ಏಳು ತಿಂಗಳ ಕಾಲ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿರುವ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ಗೆ ನಡೆಯುವುದು ಹೇಗೆಂದು ಮರೆತುಹೋಗಿದೆ. ಬಾಹ್ಯಾಕಾಶ ನೌಕೆಯಲ್ಲಿನ ಸಮಸ್ಯೆಯಿಂದಾಗಿ ವಿಲಿಯಮ್ಸ್ ಮತ್ತು ಸಹ ಗಗನಯಾತ್ರಿ ಬಚ್ ವಿಲ್ಮೋರ್ ಅವರ ವಾಪಸಾತಿಯನ್ನು ಮುಂದೂಡಲಾಗಿದೆ.

ನವದೆಹಲಿ(ಜ.29): ಕಳೆದ ಏಳು ತಿಂಗಳಿನಿಂದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡಿರುವ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ಗೆ ಹೇಗೆ ನಡೆಯುವುದು ಎನ್ನುವುದೇ ಮರೆತುಹೋಗಿದೆಯಂತೆ. ಭೂಮಿಯಲ್ಲಿ ಹೇಗೆ ನಡೆಯುತ್ತಾರೆ ಅನ್ನೋದನ್ನು ನೆನಪಿಟ್ಟುಕೊಳ್ಳಲು ಪ್ರಯತ್ನ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಸೋಮವಾರ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಸುನೀತಾ ವಿಲಿಯಮ್ಸ್, 'ನಾನು ಇಲ್ಲಿ ಇದ್ದು ಸಾಕಷ್ಟು ಸಮಯವಾಗಿದೆ. ಭೂಮಿಯಲ್ಲಿ ಜನರು ಹೇಗೆ ನಡೆಯುತ್ತಾರೆ ಅನ್ನೋದನ್ನ ನೆನಪಿಟ್ಟುಕೊಳ್ಳು ಪ್ರಯತ್ನ ಮಾಡುತ್ತಿದ್ದೇನೆ. ಬಹ ಕಾಲದಿಂದ ನಾನು ನಡೆದಿಲ್ಲ, ಕುಳಿತಿ್ಲ ಹಾಗೂ ಮಲಗಿಲ್ಲ. ಬಾಹ್ಯಾಕಾಶದಲ್ಲಿ ನೀವು ಕುಳಿತುಕೊಳ್ಳಬೇಕಾದ ಅನಿವಾರ್ಯತೆಯೇ ಇರೋದಿಲ್ಲ. ನೀವು ನಿಮ್ಮ ಕಣ್ಣುಗಳನ್ನು ಮುಚ್ಚಿಕೊಂಡೆ, ನೀವು ಇದ್ದಲ್ಲಿಯೇ ತೇಲಬಹುದು ಎಂದು ಹೇಳಿದ್ದಾರೆ.

ಸಹ ಗಗನಯಾತ್ರಿ ಬಚ್‌ ವಿಲ್ಮೋರ್‌ ಜೊತೆಗಿನ ಬಾಹ್ಯಾಕಾಶ ಪ್ರಯಾಣವು 8 ರಿಂದ ಗರಿಷ್ಠ 10 ದಿನಗಳ ಕಾಲ ಇರಲಿದೆ ಎಂದು ನಿರೀಕ್ಷೆ ಮಾಡಿದ್ದರು. ಇದು ಸ್ಟಾರ್‌ಲೈನರ್‌ ಬಾಹ್ಯಾಕಾಶ ನೌಕೆಯ ಮೊದಲ ಬಾಹ್ಯಾಕಾಶ ಯಾನವಾಗಿತ್ತು. ಆದರೆ, ತಮ್ಮ ಬಾಹ್ಯಾಕಾಶ ಯಾನ ಇಷ್ಟು ತಿಂಗಳುಗಳ ಕಾಲ ವಿಸ್ತರಣೆ ಆಗುತ್ತದೆ ಎನ್ನುವ ಯಾವ ಸಣ್ಣ ಸೂಚನೆಯೂ ಇಬ್ಬರಿಗೂ ಇದ್ದಿರಲಿಲ್ಲ.

