Chandrayaan-3: ಭೂಮಿಯನ್ನು ತೊರೆದ 22 ದಿನಗಳ ಬಳಿಕ ಚಂದ್ರನ ಕಕ್ಷೆಗೆ ಸೇರಿದ ಚಂದ್ರಯಾನ-3
ಈಗಾಗಲೇ ತನ್ನ ಪ್ರಯಾಣದಲ್ಲಿ ಮುಕ್ಕಾಲು ಪಾಲು ಯಾನ ಕ್ರಮಿಸಿರುವ ಚಂದ್ರಯಾನ-3 ನೌಕೆ, ಶನಿವಾರ ಮಹತ್ವದ ಮೈಲಿಗಲ್ಲು ಸಾಧಿಸಿದ್ದು, ಇಸ್ರೂ ಈ ನೌಕೆಯನ್ನು ಚಂದ್ರನ ಕಕ್ಷೆಗೆ ಸೇರಿಸುವಲ್ಲಿ ಯಶಸ್ವಿಯಾಗಿದೆ.
ಬೆಂಗಳೂರು (ಆ.5): ಭಾರತದ ಮೂರನೇ ಮೂನ್ ಮಿಷನ್ ಆಗಿರುವ ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ಚಂದ್ರನತ್ತ ತನ್ನ ಪ್ರಯಾಣದ ಮೂರನೇ ಎರಡರಷ್ಟು ಭಾಗವನ್ನು ಮುಕ್ತಾಯ ಮಾಡಿದೆ. ಮಹತ್ವದ ಚಂದ್ರನ ಕಕ್ಷೆಯ ಇಂಜೆಕ್ಷನ್ (LOI) ಅನ್ನು ಆಗಸ್ಟ್ 5 ರಂದು ಯಶಸ್ವಿಯಾಗಿ ಪೂರೈಸಿದೆ. 'ಇಸ್‌ಟ್ರಾಕ್, ನನಗೆ ಚಂದ್ರನ ಗ್ರ್ಯಾವಿಟಿ ಫೀಲ್ ಆದಂತೆ ಅನಿಸಿದೆ. ಚಂದ್ರಯಾನ-3 ಬಾಹ್ಯಾಕಾಶ ನೌಕೆ ಯಶಸ್ವಿಯಾಗಿ ಚಂದ್ರನ ಕಕ್ಷೆಗೆ ಸೇರ್ಪಡೆ ಮಾಡಲಾಗಿದೆ. ಪೆರಿಲುನ್‌ನಲ್ಲಿ ರೆಟ್ರೊ-ಬರ್ನಿಂಗ್ ಅನ್ನು ಬೆಂಗಳೂರಿನ ಮಿಷನ್ ಆಪರೇಷನ್ಸ್ ಕಾಂಪ್ಲೆಕ್ಸ್, ISTRAC ನಿಂದ ಆದೇಶಿಸಲಾಯಿತು. ಮುಂದಿನ ಕಾರ್ಯಾಚರಣೆ ಆಗಸ್ಟ್ 6 ರಂದು ನಡೆಯಲಿದ್ದು, ಚಂದ್ರ ಚಂದ್ರನ ಕಕ್ಷೆಗೆ ನೌಕೆಯನ್ನು ಉಳಿಸುವ ಕಾರ್ಯ ನಡೆಯಲಿದೆ' ಎಂದು ಇಸ್ರೋ ಟ್ವೀಟ್ ಮಾಡಿದೆ. ಚಂದ್ರನ ಗುರುತ್ವಾಕರ್ಷಣೆಯಲ್ಲಿ ವಾಹನವನ್ನು ಸೆರೆಹಿಡಿಯಲು ವಾಹನದ ವೇಗವನ್ನು ಕಡಿಮೆಗೊಳಿಸಲಾಯಿತು. ವೇಗವನ್ನು ಕಡಿಮೆ ಮಾಡಲು ಇಸ್ರೋ ವಿಜ್ಞಾನಿಗಳು ವಾಹನದ ಥ್ರಸ್ಟರ್‌ಗಳನ್ನು ಕೆಲಕಾಲ ಉರಿಸಿದರು. ಇಸ್ರೋ ಎಕ್ಸ್ ಪೋಸ್ಟ್ ನಲ್ಲಿ ಈ ಮಾಹಿತಿಯನ್ನು ನೀಡಿದೆ.
