ಡಿ.12ಕ್ಕೆ ಸಂಭವಿಸಲಿದೆ ಉಲ್ಕಾಶಿಲೆ ಗ್ರಹಣ, 12 ಸೆಕೆಂಡ್‌ ಮಾಯವಾಗಲಿದೆ ಬಾಹ್ಯಾಕಾಶದ ಈ ಪ್ರಕಾಶಮಾನ ನಕ್ಷತ್ರ!

ಡಿಸೆಂಬರ್ 12 ರಂದು, ಆಕಾಶದಲ್ಲಿ ಪ್ರಕಾಶಮಾನವಾದ ನಕ್ಷತ್ರ 12 ಸೆಕೆಂಡುಗಳ ಕಾಲ ಕಣ್ಮರೆಯಾಗುತ್ತದೆ. ಅತ್ಯಂತ ಪ್ರಸಿದ್ಧವಾದ ಕೆಂಪು ಸೂಪರ್ಜೈಂಟ್ ನಕ್ಷತ್ರವೆಂದರೆ ಬೆಟೆಲ್ಗ್ಯೂಸ್. ಈ ನಕ್ಷತ್ರ 12 ಸೆಕೆಂಡ್‌ಗಳ ಕಾಲ ಮರೆಯಲಾಗಲಿದೆ.

brightest star Betelgeuse Eclipse in space will disappear for 12 seconds on December 12 san

ನವದೆಹಲಿ (ಡಿ.10): ಸುಮ್ಮನೆ ಆಕಾಶದತ್ತ ಕಣ್ಣು ಹಾಯಿಸಿದಾಗ ಬರಿಗಣ್ಣಿನಲ್ಲಿ ಎಲ್ಲರಿಗೂ ಕಾಣುವ ಪ್ರಸಿದ್ಧ ನಕ್ಷತ್ರ ಬೆಟಲ್‌ಜ್ಯೂಸ್. ರಾತ್ರಿಯ ಆಕಾಶದಲ್ಲಿ ಬಹಳ ಆಕರ್ಷಕವಾಗಿ ಕಾಣುವ ನಕ್ಷತ್ರ ಪುಂಜವಾದ ಒರೈಯನ್‌ ಅಥವಾ ಮಹಾವ್ಯಾಧದಲ್ಲಿ ಈ ಕೆಂಪು ದೈತ್ಯ ಆರಿದ್ರಾ (ಬೆಟಲ್‌ಜ್ಯೂಸ್) ನಕ್ಷತ್ರವಿದೆ.  ಸೂರ್ಯನ ಪ್ರಕಾಶಮಾನವಾದ ಬೆಳಕಿನಲ್ಲಿ ಆಕಾಶದಲ್ಲಿನ ನಕ್ಷತ್ರಗಳು ಬೆಳಕಿನ ಸಮಯದಲ್ಲಿ ಕಾಣೊದಿಲ್ಲ. ಹಗಲಿನ ಸಮಯದಲ್ಲೂ ಕಂಡ ನಕ್ಷತ್ರವೆಂದರೆ ಅದು ಬೆಟಲ್‌ಜ್ಯೂಸ್ ಮಾತ್ರ. ಆದರೆ, ಈ ನಕ್ಷತ್ರವೀಗ ಅಂತ್ಯದ ಅಂಚಿನಲ್ಲಿದೆ. ಇದರ ನಡುವೆ ಡಿಸೆಂಬರ್ 12 ರಂದು ಈ ಪ್ರಕಾಶಮಾನವಾದ ನಕ್ಷತ್ರ 12 ಸೆಕೆಂಡ್‌ಗಳ ಕಾಲ ಕಣ್ಮರೆಯಾಗಲಿದೆ. ಅದಕ್ಕೆ ಕಾರಣ ಉಲ್ಕಾಶಿಲೆ. ಈ ಅದ್ಭುತ ಮತ್ತು ಅಪರೂಪದ ಘಟನೆಯು ಡಿಸೆಂಬರ್‌ 12 ರಂದು ಸಂಭವಿಸಲಿದೆ. ಸೂರ್ಯ ಗ್ರಹಣ ಹಾಗೂ ಚಂದ್ರಗ್ರಹಣದ ಬಗ್ಗೆ ನಿಮಗೆ ಗೊತ್ತಿರಬಹುದು. ಆದರೆ, ಈ ಬಾರಿ ನೋಡಲು ಸಿಗಲಿರುವುದು ಉಲ್ಕಾಶಿಲೆ ಗ್ರಹಣ. ಹೌದು, ಈ ಬಾರಿ 319 ಲಿಯೋನಾ ಎನ್ನುವ ಉಲ್ಕಾಶಿಲೆ, ಬೆಟಲ್‌ಜ್ಯೂಸ್‌ ನಕ್ಷತ್ರವನ್ನು ಮುಚ್ಚಲಿದೆ. ಅದರರ್ಥ ಬೆಟಲ್‌ಜ್ಯೂಸ್‌ನ ಗ್ರಹಣ ಸಂಭವಿಸಲಿದೆ. ಸುಮಾರು 12 ಸೆಕೆಂಡ್‌ಗಳವರೆಗೆ ಈ ಗ್ರಹಣ ಸಂಭವಿಸಲಿದೆ.

