ಪತ್ತೆಯಾಯ್ತು ರಕ್ತಪಿಶಾಚಿ ನಕ್ಷತ್ರ: ಯಾವುದೂ ಬದಕುಲಾರದು ಬಂದ್ರೆ ಹತ್ರ!
ನಾಸಾದ ಕೆಪ್ಲರ್ ಬಾಹ್ಯಾಕಾಶ ದೂರದರ್ಶಕ| ಅಪರೂಪದ ಬಿಳಿ ಕುಬ್ಜ ನಕ್ಷತ್ರ ಪತ್ತೆ ಹಚ್ಚಿದ ಕೆಪ್ಲರ್| ಸಮೀಪದ ಕಂದು ನಕ್ಷತ್ರವನ್ನೇ ನುಂಗಿ ಹಾಕಿದ ಬಿಳಿ ಕುಬ್ಜ ನಕ್ಷತ್ರ| ಭೂಮಿಯ ಗಾತ್ರದಷ್ಟಿರುವ ಕಂದು ನಕ್ಷತ್ರದ ಅಕ್ರಿಶನ್ ಡಿಸ್ಕ್| 100 ಪಟ್ಟು ಹೆಚ್ಚಾದ ಬಿಳಿ ಕುಬ್ಜ ನಕ್ಷತ್ರದ ಹೊಳಪು| ಕಾಕತಾಳೀಯವಾಗಿ ವಿದ್ಯಮಾನ ಸೆರೆ ಹಿಡಿದ ಕೆಪ್ಲರ್ ದೂರದರ್ಶಕ ಯಂತ್ರ|
ವಾಷಿಂಗ್ಟನ್(ಜ.28): ನಾಸಾದ ಕೆಪ್ಲರ್ ಬಾಹ್ಯಾಕಾಶ ದೂರದರ್ಶಕವು ಅಪರೂಪದ ಬಿಳಿ ಕುಬ್ಜ ನಕ್ಷತ್ರವೊಂದನ್ನು ಪತ್ತೆ ಹಚ್ಚಿದ್ದು, ತನ್ನ ಸಹವರ್ತಿ ನಕ್ಷತ್ರವನ್ನೇ ನುಂಗಿ ಹಾಕಿದ ಪ್ರಕ್ರಿಯೆಯನ್ನು ಸೆರೆ ಹಿಡಿದಿದೆ.
ಕೆಪ್ಲರ್ ಬಾಹ್ಯಾಕಾಶ ದೂರದರ್ಶಕದಲ್ಲಿ ಬಿಳಿ ಕುಬ್ಜ ನಕ್ಷತ್ರವೊಂದು ಕಂದು ನಕ್ಷತ್ರವೊಂದನ್ನು ನುಂಗುತ್ತಿರುವ ಸಂಪೂರ್ಣ ಪ್ರಕ್ರಿಯೆ ಸೆರೆಯಾಗಿದೆ ಎಂದು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ.
ಕಾಟನ್ ಕ್ಯಾಂಡಿ ಪ್ಲ್ಯಾನೆಟ್ಸ್: ತಾಕತ್ತಿಲ್ಲದ ಗುರು ಗಾತ್ರದ ಗ್ರಹಗಳು!
ಬ್ರೌನ್ ಡ್ವಾರ್ಫ್ಸ್ ಉಪ-ನಾಕ್ಷತ್ರಿಕ ವಸ್ತುಗಳು ಹೈಡ್ರೋಜನ್ ಸಮ್ಮಿಳನವನ್ನು ಉಳಿಸಿಕೊಳ್ಳಲು ವಿಫಲವಾಗುತ್ತವೆ. ಇವುಗಳನ್ನು ವಿಫಲ ನಕ್ಷತ್ರಗಳೆಂದೇ ಕರೆಯಲಾಗುತ್ತದೆ. ಆಗ ಸಮೀಪದ ದೈತ್ಯ ನಕ್ಷತ್ರದ ಗುರುತ್ವಾಕರ್ಷಣ ಬಲಕ್ಕೆ ಸಿಕ್ಕು ಇವು ಆ ನಕ್ಷತ್ರದಲ್ಲಿ ಸಮ್ಮಿಳಿತಗೊಳ್ಳುತ್ತದೆ.
