ಬೆಂಗಳೂರು ಆಗಸದಲ್ಲಿ ಕಾಣಿಸಿದ ಸ್ವರ್ಗದ ಬಾಗಿಲು, ಮೋಡದೊಳಗಿನ ವಿಸ್ಮಯ ಕಂಡು ಬೆರಗಾದ ಜನ!
ಆಗಸದಲ್ಲಿ ಹಲವು ಚಿತ್ತಾರಗಳು ಜನರನ್ನು ಬೆರಗುಗೊಳಿಸುತ್ತದೆ. ಮೋಡ, ನಕ್ಷತ್ರಗಳು, ಚಂದ್ರ ಸೇರಿದಂತೆ ಎಲ್ಲವೂ ಕುತೂಹಲಗಳ ಆಗರ. ಇದರ ನಡುವೆ ಕೆಲವು ಭಾರಿ ವಿಚಿತ್ರಗಳು ಗೋಚರಿಸುತ್ತದೆ. ಹೀಗೆ ಬೆಂಗಳೂರಿನ ಆಗಸದ ಮೋಡದಲ್ಲಿ ನೆರಳಿನ ಆಕೃತಿಯೊಂದು ಗೋಚರಿಸಿದೆ. ಇದು ಸ್ವರ್ಗದ ಬಾಗಿಲು ಎಂದು ಹಲವರು ಪ್ರತಿಕ್ರಿಯೆ ನೀಡಿದ್ದರೆ, ಬಹುತೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಇಲ್ಲಿದೆ.
ಬೆಂಗಳೂರು(ಜು.25) ಆಗಸದ ಕೌತುಕ ಬಗೆದಷ್ಟು ಬಗೆಹರಿಯದ ಸಾಗರ. ಹಲವು ಬಾರಿ ಇದೇ ಆಗಸ ಕೆಲ ಚಿತ್ರ ವಿಚಿತ್ರಗಳನ್ನು, ಅಚ್ಚರಿಗಳನ್ನು ನೀಡಿದೆ. ಹೀಗೆ ಬೆಂಗಳೂರಿನ ಆಗಸದಲ್ಲಿ ಕಂಡ ವಿಚಿತ್ರ ಗೋಚರ ಹಲವರನ್ನು ಚಕಿತಗೊಳಿಸಿದೆ. ಮೋಡದೊಳಗಿನಿಂದ ಕಾಣಿಸಿಕೊಂಡ ಬಾಗಿಲು ರೀತಿಯ ಆಕೃತಿ ಇದೀಗ ಹಲವರ ಗಮನಸೆಳೆದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಸ್ಮಯ ಭಾರಿ ಚರ್ಚೆಯಾಗುತ್ತಿದೆ. ಹಲವರು ಇದನ್ನು ಸ್ವರ್ಗದ ಬಾಗಿಲು ಎಂದು ಕರೆದಿದ್ದಾರೆ. ಇನ್ನೂ ಕೆಲವರು ಮಳೆಯಾಗುತ್ತಿರುವ ಕಾರಣ ಮಂಜು ಮಿಶ್ರಿತ ಮೋಡ ಕೆಳಮಟ್ಟಕ್ಕೆ ಇಳಿದಿದೆ.ಹೀಗಾಗಿ ಇದು ಕಟ್ಟಡವಾಗಿರುವ ಸಾಧ್ಯತೆ ಹೆಚ್ಚು ಎಂದಿದ್ದಾರೆ. ಆದರೆ ಈ ವಿಡಿಯೋ ಭಾರಿ ವೈರಲ್ ಆಗಿದೆ.
ಜುಲೈ 24ರ ಸಂಜೆ ಬೆಂಗಳೂರಿನ ಹೆಬ್ಬಾಳ ಫ್ಲೈ ಓವರ್ ಬಳಿ ಈ ವಿಸ್ಮಯ ಗೋಚರಿಸಿದೆ. ಟ್ವಿಟರ್‌ನಲ್ಲಿ ಈ ಕುರಿತು ಭಾರಿ ಚರ್ಚೆಯಾಗುತ್ತಿದೆ. ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಬಳಿಕ ಅಚ್ಚರಿಯ ನೆರಳೊಂದು ಬೆಂಗಳೂರಿನ ಹೆಬ್ಬಾಳ ಫೈಓವರ್ ಬಳಿ ಆಗಸದಲ್ಲಿ ಕಾಣಿಸಿದೆ. ನೀವು ಯಾರಾದರೂ ಈ ಆಕೃತಿಯನ್ನು ನೋಡಿದ್ದೀರಾ? ಇದು ಏನು? ಕಟ್ಟದ ನೆರಳೇ? ಇದರ ಹಿಂದಿನ ವಿಜ್ಞಾನವೇನು? ಎಂದು ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ.
