Asianet Suvarna News Asianet Suvarna News

Covid Crisis: ಕರ್ನಾಟಕದಲ್ಲಿ ಸತತ ಎಂಟನೇ ದಿನವೂ ಕೋವಿಡ್‌ ಸಾವಿಲ್ಲ..!

*  ಹೊಸ ಸೋಂಕಿತರ ಸಂಖ್ಯೆ ಕಡಿಮೆ ಇದ್ದರೂ ಪಾಸಿಟಿವಿಟಿ ದರದಲ್ಲಿ ಏರಿಕೆ
*  ಬೆಂಗಳೂರು ನಗರದಲ್ಲಿ 41 ಮಂದಿಗೆ ಕೊರೋನಾ
*  ಸದ್ಯ 1,371 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ 

45 New Covid Cases on April 16th in Karnataka grg
Author
Bengaluru, First Published Apr 17, 2022, 7:44 AM IST

ಬೆಂಗಳೂರು(ಏ.17):  ರಾಜ್ಯದಲ್ಲಿ(Karnataka) ಶನಿವಾರ 45 ಮಂದಿಯಲ್ಲಿ ಕೋವಿಡ್‌ ಪತ್ತೆಯಾಗಿದೆ. 45 ಮಂದಿ ಚೇತರಿಸಿಕೊಂಡಿದ್ದಾರೆ. ಸತತ ಎಂಟನೇ ದಿನ ರಾಜ್ಯದಲ್ಲಿ ಕೋವಿಡ್‌ ಸಾವು(Death) ವರದಿಯಾಗಿಲ್ಲ. ಒಟ್ಟು 1,441 ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿವೆ. ಹೊಸ ಸೋಂಕಿತರ ಸಂಖ್ಯೆ ಕಡಿಮೆ ಇದ್ದರೂ ಪಾಸಿಟಿವಿಟಿ ದರದಲ್ಲಿ(Positivity Rate) ಏರಿಕೆ ಕಂಡು ಬಂದಿದೆ. 6,107 ಮಂದಿ ಕೋವಿಡ್‌ ಪರೀಕ್ಷೆಗೆ ಒಳಗಾಗಿದ್ದು ಶೇ. 0.73 ಪಾಸಿಟಿವಿಟಿ ದರ ದಾಖಲಾಗಿದೆ. ಶುಕ್ರವಾರ 49 ಪ್ರಕರಣ ವರದಿ ಆಗಿದ್ದರೂ ಪಾಸಿಟಿವಿಟಿವಿ ದರ ಶೇ.0.64 ದಾಖಲಾಗಿತ್ತು.

ಬೆಂಗಳೂರು ನಗರದಲ್ಲಿ 41, ಮೈಸೂರು 2, ಕೋಲಾರ ಮತ್ತು ತುಮಕೂರಿನಲ್ಲಿ ತಲಾ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಈವರೆಗೆ ಒಟ್ಟು 39.46 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು 39.04 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. 40,057 ಮಂದಿ ಮರಣವನ್ನಪ್ಪಿದ್ದಾರೆ.

Coronavirus : ಜನರೇ ಸೂಪರ್‌ ಮಾರ್ಕೆಟ್ ದೋಚಿದ್ರು... ಶಾಂಘೈನಲ್ಲಿ ಹೊರಬರಲು ಕೆಲವರಿಗೆ ಅವಕಾಶ!