ಆಗಸ್ಟ್ 1 ರಂದು ರಾತ್ರಿ 12 ಗಂಟೆಯ ಸುಮಾರಿಗೆ ಚಂದ್ರಯಾನ-3 ನೌಕೆ ಭೂಮಿಯ ಕಕ್ಷೆಯನ್ನು ತೊರೆದು ಚಂದ್ರನ ಹೆದ್ದಾರಿಗೆ ಪ್ರವೇಶ ಪಡೆದುಕೊಂಡಿತ್ತು. ಇದನ್ನು ಟ್ರಾನ್ಸ್‌ಲುನಾರ್ ಇಂಜೆಕ್ಷನ್ ಎನ್ನುತ್ತಾರೆ. ಅಂದರೆ, ಚಂದ್ರನ ಕಕ್ಷಗೆ ಸೇರುವ ನಿಟ್ಟಿನಲ್ಲಿ ಬಾಹ್ಯಾಕಾಶ ನೌಕೆಯ ಪ್ರಯಾಣ. ಮುಂದಿನ ಹಂತವಾಗಿ ಚಂದ್ರನ ಕಕ್ಷೆಯಲ್ಲಿ ನೌಕೆ ಐದು ಸುತ್ತು ಮಾಡಲಿದ್ದು, ಆಗಸ್ಟ್ 23ರ ಸಂಜೆ ಚಂದ್ರನ ಮೇಲೆ ಇಳಿಯುವ ಕೆಲಸ ಮಾಡಲಿದೆ.
Explainer: ಬಾಹ್ಯಾಕಾಶದಲ್ಲಿಯೇ ಗಗನಯಾತ್ರಿಗಳು ಸಾವು ಕಂಡರೆ ಏನಾಗುತ್ತದೆ?
ಏನಿದು ಎಲ್‌ಓಐ, ಯಾಕಿಷ್ಟು ಮುಖ್ಯ?: ಲೂನಾರ್ ಆರ್ಬಿಟ್ ಇಂಜೆಕ್ಷನ್ (LOI) ಬಾಹ್ಯಾಕಾಶ ಕಾರ್ಯಾಚರಣೆಗಳಲ್ಲಿ ಒಂದು ನಿರ್ಣಾಯಕ ತಂತ್ರವಾಗಿದ್ದು, ಭೂಮಿಯ ಸುತ್ತಲಿನ ಪಥದಿಂದ ಬಾಹ್ಯಾಕಾಶ ನೌಕೆಯನ್ನು ಚಂದ್ರನ ಕಕ್ಷೆಯನ್ನು ಸೇರಿಸುವ ಬಹುಮುಖ್ಯ ಕಾರ್ಯಾಚರಣೆಯಾಗಿದೆ. ಇದು ಬಾಹ್ಯಾಕಾಶ ನೌಕೆಯ ಇಂಜಿನ್‌ಗಳನ್ನು ಅದರ ವೇಗವನ್ನು ಹೆಚ್ಚಿಸಲು ಮತ್ತು ಅದರ ಮಾರ್ಗವನ್ನು ಬದಲಿಸಲು ಅದರ ಪ್ರಯಾಣದ ನಿರ್ದಿಷ್ಟ ಹಂತದಲ್ಲಿ ಇಂಜಿನ್ ಚಾಲನೆ ಮಾಡುವುದನ್ನು ಒಳಗೊಂಡಿರುತ್ತದೆ, ಇದು ಚಂದ್ರನ ಗುರುತ್ವಾಕರ್ಷಣೆಯಿಂದ ಸೆರೆಹಿಡಿಯಬೇಕು ಮತ್ತು ಅದರ ಕಕ್ಷೆಗೆ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ಎಲ್‌ಓಐ ನಿಖರವಾದ ಮತ್ತು ಎಚ್ಚರಿಕೆಯಿಂದ ಲೆಕ್ಕಾಚಾರ ಮಾಡಿದ ಕುಶಲತೆಯಾಗಿದ್ದು, ಇದು ಚಂದ್ರನ ಕಾರ್ಯಾಚರಣೆಗಳಲ್ಲಿ ಮಹತ್ವದ ಹೆಜ್ಜೆಯನ್ನು ಗುರುತಿಸುತ್ತದೆ. ಚಂದ್ರನ ಕಕ್ಷೆಗೆ ನೌಕೆ ಸೇರ್ಪಡೆಯಾಗದೇ ಇದ್ದಲ್ಲಿ ಚಂದ್ರನ ಮೇಲ್ಮೈಗೆ ಇಳಿಯೋದು ಸಾಧ್ಯವಾಗೋದೇ ಇಲ್ಲ.
Chandrayaan 3: ಬಾಹ್ಯಾಕಾಶ ನೌಕೆಗೆ ನಾಳೆ ಬಹುದೊಡ್ಡ ಅಗ್ನಿಪರೀಕ್ಷೆ!