'ಮೊದಲಿಗೆ ಈ ಬಗ್ಗೆ ತಿಳಿದಾಗ ನಮಗೆ ನಿಜಕ್ಕೂ ಆಘಾತವಾಗಿತ್ತು' ಎಂದು ಸುನೀತಾ ವಿಲಿಯಮ್ಸ್‌ ಹೇಳಿದ್ದಾರೆ ಎಂದು ಸಿಬಿಎಸ್‌ ನ್ಯೂಸ್‌ವರದಿ ಮಾಡಿದೆ. ನಮ್ಮ ಪ್ರಕಾರ ಹೆಚ್ಚೆಂದರೆ ಒಂದು ತಿಂಗಳು ಇಲ್ಲಿರಬಹುದು ಎಂದು ಅಂದಾಜು ಮಾಡಿದ್ದೆವು. ಆದರೆ, ಸಾಕಷ್ಟು ಸಮಯ ಇಲ್ಲಿ ಉಳಿದಕೊಂಡಿದ್ದು ಬಹಳ ಭಿನ್ನ ಎನಿಸಿದೆ ಎಂದಿದ್ದಾರೆ.

ಅನಿರೀಕ್ಷಿತ ವಿಳಂಬದ ಹೊರತಾಗಿಯೂ, ವಿಲಿಯಮ್ಸ್ ಅವರು ಬಾಹ್ಯಾಕಾಶದಲ್ಲಿ ತಮ್ಮ ಸಮಯವನ್ನು ಆನಂದಿಸುತ್ತಿದ್ದಾರೆ ಮತ್ತು ಭೂಮಿಯ ಮೇಲಿನ ಜನರೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಅವಕಾಶವನ್ನು ಇಷ್ಟಪಡುವುದಾಗಿ ತಿಳಿಸಿದ್ದಾರೆ. ಆದರೆ, ವಿಸ್ತೃತ ಮಿಷನ್ ಅವರ ವೈಯಕ್ತಿಕ ಜೀವನದ ಮೇಲೆ, ವಿಶೇಷವಾಗಿ ಅವರ ಕುಟುಂಬದೊಂದಿಗಿನ ಸಂಬಂಧದ ಮೇಲೆ ಪರಿಣಾಮ ಬೀರಿದೆ.

'ನನ್ನ ತಾಯಿ ತುಂಬಾ ವೃದ್ಧರಾಗಿದ್ದಾರೆ. ಆಕೆಯೊಂದಿಗೆ ಹಾಗೂ ನನ್ನ ಕುಟುಂಬದೊಂದಿಗೆ ಎಷ್ಟು ಸಾಧ್ಯವೋ ಅಷ್ಟು ಸಂಪರ್ಕದಲ್ಲಿರಲು ಪ್ರಯತ್ನ ಮಾಡುತ್ತಿದ್ದೇನೆ' ಎಂದು ವಿಲಿಯಮ್ಸ್‌ ಹೇಳಿದ್ದಾರೆ. 'ನನ್ನ ಅಮ್ಮನೊಂದಿಗೆ ನಾನು ಪ್ರತಿದಿನ ಎನ್ನುವಂತೆ ಸಂಪರ್ಕದಲ್ಲಿರುತ್ತೇನೆ. ಆಕೆ ಏನು ಮಾಡುತ್ತಿದ್ದಾಳೆ ಅನ್ನೋದರ ಬಗ್ಗೆ ಗಮನ ನೀಡುತ್ತಿರುತ್ತೇನೆ. ಆಕೆಯೊಂದಿಗೆ ಸಂಪರ್ಕ ಜೀವಂತವಾಗಿರಬೇಕು ಎಂದು ಬಯಸಿದ್ದೇಮೆ. ಮೂಲದಲ್ಲಿ ನಾವೇನು ಪ್ಲ್ಯಾನ್‌ ಮಾಡಿದ್ದೆವೋ ಅದಕ್ಕಿಂತ ಭಿನ್ನವಾಗಿದೆ. ಆದರೆ, ನಾನು ಮ್ಯಾನೇಜ್‌ ಮಾಡಲು ಯಶಸ್ವಿಯಾಗಿದ್ದೇವೆ' ಎಂದು ಹೇಳಿದ್ದಾರೆ.

