ಬಾಹ್ಯಾಕಾಶದಿಂದ ಭೂಮಿ ಹಾಗೂ ಚಂದ್ರ ಫೋಟೋಗಳನ್ನು ಈಗಾಗಲೇ ಸೆರೆ ಹಿಡಿಯಲಾಗಿದೆ. ಆದರೆ ಈ ಬಾರಿ ಸೆರೆ ಹಿಡಿದ ಫೋಟೋ ಕುತೂಹಲಕ್ಕೆ ಕಾರಣಾಗಿದೆ. ಡೀಪ್ ಸ್ಪೇಸ್‌ನಿಂದ ಈ ಫೋಟೋ ಸೆರೆ ಹಿಡಿಯಲಾಗಿದೆ. ಏನಿದರ ವಿಶೇಷತೆ? 

ಬೀಜಿಂಗ್ (ಜು.01) ಇಸ್ರೋ ಈಗಾಗಲೇ ಚಂದ್ರನ ಹಲವು ಫೋಟೋಗಳನ್ನು ಬಿಡುಗಡೆ ಮಾಡಿದೆ. ಇನ್ನು ಬಾಹ್ಯಾಕಾಶದಿಂದ ಭೂಮಿ, ಭಾರತ ಹೇಗೆ ಕಾಣುತ್ತಿದೆ ಅನ್ನೋ ಫೋಟೋಗಳನ್ನು ಬಿಡುಗಡೆ ಮಾಡಿದೆ. ಇದೀಗ ಆಳ ಬಾಹ್ಯಾಕಾಶದಿಂದ ಭೂಮಿ ಹಾಗೂ ಚಂದ್ರನ ಫೋಟೋವನ್ನು ಸೆರೆ ಹಿಡಿಯಲಾಗಿದೆ. ಚೀನಾದ ನ್ಯಾಷನಲ್ ಸ್ಪೇಸ್ ಎಡ್ಮಿನಿಸ್ಟ್ರೇಶ್ ಉಪಗ್ರಹ ಈ ಫೋಟೋ ಸೆರೆ ಹಿಡಿದು ಕಳುಹಿಸಿದೆ. ಎರಡು ಅದ್ಭುತ ಫೋಟೋಗಳು ಖಗೋಳ ಆಸಕ್ತರನ್ನು ಅತೀವವಾಗಿ ಸೆಳೆದಿದೆ.

12 ಮಿಲಿಯನ್ ಕಿಲೋಮೀಟರ್ ದೂರದಿಂದ ಫೋಟೋ ಸೆರೆ

ಮೇ 29 ರಂದು ಕ್ಸಿಚಾಂಗ್ ಸ್ಯಾಟಲೈಟ್ ಸೆಂಟರ್‌ನಿಂದ ಉಡಾವಣೆ ಗೊಂಡ 3ಬಿ ರಾಕೆಟ್ ಉಪಗ್ರಹ 33 ದಿನಗಳಿಂದ ಬಾಹ್ಯಾಕಾಶದಲ್ಲಿ ಸಂಚರಿಸುತ್ತಿದೆ. ಇದೀಗ ಡೀಪ್ ಸ್ಪೇಸ್ ತಲುಪುತ್ತಿದ್ದಂತೆ ಭೂಮಿ ಹಾಗೂ ಚಂದ್ರನ ಫೋಟೋವನ್ನು ಸೆರೆ ಹಿಡಿದಿದೆ. ಭೂಮಿಯಿಂದ ಬರೋಬ್ಬರಿ 12 ಮಿಲಿಯನ್ ಕಿಲೋಮೀಟರ್ ದೂರದಲ್ಲಿ ಈ ಉಪಗ್ರಹವಿದೆ. ಅಲ್ಲಿಂದ ಭೂಮಿ ಹಾಗೂ ಚಂದ್ರನ ಫೋಟೋವನ್ನು ಸೆರೆ ಹಿಡಿದಿದೆ.

