ಇಡೀ ಭೂಮಿ ಕೆಂಪು ಬಣ್ಣಕ್ಕೆ ತಿರುಗಿದೆ. ಹವಾಮಾನ ಬದಲಾವಣೆಯಿಂದ ಭೂಮಿ ಕಾದ ಕಬ್ಬಿಣದಂತಾಗುತ್ತಿದೆ. ಸೂಪರ್ ಎನ್ ನಿನೋ ತೀವ್ರವಾಗುತ್ತಿದೆ. ಡಿಸೆಂಬರ್ ವೇಳೆ ಹಲವು ಗಂಡಾಂತರ ಕಾದಿದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.
ಹವಾಮಾನ ತಜ್ಞರು ಸತತವಾಗಿ ಎಚ್ಚರಿಕೆ ನೀಡುತ್ತಿದ್ದಾರೆ. ಎಲ್ ನಿನೋ ಆತಂಕ ನಿಜವಾಗಿದೆ. ಇದೀಗ ಇಡೀ ಭೂಮಿ ಕೆಂಪು ಬಣ್ಣಕ್ಕೆ ತಿರುಗಿದೆ. ಉರಿ ಬಿಸಿಲಿನಲ್ಲಿ ಭೂಮಿ ಕಾದ ಕಬ್ಬಿಣದಂತಾಗುತ್ತಿದೆ. ಸೂಪರ್ ಎನ್ ನಿನೋ ತೀವ್ರವಾಗುತ್ತಿದೆ. ಡಿಸೆಂಬರ್ ತಿಂಗಳ ವೇಳೆ ಎಲ್ ನಿನೋ ಭಾರಿ ಕೋಲಾಹಲ ಸೃಷ್ಟಿಸಲಿದೆ. ತೀವ್ರ ಉತ್ತಂಗಕ್ಕೆ ಏರಲಿದ್ದು, ಭೂಮಿ ಕೆಂಡಂತಾಗಲಿದೆ ಎಂದು ಎಚ್ಚರಿಸಿದೆ. ವಿಶ್ವಸಂಸ್ಥೆಯ ಹವಾಮಾನ ಇಲಾಖೆ (WMO) ಮಹತ್ವದ ಎಚ್ಚರಿಕೆ ನೀಡಿದೆ. ಡಿಸೆಂಬರ್ ಮನುಷ್ಯರು, ಪ್ರಾಣಿಗಳು, ಪಕ್ಷಿಗಳು ವಾಸ ತೀವ್ರ ಸವಾಲಾಗಲಿದೆ ಎಂದು ಎಚ್ಚರಿಸಿದ್ದಾರೆ.
ಡಿಸೆಂಬರ್‌ನಲ್ಲಿ ಉತ್ತುಂಗಕ್ಕೆ ಎಲ್ ನಿನೋ
ಸೂಪರ್ ಎಲ್ ನಿನೋ ಡಿಸೆಂಬರ್ ವೇಳೆ ಉತ್ತುಂಗಕ್ಕೇರಲಿದೆ. ಪೆಸಿಫಿಕ್ ಸಾಗರದ ಹಿಡಿದಿಟ್ಟುಕೊಂಡಿರುವ ಬಿಸಿಗಾಳಿ ಬಿಡುಗಡೆ ಮಾಡಲಿದೆ. ಈ ಬಾರಿ ಎಲ್ ನಿನೋ ಕೊರತೆಯಿಂದ ಭಾರತ ಸೇರಿದಂತೆ ವಿಶ್ವದ ಬಹುತೇಕ ಕಡೆಗಳಲ್ಲಿ ಮಳೆ ಕೊರತೆ , ಬಿಸಿ ಗಾಳಿ, ತೀವ್ರ ತಾಪಮಾನ ಪರಿಣಾಮಗಳು ಸ್ಪಷ್ಟವಾಗಿದೆ. ಡಿಸೆಂಬರ್ ವೇಳೆ ಸೂಪರ್ ಎನ್ ನಿನೋ ತೀವ್ರತೆ ಉತ್ತುಂಗಕ್ಕೆ ಏರಲಿದೆ. 1950ರ ಬಳಿಕ ಭೂಮಿ ಕಂಡ ಅತ್ಯಂತ ಪರಿಣಾಮಕಾರಿ ಎಲ್ ನಿನೋ ಇದಾಗಿದೆ.