ರಾತ್ರಿಯ ಆಕಾಶದಲ್ಲಿರುವ 10 ಪ್ರಕಾಶಮಾನವಾದ ನಕ್ಷತ್ರಗಳಲ್ಲಿ ಬೆಟಲ್‌ಜ್ಯೂಸ್‌ ಅತ್ಯಂತ ಕೊನೆಯದು. ಆದರೆ 11 ಮತ್ತು 12 ರ ಮಧ್ಯರಾತ್ರಿ,  319 ಲಿಯೋನಾ ಉಲ್ಕಾಶಿಲೆ  ಬೆಟಲ್‌ನ್ಯೂಸ್‌ ಸ್ಟಾರ್‌ ಮತ್ತು ಭೂಮಿಯ ನಡುವೆ ಹಾದುಹೋಗುತ್ತದೆ. ಇದರಿಂದಾಗಿ ಈ ನಕ್ಷತ್ರವು 12 ಸೆಕೆಂಡುಗಳವರೆಗೆ ಭೂಮಿಯಿಂದ ಗೋಚರಿಸುವುದಿಲ್ಲ. ತೀರಾ ಅಪರೂಪದಲ್ಲಿ ಸಂಭವಿಸುವ ಬೆಟಲ್‌ಜ್ಯೂಸ್‌ ಗ್ರಹಣವನ್ನು ವೀಕ್ಷಿಸಲು ವಿಜ್ಞಾನಿಗಳು ಕೂಡ ಕಾತರರಾಗಿದ್ದಾರೆ.

ರಾತ್ರಿಯ ಆಕಾಶದಲ್ಲಿ ಈ ರೀತಿಯ ದೃಶ್ಯವು ಬಹಳ ಅಪರೂಪ ಎಂದು ವಿಜ್ಞಾನಿಗಳು ಹೇಳುತ್ತಾರೆ. ಪ್ರಕಾಶಮಾನವಾಗಿ ಹೊಳೆಯುವ ನಕ್ಷತ್ರವನ್ನು ಯಾವುದೇ ಉಲ್ಕಾಶಿಲೆಯೊಂದಿಗೆ ಯಾವ ರೀತಿಯಲ್ಲಿ ಆವರಿಸುತ್ತದೆ ಎನ್ನುವ ಕುತೂಹಲ ವಿಜ್ಞಾನಿಗಳಲ್ಲಿದೆ. ಬೆಟಲ್‌ಜ್ಯೂಸ್‌ನ ರಿಂಗ್‌ ಆಫ್‌ ಫೈರ್‌, ವಾರ್ಷಿಕ ಗ್ರಹಣವಾಗಿದೆ. ಆದರೆ, ಈ ಗ್ರಹಣ ಎಎಷ್ಟು ಜನರಿಗೆ ನೋಡಲು ಸಿಗುತ್ತೆ ಎನ್ನುವುದು ಅದೃಷ್ಟದ ಮೇಲೆ ಬಿಟ್ಟಿದ್ದಾಗಿದೆ.

