ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು 2030ರಲ್ಲಿ ಕೆಳಗಿಳಿಸುವ ನಿರ್ಧಾರವಿದ್ದರೂ, ಎಲೋನ್ ಮಸ್ಕ್ 2027ರ ವೇಳೆಗೆ ಧ್ವಂಸ ಮಾಡಲು ಸಲಹೆ ನೀಡಿದ್ದಾರೆ. ಅನುಭವಿ ಗಗನಯಾತ್ರಿಯೊಂದಿಗಿನ ಭಿನ್ನಾಭಿಪ್ರಾಯದ ನಂತರ ಈ ಅನಿರೀಕ್ಷಿತ ಸಲಹೆ ಬಂದಿದೆ.
ನವದೆಹಲಿ (ಫೆ.21): ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು 2030ರಲ್ಲಿ ಬಾಹ್ಯಾಕಾಶದಿಂದ ಕೆಳಗಿಳಿಸುವ ನಿರ್ಧಾರ ಮಾಡಲಾಗಿದೆ. ಆದರೆ, ಸ್ಪೇಸ್‌ಎಕ್ಸ್ ಸಿಇಒ ಎಲೋನ್ ಮಸ್ಕ್ ಮಾತ್ರ 2027ರ ವೇಳೆಗೆ ಬಾಹ್ಯಾಕಾಶ ನಿಲ್ದಾಣವನ್ನು ಈಗಿರುವ ಸ್ಥಾನದಿಂದ ಧ್ವಂಸ ಮಾಡಬೇಕು ಸಲಹೆ ನೀಡಿದ್ದಾರೆ. ಅನುಭವಿ ಗಗನಯಾತ್ರಿಯೊಂದಿಗಿನ ಭಿನ್ನಾಭಿಪ್ರಾಯದ ನಂತರ ಈ ಅನಿರೀಕ್ಷಿತ ಸಲಹೆ ಬಂದಿದೆ. "ಬಾಹ್ಯಾಕಾಶ ನಿಲ್ದಾಣವನ್ನು ಕಕ್ಷೆಯಿಂದ ಕೆಳಗಿಳಿಸುವ ಸಿದ್ಧತೆಗಳನ್ನು ಪ್ರಾರಂಭಿಸುವ ಸಮಯ ಇದು. ಅದು ತನ್ನ ಉದ್ದೇಶವನ್ನು ಪೂರೈಸಿದೆ. ಹೆಚ್ಚುತ್ತಿರುವ ಉಪಯುಕ್ತತೆ ಬಹಳ ಕಡಿಮೆ. ಮಂಗಳ ಗ್ರಹಕ್ಕೆ ನಾವು ಹೋಗೋಣ" ಎಂದು ಮಸ್ಕ್ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ISS ಬಗ್ಗೆ ಮಸ್ಕ್ ಅವರ ಮೊದಲ ಕಾಮೆಂಟ್ ಸ್ವಲ್ಪ ಅಸ್ಪಷ್ಟವಾಗಿತ್ತು. ಆದರೆ ಅವರು NASA ಮತ್ತು US ಸರ್ಕಾರವು 2030 ರ ಜೀವಿತಾವಧಿಯ ಅಂತ್ಯ ದಿನಾಂಕಕ್ಕೆ ಬದ್ಧವಾಗಿರಬೇಕು ಅಥವಾ ಪ್ರಕ್ರಿಯೆಯನ್ನು ವೇಗಗೊಳಿಸಬೇಕು ಎಂದು ಸೂಚಿಸುತ್ತಿದ್ದಾರೆಯೇ ಎಂದು ಕೇಳಿದಾಗ, ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.
'ಇದರ ನಿರ್ಧಾರವನ್ನು ಮಾಡಬೇಕಾಗಿರುವ ಅಧ್ಯಕ್ಷರು. ಅದರೆ, ನನ್ನ ಸಲಹೆ ಏನೆಂದರೆ, ಆದಷ್ಟು ಶೀಘ್ರವಾಗಿ ಇದರ ಪ್ರಕ್ರಯೆ ಆರಂಭವಾಗಬೇಕು. ಇಲ್ಲಿಂದ ಎರಡು ವರ್ಷಗಳಲ್ಲಿ ಐಎಸ್‌ಎಸ್‌ಅನ್ನು ಧ್ವಂಸ ಮಾಡುವ ಕೆಲಸವಾಗಬೇಕು' ಎಂದು ಹೇಳಿದ್ದಾರೆ.
ಜಾಗತಿಕ ಬಾಹ್ಯಾಕಾಶ ನೌಕೆಯಲ್ಲಿ ಪ್ರಮುಖ ವ್ಯಕ್ತಿಯಾಗಿರುವ ಹಾಗೂ ಅಧ್ಯಕ್ಷ ಟ್ರಂಪ್‌ಗೆ ಸಲಹೆ ನೀಡುವ ಸ್ಥಾನದಲ್ಲಿರುವ ಎಲೋನ್ ಮಸ್ಕ್, 2027ರ ವೇಳೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಕೆಳಗಿಳಿಸಬೇಕು ಎಂದು ಬಯಸಿದ್ದಾರೆ.
