ಪ್ರವಾಹ, ಭೂಕುಸಿತ, ಭೂಕಂಪ ಸೇರಿ ಹಲವು ವಿಕೋಪಗಳಿಂದ ಜನರು ಹೈರಾಣಾಗಿದ್ದಾರೆ. ಇದರ ಬೆನ್ನಲ್ಲೇ ಇದೀಗ ಭೂಮಿಯ ಸರ್ವನಾಶಕ್ಕೆ ಏಲಿಯನ್ ಟೊಂಕ ಕಟ್ಟಿ ನಿಂತಿದೆಯಾ? ಹೌದು ಎನ್ನುತ್ತಿದೆ ವಿಜ್ಞಾನಿಗಳ ವರದಿ. ನವೆಂಬರ್‌ನಲ್ಲಿ ಏಲಿಯನ್ ಬಾಹ್ಯಾಕಾಶ ನೌಕೆ ಭೂಮಿ ಮೇಲೆ ದಾಳಿ ಮಾಡಲಿದೆ ಎಂದು ಅಧ್ಯಯನ ವರದಿ ಹೇಳಿದೆ.

ಕೇಂಬ್ರಿಡ್ಜ್ (ಜು.26) ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಪಾಕೃತಿಕ ವಿಕೋಪಗಳು ಸಂಭವಿಸುತ್ತಲೇ ಇದೆ. ಇದೀಗ ಪ್ರವಾಹ, ಅತೀಯಾದ ಮಳೆ,ಭೂಕುಸಿತ, ಗುಡ್ಡ ಕುಸಿತ ಸೇರಿದಂತೆ ಹಲವು ಅವಘಡಗಳು ಸಂಭವಿಸುತ್ತಿದೆ. ಅಮೆರಿಕ, ಚೀನಾ ಸೇರಿದಂತೆ ಹಲವು ದೇಶಗಳು ಪ್ರವಾಹ ಬಿಸಿ ಎದುರಿಸುತ್ತಿದೆ. ಮತ್ತೆ ಕೆಲ ದೇಶಗಳಲ್ಲಿ ಭೂಕಂಪ ಸೇರಿದಂತೆ ಭೀಕರ ಅವಘಡಗಳು ಸಂಭಲಿಸಿದೆ. ಭೂಮಿಯ ನಾಶಕಾಲ ಸನ್ನಿಹಿತವಾಗಿದೆ ಅನ್ನೋ ಮಾತುಗಳು ಕೇಳಿಬರುತ್ತಲೆ ಇದೆ. ಇದರ ನಡುವೆ ಇದೀಗ ವಿಜ್ಞಾನಿಗಳ ವರದಿಯೊಂದು ಆತಂಕ ಮತ್ತಷ್ಟು ಹೆಚ್ಚಿಸಿದೆ. ಭೂಮಿಗೆ ಅನ್ಯಗ್ರಹ ಜೀವಿಗಳ ಬಾಹ್ಯಾಕಾಶ ನೌಕೆಯೊಂದು ದಾಳಿ ಮಾಡಲಿದೆ ಎಂದಿದೆ. ನವೆಂಬರ್ ತಿಂಗಳಲ್ಲಿ ಏಲಿಯನ್ ದಾಳಿ ನಡೆಯಲಿದೆ ಎಂದು ಅಧ್ಯಯನ ವರದಿ ಹೇಳಿದೆ.

ಹಾರ್ವರ್ಡ್ ವಿಜ್ಞಾನಿಗಳ ಸ್ಫೋಟಕ ಅಧ್ಯಯನ ವರದಿ

ಅನ್ಯಗ್ರಹ ಜೀವಿಗಳ ಕುರಿತು ಹಲವು ಅಧ್ಯಯನ ವರದಿಗಳಿವೆ. ಆದರೆ ಈ ಬಾರಿಯ ಹಾರ್ವರ್ಡ್ ವಿಜ್ಞಾನಿಗಳ ಅಧ್ಯಯನ ವರದಿ ಆತಂಕದ ಜೊತೆಗೆ ಏಲಿಯನ್ ಇರುವಿಕೆಯನ್ನು ಖಚಿತಪಡಿಸುತ್ತಿದೆ. ಹಾರ್ವರ್ಡ್‌ನ ಭೌತವಿಜ್ಞಾನಿ ಆ್ಯವಿ ಲೋಬ್ ಹಾಗೂ ಇತರರು 3I/ATLAS ಅಧ್ಯಯನ ವರದಿಯನ್ನು ಬಹಿರಂಗಪಡಿಸಿದ್ದಾರೆ. ಈ ವರದಿ ಪ್ರಕಾರ ನವೆಂಬರ್ ತಿಂಗಳಲ್ಲಿ ಏಲಿಯನ್ ಬಾಹ್ಯಾಕಾಶ ನೌಕೆ ಭೂಮಿ ಮೇಲೆ ದಾಳಿ ಮಾಡಲಿದೆ ಎಂದಿದೆ. ಇದರ ಜೊತೆಗೆ ದಾಳಿಗೂ ಮೊದಲು ಬಾಹ್ಯಾಕಾಶದಲ್ಲಿ ಈ ಏಲಿಯನ್ ನೌಕೆಯ ಚಲನವಲನಗಳು ಹೇಗಿರಲಿವೆ ಅನ್ನೋದನ್ನು ಬಹಿರಂಗಪಡಿಸಿದೆ.

