Asianet Suvarna News Asianet Suvarna News

ಎಲ್ಲಾ ವ್ಯವಸ್ಥೆ ಫೇಲ್‌ ಆದರೂ, ವಿಕ್ರಮ್‌ ಲ್ಯಾಂಡರ್‌ ಚಂದ್ರನ ಮೇಲೆ ಇಳಿಯೋದು ಖಂಡಿತ: ಇಸ್ರೋ ಚೀಫ್‌

ವಿಕ್ರಮ್‌ ಲ್ಯಾಂಡರ್‌ನ ಸೆನ್ಸಾರ್‌ಗಳು ಮತ್ತು ಇಂಜಿನ್‌ಗಳು ವಿಫಲವಾದರೂ, ಅದು ಚಂದ್ರನ ಮೇಲ್ಮೈನಲ್ಲಿ ಸಾಫ್ಟ್‌ ಲ್ಯಾಂಡ್‌ ಮಾಡುವುದು ಖಚಿತ ಎಂದು ಇಸ್ರೋ ಮುಖ್ಯಸ್ಥ ಎಸ್‌.ಸೋಮನಾಥ್‌ ಹೇಳಿದ್ದಾರೆ.

Chandrayaan 3 landing Even if everything fails still Vikram lander will land says ISRO chief S Somanath san
Author
First Published Aug 9, 2023, 3:48 PM IST | Last Updated Aug 9, 2023, 3:48 PM IST

ನವದೆಹಲಿ (ಆ.9): ಚಂದ್ರಯಾನ-3 ನೌಕೆಯ ಎಲ್ಲಾ ಸೆನ್ಸಾರ್‌ಗಳು ಹಾಗೂ ಅದರ ಎರಡು ಇಂಜಿನ್‌ಗಳು ಕಾರ್ಯನಿರ್ವಹಿದೇ ಇದ್ದರೂ ಸದ ಆಗಸ್ಟ್‌ 23 ರಂದು ಭಾರತದ ಮೂರನೇ ಚಂದ್ರಯಾನ ಮಿಷನ್‌ನ ಲ್ಯಾಂಡರ್‌ ವಿಕ್ರಮ್‌ ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್‌ ಲ್ಯಾಂಡಿಂಗ್‌ ಮಾಡಲಿದೆ ಎಂದು ಇಸ್ರೋ ಅಧ್ಯಕ್ಷ ಎಸ್‌ ಸೋಮನಾಥ್‌ ಹೇಳಿದ್ದಾರೆ.  ಲಾಭರಹಿತ ಸಂಸ್ಥೆ ದಿಶಾ ಭಾರತ್ ಆಯೋಜಿಸಿದ್ದ ‘ಚಂದ್ರಯಾನ-3: ಭಾರತ್‌ನ ಹೆಮ್ಮೆಯ ಬಾಹ್ಯಾಕಾಶ ಮಿಷನ್’ ಕುರಿತು ನಡೆದ ಸಂವಾದದಲ್ಲಿ  ಇಸ್ರೋ ಮುಖ್ಯಸ್ಥರು ಈ ಹೇಳಿಕೆ ನೀಡಿದ್ದಾರೆ. ಲ್ಯಾಂಡರ್‌ನ ಸಂಪೂರ್ಣ ವಿನ್ಯಾಸ ಯಾವ ರೀತಿ ಮಾಡಲಾಗಿದೆಯೆಂದರೆ, ಚಂದ್ರನ ನೆಲದಲ್ಲಿ ಯಾವುದೇ ರೀತಿಯ ವೈಫಲ್ಯಗಳಾದರೂ ಅದನ್ನು ನಿಭಾಯಿಸಲು ಸಾಧ್ಯವಾಗುವಂಥ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ ಎಂದುಸ ಸೋಮನಾಥ್‌ ತಿಳಿಸಿದ್ದಾರೆ. 'ಎಲ್ಲವೂ ವಿಫಲವಾದರೆ, ಅದರಲ್ಲೂ ಎಲ್ಲಾ ಸೆನ್ಸಾರ್‌ಗಳು ವಿಫಲವಾದರೆ, ಇಲ್ಲವೇ ಸೂಕ್ತವಾಗಿ ಕೆಲಸ ಮಾಡದೇ ಇದ್ದರೂ, ಚಂದ್ರನ ಮೇಲೆ ವಿಕ್ರಮ್‌ ಸಾಫ್ಟ್‌ ಲ್ಯಾಂಡಿಂಗ್‌ ಮಾಡುತ್ತದೆ. ಅದೇ ರೀತಿಯಲ್ಲಿ ಇದನ್ನು ವಿನ್ಯಾಸ ಮಾಡಲಾಗಿದೆ. ಪ್ರೊಪಲ್ಶನ್‌ ಸಿಸ್ಟಮ್‌ ಉತ್ತಮವಾಗಿ ಕಾರ್ಯನಿವರ್ಹಿಸುತ್ತದೆ ಎಂದು ಸೋಮನಾಥ್‌ ತಿಳಿಸಿದ್ದಾರೆ.

