ಸೌರವ್ಯೂಹದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಇದು ಖಗೋಳಶಾಸ್ತ್ರಜ್ಞರ ಅಚ್ಚರಿಗೊಳಿಸಿದೆ. ನೆಪ್ಚೂನ್ ಗ್ರಹದ ಜೊತೆ ವಿಚಿತ್ರ ವಸ್ತುವೊಂದು ಡ್ಯಾನ್ಸ್ ಮಾಡುತ್ತಿರುವುದ ಪತ್ತೆಯಾಗಿದೆ.
ಕೆನಡಾ (ಜು.27) ಸೌರವ್ಯೂಹದಲ್ಲಿ ಪತ್ತೆಯಾಗುವ ಹೊಸ ಗ್ರಹ, ನಕ್ಷತ್ರಗಳು ಅದರ ಚಲನವಲಗಳು ಹಲವು ಅಚ್ಚರಿಗೆ ಕಾರಣವಾಗುತ್ತಿದೆ. ಇತ್ತೀಚೆಗೆ ಬಾಹ್ಯಾಕಾಶದ ಕೌತುಕ ಹೆಚ್ಚಾಗುತ್ತಿದೆ. ಹಲವು ಅಪರೂಪದ ಘಟನೆಗಳು ಬಾಹ್ಯಾಕಾಶದಲ್ಲಿ ಸಂಭವಿಸುತ್ತಿದೆ. ಇದೀಗ ಮತ್ತೊಂದು ವಿಚಿತ್ರ ವಸ್ತು ಸೌರವ್ಯೂಹದಲ್ಲಿ ಪತ್ತೆಯಾಗಿದೆ. ಖಗೋಳಶಾಸ್ತ್ರಜ್ಞರು ಸತತ ಅಧ್ಯಯನದ ಮೂಲಕ ಸೌರವ್ಯೂಹದಲ್ಲಿನ ವಿಚಿತ್ರ ಘಟನೆ ಪತ್ತೆಹಚ್ಚಿದ್ದಾರೆ. ಈ ವಿಚಿತ್ರ ಹಾಗೂ ವಿಶೇಷ ವಸ್ತು ನೆಪ್ಚೂನ್ ಗ್ರಹದ ಜೊತೆ ತಾಳ ಹಾಗೂ ಲಯಬದ್ಧವಾಗಿ ಡ್ಯಾನ್ಸ್ ಮಾಡುತ್ತಿರುವುದು ಪತ್ತೆಯಾಗಿದೆ.
ಸೌರವ್ಯೂಹದಲ್ಲಿ ನಿಗೂಢ ವಸ್ತು ಪತ್ತೆ
ಕೆನಡಾ, ಫ್ರಾನ್,ಹವಾಯಿ ದೇಶದ ಖಗೋಳಶಾಸ್ತ್ರಜ್ಞರು ಟೆಲಿಸ್ಕೋಪ್ ಮೂಲಕ ಈ ವಿಚಿತ್ರ ವಸ್ತು ಪತ್ತೆ ಹಚ್ಚಿದ್ದಾರೆ. ಈ ವಿಚಿತ್ರ ಹಾಗೂ ವಿಶೇಷ ವಸ್ತುವಿಗೆ 2020 VN40 ಎಂದು ಹೆಸರಿಡಲಾಗಿದೆ. ಇದು ಟ್ರಾನ್ಸ್ ನೆಪ್ಚೂನಿಯನ್ ವರ್ಗಕ್ಕೆ (TNOs) ಸೇರಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ವಿಚಿತ್ರ ವಸ್ತು ಖಗೋಳಶಾಸ್ತ್ರಜ್ಞರ ಗಮನಸೆಳೆಯಲು ಮುಖ್ಯ ಕಾರಣ ಈ ನಿಗೂಢ ವಸ್ತುವಿನ ಡ್ಯಾನ್ಸ್.
