16 ಸೂರ್ಯೋದಯ, ಸೂರ್ಯಾಸ್ತ; ಬಾಹ್ಯಾಕಾಶದಲ್ಲಿ ಸುನೀತಾ ವಿಲಿಯಮ್ಸ್ ವಿಶೇಷ ಹೊಸ ವರ್ಷಚಾರಣೆ!
ಬಾಹ್ಯಾಕಾಶದಲ್ಲಿರುವ ಸುನೀತಾ ವಿಲಿಯಮ್ಸ್‌ಗೆ ಹೊಸ ವರ್ಷ ತುಂಬಾ ವಿಶೇಷವಾಗಿದೆ. ಕಾರಣ ಒಂದೇ ದಿನ 16 ಸೂರ್ಯೋದಯ ಹಾಗೂ ಸೂರ್ಯಸ್ತಮಾನ ವೀಕ್ಷಿಸಲಿದ್ದಾರೆ. ಈ ಕುರಿತ ಫೋಟೋವನ್ನು ಹಂಚಿಕೊಂಡಿದ್ದಾರೆ.
ಬಾಹ್ಯಾಕಾಶದಲ್ಲಿರುವ ಭಾರತೀಯ ಮೂಲದ ಅಮೆರಿಕ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ಗೆ ವಿಶೇಷ ಹೊಸ ವರ್ಷ. ಇಡೀ ಜಗತ್ತೆ ಹೊಸ ವರ್ಷವನ್ನು ಆಚರಿಸುತ್ತಿದೆ. ಎಲ್ಲರೂ ಹೊಸ ವರ್ಷದಲ್ಲಿ ಮೊದಲ ದಿನ ಮೊದಲ ಸೂರ್ಯೋದಯ ಹಾಗೂ ಸೂರ್ಯಸ್ತಮಾನ ವೀಕ್ಷಿಸಲಿದ್ದಾರೆ. ಆದರೆ ಸುನೀತಾ ವಿಲಿಯಮ್ಸ್ ಬರೋಬ್ಬರಿ 16 ಸೂರ್ಯೋದಯ ಹಾಗೂ ಸೂರ್ಯಸ್ತಮಾನ ವೀಕ್ಷಿಸಲಿದ್ದಾರೆ.
ಸುನೀತಾ ವಿಲಿಯಮ್ಸ್ ಹಾಗೂ ತಂಡ ಬಾಹ್ಯಾಕಾಶದಿಂದ ಹೊಸ ವರ್ಷದ ಮೊದಲ ದಿನ ಒಟ್ಟು 16 ಸೂರ್ಯೋದಯ ಹಾಗೂ ಸೂರ್ಯಸ್ಥ ವೀಕ್ಷಿಸಲಿದ್ದಾರೆ. ಈ ಪೈಕಿ ಕೆಲ ಸೂರ್ಯೋದಯ ಹಾಗೂ ಸೂರ್ಯಸ್ಥಮಾನದ ಫೋಟೋಗಳನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ಹಂಚಿಕೊಂಡಿದೆ.
ಬಾಹ್ಯಾಕಾಶ ಸಂಸ್ಥೆ ಹಂಚಿಕೊಂಡಿರುವ ಸುಂದರು ಹಾಗೂ ಕೌತುಕದ ಫೋಟೋಗಳು ಭಾರಿ ಸದ್ದು ಮಾಡುತ್ತಿದೆ. ಎಲ್ಲರೂ ಭೂಮಿಯಿಂದ ಸೂರ್ಯೋದಯ ಹಾಗೂ ಸೂರ್ಯಸ್ತ ವೀಕ್ಷಿಸಿದ್ದಾರೆ. ಬಾಹ್ಯಾಕಾಶದಿಂದ ಸೂರ್ಯೋದಯ ಹಾಗೂ ಸೂರ್ಯಾಸ್ತ ಹೇಗಿರಲಿದೆ ಅನ್ನೋ ಚಿತ್ರವನ್ನು ಈ ಫೋಟೋಗಳು ನೀಡಿದೆ.
ವಿಶೇಷ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಮೂಲಕ ಸುನೀತಾ ವಿಲಿಯಮ್ಸ್ ತಮ್ಮ ಹೊಸ ವರ್ಷವನ್ನು ವಿಶೇಷವಾಗಿ ಆಚರಿಸಿದ್ದಾರೆ. ಒಂದೇ ದಿನ ಒಟ್ಟು 32 ಬಾರಿ ಸೂರ್ಯನ ನೋಡುವ ಅದೃಷ್ಠ ಗಗನಯಾತ್ರಿಗಳಿಗೆ ಲಭ್ಯವಾಗಿದೆ.
ಸ್ಟಾರ್‌ಲೈನ್ ಬಾಹ್ಯಾಕಾಶ ನೌಕೆಯಲ್ಲಿನ ದೋಷದಿಂದ ಸುನೀತಾ ವಿಲಿಯಮ್ಸ್ ಬಾಹ್ಯಾಕಾಶದಲ್ಲೇ ಉಳಿದುಕೊಳ್ಳುವಂತಾಗಿದೆ. ಜೂನ್ ತಿಂಗಳಲ್ಲಿ ಅಂತರೀಕ್ಷೆಗೆ ತೆರಳಿದ್ದ ಸುನೀತಾ ವಿಲಿಯಮ್ಸ್ ಹಾಗೂ ಬಾಬ್ ವಿಲ್ಮೋರ್ ತಾಂತ್ರಿಕ ದೋಷದ ಕಾರಣ ಸುದೀರ್ಘ ಕಾಲ ಬಾಹ್ಯಾಕಾಶದಲ್ಲೇ ಉಳಿಯುವಂತಾಗಿದೆ.