ನಿದ್ರಾ ಸ್ಥಿತಿಯಲ್ಲಿರುವ ಇಸ್ರೋದ ವಿಕ್ರಂ ಲ್ಯಾಂಡರ್‌ನ ಚಿತ್ರವನ್ನು ಚಂದ್ರಯಾನ 2 ಯೋಜನೆಯ ಭಾಗವಾಗಿದ್ದ ಆರ್ಬಿಟರ್‌ ಸೆರೆಹಿಡಿದಿದೆ.  ಚಂದ್ರಯಾನ-3 ಯೋಜನೆಯ ಲ್ಯಾಂಡರ್‌ ವಿಕ್ರಂ ಚಿತ್ರವನ್ನು ಸೆ.6ರಂದು ತೆಗೆದಿದೆ ಎಂದು ಇಸ್ರೋ ಹೇಳಿದೆ.

ನವದೆಹಲಿ (ಸೆ.10): ಸದ್ಯ ನಿದ್ರಾ ಸ್ಥಿತಿಯಲ್ಲಿರುವ ಇಸ್ರೋದ ವಿಕ್ರಂ ಲ್ಯಾಂಡರ್‌ನ ಚಿತ್ರವನ್ನು ಚಂದ್ರಯಾನ 2 ಯೋಜನೆಯ ಭಾಗವಾಗಿದ್ದ ಆರ್ಬಿಟರ್‌ ಸೆರೆಹಿಡಿದಿದೆ. ಈ ಕುರಿತಾಗಿ ಟ್ವೀಟ್‌ ಮಾಡಿರುವ ಇಸ್ರೋ, ‘ಚಂದ್ರಯಾನ-2 ಯೋಜನೆಯ ಆರ್ಬಿಟರ್‌ನಲ್ಲಿರುವ ಡುಯೆಲ್‌ ಫ್ರೀಕ್ವೆನ್ಸಿ ಸಿಂಥೆಟಿಕ್‌ ಅಪೆರ್ಚುರ್‌ ರೇಡಾರ್‌ (ಡಿಎಫ್‌ಎಸ್‌ಎಆರ್‌) ಚಂದ್ರಯಾನ-3 ಯೋಜನೆಯ ಲ್ಯಾಂಡರ್‌ ವಿಕ್ರಂ ಚಿತ್ರವನ್ನು ಸೆ.6ರಂದು ತೆಗೆದಿದೆ’ ಎಂದು ಹೇಳಿದೆ. ಚಂದ್ರಯಾನ-2 ಯೋಜನೆಯ ಆರ್ಬಿಟರ್‌ ಈ ಮೊದಲು ವಿಕ್ರಂ ಲ್ಯಾಂಡರ್‌ ಜೊತೆ ಸಂಪರ್ಕ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಇದು ರಡಾರ್‌ ಬಳಸಿ ತೆಗೆದಿರುವ ಚಿತ್ರವಾದ ಕಾರಣ ಸೂರ್ಯನ ಬೆಳಕಿಲ್ಲದಿದ್ದರೂ ಸಹ ಲ್ಯಾಂಡರನ್ನು ಗುರುತಿಸಬಹುದಾಗಿದೆ. ಅಲ್ಲದೇ ಇದು ಪ್ರತಿ ವಸ್ತುವಿನ ನಡುವೆ ಇರುವ ಅಂತರ ಮತ್ತು ಅವುಗಳ ಭೌತಿಕ ಗುಣಲಕ್ಷಣಗಳನ್ನು ಸಹ ತಿಳಿಸಲಿದೆ ಎಂದು ಇಸ್ರೋ ಹೇಳಿದೆ.

Scroll to load tweet…