ಪ್ರಸ್ತುತ 2030 ಕ್ಕೆ ಯೋಜಿಸಲಾಗಿರುವ ISS ನ ಕಾರ್ಯಾಚರಣೆಯ ಅವಧಿಯ ಕೊನೆಯಲ್ಲಿ ಅದನ್ನು ಕಕ್ಷೆಯಿಂದ ಹೊರಗೆ ಕರೆದೊಯ್ಯಲು NASA ಸ್ಪೇಸ್‌ಎಕ್ಸ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಇದಕ್ಕಾಗಿ ನಾಸಾ 843 ಮಿಲಿಯನ್ ಯುಎಸ್ ಡಾಲರ್ ಒಪ್ಪಂದವನ್ನು ಸ್ಪೇಸ್‌ಎಕ್ಸ್ ಜೊತೆ ಮಾಡಿಕೊಂಡಿದೆ. ಯುನೈಟೆಡ್ ಸ್ಟೇಟ್ಸ್ ಡಿಆರ್ಬಿಟ್ ವೆಹಿಕಲ್‌ಅನ್ನು ನಿರ್ಮಾಣ ಮಾಡುವ ಕೆಲಸವನ್ನು ಸ್ಪೇಸ್‌ಎಕ್ಸ್ ಮಾಡಲಿದೆ. ಫುಟ್ಬಾಲ್ ಮೈದಾನದ ಗಾತ್ರದಲ್ಲಿರುವ ISS ಅನ್ನು ಸುರಕ್ಷಿತವಾಗಿ ನಿಷ್ಕ್ರಿಯಗೊಳಿಸುವಲ್ಲಿ ಇದು ನಿರ್ಣಾಯಕ ಪಾತ್ರ ವಹಿಸುತ್ತದೆ.
ಭಾರತದಲ್ಲಿ ಎಲಾನ್ ಮಸ್ಕ್ ಒಡೆತನದ ಟೆಸ್ಲಾ ಫ್ಯಾಕ್ಟ್ರಿ ಅನ್ಯಾಯ : ಟ್ರಂಪ್ ಕಿಡಿ
ಒಮ್ಮೆ ಪೂರ್ಣಗೊಂಡ ನಂತರ, ದೂರದ ಸಾಗರ ಪ್ರದೇಶದ ಮೇಲೆ ನಿಯಂತ್ರಿತ ಮರು-ಪ್ರವೇಶಕ್ಕೆ ಅಗತ್ಯವಾದ ಅಂತಿಮ ಕುಶಲತೆಗಾಗಿ ನಾಸಾ ವಾಹನವನ್ನು ವಹಿಸಿಕೊಂಡು ನಿರ್ವಹಿಸುತ್ತದೆ.
ಮಹಾರಾಷ್ಟ್ರದಲ್ಲಿ ಟೆಸ್ಲಾ ಕಾರ್ ಫ್ಯಾಕ್ಟರಿ ಬಹುತೇಕ ಖಚಿತ, ಟಾಟಾ ಮೋಟಾರ್ಸ್ ಉದ್ಯೋಗಿಗಳಿಗೆ ಬಂತು ಜಾಬ್ ಕಾಲ್!
ಅಂತಾರಾಷ್ಟ್ರೀಯ ಒಪ್ಪಿಗೆ ಅಗತ್ಯ: ಬಾಹ್ಯಾಕಾಶ ನಿಲ್ದಾಣವನ್ನು ಡಿಆರ್ಬಿಟ್ ಮಾಡೋದಕ್ಕೆ ಜಾಗತಿಕ ಒಪ್ಪಿಗೆ ಕೂಡ ಬೇಕಾಗಿದೆ. ನಾಸಾ ಮಾತ್ರವಲ್ಲದೆ, ರೋಸ್ಕಾಮ್ಸ್ (ರಷ್ಯಾ), ಇಎಸ್‌ಎ (ಯುರೋಪಿಯನ್ ಸ್ಪೇಸ್ ಏಜೆನ್ಸಿ), ಜಾಕ್ಸಾ (ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಷನ್ ಏಜೆನ್ಸಿ) ಹಾಗೂ ಸಿಎಸ್‌ಎ (ಕೆನಡಿಯನ್ ಸ್ಪೇಸ್ ಏಜೆನ್ಸಿ) ಇದರ ಭಾಗವಾಗಿದೆ. ಈಗಾಗಲೇ ಐಎಸ್‌ಎಸ್ ಕಾರ್ಯಕ್ರಮದಿಂದ ಹಿಂದೆ ಸರಿಯುವ ಬಗ್ಗೆ ರಷ್ಯಾ ಮಾತನಾಡಿದ್ದು, 2028ರವರೆಗೆ ಮಾತ್ರವೇ ಈ ಕಾರ್ಯಕ್ರಮದ ಭಾಗವಾಗಿರುವುದಾಗಿ ತಿಳಿಸಿದೆ.
