ಚಂದ್ರನಲ್ಲಿಂದ ನೋಡಿದರೆ ಭೂಮಿ ಹೇಗೆ ಕಾಣುತ್ತೆ? ಬ್ಲೂ ಘೋಸ್ಟ್ ಸೆರೆ ಹಿಡಿದ ವಿಡಿಯೋ
ಬ್ಲೂ ಘೋಸ್ಟ್ ಇದೀಗ ಮತ್ತೊಂದು ಕೌತುಕವನ್ನು ಸೆರೆ ಹೆಡಿದೆ. ಚಂದ್ರನತ್ತ ಪ್ರಯಾಣ ಆರಂಭಿಸಿರುವ ಬ್ಲೂ ಘೋಸ್ಟ್ ಇದೀಗ ಭೂಮಿಯ ವಿಡಿಯೋ ಒಂದನ್ನು ಸೆರೆ ಹಿಡಿದಿದೆ.

ನಾಸಾ(ಫೆ.04) ಭೂಮಿ, ಬಾಹ್ಯಾಕಾಶ, ಚಂದ್ರ, ಗ್ರಹ, ನಕ್ಷತ್ರಗಳು ಕುತೂಹಲಗಳ ಆಗರ. ಇಲ್ಲಿ ನಡೆಯುವ ಪ್ರತಿಯೊಂದು ಘಟನೆಗಳು, ಚಲನಗಳು ಅಧ್ಯಯನದ ವಸ್ತು. ಬಾಹ್ಯಾಕಾಶ ಕುರಿತು ನಿರಂತ ಅಧ್ಯಯನಗಳು ನಡೆಯುತ್ತಿದೆ. ಪ್ರತಿ ದಿನ ಹೊಸ ಹೊಸ ವಿಚಾರಗಳು ಹೊರಬರುತ್ತಲೇ ಇದೆ. ಭೂಮಿ ತಿರುಗುವಿಕೆ, ಕಕ್ಷೆ, ಚಲನೆಗಳ ಕುರಿತು ಈಗಾಗಲೇ ಹಲವು ವಿಡಿಯೋಗಳು ಲಭ್ಯವಿದೆ. ಇದೀಗ ಬ್ಲೂ ಘೋಸ್ಟ್ ಹೊಸ ವಿಡಿಯೋ ಒಂದನ್ನು ಸೆರೆ ಹಿಡಿದೆ. ನೀಲಿ ಬಣ್ಣದ ಭೂಮಿ ಅಂದಕ್ಕೆ ಮನಸೋಲದವರಿಲ್ಲ. ಅದ್ಭುತ ವಿಡಿಯೋ ಇದೀಗ ಸದ್ದು ಮಾಡುತ್ತಿದೆ. ಬಾಹ್ಯಾಕಾಶದಲ್ಲಿನ ಕತ್ತಲೆಯ ನಡುವೆ ಭೂಮಿ ನೀಲಿ ಬಣ್ಣದಲ್ಲಿ ಹೊಳೆಯು ಗ್ರಹದ ಅದ್ಭುತ ವಿಡಿಯೋ ಇದಾಗಿದೆ.ಇದರಲ್ಲಿ ಭೂಮಿಯ ಚಲನೆ ಕೂಡ ಸ್ಪಷ್ಟವಾಗುತ್ತದೆ.
ಬ್ಲೂ ಘೋಸ್ಟ್ ನೌಕೆ ಭೂಮಿಯಿಂದ ಬಾಹ್ಯಾಕಾಶಕ್ಕೆ ಊಡಾವಣೆಗೊಂಜು 5 ದಿನಗಳು ಉರುಳಿದೆ. ಚಂದ್ರನತ್ತ ಹೊರಟಿರುವ ಈ ಲ್ಯಾಂಡರ್ ಇದೀಗ ತನ್ನ ಪಯಣದಲ್ಲಿ ಭೂಮಿ ವಿಜಿಯೋವನ್ನು ಸೆರೆ ಹಿಡಿದಿದೆ. ಈ ಬ್ಲೂ ಘೋಸ್ಟ್ ನೌಕೆ ಮುಂಬರುವ ಟ್ರಾನ್ಸ್ ಲೂನಾರ್ ಇಂಜೆಕ್ಷನ್ ಫೆಬ್ರವರಿ 9 ರಂದು ನಡೆಯಲಿದೆ. ಇದರ ನಡುವಿನ ಪಯಣದಲ್ಲಿ ಭೂಮಿಯ ಸೌಂದರ್ಯವನ್ನು ವಿಡಿಯೋ ಮೂಲಕ ಜನರಿಗೆ ತೋರಿಸಿದೆ.