ಬಾನಂಗಳದಲ್ಲಿ ಉಲ್ಕೆಗಳ ವಿಸ್ಮಯ; ಇದೊಂದು ಅಪೂರ್ವ ವಿದ್ಯಾಮಾನ
ಈ ವಿಡಿಯೋಗೆ ಹಲವರು ಕಮೆಂಟ್ ಮಾಡಿದ್ದಾರೆ. ಬೆಂಗಳೂರು ಆಗಸದಲ್ಲಿ ಕಾಣಿಸಿದ ಸ್ವರ್ಗದ ಬಾಗಿಲು ಎಂದು ಕರೆದಿದ್ದಾರೆ. ಇನ್ನು ಕೆಲವರು ಇದೇ ರೀತಿಯ ವಿಸ್ಮಯ ಫಿಲಿಪೈನ್ಸ್‌ನಲ್ಲಿ ನೋಡಿದ್ದೆ ಎಂದು ಹಳೆ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ಮತ್ತೆ ಕೆಲವರು ಇದು ಸಿಲ್ಕ್ ಬೋರ್ಡ್ ಟ್ರಾಫಿಕ್‌ನಿಂದ ತಪ್ಪಿಸಿಕೊಳ್ಳಲು ಮಾಡಿರುವ ರಹಸ್ಯ ಬಾಗಿಲು ಎಂದು ಟ್ರೋಲ್ ಮಾಡಿದ್ದಾರೆ.
ಆದರೆ ಆಗಸದಲ್ಲಿ ಈ ರೀತಿಯ ವಿಸ್ಮಯ ಗೋಚರ ಹಿಂದೆ ವಿಜ್ಞಾನ ಅಧ್ಯಯನವೊಂದಿದೆ. ಇದನ್ನು ಬ್ರೋಕನ್ ಸ್ಪೆಕ್ಟರ್ ಎಂದು ಕರೆಯುತ್ತಾರೆ. ಮುಂಜು ಕವಿದ ವಾತಾವರಣ ಹಾಗೂ ಮೋಡ ಹಿಂಭಾಗದಿಂದ ಬೆಳಕಿನ ಕಿರಣಗಳು ಪ್ರಕಾಶಿಸಿದಾಗ ಬೆಟ್ಟ ಗುಡ್ಡಗಳು ಅಥವಾ ಮೋಡದ ಹಿಂದಿರುವ ವಸ್ತುಗಳು ಗೋಚರಿಸುತ್ತದೆ. ಸಾಮಾನ್ಯವಾಗಿ ಬೆಟ್ಟಗಳು, ಪರ್ವತಗಳು ಮಂಜು ಹಾಗೂ ಮೋಡದಿಂದ ಕವಿದ ಬಳಿಕ ಹಿಂಭಾಗದಿಂದ ಸೂರ್ಯನ ಕಿರಣಗಳು ಪ್ರಕಾಶಿಸಿದಾಗ ಈ ರೀತಿಯ ಅಗೋಚರ ವಸ್ತುಗಳು ಗೋಚರಿಸುತ್ತದೆ. ಇದನ್ನು ವೈಜ್ಞಾನಿಕವಾಗಿ ಬ್ರೋಕನ್ ಸ್ಪೆಕ್ಟರ್ ಎಂದು ಕರೆಯುತ್ತಾರೆ. ಬೆಳಕಿನ ಪ್ರಕರತೆಯಿಂದ ಸೃಷ್ಟಿಯಾಗುವ ನೆರಳು ಮೋಡದ ಮೇಲೆ ಬಿದ್ದಾಗ ರೀತಿ ಕಾಣಿಸುತ್ತದೆ. ಮೋಡ ಅಥವಾ ಮುಂಜು ಕವಿತ ವಾತಾರಣ ಹಿಂದೆ ವಸ್ತುಗಳು ಅಥವಾ ಪರ್ವತಗಳು ಇಲ್ಲದೇ ಇದ್ದರೂ, ದೂರದಲ್ಲಿರುವ ಪರ್ವತದ ಅಥವಾ ವಸ್ತುಗಳ ನೆರಳು ಬಿದ್ದಾಗ ಬ್ರೋಕನ್ ಸ್ಪೆಕ್ಟರ್ ಬಹುತೇಕ ಬಾರಿ ವಿಸ್ಮಯಗಳನ್ನು ನೀಡುತ್ತದೆ. ಇದೇ ವೇಳೆ ಮೋಡದ ಪದರ ಚಲನೆಯಿಂದ, ಮೋಡದೊಳಗಿನ ಸಾಂದ್ರತೆಯ ವತ್ಯಾಸಗಳಿಂದ ನೆರಳಿನಂತೆ ಕಾಣಿಸುವ ವಿಸ್ಮಯ ಕೂಡ ಚಲಿಸಿದಂತೆ ಕಾಣಿಸುತ್ತದೆ. ಇದು ಆಪ್ಟಿಕಲ್ ಇಲ್ಯೂಶನ್ ಮೂಲಕ ಪ್ರೇತ ಚಲಿಸಿದಂತೆ ಕಾಣಿಸುತ್ತದೆ.
ಮಾನವಸಹಿತ ಗಗನಯಾನ ಮಿಷನ್! ಇಸ್ರೋನಿಂದ ಲ್ಯಾಂಡಿಂಗ್‌ಗೆ ತಾಲೀಮು!