41 ಮಂದಿಗೆ ಕೊರೋನಾ

ಬೆಂಗಳೂರು(Bengaluru) ನಗರದಲ್ಲಿ ಶನಿವಾರ 41 ಮಂದಿಗೆ ಕೊರೋನಾ(Coronavirus) ಸೋಂಕು ತಗುಲಿದ್ದು, 33 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರ ಸಾವು ವರದಿಯಾಗಿಲ್ಲ. ಸದ್ಯ 1,371 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಸೋಂಕು ಪರೀಕ್ಷೆಗಳು 3,300 ನಡೆದಿದ್ದು, ಪಾಸಿಟಿವಿಟಿ ದರ ಶೇ.1ರಷ್ಟು ದಾಖಲಾಗಿದೆ. ಶುಕ್ರವಾರಕ್ಕೆ ಹೋಲಿಸಿದರೆ ಹೊಸ ಪ್ರಕರಣಗಳು 6 ಕಡಿಮೆಯಾಗಿವೆ (ಶುಕ್ರವಾರ 47 ಮಂದಿಗೆ ಸೋಂಕು, ಶೂನ್ಯ ಸಾವು). ಸದ್ಯ ಸಕ್ರಿಯ ಸೋಂಕಿತರ ಪೈಕಿ 6 ಮಂದಿ ಮಾತ್ರ ಆಸ್ಪತ್ರೆಯಲ್ಲಿದ್ದು, ಈ ಪೈಕಿ ವೆಂಟಿಲೇಟರ್‌ ಮತ್ತು ಆಕ್ಸಿಜನ್‌ ಹಾಸಿಗೆಯಲ್ಲಿ ತಲಾ ಒಬ್ಬರು, ಸಾಮಾನ್ಯ ಹಾಸಿಗೆಗಳಲ್ಲಿ ನಾಲ್ವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದಂತೆ 1,351 ಮಂದಿ ಮನೆಯಲ್ಲಿ ಆರೈಕೆಯಲ್ಲಿದ್ದಾರೆ.

Covid Crisis: ಬೂಸ್ಟರ್‌ ಡೋಸ್‌ಗೆ ನಿರಾಸಕ್ತಿ..!

ಈವರೆಗೆ ಸೋಂಕಿಗೆ ಒಳಗಾದವರ ಸಂಖ್ಯೆ 17.8 ಲಕ್ಷಕ್ಕೆ, ಗುಣಮುಖರ ಸಂಖ್ಯೆ 17.6 ಲಕ್ಷಕ್ಕೆ ತಲುಪಿದ್ದು, ಸಾವಿನ ಸಂಖ್ಯೆ 16,964 ಇದೆ. ಎರಡು ವಾರದಿಂದ ಸೋಂಕು ಹೆಚ್ಚಿರುವ ಕಂಟೈನ್ಮೆಂಟ್‌ ಪ್ರದೇಶಗಳು(Containment Zones) ವರದಿಯಾಗಿಲ್ಲ.

975 ಕೋವಿಡ್‌ ಪ್ರಕರಣ, 4 ಸಾವು: ಸಕ್ರಿಯ ಕೇಸು 11366ಕ್ಕೆ ಏರಿಕೆ

ನವದೆಹಲಿ: ದೇಶದಲ್ಲಿ(India) ದೈನಂದಿನ ಕೋವಿಡ್‌(Covid-19) ಪ್ರಕರಣಗಳಲ್ಲಿ ಕೊಂಚ ಏರಿಕೆ ಕಂಡುಬಂದಿದ್ದು, ಶನಿವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ತಾಸುಗಳ ಅವಧಿಯಲ್ಲಿ ಹೊಸದಾಗಿ 975 ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ 4 ಮಂದಿ ಸೋಂಕಿತರು ಸಾವಿಗೀಡಾಗಿದ್ದಾರೆ. 

ತನ್ಮೂಲಕ ಒಟ್ಟು ಪ್ರಕರಣಗಳು 4.3 ಕೋಟಿಗೆ ಮತ್ತು ಒಟ್ಟು ಸಾವು 5.21 ಲಕ್ಷಕ್ಕೆ ಏರಿಕೆಯಾಗಿದೆ. ಅಲ್ಲದೇ ಕಳೆದ 24 ಗಂಟೆಗಳಲ್ಲಿ 175 ಪ್ರಕರಣಗಳು ಏರಿಕೆಯಾಗುವುದರೊಂದಿಗೆ ಸಕ್ರಿಯ ಪ್ರಕರಣಗಳೂ 11,366ಕ್ಕೆ ಏರಿಕೆಯಾಗಿದೆ. ಒಟ್ಟು ಪ್ರಕರಣಗಳಿಗೆ ಹೋಲಿಸಿದರೆ ಸಕ್ರಿಯ ಪ್ರಕರಣಗಳ ಪ್ರಮಾಣ 0.03ರಷ್ಟಿದೆ. ಇನ್ನು ದೈನಂದಿನ ಪಾಸಿಟಿವಿಟಿ ದರ ಶೇ.0.32ರಷ್ಟಿದೆ.
 

Follow Us:
Download App:
  • android
  • ios