ಪ್ರವಾಹ, ಭೂಕುಸಿತ, ಉರಿ ಬಿಸಿಲು ಸೇರಿದಂತೆ ಹಲವು ಪ್ರಾಕೃತಿಕ ವಿಕೋಪಗಳು ಹೆಚ್ಚಾಗುತ್ತಿದೆ. ಇದೀಗ ಈ ನೈಸರ್ಗಿಕ ಅವಘಡಗಳಿಗೆ ವಿಜ್ಞಾನಿಗಳು ಉತ್ತರ ಹುಡುಕಿದ್ದಾರೆ. ಆದರೆ ಈ ಉತ್ತರ ಎಚ್ಚರಿಕೆ ಕರೆಗಂಟೆಯಾಗಿದೆ.
ನೇಪಾಳ, ಭಾರತ, ಅಮೆರಿಕ ಸೇರಿದಂತೆ ಹಲವೆಡೆ ಪ್ರಾಕೃತಿಕ ವಿಕೋಪಗಳು ಸಂಭವಿಸಿದೆ. ಪ್ರವಾಹ, ಭೂಕುಸಿತ, ಬಿಸಿ ಗಾಳಿ, ಭಾರಿ ಮಳೆ ಗಾಳಿ ಸೇರಿದಂತೆ ಹಲವು ಅವಘಡಗಳು ಸಂಭವಿಸಿದೆ. ಪ್ರತಿ ಮಳೆಗಾಲ ಇದೀಗ ಆತಂಕ ಹೆಚ್ಚಿಸುವಂತಿದೆ. ಈ ಬಾರಿ ಮಳೆ ಕೊರತೆ ಒಂದಡೆಯಾದರೆ ಮತ್ತೊಂದೆಡ ಭೀಕರ ಪ್ರವಾಹಗಳು ಸೃಷ್ಟಿಯಾಗಿದೆ. ಭೂಮಿಯಲ್ಲಿ ನಡೆಯುತ್ತಿರುವ ಈ ನೈಸರ್ಗಿಕ ವಿಕೋಪಗಳಿಗೆ ವಿಜ್ಞಾನಿಗಳು ಸತತ ಸಂಶೋಧನೆ ಮೂಲಕ ಉತ್ತರ ಕಂಡುಕೊಂಡಿದ್ದಾರೆ.
ಭೂಮಿಯ 9 ಮಿತಿಗಳಲ್ಲಿ 7 ಉಲ್ಲಂಘನೆ
ಭೂಮಿ, ಸೌರಮಂಡಲ, ಬಾಹ್ಯಾಕಾಶ ಸೇರಿದಂತೆ ಎಲ್ಲದಕ್ಕೂ ಮಿತಿಗಳಿವೆ. ಮಾನವನ ಹಸ್ತಕ್ಷೇಪ, ಮಿತಿ ಮೀರಿದ ಅಭಿವೃದ್ಧಿ ಕಾಮಗಾರಿಗಳು, ಮಾಲಿನ್ಯ, ತಂತ್ರಜ್ಞಾನಗಳ ಬಳಕೆಯಿಂದ ಮಿತಿಗಳ ಉಲ್ಲಂಘನೆಯಾಗುತ್ತಿದೆ. ಈ ಪೈಕಿ ಭೂಮಿಯ 9 ಮಿತಿಗಳಲ್ಲಿ 7 ಈಗಾಗಲೇ ಉಲ್ಲಂಘನೆಯಾಗಿದೆ. ಪರಿಣಾಮ ಭೂಮಿ ಅಪಾಯದ ಮಟ್ಟದಲ್ಲಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಇಷ್ಟೇ ಅಲ್ಲ ಯಾವ 7 ಮಿತಿಗಳು ಉಲ್ಲಂಘನೆಯಾಗಿದೆ ಎಂಬುದನ್ನು ವಿಜ್ಞಾನಿಗಳು ವಿವರಿಸಿದ್ದಾರೆ.
