುಟ ಸೇರಿದ್ದಾರೆ. ಕೇವಲ 24 ಗಂಟೆಯಲ್ಲಿ ಅವರು ಬರೋಬ್ಬರಿ 81 ಕೋರ್ಸ್‌ಗಳನ್ನು ಪೂರ್ಣಗೊಳಿಸುವ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ.
ಸಾಕ್ಷರತೆಯಲ್ಲಿ ದೇಶದಲ್ಲಿಯೇ ನಂಬರ್ ವನ್ ಆಗಿರುವ ದೇವರನಾಡು ಕೇರಳದ ಮಹಿಳೆಯೊಬ್ಬರು ಶಿಕ್ಷಣದಲ್ಲಿ ಹೊಸ ದಾಖಲೆ ಮಾಡುವ ಮೂಲಕ ಗಿನ್ನೆಸ್ ದಾಖಲೆ ಪುಟ ಸೇರಿದ್ದಾರೆ. ಕೇವಲ 24 ಗಂಟೆಯಲ್ಲಿ ಅವರು ಬರೋಬ್ಬರಿ 81 ಕೋರ್ಸ್‌ಗಳನ್ನು ಪೂರ್ಣಗೊಳಿಸುವ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ.
ಕೋವಿಡ್ ಸಾಂಕ್ರಾಮಿಕ ರೋಗ ದೇಶವನ್ನು ಆವರಿಸಿದ ನಂತರ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಕೇವಲ ಕ್ಲಾಸ್‌ರೂಮ್‌ಗೆ ಮೀಸಲಾಗಿದ್ದ ಶಿಕ್ಷಣ ಈಗ ಸಂಪೂರ್ಣ ಆನ್‌ಲೈನ್‌ಮಯವಾಗಿದೆ. ನೀವು ಎಲ್ಲಿ ಬೇಕಾದರೂ ಕುಳಿತು ಯಾವುದೇ ಕಾಲೇಜಿಗೆ ಪ್ರವೇಶ ಪಡೆದು ಆನ್‌ಲೈನ್ ಮೂಲಕ ಶಿಕ್ಷಣವನ್ನು ಪಡೆಯುವಂತಹ ವ್ಯವಸ್ಥೆ ಈಗ ಬಂದಿದೆ. ವಯಸ್ಸಿನ ಬೇಧವಿಲ್ಲದೇ ಯಾರೂ ಬೇಕಾದರೂ ಈ ಆನ್‌ಲೈನ್ ಕೋರ್ಸ್‌ಗೆ ಸೇರಿಕೊಂಡು ತಮಗಿಷ್ಟವಾದ ಶಿಕ್ಷಣವನ್ನು ಪಡೆಯಬಹುದಾಗಿದೆ. ಕೋವಿಡ್ ನಂತರ ಭಾರತದಲ್ಲಿಯೂ ಅನೇಕ ಖಾಸಗಿ ಕಾಲೇಜುಗಳು ಆನ್‌ಲೈನ್ ಶಿಕ್ಷಣಕ್ಕೆ ಪ್ರವೇಶ ನೀಡುತ್ತಿವೆ. ಅನೇಕರು ಈ ಆನ್‌ಲೈನ್ ಶಿಕ್ಷಣದ ಕೆಲವು ಅನಾನುಕೂಲತೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರೂ, ಅನೇಕರು ಈ ಆನ್‌ಲೈನ್ ಶಿಕ್ಷಣದಿಂದ ಪ್ರಯೋಜನಗಳನ್ನು ಪಡೆದುಕೊಂಡಿದ್ದಾರೆ. ಅದೇ ರೀತಿ ಈಗ ಕೇರಳದ ಮಹಿಳೆಯೊಬ್ಬರು ಆನ್‌ಲೈನ್ ಶಿಕ್ಷಣದ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.
ಹೀಗೆ ಆನ್‌ಲೈನ್ ಕೋರ್ಸ್‌ನ ಪ್ರಯೋಜನ ಪಡೆದ ಕೇರಳದ ರೆಹ್ನಾ ಶಹಜಹಾನ್ ಈಗ ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಪುಟ ಸೇರಿದ್ದಾರೆ. ಕೇವಲ 24 ಗಂಟೆಯಲ್ಲಿ ಅವರು 81 ಆನ್‌ಲೈನ್ ಕೋರ್ಸ್‌ಗಳನ್ನು ಪೂರೈಸಿ ಪ್ರಮಾಣಪತ್ರಗಳನ್ನು ಪಡೆದುಕೊಂಡಿದ್ದಾರೆ. 25 ವರ್ಷದ ಶಹಜಹಾನ್ ಅವರು ಈ ಹಿಂದೆ ದಾಖಲಾಗಿದ್ದ ರೆಕಾರ್ಡ್ ಅನ್ನು ಬ್ರೇಕ್ ಮಾಡಿದ್ದಾರೆ. ಈ ಹಿಂದೆ ಒಂದೇ ದಿನದಲ್ಲಿ 75 ಕೋರ್ಸ್‌ಗಳನ್ನು ಮಾಡಿದ ದಾಖಲೆ ಇತ್ತು. ಅಧ್ಯಯನದಲ್ಲಿ ಹೀಗೆ ದಾಖಲೆ ಮಾಡಿದ ಮೊದಲ ಮಹಿಳೆ ಇವರಾಗಿದ್ದಾರೆ.