ಭೂಮಿ ಹಾಗೂ ಚಂದ್ರನ ಫೋಟೋವನ್ನು 5,90,000 ಕಿಲೋಮೀಟರ್ ದೂರದಿಂದ ಸೆರೆ ಹಿಡಿದು ಕಳುಹಿಸಲಾಗಿದೆ. ನ್ಯಾವಿಗೇಶನ್ ಸೆನ್ಸಾರ್ ಮೂಲಕ ಉಪಗ್ರಹ ಫೋಟೋ ಸೆರೆ ಹಿಡಿದಿದೆ.

Scroll to load tweet…

ಭೂಮಿಗೆ ಸಮೀಪದ ಕ್ಷುದ್ರಗ್ರಹ ಪತ್ತೆಗೆ ಉಪಗ್ರಹ

ಚೀನಾ ಸ್ಪೇಸ್ ಸೆಂಟರ್ ಮಹತ್ವಾಕಾಂಕ್ಷಿ ಯೋಜನೆಯಡಿ 3ಬಿ ರಾಕೆಟ್‌ನಲ್ಲಿ ಈ ಉಪಗ್ರಹ ಉಡಾವಣೆ ಮಾಡಿದೆ. ಪ್ರಮುಖವಾಗಿ ಭೂಮಿಯ ಸುತ್ತ ಅಥವಾ ಹತ್ತಿರ ಇರುವ ಕ್ಷುದ್ರಗ್ರಹಗಳ ಅಧ್ಯಯನ ಮಾಡಲು ಮುಂದಾಗಿದೆ. ಇದಕ್ಕಾಗಿ ಭೂಮಿಯಿಂದ ಅತೀವ ದೂರದಲ್ಲಿ ಈ ಉಪಗ್ರಹ ಸಂಚರಿಸುತ್ತಿದೆ. ಭೂಮಿಗೆ ಹತ್ತಿರ ಇರುವ ಕ್ಷುದ್ರಗ್ರಹದ ಮಾಹಿತಿಯನ್ನು ಕಲೆ ಹಾಕುವ ಮೂಲಕ ಮುಂಬರುವ ಅಪಾಯದ ಸೂಚನೆಯನ್ನು ಮೊದಲೇ ನೀಡಲು ಸಹಾಯವಾಗಲಿದೆ. ಇದರ ಜೊತೆಗೆ ಸೂರ್ಯನ ಕುರಿತು ಅಧ್ಯಯನ ನಡೆಸಲು ಚೀನಾ ಮುಂದಾಗಿದೆ. ವಿಶೇಷ ಅಂದರೆ ಈ ಉಗ್ರಹ ಹಲವು ಮಾದರಿಗಳನ್ನು ಸಂಗ್ರಹಿಸಲಿದೆ. ಅಧ್ಯಯನಕ್ಕಾಗಿ ಈ ಮಾದರಿಗಳು ಅತ್ಯಂತ ಪ್ರಮುಖವಾಗಿದ್ದು, ಚೀನಾ ಬಾಹ್ಯಾಕಾಶದಲ್ಲಿ ಹೊಸ ಇತಿಹಾಸ ರಚಿಸಲಿದೆ.

ಮಾದರಿ ಸಂಗ್ರಹಿಸಿ ಭೂಮಿಗೆ ಮರಳಿದೆ ರಾಕೆಟ್

ಭೂಮಿಯಿಂದ ಕಳುಹಿಸಿದ ಉಪಗ್ರಹ ಬಾಹ್ಯಾಕಾಶ ಸೇರಿದ ಬಳಿಕ ಮತ್ತೆ ಭೂಮಿ ಮರಳುವುದು ಅಪರೂಪ. ಆದರೆ ಚೀನಾ ಈ ಬಾರಿ ಕಳುಹಿಸಿರುವ ಉಪಗ್ರಹ ಮಾದರಿಗಳನ್ನು ಸಂಗ್ರಹಿಸಿ 2027ರ ನವೆಂಬರ್ ತಿಂಗಳಲ್ಲಿ ಭೂಮಿಗೆ ಮರಳಲಿದೆ.