ನೆಪ್ಚೂನ್ ಜೊತೆ ಲಯಬದ್ಧ ಡ್ಯಾನ್ಸ್
ಸೌರವ್ಯೂಹದಲ್ಲಿ ನಿಗೂಢ ವಸ್ತುಗಳು ಪತ್ತೆಯಾಗುವುದು ಹೊಸದೇನಲ್ಲ.ಖಗೋಳಶಾಸ್ತ್ರಜ್ಞರು ತಮ್ಮ ಸಂಶೋಧನೆಯಲ್ಲಿ ಈ ರೀತಿಯ ಹಲವು ನಿಗೂಢ ವಸ್ತುಗಳು ಪತ್ತೆಯಾಗುತ್ತದೆ. ಆದರೆ ಈ ವಿಚಿತ್ರ ವಸ್ತು ಖಗೋಳಶಾಸ್ತ್ರಜ್ಞರ ಗಮನಸೆಳೆಯಲು ಮುಖ್ಯ ಕಾರಣ ಲಯಬದ್ದ ಡ್ಯಾನ್ಸ್. ನೆಪ್ಚೂನ್ ಗ್ರಹದ ಜೊತೆ ಈ ವಿಚಿತ್ರ ವಸ್ತು ತಾಳಬದ್ಧವಾಗಿ ಡ್ಯಾನ್ಸ್ ಮಾಡುತ್ತಿರುವುದು ಪತ್ತೆಯಾಗಿದೆ. ಈ ವಸ್ತು 1:10 ಅನುಪಾತದಲ್ಲಿ ಸುತ್ತುತ್ತಾ ಡ್ಯಾನ್ಸ್ ಮಾಡುತ್ತಿದೆ. ಅಂದರೆ ಸೂರ್ಯನ ಸುತ್ತ 1 ಬಾರಿ ಹಾಗೂ 10 ಬಾರಿ ನೆಪ್ಚೂನ್ ಸುತ್ತ ಸುತ್ತುತ್ತಾ ಡ್ಯಾನ್ಸ್ ಮಾಡುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಸಾಮಾನ್ಯವಾಗಿ ನೆಪ್ಚೂನ್ ಸುತ್ತ ಸುತ್ತುವ ಈ ರೀತಿಯ ವಸ್ತುಗಳು ನೆಪ್ಚೂನ್ ಪಥದಲ್ಲಿ ದೂರ ಸರಿಯುತ್ತಿದ್ದಂತೆ ಸೂರ್ಯನಿಗೆ ಹತ್ತಿರವಾಗುತ್ತದೆ. ಇದಕ್ಕೆ ಒರೆ ಕಕ್ಷೆ ಕಾರಣ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ನೆಪ್ಚೂನ್ ಗುರುತ್ವಾಕರ್ಷಣೆ ಶಕ್ತಿ
ನೆಪ್ಚೂನ್ ತನ್ನ ಗುರುತ್ವಾಕರ್ಷಣಾ ಶಕ್ತಿಯಿಂದ ಕೆಲ ವಸ್ತುಗಳನ್ನು ಸೆಳೆಯುತ್ತದೆ. ಹೀಗಾಗಿ ಈ ವಸ್ತುಗಳು ತನ್ನ ಪಥದಲ್ಲಿ ಸುತ್ತುತ್ತದೆ. ಆದರೆ ನೆಪ್ಚೂನ್ ಗುರುತ್ವಾಕರ್ಷಣೆ ಶಕ್ತಿ ಹಾಗೂ ನಿಗೂಢ ವಸ್ತುಗಳ ಶಕ್ತಿಗಳಿಂದ ಘರ್ಷಣೆಗಳು ಸಂಭವಿಸುತ್ತದೆ. ಹೀಗಾಗಿ ಲಯಬದ್ಧ ಡ್ಯಾನ್ಸಿಂಗ್ ರೂಪದಲ್ಲೂ ಕಾಣಿಸುತ್ತದೆ ಎಂದಿದ್ದಾರೆ.
ಇದುವರೆಗೂ ಈ ರೀತಿಯ ಯಾವುದೇ ವಸ್ತು ನೆಪ್ಚೂನ್ ಸುತ್ತ ಡ್ಯಾನ್ಸಿಂಗ್ ಮಾಡುವುದು ಪತ್ತೆಯಾಗಿಲ್ಲ. ಇದೇ ಮೊದಲ ಬಾರಿಗೆ ವಿಚಿತ್ರ ವಸ್ತು ಡ್ಯಾನ್ಸಿಂಗ್ ಮಾಡುತ್ತಿರುವುದು ಪತ್ತೆಯಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ವಿಜ್ಞಾನಿಗಳು ತಮ್ಮ ಅಧ್ಯಯನದ ವೇಳೆ 140 ಈ ರೀತಿಯ ವಿಚಿತ್ರ ವಸ್ತುಗಳನ್ನು ಪತ್ತೆ ಹಚ್ಚಿದ್ದಾರೆ. ಈ ಪೈಕಿ 2020 VN40 ಹೆಸರಿಸಿರುವ ಈ ವಸ್ತು ವಿಶೇಷವಾಗಿದೆ. ಇದರ ಚಲನೆ, ಡ್ಯಾನ್ಸ್ ಮಾಡುತ್ತಿರುವ ಪಥ ಸೇರಿದಂತೆ ಎಲ್ಲವೂ ವಿಜ್ಞಾನಿಗಳ ಸೆಳೆದಿದೆ.
ಈ ಅಧ್ಯಯನ ನಿಗೂಢ ವಸ್ತುಗಳು ಸೇರಿದಂತೆ ಸೌರವ್ಯೂಹದಲ್ಲಿನ ವಸ್ತಗುಲ ಪಥ ಹಾಗೂ ಚಲನೆ ಸಿದ್ಧಾಂತವನ್ನೇ ಬುಡ ಮೇಲು ಮಾಡುವ ಸಾಧ್ಯತೆ ಇದೆ. ಇದಕ್ಕೆ ಈ ಡ್ಯಾನ್ಸ್ ಮಾಡುತ್ತಾ ನೆಪ್ಚೂನ್ ಸುತ್ತುತ್ತಿರುವ ಈ ನಿಗೂಢ ವಸ್ತುವೇ ಸಾಕ್ಷಿ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