National girl child day: ಸ್ತ್ರೀ ಎಂದರೆ ಅಷ್ಟೇ ಸಾಕೆ? ಇಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ
ಕೇರಳದ ಕೊಟ್ಟಾಯಂನ ನಿವಾಸಿಯಾಗಿರುವ ರೆಹ್ನಾ ಅವರು ವಾಣಿಜ್ಯ ವಿಷಯದಲ್ಲಿ ತಮ್ಮ ಮಾಸ್ಟರ್ಸ್‌ನ್ನು(M. Com) ದೆಹಲಿಯ ಜಮಿಯಾ ಮಿಲಿಯಾ ಇಸ್ಲಾಮಿಯಾದಲ್ಲಿ ಮಾಡಲು ನಿರ್ಧರಿಸಿದ್ದರು. ಆದರೆ ಅವರಿಗೆ ಅಲ್ಲಿ ಸೀಟು ಸಿಕ್ಕಿರಲಿಲ್ಲ. ನಂತರ ಅವರು ಆನ್‌ಲೈನ್‌ನಲ್ಲಿ ಎರಡು ಪೋಸ್ಟ್ ಗ್ರಾಜುಯೇಷನ್ ಕೋರ್ಸ್‌ಗೆ ಪ್ರವೇಶ ಪಡೆದರು. ಮತ್ತು ಸೋಶಿಯಲ್ ವರ್ಕ್ ವಿಚಾರದಲ್ಲಿ ಮಾಸ್ಟರ್ಸ್‌ಗೆ ಅರ್ಜಿ ಸಲ್ಲಿಸಿದ ಅವರು ಮಾರ್ಗದರ್ಶನ ಹಾಗೂ ಆಪ್ತ ಸಮಾಲೋಚನೆ (Guidance and Counseling course) ವಿಚಾರದಲ್ಲಿ ಡಿಪ್ಲೋಮಾಗೆ ಅರ್ಜಿ ಸಲ್ಲಿಸಿದ್ದರು.
ತಮ್ಮ ಮಾಸ್ಟರ್ಸ್ ಪೂರ್ಣಗೊಳಿಸಿದ ಬಳಿಕ ರೆಹ್ನಾ ಅವರು ಮ್ಯಾನೇಜ್‌ಮೆಂಟ್ ಅಧ್ಯಯನ ಮಾಡಲು ನಿರ್ಧರಿಸಿದರು ಮತ್ತು ಜೊತೆಗೆ ಸಾಮಾನ್ಯ ಪ್ರವೇಶ ಪರೀಕ್ಷೆ(CAT) ಬರೆಯಲು ಸಿದ್ಧತೆ ನಡೆಸಿದರು. ಈ ಪರೀಕ್ಷೆಯಲ್ಲಿ ಪಾಸಾದ ಅವರಿಗೆ ಜಮೀಯಾ ಮಿಲಿಯಾ ಇಸ್ಸಾಮಿಯಾ ವಿಶ್ವವಿದ್ಯಾನಿಲಯದಲ್ಲಿ ಎಂಬಿಎ ಶಿಕ್ಷಣಕ್ಕೆ ಅವಕಾಶ ಸಿಕ್ಕಿತ್ತು. ಆ ಬ್ಯಾಚ್‌ನಲ್ಲಿದ್ದ ಏಕೈಕ ಮಲೆಯಾಳಿ ಹುಡುಗಿ ಅವರಾಗಿದ್ದರು.
ಓದಿದ್ದು ಕಂಪ್ಯೂಟರ್ ಇಂಜಿನಿಯರಿಂಗ್, ಆಗಿದ್ದು ಉದ್ಯಮಿ: ಎಲ್ಲರಿಗೂ ಮಾದರಿ ಈ ಯುವತಿ
ತನ್ನ ಯಶಸ್ಸಿನ ಕ್ರಿಡಿಟ್‌ನ್ನು ಸಹೋದರಿ ನೆಹ್ಲಾಗೆ ನೀಡಿದ್ದಾರೆ. ತನ್ನ ಸಹೋದರಿ ಸ್ಪೂರ್ತಿಯ ಮೂಲ ಎಂದು ಅವರು ಹೇಳಿದ್ದಾರೆ. ರೆಹ್ಮಾ ಪ್ರಸ್ತುತ ಲಂಡನ್‌ನಲ್ಲಿ ಕೆಲಸ ಮಾಡುತ್ತಿದ್ದು, ಅವರು ಕೂಡ ದೆಹಲಿ ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಬರುವ ದೆಹಲಿಯ ಲೇಡಿ ಶ್ರೀರಾಮ್ ಕಾಲೇಜಿನ ವಿದ್ಯಾರ್ಥಿನಿ ಆಗಿದ್ದಾರೆ. ಇತ್ತ ರೆಹ್ಮಾ ಅವರು ದೆಹಲಿಯ ಎನ್‌ಜಿಒ ವುಮನ್ಸ್ ಮನಿಫೆಸ್ಟೊ ಜೊತೆಯೂ ಕೆಲಸ ಮಾಡುತ್ತಿದ್ದಾರೆ.