ಕೆಂಪು ಬಣ್ಣಕ್ಕೆ ತಿರುಗಿದ ಭೂಮಿ
2027ರ ಫೆಬ್ರವರಿ ವರೆಗೆ ಎಲ್ ನಿನೋ ಪರಿಣಾಮ ಇರಲಿದೆ. ಜಾಗತಿಕ ತಾಪಮಾನ ಏರಿಕೆಯಿಂದ ಭೂಮಿ ಸುಡುತ್ತಿದೆ. ಸ್ಯಾಟಲೈಟ್ ಚಿತ್ರದಲ್ಲಿ ಇಡೀ ಭೂಮಿ ಕೆಂಪು ಬಣ್ಣಕ್ಕೆ ತಿರುಗಿರುವುದು ಸ್ಪಷ್ಟವಾಗಿದೆ. ಹವಾಮಾನ ವಿಜ್ಞಾನಿ ರಾಯನ್ ಮೌ ಭೂಮಿಯ ಹವಾಮಾನ ನಕ್ಷೆ ಪ್ರಕಟಿಸಿದ್ದಾರೆ. ಇದು ತಾಪಮಾನ ಏರಿಕೆ ಆತಂಕ ಸೂಚಿಸುತ್ತಿದೆ ಎಂದಿದ್ದಾರೆ. ಸೂಪರ್ ಎಲ್ ನಿನೋ ಪರಿಣಾಮದಿಂದ ತಾಪಮಾನ ಹೆಚ್ಚಳ, ಬರ , ಪ್ರವಾಹದ ಆತಂಕಗಳು ತೀವ್ರಗೊಳ್ಳಲಿದೆ ಎಂದು ವಿಶ್ವಸಂಸ್ಥೆ ಹವಾಮಾನ ಇಲಾಖೆ ಹೇಳಿದೆ. ಉಷ್ಣವಲಯದ ತಾಪಮಾನ 3.7 ಸೆಲ್ಶಿಯಸ್ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ.
ಡಿಸೆಂಬರ್ ತಿಂಗಳಲ್ಲಿ ತಾಪಮಾನ ಏರಿಕೆಯಾಗಿ ತೀವ್ರ ಸಮಸ್ಯೆಯಾಗಲಿದೆ. ನೀರಿನ ಅಭಾಯ ಹೆಚ್ಚಾಗಲಿದೆ. ಹಿಮ ಪ್ರದೇಶಗಳಲ್ಲಿ ಹಿಮಗಳು ಕರಗಲಿದೆ. ಡಿಸೆಂಬರ್‌ನಲ್ಲೇ ನೀರಿಗೆ ಹಾಹಾಕಾರ ಸೃಷ್ಟಿಯಾಗಲಿದೆ. ಕೇವಲ ನಗರ ಪ್ರದೇಶ ಮಾತ್ರವಲ್ಲ ಹಲವು ಜಲಾಶಗಳು, ನದಿಗಳು ಸೇರಿದಂತೆ ಜಲಮೂಗಳು ಬತ್ತಿ ಹೋಗಲಿದೆ. ಜನರು, ಪ್ರಾಣಿ ಪಕ್ಷಿಗಳು ಸೇರಿದಂತೆ ಇಡೀ ಪರಿಸರದ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಯನ್ನು ಹವಾಮಾನ ವಿಜ್ಞಾನಿಗಳು ಎಚ್ಚರಿಸಿದ್ದಾರೆ.


