ಚಂದ್ರನಲ್ಲಿ ಬೃಹತ್ ಆಕಾರದ ಗುಹೆ ಪತ್ತೆ, ಮನುಷ್ಯರ ವಾಸಕ್ಕೆ ಈ ಜಾಗ ಬೆಸ್ಟ್ ಅಂತೆ!
Cave on Moon: 20-30 ವರ್ಷಗಳಲ್ಲಿ ಯಾವುದೇ ತೊಂದರೆ ಇಲ್ಲದೇ ಮನುಷ್ಯ ಈ ಗುಹೆಗಳನ್ನ ಪ್ರವೇಶ ಮಾಡಬಹುದಂತೆ.
ಕೇಪ್ ಕೆನವರೆಲ್: ಮಾನವರ ಪಾಲಿಗೆ ಅಗಣಿತ ಕುತೂಹಲದ ಗಣಿಯಾಗಿರುವ ಚಂದ್ರನಲ್ಲಿ ಬೃಹತ್ ಆಕಾರದ ಗುಹೆಯೊಂದನ್ನು ವಿಜ್ಞಾನಿಗಳ ತಂಡ ಪತ್ತೆ ಮಾಡಿದೆ.ಜೊತೆಗೆ ಇಂಥದ್ದೇ ಇನ್ನಷ್ಟು ಗುಹೆಗಳು ಅಲ್ಲಿರುವ ಸಾಧ್ಯತೆ ಇದ್ದು, ಅದು ಮುಂದಿನ ದಿನಗಳಲ್ಲಿ ಬಾಹ್ಯಾಕಾಶಕ್ಕೆ ತೆರಳುವ ಯಾತ್ರಿಗಳಿಗೆ ತಂಗುದಾಣವಾಗಬಹುದು ಎಂಬ ವಿಶ್ವಾಸವನ್ನು ವಿಜ್ಞಾನಿಗಳ ತಂಡ ವ್ಯಕ್ತಪಡಿಸಿದೆ.
5 ದಶಕಗಳ ಹಿಂದೆ ಅಮೆರಿಕದ ಗಗನಯಾತ್ರಿಗಳಾದ ನೀಲ್ ಆರ್ಮ್‌ಸ್ಟ್ರಾಂಗ್ ಮತ್ತು ಬಜ್ ಆಲ್ಡ್ರಿನ್ ಇಳಿದ ಸ್ಥಳದಿಂದ 400 ಕಿ.ಮೀ ದೂರದಲ್ಲೇ ಈ ಗುಹೆ ಪತ್ತೆಯಾಗಿರುವುದು ವಿಶೇಷ. ನಾಸಾದ ಲೂನಾರ್ ರಿಕಾನ್ಸಿಯೆನ್ಸ್ ಆರ್ಬಿಟರ್ ರಾಡಾರ್ ಸೆರೆಹಿಡಿದ ದೃಶ್ಯಗಳನ್ನು ಆಧರಿಸಿ ಇಟಲಿಯ ವಿಜ್ಞಾನಿಗಳ ತಂಡ 450-550 ಅಡಿ ಆಳ, 100-260 ಅಡಿ ಉದ್ದ, 148 ಅಡಿ ಅಗಲದ ಗುಹೆ ಪತ್ತೆ ಮಾಡಿದೆ.
ಚಂದ್ರನ ಅಂಗಳದಲ್ಲಿ ಗುಹೆಗಳ ಸೃಷ್ಟಿ
ಚಂದ್ರನ ಅಂಗಳದಲ್ಲಿಯ ಉಂಟಾದ ಲಾವಾರಸದಿಂದ ಈ ಗುಹೆಗಳ ಸೃಷ್ಟಿಯಾಗಿರಬಹುದು ಎಂದು ಅಂದಾಜಿಸಲಾಗಿದೆ. ಭೂಮಿ ಮೇಲೆಯೂ ಲಾವಾರಸದಿಂದ ಗುಹೆ ಅಥವಾ ಕಂದಕಗಳು ನಿರ್ಮಾಣವಾಗಿವೆ. ಚಂದ್ರನ ಮೇಲೆ ಮನುಷ್ಯ ಕಾಲಿಟ್ಟರು ಅಲ್ಲಿ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗಲ್ಲ. ಇದೀಗ ಈ ಗುಹೆಗಳು ಮನುಷ್ಯನ ವಾಸಕ್ಕೆ ಯೋಗ್ಯವಾಗಿರಬಹುದು ಎಂಬ ಆಶಾಕಿರಣ ವಿಜ್ಞಾನಿಗಳಲ್ಲಿ ಮೂಡಿದೆ. ಬಿಬಿಸಿಗೆ ಸಂದರ್ಶನ ನೀಡಿರುವ ವಿಜ್ಞಾನಿ ಹೆಲೆನ್ ಶರ್ಮನ್, ಗುಹೆಗಳು ಅತ್ಯದ್ಬತವಾಗಿ ಕಾಣಿಸುತ್ತವೆ. ನನ್ನ ಪ್ರಕಾರ, 20-30 ವರ್ಷಗಳಲ್ಲಿ ಯಾವುದೇ ತೊಂದರೆ ಇಲ್ಲದೇ ಮನುಷ್ಯ ಈ ಗುಹೆಗಳನ್ನ ಪ್ರವೇಶ ಮಾಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಗುಹೆಗಳಲ್ಲಿ ಇಳಿಯಲು ಅಥವಾ ಪ್ರವೇಶಿಸಲು ಅಂತರಿಕ್ಷಯಾತ್ರಿಕರಿಗೆ ಜೆಟ್ ಪ್ಯಾಕ್ ಅಥವಾ ಲಿಫ್ಟ್ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.