ಭೂಮಿಯ 7 ಮಿತಿ ಯಾವುದು?
ಪ್ಲಾನಟರಿ ಹೆಲ್ತ್ ಚೆಕ್ 2026ರ ವರದಿ ಪ್ರಕಾರ ವಿಜ್ಞಾನಿಗಳು ಭೂಮಿಯ 7 ಉಲ್ಲಂಘನೆಗಳ ಕುರಿತು ಪಟ್ಟಿ ಮಾಡಿದ್ದಾರೆ. ಈ ಉಲ್ಲಂಘನೆಗಳು ಮಾನವನ ಅತಿಯಾದ ಹಸ್ತಕ್ಷೇಪದಿಂದ ಭೂಮಿಯ 7 ಮಿತಿಗಳ ಉಲ್ಲಂಘನೆಯಾಗಿದೆ. ಹವಾಮಾನ ಬದಲಾವಣೆ, ಭೂಮಿ ವ್ಯವಸ್ಥೆ ಬದಲಾವಣೆ, ಸಿಹಿ ನೀರು ಬದಲಾವಣೆ, ಸಮುದ್ರ ಮಟ್ಟ ಹೆಚ್ಚಳ ಹಾಗೂ ಆಮ್ಲೀಕರಣ, ಜೈವಿಕ ಮಂಡಲದ ಬದಲಾವಣೆ, ಬಯೋಜಿಕೆಮಿಕಲ್ ಬದಲಾವಣೆ ಸೇರಿದಂತೆ 7 ಮಿತಿಗಳ ಉಲ್ಲಂಘನೆಯಿಂದ ಭೂಮಿಯ ಪರಿಸ್ಥಿತಿ ತೀರಾ ಹದಗೆಟ್ಟಿದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.
ಈ ಉಲ್ಲಂಘನೆಹಳು ಮಾನವನ ದುರುಪಯೋಗ, ಅತೀಯಾದ ಪರಿಸರಬ ಬಳಕೆ, ಕಾಡುಗಳ ನಾಶ, ಪ್ಲಾಸ್ಟಿಕ್‌ನಿಂದ ಪರಿಸರ ನಾಶ, ಗುಡ್ಡ, ಬೆಟ್ಟಗಳ ನಾಶ ಸೇರಿದಂತೆ ನಾವು ಮಾಡಿದ ಪ್ರತಿ ತಪ್ಪಿಗೂ ಇದೀಗ ಬೆಲೆ ತೆರಬೇಕಾಗಿದೆ. 7 ಮಿತಿಗಳ ಉಲ್ಲಂಘನೆ ಅತ್ಯಂತ ಅಪಾಯಕಾರಿ ಮಟ್ಟ ತಲುಪಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ನಗರಗಳ ವಿಸ್ತರಣೆ, ಹಳ್ಳಿಗಳ ನಾಶ, ಗ್ರಾಮಗಳ ಸ್ವರೂಪ ಬದಲಾವಣೆ, ಕೆರೆಗಳ ನಾಶ, ನದಿಗಳ ಅತಿಕ್ರಮಣಗಳು ಸೇರಿದಂತೆ ಹಲವು ಪ್ರಕೃತಿ ನಾಶದಿಂದ ಸಮಸ್ಯೆ ತೀವ್ರಗೊಂಡಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಅಂಟಾರ್ಟಿಕಾ, ಹಿಮಾಲಯ ಸೇರಿದಂತೆ ಹಲವು ಹಿಮ ಪ್ರದೇಶಗಳ ಹಿಮಗಳು ಕರಗುತ್ತಿದೆ. ನೇಪಾಳದಲ್ಲೂ ಇತ್ತೀಚೆಗೆ ನಡೆದ ಘಟನೆಯೂ ಭೂಮಿಯ ಮಿತಿಗೆ ಹಿಡಿದ ಕನ್ನಡಿಯಾಗಿದೆ. ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.