ಜುಲೈ 14 ರಂದು ಶ್ರೀಹರಿಕೋಟಾದಿಂದ ನಭಕ್ಕೆ ಹಾರಿದ್ದ ಚಂದ್ರಯಾನ 3 ನೌಕೆ, ಆಗಸ್ಟ್‌ 5 ರಂದು ಚಂದ್ರನ ಕಕಕ್ಷೆಗ ತಲುಪಿದೆ. ಆಗಸ್ಟ್‌ 9ರ ವೇಳೆಗೆ ಚಂದ್ರಯಾನ-3 ನೌಕೆ ಮೂರನೇ ಕಕ್ಷಗೆ ಯಶಸ್ವಿಯಾಗಿ ಇಳಿಸಿದೆ. ಇನ್ನೂ ಎರಡು ಕ್ಷಕೆ ಇಳಿಸುವ ಕಾರ್ಯ ನಡೆಯಲಿದ್ದು, ಆಗಸ್ಟ್‌ 23 ರಂದು ಚಂದ್ರನ ಮೇಲ್ಮೈ ಮೇಲೆ ವಿಕ್ರಮ್‌ ಲ್ಯಾಂಡರ್‌ ಇಳಿಯಬೇಕಿದೆ. ಆಗಸ್ಟ್‌ 14 ಮತ್ತು 16 ರಂದು ಇನ್ನೆರಡು ಕಕ್ಷೆ ಇಳಿಸುವ ಕೆಲಸಗಳು ನಡೆಯಲಿದೆ. ಚಂದ್ರನಿಂದ 100 ಕಿಮೀ * 100 ಕಿ.ಮೀವರೆಗಿನ ಅಂತರದವರೆಗೆ ಇದು ಇಳಿಯಲಿದೆ. ಆ ಬಳಿಕ ವಿಕ್ರಮ್‌ ಲ್ಯಾಂಡರ್‌ ಇಳಿಯುವ ಪ್ರಕ್ರಿಯೆ ನಡೆಲಿದೆ ಎಂದು ಸೋಮನಾಥ್‌ ಹೇಳಿದ್ದಾರೆ.

ಲ್ಯಾಂಡರ್‌ ಡಿಬೂಸ್ಟ್‌ ಬಳಿಕ, ಪ್ರಪಲ್ಶನ್‌ ಮಾಡ್ಯುಲ್‌ನಿಂದ ಲ್ಯಾಂಡರ್‌ಅನ್ನು ಬೇರ್ಪಡಿಸುವ ಕಾರ್ಯ ನಡೆಯಲಿದೆ. ಡಿಬೂಸ್ಟ್‌ ಎಂದರೆ ನೌಕೆಯ ವೇಗವನ್ನು ಕಡಿಮೆ ಮಾಡುವ ಕೆಲಸ. ಲ್ಯಾಂಡರ್‌, ಪ್ರಪಲ್ಶನ್‌ ಮಾಡ್ಯುಲ್‌ನಿಂದ ಬೇರ್ಪಟ್ಟ ಬಳಿಕ ಚಂದ್ರನ ಮೇಲೆ ಇಳಿಯುವ ಪ್ರಕ್ರಿಯೆ ಆರಂಭವಾಗಲಿದೆ. ಲ್ಯಾಂಡರ್‌ನಲ್ಲಿನ ಎರಡು ಇಂಜಿನ್‌ಗಳು ಈ ಬಾರಿಯೂ ವಿಫಲ ಕಂಡರೆ, ಅದರಿಂದ ನೌಕೆಗೆ ಯಾವುದೇ ಸಮಸ್ಯೆ ಆಗೋದಿಲ್ಲ. ಲ್ಯಾಂಡರ್‌ ಸುಲಭವಾಗಿ ಚಂದ್ರನ ಮೇಲೆ ಇಳಿಯಲಿದೆ ಎಂದಿದ್ದಾರೆ.