ಕೆಪ್ಲರ್ ಬಾಹ್ಯಾಕಾಶ ದೂರದರ್ಶಕ ಯಂತ್ರದಲ್ಲಿ ಸೆರೆಯಾದ ಕಂದು ಬಣ್ಣದ ನಕ್ಷತ್ರವು ಸುಮಾರು 83,000 ಕಿ.ಮೀ ದೂರದಲ್ಲಿರುವ ಬಿಳಿ ಕುಬ್ಜ ನಕ್ಷತ್ರವನ್ನು 83 ನಿಮಿಷಗಳಿಗೊಮ್ಮೆ ಪರಿಭ್ರಮಿಸುತ್ತಿದ್ದು, ಹಂತ ಹಂತವಾಗಿ ತನ್ನ ಅಸ್ತಿತ್ವನ್ನು ಕಳೆದುಕೊಳ್ಳುತ್ತಿದೆ ಎನ್ನಲಾಗಿದೆ.
ಏಲಿಯನ್ ಲೈಫ್ ಕುರುಹು?: ಶಂಕೆ ಮೂಡಿಸಿದ ನಕ್ಷತ್ರದ ಬೆಳಕಿನ ಹರಿವು!
ಬಿಳಿ ನಕ್ಷತ್ರದ ಕಡೆಗೆ ಆಕರ್ಷಿತವಾದ ಕಂದು ನಕ್ಷತ್ರದ ಅಕ್ರಿಶನ್ ಡಿಸ್ಕ್, ಭೂಮಿಯ ಗಾತ್ರವನ್ನು ಹೊಂದಿದ್ದು, ನಮ್ಮ ಸೂರ್ಯನಷ್ಟು ದ್ರವ್ಯರಾಶಿಯನ್ನು ಹೊಂದಿದೆ ಎಂದು ನಾಸಾ ತಿಳಿಸಿದೆ.
ಈ ಪ್ರಕ್ರಿಯಿಂದ ಎರಡೂ ನಕ್ಷತ್ರಗಳಲ್ಲಿ ಉಷ್ಣ ಅಸ್ಥಿರತೆಗೆ ಕಾರಣವಾಗಿದ್ದು, ಸುಮಾರು 2,700–5,300 ಡಿಗ್ರಿ ಸೆಲ್ಸಿಯಸ್ ತಾಪಮಾನದಿಂದ 9,700–11,700 ಡಿಗ್ರಿ ಸೆಲ್ಸಿಯಸ್ ತಾಪಮಾನದವರೆಗೆ ತಲುಪಿದೆ.
ಈ ಕಾರಣದಿಂದಾಗಿ ಬಿಳಿ ನಕ್ಷತ್ರ ಕುಬ್ಜದ ಹೊಳಪು 100 ಪಟ್ಟು ಹೆಚ್ಚಾಗಿದ್ದು, ಅತ್ಯಂತ ಪ್ರಕಾಶಮಾನವಾಗಿ ಹೊಳೆಯುತ್ತಿದೆ ಎಂಬುದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.
ಇಂಧನ ಖಾಲಿ: ಗುಡ್ ಬೈ ಕೆಪ್ಲರ್ ಟೆಲಿಸ್ಕೋಪ್!
ಈ ರೀತಿಯ ಕುಬ್ಜ ನೋವಾ ವ್ಯವಸ್ಥೆಗಳು ವಿರಳವಾಗಿದ್ದರೂ, ಇತರ ಎರಡು ವ್ಯವಸ್ಥೆಗಳಲ್ಲಿ ಇಂತಹ ಪ್ರಕ್ರಿಯೆಯನ್ನು ಗಮನಿಸಲಾಗಿದೆ ಎಂದು ನಾಸಾ ಸ್ಪಷ್ಟಪಡಿಸಿದೆ.
ಅಂದಹಾಗೆ ಕೆಪ್ಲರ್ ಬಾಹ್ಯಾಕಾಶ ದೂರದರ್ಶಕ ಈ ವಿದ್ಯಮಾನವನ್ನು ಕಾಕತಾಳೀಯವಾಗಿ ಗಮನಿದ್ದು, ಸದ್ಯ ಕೆಪ್ಲರ್‌ನ ಆರ್ಕೈವ್‌ಗಳಲ್ಲಿ ಇದನ್ನು ಸಂಗ್ರಹಿಸಲಾಗಿದೆ.