ಇಸ್ರೋ ನೌಕೆ ಇಳಿದ ಚಂದ್ರನ ದಕ್ಷಿಣ ಧ್ರುವದಲ್ಲೇ ನೌಕೆ ಇಳಿಸಿದ ಚೀನಾ
ವಿಜ್ಞಾನಿಗಳ ಹೇಳಿದ್ದೇನು?
ಈ ಕುರಿತ ಪ್ರತಿಕ್ರಿಯೆ ನೀಡಿರುವ ವಿಜ್ಞಾನಿಗಳು, ಮೊದಲು ಗುಹೆಗಳ ಫೋಟೋಗಳನ್ನು ನೋಡಿದಾಗ ನಮಗೆ ರೋಮಾಂಚವಾಯ್ತು. ನಾವು ಗುಹೆಗಳ ಸಮೀಪದಲ್ಲಿದ್ದೇವೆ ಎಂಬ ವಿಷಯ ತಿಳಿದು ತುಂಬಾನೇ ಖುಷಿ ಆಯ್ತು. ನಂತರ ನಾವು ಗುಹೆಗಳ ಒಳಗೆ ಏನಿದೆ ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸಿದೆವು. ಚಂದ್ರನಂಗಳದ ಈ ಗುಹೆಗಳು ಮಾನವ ವಾಸಕ್ಕೆ ಯೋಗ್ಯ ಎಂಬುವುದು ನಮ್ಮ ನಂಬಿಕೆಯಾಗಿದೆ. ಕಾರಣ ಮಾನವ ಜೀವಿಯ ವಾಸದ ಪರಿಕಲ್ಪನೆ ಆರಂಭ ಗುಹೆಗಳಿಂದಲೇ ಶುರುವಾಗಿತ್ತು ಎಂದು ಹೇಳುತ್ತಾರೆ.
ಗುಹೆಗಳೊಳಗೆ ಹೋಗುವುದು ಇನ್ನು ಬಾಕಿ ಇದೆ. ಸುಮಾರು 50 ವರ್ಷಗಳ ಹಿಂದೆಯೇ ಚಂದ್ರನಲ್ಲಿ ಆಳವಾದ ಗುಹೆಗಳಿವೆ ಎಂದು ವಿಜ್ಞಾನಿಗಳು ಪತ್ತೆ ಮಾಡಿ ಹೇಳಿದ್ದರು. 2010ರಲ್ಲಿ ಲೂನರ್ ಚಂದ್ರನ ಮೇಲಿರುವ ಈ ಕುಳಿಗಳ ಫೋಟೋಗಳನ್ನು ಸೆರೆ ಹಿಡಿದು ಭೂಮಿಗೆ ಕಳುಹಿಸಿತ್ತು. ಇದು ಗುಹೆಗಳ ಆರಂಭ ಎಂದು ಮಾತ್ರ ತಿಳಿದಿದ್ದರು. ಗುಹೆಯ ಆಳ ಮತ್ತು ಅಗಲದ ಬಗ್ಗೆ ತಿಳಿದಿರಲಿಲ್ಲ. ಇದೀಗ ದೀರ್ಘ ಶೋಧನೆಯಿಂದ ಗುಹೆಗಳ ನಿಖರ ಮಾಹಿತಿ ತಿಳಿದಿದೆ.
ಭೂಮಿಗೆ ಕಾಣದ ಚಂದ್ರನ ಭಾಗದಲ್ಲಿ ಸಾಹಸ, 2 ಕೆಜಿ ಕಲ್ಲು ಮಣ್ಣು ಹೊತ್ತು ತಂದ ಚೀನಾ!