ಏಷ್ಯಾ ಮತ್ತು ದಕ್ಷಿಣ ಯುರೋಪಿನಿಂದಲೂ ಈ ನೋಟ ಕಾಣಸಿಗುತ್ತದೆ ಎಂಬುದು ಸಂತಸದ ಸಂಗತಿ. ಇದಲ್ಲದೆ, ಇದು ಫ್ಲೋರಿಡಾ ಮತ್ತು ಪೂರ್ವ ಮೆಕ್ಸಿಕೊದಿಂದಲೂ ಗೋಚರಿಸುತ್ತದೆ. ಇಂಟರ್ನ್ಯಾಷನಲ್ ಆಕ್ಲೂಷನ್ ಟೈಮಿಂಗ್ ಅಸೋಸಿಯೇಷನ್ ಈ ಘಟನೆಯ ಪ್ರಸಾರಕ್ಕಾಗಿ ವಿಶೇಷ ಪುಟವನ್ನು ರಚಿಸಿದೆ. ಅದರ ಮೇಲೆ ಕ್ಲಿಕ್ ಮಾಡುವುದರ ಮೂಲಕ ಈ ವೀಕ್ಷಣೆಯ ನಿಖರವಾದ ಸಮಯ, ಸ್ಥಾನ ಇತ್ಯಾದಿಗಳನ್ನು ನೀವು ತಿಳಿಯಬಹುದು.

ಸಾಯಲು ಸಜ್ಜಾದ ನಕ್ಷತ್ರ: ಭೂಮಿಗೇನು ಕಾದಿದೆ ಗಂಡಾಂತರ?

ನೋಡಲು ಕಷ್ಟವಾದರೆ ದೂರದರ್ಶಕದ ಮೂಲಕವೂ ಈ ನೋಟವನ್ನು ನೋಡಬಹುದು. ಇದರ ಹೊರತಾಗಿ, ನೀವು ಡಿಸೆಂಬರ್ 11 ರಿಂದ ಇಟಲಿಯ ವರ್ಚುವಲ್ ಟೆಲಿಸ್ಕೋಪ್ ಪ್ರಾಜೆಕ್ಟ್ ಮೂಲಕ ಲೈವ್ ಆಗಿ ವೀಕ್ಷಿಸಬಹುದು. ಇನ್ನು ಬೆಟಲ್‌ಜ್ಯೂಸ್‌ ನಕ್ಷತ್ರ ಆಕಾಶದಲ್ಲಿ ಎಲ್ಲಿ ಕಾಣುತ್ತದೆ ಎನ್ನುವ ಕುತೂಹಲವಿದ್ದರೆ, ಸೂರ್ಯಾಸ್ತದ ಎರಡು ಗಂಟೆಗಳ ನಂತರ, ನೀವು ಆಕಾಶದ ಬಲಭಾಗದ ಕಡೆಗೆ ನೋಡಿದರೆ, ಒರೈಯನ್‌ ನಕ್ಷತ್ರಪುಂಜದಲ್ಲಿರುವ ಅಲ್ನಿಟಾಕ್‌, ಅಲ್ನಿಲಂ ಮತ್ತು ಮಿನಾಟಕ ಆಕಾಶದದಲ್ಲಿ ಕಾಣುತ್ತದೆ. ಅದರೊಂದಿಗೆ ಬೆಟಲ್‌ಜ್ಯೂಸ್‌ ನಕ್ಷತ್ರ ಕೂಡ ಕೊಂಚ ಎಡಭಾಗದಲ್ಲಿ ಕಾಣುತ್ತದೆ.

ಪತ್ತೆಯಾಯ್ತು ರಕ್ತಪಿಶಾಚಿ ನಕ್ಷತ್ರ: ಯಾವುದೂ ಬದಕುಲಾರದು ಬಂದ್ರೆ ಹತ್ರ!

Latest Videos
Follow Us:
Download App:
  • android
  • ios