ಭೂಮಿ ಹೇಗೆ ತಿರುಗುತ್ತೆ? ಭಾರತದ ಖಗೋಳಶಾಸ್ತ್ರಜ್ಞ ಲಡಾಖ್‌ನಲ್ಲಿ ಸೆರೆ ಹಿಡಿದ ಅದ್ಭುತ ವಿಡಿಯೋ
ಭೂಮಿಯ ಮೂರನೇ ಕಕ್ಷೆಯನ್ನು ಬಿಟ್ಟು ಬಾಹ್ಯಾಕಾಶದತ್ತ ಪಯಣ ಸಾಗಿದೆ. ಈ ವೇಳೆ ತೆಗೆದ ವಿಡಿಯೋವನ್ನು ಬ್ಲೂ ಘೋಸ್ಟ್ ಲ್ಯಾಂಡರ್ ಹಂಚಿಕೊಂಡಿದೆ. ಒಂದು ವಾರದಲ್ಲಿ ಟ್ರಾನ್ಸ್ ಲೂನಾರ್ ಇಂಜೆಕ್ಷನ್ ನಡೆಯಲಿದೆ. ಕಾರಣ ಬ್ಲೂ ಘೋಸ್ಟ್ ಲ್ಯಾಂಡರ್ ಉತ್ತಮ ಸ್ಥಿತಿಯಲ್ಲಿದೆ ಎಂದು ಫೈಯರ್ ಫ್ಲೈ ಏರೋಸ್ಪೇಸ್ ಸ್ಪಷ್ಟಪಡಿಸಿದೆ. ಇದೇ ವೇಳೆ ಚಂದ್ರನತ್ತ ಪಯಣದ ಹಾದಿಯಲ್ಲಿ ಬ್ಲೂ ಘೋಸ್ಟ್ ಭೂಮಿಯ ಅದ್ಭುತವನ್ನು, ಕೌತುಕವನ್ನು ಸೆರೆ ಹಿಡಿಯಲಿದೆ. ನಿರಂತ ವಿಡಿಯೋ ಹಾಗೂ ಫೋಟೋಗಳನ್ನು ಕಳುಹಿಸಲಿದೆ. ಈ ಮೂಲಕ ಮತ್ತಷ್ಟು ಕೌತುಕ ಅನಾವರಣಗೊಳ್ಳಲಿದೆ. ನಾಸಾದ ವಾಣಿಜ್ಯ ಲೂನರ್ ಪೇಲೋಡ್ ಆಗಿರುವ ಬ್ಲೂ ಘೋಸ್ಟ್ ಚಂದ್ರನ ಮೇಲ್ಮೈಗೆ ವೈಜ್ಞಾನಿಕ ಪೇಲೋಡ್ ತಲುಪಿಸುವ ಗುರಿ ಹೊಂದಿರುವ ಬ್ಲೂ ಘೋಸ್ಟ್ ಇದೀಗ ಅಚ್ಚರಿ ಅನಾವರಣಗೊಳಿಸಿದೆ.
