ಭಾರತೀಯ ಮೂಲದ NASA ಗಗನಯಾತ್ರಿ ಅನಿಲ್ ಮೆನನ್ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲೇ ಸೊಪ್ಪು, ಮತ್ತು ಸಾಸಿವೆ (Kale & wasabi mustard) ಬೆಳೆ ಬೆಳೆದು, ಸಹ ಗಗನಯಾತ್ರಿ ಜೆಸ್ಸಿಕಾ ಮೀರ್ ಜೊತೆ ಕೊಯ್ಲು ಮಾಡಿದ್ದಾರೆ. ಒಂದು ತಿಂಗಳ ಕಾಲ ಬೆಳೆದ ತರಕಾರಿಗಳಿಂದಲೇ ಊಟ ತಯಾರಿಸಿದ್ದು, ಭವಿಷ್ಯದ ದೀರ್ಘಾವಧಿ ಬಾಹ್ಯಾಕಾಶ ಮಿಷನ್‌ಗಳಿಗೆ ಈ ಪ್ರಯೋಗ ಮಹತ್ವದ್ದಾಗಿದೆ.
ಭಾರತೀಯ ಮೂಲದ ನಾಸಾ ಗಗನಯಾತ್ರಿ ಅನಿಲ್ ಮೆನನ್ ಇದೀಗ ಬಾಹ್ಯಾಕಾಶದಲ್ಲೇ ರೈತನಾಗಿದ್ದಾರೆ. ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಬೆಳೆದ ಕೇಲ್ ಮತ್ತು ವಸಾಬಿ ಮಸ್ಟರ್ಡ್ ಗ್ರೀನ್ಸ್ ಅನ್ನು ಸಹ ಗಗನಯಾತ್ರಿ ಜೆಸ್ಸಿಕಾ ಮೀರ್ ಅವರೊಂದಿಗೆ ಕೊಯ್ಲು ಮಾಡಿ, ಅದರಿಂದಲೇ ಊಟ ತಯಾರಿಸಿದ್ದಾರೆ.
ಬಾಹ್ಯಾಕಾಶದಲ್ಲಿ ಒಂದು ತಿಂಗಳ ಕೃಷಿ!
ಈ ತರಕಾರಿಗಳನ್ನು ISSನಲ್ಲಿ ಸುಮಾರು ಒಂದು ತಿಂಗಳ ಕಾಲ ಬೆಳೆಸಲಾಗಿತ್ತು. ಭೂಮಿಯ ಗುರುತ್ವಾಕರ್ಷಣೆಯಿಲ್ಲದ ಅಥವಾ ಅತಿ ಕಡಿಮೆ ಗುರುತ್ವಾಕರ್ಷಣೆಯ ವಾತಾವರಣದಲ್ಲಿ ಸಸ್ಯಗಳು ಹೇಗೆ ಬೆಳೆಯುತ್ತವೆ ಎಂಬುದನ್ನು ಅಧ್ಯಯನ ಮಾಡಲು ಈ ಪ್ರಯೋಗ ನಡೆಸಲಾಗಿದೆ.
NASA Veggie ವ್ಯವಸ್ಥೆಯಲ್ಲಿ ಬೆಳೆದ ಬೆಳೆ!
ಈ ಕೊಯ್ಲು NASAದ Veggie plant growth system ಮೂಲಕ ಸಾಧ್ಯವಾಗಿದೆ. ಭವಿಷ್ಯದಲ್ಲಿ ದೀರ್ಘಾವಧಿಯ ಬಾಹ್ಯಾಕಾಶ ಮತ್ತು ಆಳವಾದ ಅಂತರಿಕ್ಷ ಪ್ರಯಾಣಗಳಿಗೆ ಅಗತ್ಯವಾಗುವ ಆಹಾರವನ್ನು ಸ್ವತಃ ಬೆಳೆಸುವ ಸಾಧ್ಯತೆಗಳನ್ನು NASA ಅಧ್ಯಯನ ಮಾಡುತ್ತಿದೆ.
ISSನಲ್ಲೇ ‘Farm to Table’!
ಅನಿಲ್ ಮೆನನ್ ಮತ್ತು ಜೆಸ್ಸಿಕಾ ಮೀರ್ ತಾಜಾ ಕೇಲ್ ಹಾಗೂ ವಸಾಬಿ ಮಸ್ಟರ್ಡ್ ಎಲೆಗಳನ್ನು ಕೊಯ್ದು, ಅವುಗಳಿಂದಲೇ ಊಟ ತಯಾರಿಸಿದ್ದಾರೆ. ಮೆನನ್ ಹಂಚಿಕೊಂಡ ವಿಡಿಯೋದಲ್ಲಿ ಈ ಅನುಭವವನ್ನು ಬಾಹ್ಯಾಕಾಶದ ‘farm-to-table’ ಅನುಭವದಂತೆ ತೋರಿಸಲಾಗಿದೆ.
ಭವಿಷ್ಯದ ಬಾಹ್ಯಾಕಾಶ ಪ್ರಯಾಣಕ್ಕೆ ಮಹತ್ವದ ಪ್ರಯೋಗ..!
ಚಂದ್ರ, ಮಂಗಳ ಸೇರಿದಂತೆ ದೀರ್ಘಾವಧಿಯ ಬಾಹ್ಯಾಕಾಶ ಮಿಷನ್‌ಗಳಲ್ಲಿ ಗಗನಯಾತ್ರಿಗಳಿಗೆ ನಿರಂತರವಾಗಿ ತಾಜಾ ಆಹಾರ ಒದಗಿಸುವುದು ದೊಡ್ಡ ಸವಾಲು. ಹೀಗಾಗಿ ಬಾಹ್ಯಾಕಾಶದಲ್ಲೇ ಬೆಳೆ ಬೆಳೆಸುವ ತಂತ್ರಜ್ಞಾನ ಭವಿಷ್ಯದ ಮಿಷನ್‌ಗಳಿಗೆ ಪ್ರಮುಖವಾಗಬಹುದು.
ಒಂದು ತಿಂಗಳ ಪರಿಶ್ರಮ, ಕೊನೆಗೆ ಸ್ಪೇಸ್ ಊಟ!
ಅನಿಲ್ ಮೆನನ್ ತಮ್ಮ ಪೋಸ್ಟ್‌ನಲ್ಲಿ ಈ ತಾಜಾ ತರಕಾರಿಗಳಿಂದ ತಯಾರಿಸಿದ ಊಟವು ISSನಲ್ಲಿ ತಾವು ಮಾಡಿರುವ ಅತ್ಯುತ್ತಮ ಊಟಗಳಲ್ಲಿ ಒಂದಾಗಿರಬಹುದು ಎಂದು ಹೇಳಿದ್ದಾರೆ. ಬಾಹ್ಯಾಕಾಶ ಸಂಶೋಧನೆಯಲ್ಲಿ ಆಹಾರ ಬೆಳೆಯುವ ಪ್ರಯೋಗಕ್ಕೆ ಈ ಅನುಭವ ಹೊಸ ಆಯಾಮ ನೀಡಿದೆ.