ಸೂರ್ಯನಿಗೆ ಹತ್ತಿರವಾದ ಬಳಿಕ ಭೂಮಿ ಮೇಲೆ ದಾಳಿ

ಹಾರ್ವರ್ಡ್ ವಿಜ್ಞಾನಿಗಳ ತಂಡ ಬಾಹ್ಯಾಕಾಶದಲ್ಲಿರುವ ತಾರಾ ವಸ್ತುಗಳು, ಗ್ರಹಗಳು, ಕೇತುಗಳ ಕುರಿತು ಅಧ್ಯಯನ ನಡೆಸುತ್ತಿದೆ.ಈ ಪೈಕಿ 3I/ATLAS ಎಂಬ ಏಲಿಯನ್ ಸ್ಪೇಸ್‌ಕ್ರಾಫ್ಟ್ ಈ ದಾಳಿ ಸಂಘಟಿಸಲಿದೆ ಎಂದು ವರದಿ ಹೇಳುತ್ತಿದೆ. ನವೆಂಬರ್ ತಿಂಗಳಲ್ಲಿ ಏಲಿಯನ್ ಸ್ಪೇಸ್‌ಕ್ರಾಫ್ಟ್ ಸೂರ್ಯನಿಗೆ ಹತ್ತಿರವಾಗಲಿದೆ. ಈ ನೌಕೆ ಸೂರ್ಯನಿಗೆ ಹತ್ತಿರವಾಗುತ್ತಾ ಹೋಗಲಿದೆ. ಬಳಿಕ ಅಲ್ಲಿಂದ ಏಕಾಏಕಿ ಭೂಮಿ ಮೇಲೆ ದಾಳಿ ಮಾಡಲಿದೆ ಎಂದು 3I/ATLAS ಅಧ್ಯಯನ ವರದಿ ಹೇಳುತ್ತಿದೆ.ಅದು ಅನ್ಯಗ್ರಹ ಜೀವಿಗಳ ತಂತ್ರಜ್ಞಾನವಾಗಿರುವ ಸಾಧ್ಯತೆ ಇದೆ. ಭೂಮಿ ಮೇಲಿನ ದಾಳಿಗಾಗಿ ಅನ್ಯಗ್ರಹ ಜೀವಿ ನೌಕೆ ಸೂರ್ಯನಿಗೆ ಹತ್ತಿರವಾಗುತ್ತಾ ಸಿದ್ಧತೆ ನಡೆಸುವ ಸಾಧ್ಯತೆ ಇದೆ. ನವೆಂಬರ್ ಮಧ್ಯಭಾಗದಲ್ಲಿ ಭೂಮಿ ಮೇಲೆ ಈ ನೌಕೆ ದಾಳಿ ಮಾಡಲಿದೆ ಎಂದಿದೆ.

ಇತರ ವಿಜ್ಞಾನಿಗಳು ಹೇಳುವುದೇನು?

ಹಾರ್ವರ್ಡ್ ವಿಜ್ಞಾನಿಗಳ ಸಂಶೋಧನೆಯನ್ನು ಇತರ ಹಿರಿಯ ವಿಜ್ಞಾನಿಗಳು ತಳ್ಳಿ ಹಾಕಿದ್ದಾರೆ. 3I/ATLAS ಏಲಿಯನ್ ಸಾಧ್ಯತೆ ಇಲ್ಲ. ಇದು ಧೂಮಕೇತು ಆಗಿರುವ ಸಾಧ್ಯತೆ ಇದೆ. ಈ ಅಧ್ಯಯನ ಇನ್ನೂ ರಿವ್ಯೂ ಆಗಿಲ್ಲ. ಹೀಗಾಗಿ ನಿಖರವಾಗಿ ಹೇಳಲು ಸಾಧ್ಯವಿಲ್ಲ. ಸ್ಪಷ್ಟ ಚಿತ್ರಣ ಹೆಚ್ಚಿನ ಅಧ್ಯಯನ ಮೂಲಕ ಬಹಿರಂಗವಾಗಲಿದೆ ಎಂದಿದ್ದಾರೆ. ಹಲವರು ಹಿರಿಯ ವಿಜ್ಞಾನಿಗಳು ಇದು ಸ್ಪಷ್ಟತೆ ಇಲ್ಲದ ಅಧ್ಯಯನ ಎಂದಿದ್ದಾರೆ. ಧೂಮಕೇತುಗಳು ಸೇರಿದಂತೆ ಹಲವು ನಕ್ಷತ್ರಗಳು ಚಲಿಸುತ್ತಾ ಸೂರ್ಯನೆಡೆಗೆ ಸಾಗುತ್ತದೆ. ಹಲವು ಸುಟ್ಟು ಭಸ್ಮವಾಗುತ್ತದೆ. ಕೆಲವು ಪಥ ಬದಲಿಸುತ್ತದೆ. ಹೀಗಾಗಿ ಏಲಿಯನ್ ನೌಕೆ ದಾಳಿ ಅನ್ನೋದರ ಕುರಿತು ಯಾವುದೇ ಸ್ಪಷ್ಟತೆ ಇಲ್ಲ ಎಂದಿದ್ದಾರೆ.