ಇತ್ತೀಚಗಷ್ಟೆ ಭಾರತೀಯ ಖಗೋಳಶಾಸ್ತ್ರಜ್ಞ ದೋರ್ಜೆ ಅಂಗ್ಚುಕ್ ಭೂಮಿಯ ತಿರುಗುವಿಕೆಯ ವಿಡಿಯೋ ಹಂಚಿಕೊಂಡಿದ್ದರು. ವಿಶೇಷ ಅಂದರೆ ಈ ವಿಡಿಯೋವನ್ನು ಲಡಾಖ್ ಭಾಗದಲ್ಲಿ ಸೆರೆ ಹಿಡಿಯಲಾಗಿತ್ತು. ಭೂಮಿ 24 ಗಂಟೆಯಲ್ಲಿ ತನ್ನ ಕಕ್ಷೆಯಲ್ಲಿ ಹೇಗೆ ತಿರುಗುತ್ತದೆ ಅನ್ನೋದು ಈ ವಿಡಿಯೋದ ಮೂಲಕ ಸ್ಪಷ್ಟವಾಗಿತ್ತು. ಪ್ರಮುಖವಾಗಿ ಆಗಸದಲ್ಲಿರುವ ನಕ್ಷತ್ರಗಳು ಹಾಗೇ ಇರುವಾಗ ಭೂಮಿ ಮಾತ್ರ ಒಂದು ಸುತ್ತು ಬರುತ್ತದೆ. ಹಗಲು ಹಾಗೂ ರಾತ್ರಿ ಪ್ರಕ್ರಿಯೆ ಸ್ಪಷ್ಟವಾಗಿ ಗೋಚರಿಸುತ್ತದೆ. ಜೊತೆಗೆ ಭೂಮಿ ಕಕ್ಷೆಯಲ್ಲಿ ಸುತ್ತುವ ಅದ್ಭುತ ವಿಡಿಯೋ ಹಲವು ಕುತೂಹಲ ಹಾಗೂ ಪ್ರಶ್ನೆಗಳಿಗೆ ಉತ್ತರವಾಗಿತ್ತು.
ಈ ವಿಡಿಯೋದಲ್ಲಿ ಸರಳವಾಗಿ ಭೂಮಿ ತಿರುಗುವುದನ್ನು ಸೆರೆ ಹಿಡಿಯಲಾಗಿತ್ತು. ಸಾಮಾನ್ಯವಾಗಿ ಬಾಹ್ಯಾಕಾಶದಿಂದ ಭೂಮಿ ಕುರಿತು ತೆಗೆದ ವಿಡಿಯೋಗಳು ಲಭ್ಯವಿದೆ. ಈ ವಿಡಿಯೋಗಳು ಭೂಮಿಯಿಂದ ಸಾಕಷ್ಟ ದೂರ ಅಂದರೆ ಕನಿಷ್ಠ 36,000 ಕಿಲೋಮೀಟರ್ ದೂರದಿಂದ ತೆಗೆದ ವಿಡಿಯೋಗಳಾಗಿವೆ. ಈ ವೇಳೆ ಭೂಮಿ ದುಂಡಗಾಗಿ ಕಾಣುವ ವಿಡಿಯೋಗಳಿರುತ್ತದೆ. ಆದರೆ ದೋರ್ಜೆ ಸೆರೆ ಹಿಡಿದ ವಿಡಿಯೋ ಲಡಾಖ್ ಭೂಭಾಗದ ವಿಡಿಯೋ. ಈ ವಿಡಿಯೋದಲ್ಲಿ ಭೂಮಿಯ ತಿರುಗುವಿಕೆ ಸ್ಪಷ್ಟವಾಗಿ ಗೋಚರಿಸುತ್ತದೆ. ಹೊರಗಿನಿಂದ ಭೂಮಿಯ ತಿರುಗುವಿಕೆ ಬದಲು ಭೂಮಿಯ ಮೇಲೆ ನಿಂತಿರುವ ನಮಗೆ ಇದರ ಅನುಭವ ಹೇಗಾಗುತ್ತದೆ ಅನ್ನೋ ಕುರಿತು ಈ ವಿಡಿಯೋ ವಿವರಿಸುತ್ತದೆ.
ಯಶಸ್ವಿಯಾಗಿ ಉಡಾವಣೆಗೊಂಡ ಇಸ್ರೋ 100ನೇ ಉಪಗ್ರಹಕ್ಕೆ ಎದುರಾಯ್ತು ತಾಂತ್ರಿಕ ದೋಷ