Asianet Suvarna News Asianet Suvarna News

ಕರ್ನಾಟಕದ ಲಸಿಕೆ ಪ್ರಯೋಗ ಯಶಸ್ವಿ: ಬೆಂಗಳೂರಿನ ಐಐಎಸ್ಸಿಯಿಂದ ಅಭಿವೃದ್ಧಿ

*ಬೆಂಗಳೂರಿನ ಐಐಎಸ್ಸಿ, ಖಾಸಗಿ ಕಂಪನಿಯಿಂದ ಅಭಿವೃದ್ಧಿ
*100 ಡಿಗ್ರಿ ಉಷ್ಣಾಂಶವನ್ನೂ ತಡೆದುಕೊಳ್ಳುವ ಲಸಿಕೆ ಇದು
*ಕೋವಿಶೀಲ್ಡ್‌ ಸೇರಿದಂತೆ ಯಾವ ಲಸಿಕೆಗೂ ಸಾಮರ್ಥ್ಯವಿಲ್ಲ
 

Bengaluru IISc Mynvax laboratories develop COVID 19 vaccine that doesnt need refrigeration mnj
Author
Bengaluru, First Published Apr 17, 2022, 8:12 AM IST

ನವದೆಹಲಿ (ಏ. 17): ಕೊರೋನಾದ 4ನೇ ಅಲೆ (Covid 19 4th Wave) ಜೂನ್‌ ವೇಳೆಗೆ ಕಾಣಿಸಿಕೊಳ್ಳಬಹುದು ಎನ್ನುತ್ತಿರುವಾಗಲೇ, ಈ ವೈರಾಣುವಿನ ಡೆಲ್ಟಾಹಾಗೂ ಒಮಿಕ್ರೋನ್‌ ರೂಪಾಂತರಿ ವಿರುದ್ಧವೂ ಹೋರಾಡಬಲ್ಲ ಲಸಿಕೆಯೊಂದು ಕರ್ನಾಟಕದಲ್ಲಿ ಅಭಿವೃದ್ಧಿಯಾಗಿದೆ. ಬೆಂಗಳೂರಿನ ಪ್ರತಿಷ್ಠಿತ ಭಾರತೀಯ ವಿಜ್ಞಾನ ಮಂದಿರ (ಐಐಎಸ್ಸಿ) ಹಾಗೂ ಬೆಂಗಳೂರಿನ ಬಯೋಟೆಕ್‌ ಸ್ಟಾರ್ಟಪ್‌ ಕಂಪನಿ ಮಿನ್‌ವ್ಯಾಕ್ಸ್‌ ಜತೆಗೂಡಿ ಈ ಲಸಿಕೆಯನ್ನು ಶೋಧಿಸಿವೆ.

ಇದರ ವಿಶೇಷ ಎಂದರೆ, 100 ಡಿಗ್ರಿ ಸೆಲ್ಸಿಯಸ್‌ ತಾಪಮಾನವನ್ನೂ ಸಹಿಸಿಕೊಳ್ಳಬಲ್ಲದು. ಸದ್ಯ ವಿಶ್ವದಲ್ಲಿ ಲಭ್ಯವಿರುವ ಯಾವುದೇ ಲಸಿಕೆಗೂ ಇಂತಹ ಸಾಮರ್ಥ್ಯವಿಲ್ಲ. ಹೀಗಾಗಿ ಲಸಿಕೆ ಸಾಗಣೆ ಹಾಗೂ ಸಂಗ್ರಹಕ್ಕೆ ಕೋಲ್ಡ್‌ಚೈನ್‌ ಅಗತ್ಯವೇ ಇರುವುದಿಲ್ಲ. ಇಂತಹ ಸೌಲಭ್ಯಗಳನ್ನು ಹೊಂದಿಲ್ಲದ ಕಾರಣ ಲಸಿಕಾಕರಣದಿಂದ ಹಿಂದೆ ಬಿದ್ದಿರುವ ದೇಶಗಳಿಗೆ ಈ ಲಸಿಕೆ ವರದಾನವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.

ಇದನ್ನೂ ಓದಿ: Covid Crisis: ಕರ್ನಾಟಕದಲ್ಲಿ ಸತತ ಎಂಟನೇ ದಿನವೂ ಕೋವಿಡ್‌ ಸಾವಿಲ್ಲ..!

ಕೊರೋನಾ ವೈರಾಣುವಿನಲ್ಲಿರುವ ಸ್ಪೈಕ್‌ ಪ್ರೋಟಿನ್‌ ಮಾನವರ ಜೀವಕೋಶಕ್ಕೆ ಸೋಂಕನ್ನು ಹಬ್ಬಿಸುತ್ತದೆ. ಆ ಸ್ಪೈಕ್‌ ಪ್ರೋಟಿನ್‌ನ ಒಂದು ಭಾಗವನ್ನೇ ಬಳಸಿ ಈ ಲಸಿಕೆ ಅಭಿವೃದ್ಧಿಪಡಿಸಲಾಗಿದೆ. ಬೆಂಗಳೂರಿನ ಐಐಎಸ್ಸಿ ಹಾಗೂ ಮಿನ್‌ವ್ಯಾಕ್ಸ್‌ ಕಂಪನಿಗಳ ಜತೆಗೆ ಆಸ್ಪ್ರೇಲಿಯಾದ ಕಾಮನ್‌ವೆಲ್ತ್‌ ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಸಂಸ್ಥೆಯ ಸಂಶೋಧಕರು ಲಸಿಕೆ ಸಂಶೋಧನಾ ತಂಡದಲ್ಲಿದ್ದಾರೆ.

