Asianet Suvarna News Asianet Suvarna News

ಸೂರ್ಯಶಿಖಾರಿಗೆ ಮಹೂರ್ತ ಫಿಕ್ಸ್‌, ಸೆ.2ಕ್ಕೆ ಆದಿತ್ಯ ಎಲ್‌-1 ಉಡಾವಣೆ: ಇಸ್ರೋ ಅಧಿಕೃತ ಟ್ವೀಟ್‌

ಸೂರ್ಯನನ್ನು ಅವಲೋಕನ ಮಾಡುವ ಮೊಟ್ಟಮೊದಲ ಬಾಹ್ಯಾಕಾಶ ಆಧಾರಿತ ಭಾರತದ ವೀಕ್ಷಣಾಲಯ ಎನಿಸಿಕೊಂಡಿರುವ ಆದಿತ್ಯ ಎಲ್‌-1 ಅನ್ನು ಸೆಪ್ಟೆಂಬರ್‌ 2 ರಂದು ಉಡಾವಣೆ ಮಾಡಲಾಗುವುದು ಎಂದು ಇಸ್ರೋ ಅಧಿಕೃತವವಾಗಿ ತಿಳಿಸಿದೆ.

Isro Tweets on September 2 Aditya L1 Mission the first space based Indian observatory to study the Sun Launch san
Author
First Published Aug 28, 2023, 3:42 PM IST

ಬೆಂಗಳೂರು (ಆ.28): ಚಂದ್ರನ ಮೇಲೆ ವಿಕ್ರಮ್‌ ಲ್ಯಾಂಡರ್‌ಅನ್ನು ಯಶಸ್ವಿಯಾಗಿ ಸಾಫ್ಟ್‌ ಲ್ಯಾಂಡಿಂಗ್‌ ಮಾಡುವ ಮೂಲಕ ಜಗತ್ತಿನ ಗಮನವನ್ನು ತನ್ನತ್ತ ಸೆಳೆದಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಧಿಕೃತವಾಗಿ ತನ್ನ ಮುಂದಿನ ಮಿಷನ್‌ನ ಯೋಜನೆಯನ್ನು ಪ್ರಕಟಿಸಿದೆ. ಈಗಾಗಲೇ ಪ್ರಕಟವಾಗಿರುವಂತೆ ಸೂರ್ಯನನ್ನು ಅವಲೋಕನ ಮಾಡುವ ನಿಟ್ಟಿನಲ್ಲಿ ಬ್ಯಾಹ್ಯಾಕಾಶ ಆಧಾರಿತ ಭಾರತೀಯ ವೀಕ್ಷಣಾಲಯವಾದ ಆದಿತ್ಯ ಎಲ್‌-1 ನೌಕೆಯನ್ನು ಇಸ್ರೋ ಕಳಿಸಿಕೊಡಲಿದೆ ಎಂದು ವರದಿಯಾಗಿತ್ತು. ಈಗ ಈ ಯೋಜನೆಯ ಉಡಾವಣೆಯ ದಿನಾಂಕ ಹಾಗೂ ಸಮಯವನ್ನು ಇಸ್ರೋ ಪ್ರಕಟಿಸಿದೆ. ಮುಂದಿನ ಶನಿವಾರ ಅಂದರೆ, ಸೆಪ್ಟೆಂಬರ್‌ 2 ಎಂದು ಆದಿತ್ಯ ಎಲ್‌-1 ನೌಕೆಯನ್ನು ಉಡಾವಣೆ ಮಾಡಲಿದ್ದೇವೆ ಎಂದು ಇಸ್ರೋ ತಿಳಿಸಿದೆ. ಬೆಳಗ್ಗೆ 11.50ಕ್ಕೆ ಶ್ರೀಹರಿಕೋಟಾದ ಸತೀಶ್‌ ಧವನ್‌ ಉಡಾವಣಾ ಕೇಂದ್ರದಿಂದ ಇದರ ಉಡಾವಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದೆ.

ಇನ್ನು ಸಾರ್ವಜನಿಕರು ಕೂಡ ಈ ಉಡಾವಣೆಯನ್ನು ನೇರವಾಗಿ ವೀಕ್ಷಣೆ ಮಾಡಬಹುದು ಅದಕ್ಕಾಗಿ ಇಸ್ರೋ ನೋಂದಣಿ ಮಾಡಿಕೊಳ್ಳುವಂತೆ ಮಾಹಿತಿ ನೀಡಿದೆ. ಶಾರ್‌ ಎಂದು ಕರೆಯಲ್ಪಡುವ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಬೆಳಗ್ಗೆ 11.50ಕ್ಕೆ ಆದಿತ್ಯ ಎಲ್‌ -1 ಉಡಾವಣೆಯಾಗಲಿದೆ. ಇದನ್ನು ಲಾಚ್‌ ವೀವ್‌ ಗ್ಯಾಲರಿಯಿಂದ ನೋಡಬೇಕಾದಲ್ಲಿ ಆ.29ರಿಂದ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ ಎಂದು ಇಸ್ರೋ ಮಾಹಿತಿ ನೀಡಿದೆ.