ಇಂದು ಜೀವನದ ಅತ್ಯಂತ ಕಠಿಣ ಬಾಹ್ಯಾಕಾಶ ನಡಿಗೆಯಲ್ಲಿ ಭಾಗಿಯಾಗಲಿದ್ದಾರೆ ಸುನೀತಾ ವಿಲಿಯಮ್ಸ್‌!

ತನ್ನ ಬಿಡುವಿಲ್ಲದ ವೇಳಾಪಟ್ಟಿ ಮತ್ತು ಪ್ರೀತಿಪಾತ್ರರೊಂದಿಗಿನ ನಿಯಮಿತ ಸಂವಹನವು ಬಾಹ್ಯಾಕಾಶದಲ್ಲಿ ವಿಸ್ತೃತ ಸಮಯದಲ್ಲಿ ಒಂಟಿತನವನ್ನು ಅನುಭವಿಸುವುದನ್ನು ತಪ್ಪಿಸಲು ಸಹಾಯ ಮಾಡಿದೆ ಎಂದು ವಿಲಿಯಮ್ಸ್ ಹೇಳಿದರು.ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿನ ಸಮಸ್ಯೆಯಿಂದಾಗಿ ವಿಲಿಯಮ್ಸ್ ಮತ್ತು ವಿಲ್ಮೋರ್ ಏಳು ತಿಂಗಳಿನಿಂದ ಬಾಹ್ಯಾಕಾಶದಲ್ಲಿದ್ದಾರೆ. ಬಾಹ್ಯಾಕಾಶ ನೌಕೆಯಲ್ಲಿ ಸುರಕ್ಷತೆಯ ಬಗ್ಗೆ ಅನುಮಾನ ಇದ್ದ ಕಾರಣದಿಂದಾಗಿ, ಇವರಿಬ್ಬರ ಭೂಮಿಗೆ ವಾಪಾಸ್‌ ಬರುವ ಯೋಜನೆಯನ್ನು ನಾಸಾ ಮುಂದೂಡಿದೆ.

16 ಸೂರ್ಯೋದಯ, ಸೂರ್ಯಾಸ್ತ; ಬಾಹ್ಯಾಕಾಶದಲ್ಲಿ ಸುನೀತಾ ವಿಲಿಯಮ್ಸ್ ವಿಶೇಷ ಹೊಸ ವರ್ಷಚಾರಣೆ!

ಆರಂಭದಲ್ಲಿ, ಸ್ಪೇಸ್‌ಎಕ್ಸ್ ಕ್ರೂ-9 ಡ್ರ್ಯಾಗನ್ ಮಿಷನ್ ಫೆಬ್ರವರಿಯಲ್ಲಿ ಅವರನ್ನು ಮರಳಿ ತರಲು ನಿರ್ಧರಿಸಲಾಗಿತ್ತು. ಆದಾಗ್ಯೂ, ಅವರ ಬದಲಿಗಳು ಸ್ಪೇಸ್‌ಎಕ್ಸ್ ಕ್ರೂ-10 ನಲ್ಲಿವೆ, ಇದು ಈಗ ಮಾರ್ಚ್ ಅಂತ್ಯ ಅಥವಾ ಏಪ್ರಿಲ್‌ನಲ್ಲಿ ಉಡಾವಣೆಗೊಳ್ಳಲು ನಿರ್ಧರಿಸಲಾಗಿದೆ. ಅಲ್ಲಿಯವರೆಗೆ, ಕಾರ್ಯಾಚರಣೆಗಳ ಸುಗಮ ಹಸ್ತಾಂತರವನ್ನು ಖಚಿತಪಡಿಸಿಕೊಳ್ಳಲು ಗಗನಯಾತ್ರಿಗಳು ಐಎಸ್‌ಎಸ್‌ನಲ್ಲಿಯೇ ಇರಬೇಕಾಗಿದೆ.