ಇಸ್ರೋ ಮುಖ್ಯಸ್ಥರ ಪ್ರಕಾರ, ಚಂದ್ರನ ಮೇಲ್ಮೈಯಲ್ಲಿ ಲಂಬವಾಗಿ ಇರುವ 'ವಿಕ್ರಮ್' ಲ್ಯಾಂಡರ್‌ನ್ನು ಅಡ್ಡವಾಗಿ ಇರಿಸುವುದೇ ದೊಡ್ಡ ಸವಾಲು ಎಂದು ಹೇಳಿದರು. ಒಮ್ಮೆ ಲ್ಯಾಂಡರ್ ಆರ್ಬಿಟರ್‌ನಿಂದ ಬೇರ್ಪಟ್ಟರೆ, ಅದು ಅಡ್ಡಲಾಗಿ ಚಲಿಸುತ್ತದೆ ಎಂದು ಸೋಮನಾಥ್ ಹೇಳಿದ್ದಾರೆ. ಕುಶಲ ಸರಣಿಯ ಮೂಲಕ, ಚಂದ್ರನ ಮೇಲೆ ಸುರಕ್ಷಿತವಾಗಿ ಇಳಿಯಲು ಲಂಬವಾದ ನಿಲುವಿಗೆ ತರಲಾಗುವುದು, ಆದಾಗ್ಯೂ, ಈ ವ್ಯಾಯಾಮವು ನಿರ್ಣಾಯಕವಾಗಿದೆ ಎಂದು ಅವರು ಹೇಳಿದರು. ಕೊನೆಯ ಕಾರ್ಯಾಚರಣೆಯ ಸಮಯದಲ್ಲಿ ಇಸ್ರೋ ತನ್ನ ಲ್ಯಾಂಡರ್ ಅನ್ನು ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತವಾಗಿ ಸ್ಪರ್ಶಿಸಲು ಕಳೆದ ಬಾರಿ ವಿಫಲವಾಗಿತ್ತು. ಈ ಕುರಿತಾಗಿ ಮಾತನಾಡುವ ವೇಳೆ ಈ ಮಾಹಿತಿ ನೀಡಿದ್ದಾರೆ. ಸಮತಲದಿಂದ ಲಂಬ ದಿಕ್ಕಿಗೆ ವರ್ಗಾಯಿಸುವ ಸಾಮರ್ಥ್ಯವು ನಾವು ಇಲ್ಲಿ ಮಾಡಬೇಕಾಗಿದೆ. ಇಲ್ಲಿ ಮಾತ್ರ ಕಳೆದ ಬಾರಿ ಸಮಸ್ಯೆ ಎದುರಿಸಿದ್ದೆವು,’’ ಎಂದರು.

Chandrayaan-3: ಭೂಮಿಯನ್ನು ತೊರೆದ 22 ದಿನಗಳ ಬಳಿಕ ಚಂದ್ರನ ಕಕ್ಷೆಗೆ ಸೇರಿದ ಚಂದ್ರಯಾನ-3

"ಇಂಧನ ಬಳಿಕೆ ಕಡಿಮೆ ಮಾಡಬೇಕಿತ್ತು.ದೂರದ ಲೆಕ್ಕಾಚಾರಗಳು ಸರಿಯಾಗಬೇಕಿತ್ತ ಮತ್ತು ಎಲ್ಲಾ ಅಲ್ಗಾರಿದಮ್‌ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತವೆ ಎಂದು ಖಚಿತಪಡಿಸಿಕೊಳ್ಳುವುದು ಸಹ ಈ ಬಾರಿಯ ಸವಾಲಾಗಿದೆ' ಎಂದು ಇಸ್ರೋ ಮುಖ್ಯಸ್ಥರು ಹೇಳಿದರು. ಇಸ್ರೋ ತಂಡ ಈ ಬಾರಿ ಲೆಕ್ಕಾಚಾರದಲ್ಲಿ ಒಂದಿಷ್ಟು ವ್ಯತ್ಯಾಸಗಳಿದ್ದರೂ ವಿಕ್ರಮ್ ಸರಿಯಾಗಿ ಇಳಿಯುವಂತೆ ವ್ಯವಸ್ಥೆ ಮಾಡಿದೆ ಎಂದು ವಿವರಿಸಿದರು.

Chandrayaan 3: ಬಾಹ್ಯಾಕಾಶ ನೌಕೆಗೆ ನಾಳೆ ಬಹುದೊಡ್ಡ ಅಗ್ನಿಪರೀಕ್ಷೆ!

Latest Videos
Follow Us:
Download App:
  • android
  • ios