ಏನಿದು ಆದಿತ್ಯ-1 ಮಿಷನ್‌: ಇಸ್ರೋ ಆದಿತ್ಯ ಎಲ್‌-1 ಅನ್ನು ಭೂಮಿಯಿಂದ 1.5 ಮಿಲಿಯನ್‌ ಕಿಲೋಮೀಟರ್‌ ದೂರದ ಲಾಂಗ್ರೇಜ್‌ ಪಾಯಿಂಟ್‌ಗೆ ತಲುಪಿಸುತ್ತದೆ.  ಚಂದ್ರನಿಂದ ನಾಲ್ಕು ಪಟ್ಟು ದೂರದ ಅಂತರ ಇದಾಗಿದೆ. ಬಾಹ್ಯಾಕಾಶ ಆಧಾರಿತ ವೀಕ್ಷಣಾಲಯ ಇದಾಗಿರಲಿದೆ. ಸೂರ್ಯನ ಬಳಿ ಈ ವೀಕ್ಷಣಾಲಯ ಯಾವ ರೀತಿ ತೆರೆದುಕೊಳ್ಳಲಿದೆ ಎಂದೂ ಇಸ್ರೋ ಚಿತ್ರ ಸಹಿತ ಮಾಹಿತಿ ನೀಡಿದೆ. ಅದರೊಂದಿಗೆ  ನೌಕೆಯಲ್ಲಿ ಇದು ಯಾವ ರೀತಿ ಇರಲಿದೆ ಎನ್ನುವ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಆರಂಭದಲ್ಲಿ ಈ ನೌಕೆಯನ್ನು ಭೂಮಿಯ ಕೆಳಕ್ಷಕೆಯಲ್ಲಿ ಮೊದಲ ಸ್ಥಾಪನೆ ಮಾಡಲಾಗುತ್ತದೆ. ಬಳಿಕ ನೌಕೆಯಲ್ಲಿರುವ ಪ್ರಪಲ್ಶನ್‌ ಮಾಡ್ಯುಲ್‌ಅನ್ನು ಬಳಸಿಕೊಂಡು ದೀರ್ಘ ಕಕ್ಷೆಯ ಮೂಲಕ ಇದನ್ನು ಲಾಂಗ್ರೇಜ್‌-1 ಪಾಯಿಂಟ್‌ಗೆ ತಲುಪಿಸುವುದು ಇಸ್ರೋದ ಗುರಿಯಾಗಿದೆ. ಈ ಎಲ್‌-1 ಪಾಯಿಂಟ್‌ ಎನ್ನುವ ಪ್ರದೇಶದಲ್ಲಿ ಭೂಮಿ ಕಕ್ಷೆಗಳ ಗುರುತ್ವಾಕರ್ಷಣೆ ಬಲ ಇರೋದಿಲ್ಲ. ಭೂಕಕ್ಷೆಯನ್ನು ದಾಟಿದ ಬಳಿಕ ಇದನ್ನು ಎಲ್‌-1ನ ಹೊರಗಿರುವ ದೊಡ್ಡ ಹಾಲೋ ಆರ್ಬಿಟ್‌ಗೆ ನೌಕೆಯನ್ನು ಸೇರಿಸಲಾಗುತ್ತದೆ. ಉಡಾವಣೆಯಿಂದ ಎಲ್‌-1ವರೆಗಿನ ಆದಿತ್ಯ-ಎಲ್‌1 ಯೋಜನೆಯ ಅವಧಿ ಭರ್ತಿ ನಾಲ್ಕು ತಿಂಗಳು. ಆದಿತ್ಯ ನೌಕೆ ಎಲ್‌-1ಗೆ ಹೇಗೆ ಸೇರುತ್ತದೆ ಎನ್ನುವ ಮಾಹಿತಿಯನ್ನೂ ಇಸ್ರೋ ಹಂಚಿಕೊಂಡಿದೆ.

ಭಾರತದ ಸೂರ್ಯ ಶಿಖಾರಿ.. 'ಆದಿತ್ಯ' ಮೊದಲ ಚಿತ್ರಗಳನ್ನು ಬಿಡುಗಡೆ ಮಾಡಿದ ಇಸ್ರೋ!


ಇನ್ನು ಇಡೀ ಯೋಜನೆಯ ಮೂಲ ಉದ್ದೇಶ ಸೂರ್ಯನ ಬಗ್ಗೆ ಇನ್ನಷ್ಟು ಆಳವಾಗಿ ತಿಳಿದುಕೊಳ್ಳುವುದು. ಸೂರ್ಯನ ಕರೋನಾ ಬಿಸಿಯಾಗುವ ಬಗ್ಗೆ ಸೌರ ಮಾರುತ ಹೇಗೆ ಎದ್ದೇಳಲಿದೆ ಎನ್ನುವ ಬಗ್ಗೆ ನೌಕೆ ಅಧ್ಯಯನ ಮಾಡಲಿದೆ. ಸೂರ್ಯನ ವಾತಾವರಣದ ಅಮೂಲಾಗ್ರ ಅಧ್ಯಯನವನ್ನೂ ಮಾಡಲಿದೆ. ಸೌರ ಮಂಡಲದಲ್ಲಿ ಸೌರ ಗಾಳಿ ಹಂಚಿಕೆಯಾಗುವ ಬಗ್ಗೆ ತಾಪಮಾನ ಏರುವ ಬಗ್ಗೆ ನೌಕೆ ತಿಳಿದುಕೊಳ್ಳಲಿದೆ.

ಚಂದ್ರಯಾನದ ಬೆನ್ನಲ್ಲೇ ಸೂರ್ಯನ ಅಧ್ಯಯನಕ್ಕೆ ಇಸ್ರೋ ಸಜ್ಜು: ಶ್ರೀಹರಿಕೋಟಕ್ಕೆ ಬಂದ ಆದಿತ್ಯ-ಎಲ್‌1 ಉಪಗ್ರಹ

Follow Us:
Download App:
  • android
  • ios