ವಿಶ್ವದಲ್ಲಿ ಸದ್ಯ ಬಳಕೆಯಲ್ಲಿರುವ ಬಹುತೇಕ ಲಸಿಕೆಗಳು ಕ್ಷಮತೆ ಉಳಿಸಿಕೊಳ್ಳುವಂತಾಗಬೇಕಾದರೆ ಅವನ್ನು ಶೈತ್ಯಾಗಾರದಲ್ಲಿ ಇಡಬೇಕು. ಭಾರತದಲ್ಲಿ ಹೆಚ್ಚಾಗಿ ಬಳಕೆಯಾಗಿರುವ ಕೋವಿಶೀಲ್ಡ್‌ ಲಸಿಕೆಯನ್ನು 2ರಿಂದ 8 ಡಿಗ್ರಿ ಸೆಲ್ಸಿಯಸ್‌ ತಾಪಮಾನದಲ್ಲಿ ಸಂಗ್ರಹಿಸಿಡಬೇಕು. ಫೈಝರ್‌ ಲಸಿಕೆಯನ್ನು ಮೈನಸ್‌ 70 ಡಿಗ್ರಿ ತಾಪಮಾನದಲ್ಲಿ ದಾಸ್ತಾನಿಡಬೇಕು. ಆದರೆ ಬೆಂಗಳೂರು ವಿಜ್ಞಾನಿಗಳ ಲಸಿಕೆಯನ್ನು 37 ಡಿಗ್ರಿ ಸೆಲ್ಸಿಯಸ್‌ನಲ್ಲಿ 4 ವಾರ ಹಾಗೂ 100 ಡಿಗ್ರಿ ಸೆಲ್ಸಿಯಸ್‌ ತಾಪಮಾನದಲ್ಲಿ 90 ನಿಮಿಷಗಳ ಕಾಲ ಇಟ್ಟುಕೊಳ್ಳಬಹುದು ಎಂದು ಲಸಿಕೆ ಸಂಶೋಧನಾ ತಂಡ ತಿಳಿಸಿದೆ.

ಇಲಿಗಳ ಮೇಲೆ ಈ ಲಸಿಕೆಯ ಪ್ರಯೋಗ ನಡೆದಿದ್ದು, ಡೆಲ್ಟಾಹಾಗೂ ಒಮಿಕ್ರೋನ್‌ ರೂಪಾಂತರಿಗಳ ವಿರುದ್ಧ ಪರಿಣಾಮಕಾರಿತನ ಸಾಬೀತಾಗಿದೆ. ಈ ಲಸಿಕೆ ಮೊದಲ ಹಂತದ ಮಾನವ ಪ್ರಯೋಗಕ್ಕೆ ಸೂಕ್ತವಾಗಿದೆ ಎಂದು ‘ವೈರಸಸ್‌’ ಎಂಬ ಜರ್ನಲ್‌ನಲ್ಲಿ ಬರೆಯಲಾಗಿದೆ.

ಇದನ್ನೂ ಓದಿ: ದೆಹಲಿ, ಮಹಾರಾಷ್ಟ್ರ ಸೇರಿ 5 ರಾಜ್ಯಗಳಲ್ಲಿ ಕೊರೋನಾ ಹೆಚ್ಚಳ, ಎಚ್ಚರಿಕೆ ಸಂದೇಶ ರವಾನೆ!

975 ಕೋವಿಡ್‌ ಪ್ರಕರಣ, 4 ಸಾವು: ಸಕ್ರಿಯ ಕೇಸು 11366ಕ್ಕೆ ಏರಿಕೆ: ದೇಶದಲ್ಲಿ ದೈನಂದಿನ ಕೋವಿಡ್‌ ಪ್ರಕರಣಗಳಲ್ಲಿ ಕೊಂಚ ಏರಿಕೆ ಕಂಡುಬಂದಿದ್ದು, ಶನಿವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ತಾಸುಗಳ ಅವಧಿಯಲ್ಲಿ ಹೊಸದಾಗಿ 975 ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ 4 ಮಂದಿ ಸೋಂಕಿತರು ಸಾವಿಗೀಡಾಗಿದ್ದಾರೆ. ತನ್ಮೂಲಕ ಒಟ್ಟು ಪ್ರಕರಣಗಳು 4.3 ಕೋಟಿಗೆ ಮತ್ತು ಒಟ್ಟು ಸಾವು 5.21 ಲಕ್ಷಕ್ಕೆ ಏರಿಕೆಯಾಗಿದೆ.

ಅಲ್ಲದೇ ಕಳೆದ 24 ಗಂಟೆಗಳಲ್ಲಿ 175 ಪ್ರಕರಣಗಳು ಏರಿಕೆಯಾಗುವುದರೊಂದಿಗೆ ಸಕ್ರಿಯ ಪ್ರಕರಣಗಳೂ 11,366ಕ್ಕೆ ಏರಿಕೆಯಾಗಿದೆ. ಒಟ್ಟು ಪ್ರಕರಣಗಳಿಗೆ ಹೋಲಿಸಿದರೆ ಸಕ್ರಿಯ ಪ್ರಕರಣಗಳ ಪ್ರಮಾಣ 0.03ರಷ್ಟಿದೆ. ಇನ್ನು ದೈನಂದಿನ ಪಾಸಿಟಿವಿಟಿ ದರ ಶೇ.0.32ರಷ್ಟಿದೆ.

Follow Us:
Download App:
  • android
  • ios